ಎರಡನೇ ಡೋಸ್ ಲಸಿಕೆ ರಾಜ್ಯದಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಗೆ 2ನೇ ಸ್ಥಾನ
Team Udayavani, Jan 20, 2022, 4:32 PM IST
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ನೀಡುವ ಕೋವಿಡ್ -19 ಮೊದಲ ಡೋಸ್ ಲಸಿಕಾಕರಣ ದಲ್ಲಿ ಶೇ.100 ಪ್ರಗತಿ ಈಗಾಗಲೇ ಸಾಧಿಸಲಾಗಿದ್ದು ಎರಡನೇ ಡೋಸ್‌ನ
ಲಸಿಕಾಕರಣದಲ್ಲಿ ನಿಗದಿತ ಗುರಿಯಂತೆ ಶೇ.91.4 ಪ್ರಗತಿ ಸಾಧಿಸುವ ಮೂಲಕ ರಾಜ್ಯಮಟ್ಟದ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಪ್ರಸ್ತುತ ಎರಡನೇ ಸ್ಥಾನ ಪಡೆದುಕೊಂಡಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.
ಈ ಕುರಿತು ಬುಧವಾರ “ಉದಯ ವಾಣಿ’ಗೆ ಮಾಹಿತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ 18 ವರ್ಷ ಮೇಲ್ಪಟ್ಟವರೆಲ್ಲರಿಗೆ ಲಸಿಕಾ ಕರಣ ಮಾಡಲು ಜಿಲ್ಲಾಡಳಿತ ಕಳೆದ ವರ್ಷದ ಜ.16 ರಿಂದ ಲಸಿಕಾಕರಣ ಪ್ರಾರಂಭಿಸಿತು ಎಂದರು.
ಒಂದೆರೆಡು ದಿನಗಳಲ್ಲಿ ಪೂರ್ಣಗೊಳಿಸಿ : ಜಿಲ್ಲೆಯಲ್ಲಿ ಈವರೆಗೆ 2ನೇ ಡೋಸ್ ಲಸಿಕೆ ಪಡೆಯಲು 8,84,568 ಜನ ಅರ್ಹರಾಗಿದ್ದು, 8,69,255 ಜನರಿಗೆ ಲಸಿಕೆ ನೀಡುವ ಮೂಲಕ ಶೇ.98.26
ಪ್ರಗತಿಯನ್ನು (ಜ.19ಕ್ಕೆ) ಸಾಧಿಸಲಾಗಿದೆ. ಎರಡನೇ ಡೋಸ್ ಲಸಿಕೆ ಪಡೆಯಲು ಜ.19ಕ್ಕೆ ಜಿಲ್ಲೆಯಲ್ಲಿ 53,313 ಜನ ಬಾಕಿ ಇದ್ದಾರೆ. ಒಂದೆರೆಡು ದಿನಗಳಲ್ಲಿ ಲಸಿಕೆ ಪೂರ್ಣಗೊಳಿಸಲು ಹಾಗೂ
ಎರಡನೇ ಡೋಸ್ ಲಸಿಕೆ ಪಡೆಯಲು ಮುಂದಿನ ದಿನ ಗಳಲ್ಲಿ ಅರ್ಹರಾಗುವವರಿಗೆ ಲಭ್ಯವಾಗುವ ದಿನಾಂಕದಂದೇ ಲಸಿಕೆ ನೀಡಲು ಸಂಬಂಧ ಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದರು.
ಸಹಕಾರಕ್ಕೆ ಕೃತಜ್ಞತೆ : ಜಿಲ್ಲೆಯಲ್ಲಿ ಲಸಿಕಾಕರಣ ಯಶಸ್ವಿಗೆ ಅಹರ್ನಿಶಿ ಶ್ರಮಿಸಿದ ಆರೋಗ್ಯ, ಆಶಾ, ಅಂಗನವಾಡಿ ಕಾರ್ಯಕರ್ತರು, ಗ್ರಾಮ ಮತ್ತು ವಾರ್ಡ್ ಮಟ್ಟದ ಕೋವಿಡ್
ನಿಯಂತ್ರಣ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರು, ಜಿಲ್ಲಾಡಳಿತದ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜಿಲ್ಲಾಧಿಕಾರಿ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ, ವಿಶೇಷವಾಗಿ ಜಿಲ್ಲಾ ಉಸ್ತುವಾರಿ ಸಚಿವರ ದಿನ ನಿತ್ಯದ ಮಾರ್ಗದರ್ಶನ ಹಾಗೂ ಸಹಕಾರವೇ ಪ್ರಮುಖ ಯಶಸ್ವಿಗೆ ಪ್ರಮುಖ ಕಾರಣ ಎಂದು ಕೃತಜ್ಞತೆ ತಿಳಿಸಿದರು.
ಇದನ್ನೂ ಓದಿ : 3 ಸಾವಿರಕ್ಕೂ ಅಧಿಕ ಮಂದಿಗೆ ಮನೆಯಲ್ಲೇ ಚಿಕಿತ್ಸೆ : ಮನೆಗಳಿಗೆ ಔಷಧಿ ವಿತರಿಸಲು ಸೂಚನೆ
ಎರಡನೇ ಡೋಸ್ ಲಸಿಕೆ: ಮೊದಲನೇ ಡೋಸ್ ಲಸಿಕೆ ಪಡೆದು ಎರಡನೇ ಡೋಸ್ ಲಸಿಕೆ ಪಡೆಯಲು (ಪ್ರಸ್ತುತ ಇಂದಿನ ದಿನಾಂಕಕ್ಕೆ) ಜಿಲ್ಲೆಯಲ್ಲಿ ಒಟ್ಟು 15,313 ಮಂದಿ ಬಾಕಿ
ಉಳಿದಿದ್ದಾರೆ. ಈ ಪೈಕಿ ತಾಲೂಕುವಾರು ಬಾಗೇಪಲ್ಲಿ 1967, ಚಿಕ್ಕಬಳ್ಳಾಪುರ 4648, ಚಿಂತಾಮಣಿ 806, ಗೌರಿಬಿದನೂರು 6308, ಗುಡಿಬಂಡೆ 367 ಹಾಗೂ ಶಿಡ್ಲಘಟ್ಟ ತಾಲೂಕಿನಲ್ಲಿ 1217,
ಮಂದಿ ಬಾಕಿ ಇರುತ್ತಾರೆ. ಲಸಿಕೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಸೂಚಿಸಲಾಗಿದೆ. ಎರಡನೇ ಡೋಸ್ ಲಸಿಕೆ ಪಡೆಯಲು ಜಿಲ್ಲೆಯಲ್ಲಿ ಅರ್ಹರಿರುವ ಜನ ಹಾಗೂ ಮುಂದೆ
ಅರ್ಹರಾಗುವವರು ಕೂಡಲೇ ಸಮೀಪದ ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆ ಹಾಕಿಸಿಕೊಂಡು ರಾಜ್ಯದಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆ ಶೇ.100 ಪ್ರಗತಿ ಸಾಧಿಸಿದ ಮೊದಲ ಜಿಲ್ಲೆಯಾಗಿ ಹೊರ
ಹೊಮ್ಮಲು ಕಾರಣವಾಗಬೇಕು ಎಂದು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.