ಸಣ್ಣ ನೀರಾವರಿಯಲ್ಲಿ ಶೇ.100; ಕೃಷಿಯಲ್ಲಿ ಶೇ. 65 ಸಾಧನೆ


Team Udayavani, Jan 21, 2022, 4:20 AM IST

ಸಣ್ಣ ನೀರಾವರಿಯಲ್ಲಿ ಶೇ.100; ಕೃಷಿಯಲ್ಲಿ  ಶೇ. 65 ಸಾಧನೆ

ಉಡುಪಿ: ವಿಶೇಷ ಘಟಕ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆಯಡಿ (ಎಸ್‌ಸಿಪಿ/ಟಿಎಸ್‌ಪಿ) ಹಂಚಿಕೆಯಾಗಿರುವ ಅನು ದಾನದಲ್ಲಿ ಸಣ್ಣ ನೀರಾವರಿ ಇಲಾಖೆ ಶೇ.100ರಷ್ಟು ಪ್ರಗತಿ ಸಾಧಿಸಿದರೆ, ಕೃಷಿ ಇಲಾಖೆ ಶೇ. 65ರಷ್ಟು ಪ್ರಗತಿ ಸಾಧಿಸಿದೆ.

ಕೃಷಿ ಇಲಾಖೆಯ ಕ್ರಿಯಾಯೋಜನೆ ಕಾರ್ಯಕ್ರಮದಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಲ್ಲಿ ಎಸ್‌ಸಿಪಿ/ ಟಿಎಸ್‌ಪಿ ಪ್ರಮಾಣ ಪತ್ರ ಪಡೆದಿರುವವರಿಗೆ ವಿವಿಧ ಯೋಜನೆಯಲ್ಲಿ ಅನುದಾನ ಒದಗಿಸಲಾಗುವುದು. ಟಿಎಸ್‌ಪಿಯಡಿ ಬಂದಿರುವ ಅನುದಾನ ಹಂಚಿಕೆ ಸುಲಭವಾಗಿ ಆಗುತ್ತದೆ. ಎಸ್‌ಸಿಪಿಯಡಿ ಅರ್ಜಿಗಳೇ ಬಾರದೇ ಇರುವುದರಿಂದ ಅನುದಾನ ಹಂಚಿಕೆ ಮಾಡಲು ನಾವೇ ಫ‌ಲಾನುಭವಿಗಳನ್ನು ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ ಎಂದು ಜಿಲ್ಲಾ ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕ್ರಿಯಾ ಯೋಜನೆ  :

ಪ.ಜಾ, ಪ.ಪಂಗಡದ ಅರ್ಹ ರೈತರಿಗೆ ಕೃಷಿ ಉಪಕರಣಗಳಿಗೆ, ಹನಿ/ ತುಂತುರು ನೀರಾವರಿ ಘಟಕಗಳಿಗೆ ಶೇ.90ರಷ್ಟು ಅಥವಾ ಗರಿಷ್ಠ 1 ಲಕ್ಷ ರೂ. ಸಹಾಯಧನ, ಟ್ರಾಕ್ಟರ್‌ ಖರೀದಿಗೆ 3 ಲಕ್ಷ ರೂ.ವರೆಗೆ ಸಹಾಯಧನ, ಕೃಷಿ ಭಾಗ್ಯ ಯೋಜನೆಯಡಿ  ನೀರು ಸಂಗ್ರಹಣ ರಚನೆ ಗಳು (ಕೃಷಿ ಹೊಂಡ), ನೀರು ಇಂಗದಂತೆ ತಡೆ ಯಲು ಪಾಲಿಥೀನ್‌ ಹೊದಿಕೆ, ಹೊಂಡದಿಂದ ನೀರನ್ನು ಮೇಲೆ ಎತ್ತಲು ಡೀಸೆಲ್‌ ಪಂಪ್‌ಸೆಟ್‌, ಕೃಷಿ ಹೊಂಡದ ಸುತ್ತಲೂ ನೆರಳು ಪರದೆ, ವಿಶೇಷ ಪ್ಯಾಕೇಜ್‌ ಅಡಿ ಘಟಕಗಳೊಂದಿಗೆ ಕೊಳವೆ ಬಾವಿ ಮರುಪೂರಣ, ಗುಣಮಟ್ಟದ ಬಿತ್ತನೆ ಬೀಜಗಳನ್ನು ಶೇ.75ರಷ್ಟು ಅಥವಾ ನಿಗದಿಪಡಿಸಿರುವ ರಿಯಾಯಿತಿ ದರದಲ್ಲಿ ವಿತರಣೆ, ಮಣ್ಣಿನ ಸತ್ವ ಹೆಚ್ಚಿಸಲು ಸಾವಯವ ಗೊಬ್ಬರ ರಿಯಾಯಿತಿ ದರದಲ್ಲಿ ವಿತರಣೆ, ಕೃಷಿ ವಿವಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಭೋಜನಾ ವೆಚ್ಚ, ಅಧ್ಯಯನ ಪ್ರವಾಸ ವೆಚ್ಚ, ಲ್ಯಾಪ್‌ಟಾಪ್‌, ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾಸಿಕ 10,000 ರೂ. ಶಿಷ್ಯ ವೇತನ ನೀಡುವುದು ಹಾಗೂ ಜಲಾನಯನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜಿಲ್ಲೆಯ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ.

ಎಸ್‌ಸಿಪಿ ಯೋಜನೆಯಡಿ ರಾಜ್ಯ ವಲಯ ದಿಂದ 38.27 ಲಕ್ಷ ರೂ., ಟಿಎಸ್‌ಪಿ ಯೋಜನೆಯಡಿ ರಾಜ್ಯ ವಲಯದಿಂದ 21.86 ಲಕ್ಷ ರೂ. ಹಾಗೂ ಜಿಲ್ಲಾ ವಲಯದಿಂದ 5.30 ಲಕ್ಷ ರೂ.ಬಿಡುಗಡೆಯಾಗಿದ್ದು, ಇದರಲ್ಲಿ ಎಸ್‌ಸಿಪಿಯಡಿ ಶೇ.46 ಹಾಗೂ ಟಿಎಸ್‌ಪಿ ಯಡಿ ಶೇ.63ರಷ್ಟು ಕಾರ್ಯಸಾಧನೆಯಾಗಿದೆ.

ಸಣ್ಣ ನೀರಾವರಿ :  

ಸಣ್ಣ ನೀರಾವರಿ ಇಲಾಖೆಯಿಂದ ಪ.ಜಾತಿ, ಪ.ಪಂಗಡದ ರೈತರು ಹೆಚ್ಚಿನ ಜಮೀನು ಹೊಂದಿ ರುವ ಪ್ರದೇಶದಲ್ಲಿ ಕೆರೆಗಳ ಅಭಿವೃದ್ಧಿ, ಇವರ ಜಮೀನುಗಳಿಗೆ ಏತ ನೀರಾವರಿ, ತೆರೆದ ಬಾವಿ, ಕೊಳವೆ ಬಾವಿಗಳ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ. ನದಿ, ನಾಲೆಗಳಿಂದ ಮೇಲ್‌ಜಲ ಲಭ್ಯವಿರುವ ಕಡೆ ಆದ್ಯತೆ ಮೇಲೆ ಸಾಮೂಹಿಕ ಪೈಪ್‌ಲೈನ್‌, ಏತ ನೀರಾವರಿ, ಸಣ್ಣ ಪ್ರಮಾಣದ ಬ್ಯಾರೇಜ್‌ ನಿರ್ಮಾಣ ಮಾಡಿಕೊಡಲಾಗುತ್ತದೆ. ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ಬರುವ ಅನುದಾನದಲ್ಲಿ ಶೇ.100ರಷ್ಟು ಹಂಚಿಕೆಯಾಗಿದೆ. ಎಸ್‌ಸಿಪಿಯಡಿ ರಾಜ್ಯ ವಲಯದಿಂದ 40.45 ಲಕ್ಷ ರೂ. ಬಂದಿದ್ದು, ಎಲ್ಲವೂ ಗುರಿ ಸಾಧನೆಯಾಗಿದೆ. 13 ಫ‌ಲಾನುಭವಿಗಳಿಗೆ ಇದನ್ನು ಹಂಚಿಕೆ ಮಾಡ ಲಾಗಿದೆ. ಟಿಎಸ್‌ಪಿ ಯೋಜನೆಯಡಿ ಬಂದಿರುವ 45.65 ಲಕ್ಷ ರೂ.ಗಳನ್ನು 6 ಫ‌ಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿವಿಧ ಇಲಾಖೆಯ ಕಾರ್ಯಸಾಧನೆ :

ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ಬಂದಿರುವ ಅನುದಾನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶೇ.32, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಶೇ.33, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಶೇ.46, ತೋಟಗಾರಿಕೆ ಇಲಾಖೆ ಶೇ.80, ಪಶುಸಂಗೋಪನೆ ಇಲಾಖೆ ಶೇ.88 ರಷ್ಟು ಅನುದಾನ ಬಳಕೆ ಮಾಡಿವೆ.

ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ಬರುವ ಅನುದಾನವನ್ನು ಅರ್ಹ ಫ‌ಲಾನುಭವಿಗಳಿಗೆ ನಿರ್ದಿಷ್ಟ ಕಾಲಮಿತಿಯೊಳಗೆ ಕಾರ್ಯಕ್ರಮಾನುಸಾರ ಹಂಚಿಕೆ ಮಾಡುತ್ತಿರುತ್ತೇವೆ. ಕೆಲವೊಮ್ಮೆ ಅರ್ಜಿಗಳೇ ಬರುವುದಿಲ್ಲ. ನಾವೇ ಫ‌ಲಾನುಭವಿಗಳನ್ನು ಹುಡುಕಬೇಕಾದ ಸ್ಥಿತಿ ಬರುತ್ತದೆ. ಕೆಂಪೇಗೌಡ, ಕೃಷಿ ಇಲಾಖೆ, ಜಂಟಿ ನಿರ್ದೇಶಕ 

ಟಾಪ್ ನ್ಯೂಸ್

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

10-karkala

Karkala: ಬಾವಿ‌ಗೆ ಬಿದ್ದು ವ್ಯಕ್ತಿ‌ ‌ಸಾವು‌; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ‌ ಪಡೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.