ಈ ಬಾರಿ 50 ಕೋಟಿ ರೂ.ಬಜೆಟ್
Team Udayavani, Jan 21, 2022, 4:30 AM IST
ಪುತ್ತೂರು: ಈ ಬಾರಿ 50 ಕೋಟಿ ರೂ. ನ ಬಜೆಟ್ ಮಂಡನೆ ಮಾಡಲಾಗುವುದು ಎಂದು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ಬಜೆಟ್ ಪೂರ್ವಭಾವಿಯಾಗಿ ನಡೆದ ಸಾರ್ವಜನಿಕ ಮತ್ತು ಸಂಘ ಸಂಸ್ಥೆಗಳ ಹಾಗೂ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯಲ್ಲಿ ವ್ಯಕ್ತವಾ ಗಿರುವ ಅಭಿಪ್ರಾಯವನ್ನು ಬಜೆಟ್‌ನಲ್ಲಿ ಸೇರಿಸುವ ಕುರಿತು ಭರವಸೆ ವ್ಯಕ್ತಪಡಿಸಿದ್ದಾರೆ.
ಬೊಳುವಾರಿನಲ್ಲಿ ಗಾರ್ಡನ್ :
ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಅಧ್ಯಕ್ಷ ಜಾನ್ ಕುಟ್ಟಿನ್ಹೊ ಮಾತನಾಡಿ, ಬೊಳು ವಾರು ಬಳಿ ಗಾರ್ಡನ್ ಮಾಡು ವಂತೆ ಪ್ರಸ್ತಾವಿಸಿದರು. ಮೂರು ವರ್ಷ ಕ್ಕೊಮ್ಮೆ ಉದ್ದಿಮೆ ಲೈಸನ್ಸ್ ನವೀಕರಣ ಮಾಡುವಂತೆ ತಿಳಿಸಿದರು.
ಹೊಟೇಲ್ ಉದ್ಯಮಿ ಗೋಪಾಲಕೃಷ್ಣ ಹೇರಳೆ ಮಾತನಾಡಿ, ಪುತ್ತೂರು ರೈಲ್ವೇ ರಸ್ತೆ ಅಭಿವೃದ್ಧಿಯಾಗಬೇಕು. ಬಿರಮಲೆಗೆ ಮತ್ತು ಬಾಲವನಕ್ಕೆ ರೋಫ್ ವೇ ಮಾಡುವಂತೆ ಸಲಹೆ ನೀಡಿದರು.
ಸದಸ್ಯ ರಿಯಾಜ್ ನೆಹರೂನಗರ ವಿವೇಕಾನಂದ ಕಾಲೇಜು ರಸ್ತೆಯ ರೈಲ್ವೇ ಸೇತುವೆ ಅಗಲ ಆಗಬೇಕೆಂದು ಸಲಹೆ ನೀಡಿ ದರು. ನಿವೃತ್ತ ಸಿಒ ಸುಂದರ ನಾಯ್ಕ್ ಮಾತನಾಡಿ, ಟ್ರಾಪಿಕ್ ಸಮಸ್ಯೆ ನಿವಾರಿಸಿ ಎಂದರು. ಬೊಳುವಾರಿನ ದಯಾನಂದ ಮಾತನಾಡಿ, ನಗರಸಭೆಯಲ್ಲಿ ಒಳಚರಂಡಿ ಯೋಜನೆ ಮಾಡುವುದು ಉತ್ತಮ ಎಂದರು. ರೋಟರಿ ಕ್ಲಬ್‌ನ ಉಮೇಶ್ ನಾಯಕ್ ಮಾತನಾಡಿ ಒಳ ರಸ್ತೆಗೂ ಫಉಟ್ ಆಪತ್ ಬರಲಿ ಎಂದರು.
ಟ್ರಾಪಿಕ್ ಸಮಸ್ಯೆ :
ವರ್ತಕರ ಸಂಘದ ಉಲ್ಲಾಸ್ ಪೈ ಮಾತ ನಾಡಿ, ಬಸ್‌ನಿಲ್ದಾಣದ ಬಳಿ ಫುಟ್‌ಪಾತ್ ಮಾಡಬೇಕು. ಟ್ರಾಫಿಕ್ ಸಮಸ್ಯೆ ಬಗೆ ಹರಿಸುವಂತೆ ಪ್ರಸ್ತಾಪಿಸಿದರು. ಯಾವು ದಾದರೂ ಜಾಗ ಸ್ವಾಧೀನ ಮಾಡಿ ವಾಹನ ಪಾರ್ಕಿಗ್‌ಗೆ ವ್ಯವಸ್ಥೆ ಮಾಡುವಂತೆ ನ್ಯಾಯ ವಾದಿ ನಾಗರಾಜ್ ಸಲಹೆ ನೀಡಿದರು.
ನಗರಸಭೆ ಪೌರಾಯಕ್ತ ಮಧು ಎಸ್. ಮನೋಹರ ಮಾತನಾಡಿ, ನಗರಸಭೆಯಲ್ಲಿ ಆಸ್ತಿ ತೆರಿಗೆ, ನೀರಿನ ಶುಲ್ಕ, ಜಾಹಿರಾತು ಶುಲ್ಕ, ಉದ್ದಿಮೆ ಪರವಾನಿಗೆ, ಬಾಡಿಗೆ, ಪಾರ್ಕಿಂಗ್ ಶುಲ್ಕದಲ್ಲ ಸೇರಿದಂತೆ ಬರುವ ಆದಾಯವನ್ನು ನೋಡಿಕೊಂಡು ಖರ್ಚುಗಳಲ್ಲ ರಸ್ತೆ, ಚರಂಡಿ ನಿರ್ವಹಣೆ, ಘನ ತ್ಯಾಜ್ಯ ನಿರ್ವಹಣೆ, ನೀರಿನ ನಿರ್ವಹಣೆ, ತ್ಯಾಜ್ಯ ನೀರು ಸಂಗ್ರಹ ಮಾಡುವ, ವಿದ್ಯುತ್ ಅಳವಡಿಕೆ ನಿರ್ವಹಣೆ ಮಾಡಲಾಗುತ್ತದೆ ಎಂದರು.
ನಗರಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ, ಸದಸ್ಯರಾದ ಯೂಸೂಫ್, ಶಿವರಾಮ ಸಫಲ್ಯ, ಶಶಿಕಲಾ ಸಿ.ಎಸ್., ಪರಿಸರ ಸಂಪನ್ಮೂಲ ವ್ಯಕ್ತಿ ಡಾ| ರಾಜೇಶ್ ಬೆಜ್ಜಂಗಳ, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅರವಿಂದ ಭಗವಾನ್, ನಗರಸಭೆ ಅಭಿಯಂತ ಶ್ರೀಧರ, ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್, ರವೀಂದ್ರ, ಎಸ್.ಆರ್. ದೇವಾಡಿಗ ಉಪಸ್ಥಿತರಿದ್ದರು.
ಸಲಹೆ ಸ್ವೀಕರಿಸಲಾಗುವುದು :
ಜೀವಂಧರ್‌ಜೈನ್ ಉತ್ತರಿಸಿ, ರೈಲ್ವೇ ಇಲಾಖೆಯೊಂದಿಗೆ ಸಂಸದರ ಜತೆ ಮಾತನಾಡಿ ರೈಲ್ವೇಯಿಂದ ನಿರಾಪೇಕ್ಷಣ ಪತ್ರ ಕೊಡಿಸುವ ಕುರಿತು ಚರ್ಚಿಸಲಾಗಿದೆ. ಆಸ್ತಿ ತೆರಿಗೆ, ನೀರಿನ ಬಿಲ್ ಅನ್ನು ಕೂಡಾ ಆನ್ ಲೈನ್ ಮೂಲಕ ಮಾಡುವ ವ್ಯವಸ್ಥೆಗೆ ಹಂತ ಹಂತವಾಗಿ ಹೋಗುತ್ತಿದ್ದೇವೆ. ಸಂಚಾರ ವ್ಯವಸ್ಥೆಗೆ ಸಂಬಂಧಿಸಿ ನಿಗದಿತ ಸ್ಥಳದಲ್ಲಿ ಝೀಬ್ರಾಕ್ರಾಸ್ ಅಳವಡಿಸಲಾಗಿದೆ. ಇದರ ಜತೆಗೆ ಸ್ಥಳ ತನಿಖೆ ಬಾಕಿ ಇದೆ. ಪುತ್ತೂರು ಸಿಟಿ ಆಸ್ಪತ್ರೆಗೆ ಬರುವ ಕಾಂಕ್ರೀಟ್ ರಸ್ತೆ ವಿಸ್ತಾರ ಮಾಡುವ ಕುರಿತು ಪರಿಸರದ ಮನೆಯವರೊಂದಿಗೆೆ ಚರ್ಚಿಸಲಾಗಿದೆ. ಬಸ್ ಬೇ ಸಂಬಂಧಿಸಿ ನಗರ ಪ್ರದೇಶದಲ್ಲಿ ಬಸ್ ಪ್ರಯಾಣಿಕರ ತಂಗುದಾಣ ಮಾಡಲಾಗಿದೆ. ಸಾಮೆತ್ತಡ್ಕದಲ್ಲಿ ದೊಡ್ಡ ಪಾರ್ಕ್ ನಿರ್ಮಾಣ ಆಗಿದೆ. ಚಿಣ್ಣರ ಪಾರ್ಕ್, ನೆಲ್ಲಿಕಟ್ಟೆಯಲ್ಲಿ ಪಾರ್ಕ್ ಆಗಲಿದೆ. ಕೊಂಬೆಟ್ಟಿನಲ್ಲಿ ಅಟಲ್ ಪಾರ್ಕ್ ಇದೆ. ನೆಲಪ್ಪಾಲ್‌ನಲ್ಲಿ 40 ಸೆಂಟ್ಸ್ ಜಾಗದಲ್ಲಿ ಪಾರ್ಕ್ ಆಗಲಿದೆ. ಪಟ್ನೂರಿನಲ್ಲಿ ಔಷಧ ವನ ಆಗಲಿದೆ. ಸರಕಾರಿ ಜಾಗ ಖಾಲಿ ಇದೆಯೋ ಅಲ್ಲಿ ಸಣ್ಣ ಪಾರ್ಕ್ ಮಾಡುವ ಉದ್ದೇಶ ಇಟ್ಟುಕೊಂಡಿದ್ದೇವೆ.ರಸ್ತೆಗಳ ಅಭಿವೃದ್ಧಿಗೆ ಎಲ್ಲ ವಾರ್ಡ್ ಗಳಿಗೆ 25 ಲಕ್ಷ ರೂ. ನೀಡಿದೆ. ಗ್ರಾಮಾಂತರಕ್ಕೂ ಗಮನ ಹರಿಸಿ, ಸಂಚಾರ ವ್ಯವಸ್ಥೆಯಲ್ಲಿ ಆಗುವ ಸಮಸ್ಯೆಯನ್ನು ನಿವಾರಿ ಸಲು ಸಂಪರ್ಕ ರಸ್ತೆಗೆ ಗಮನ ಹರಿಸಲಾಗುತ್ತದೆ. ನಿಮ್ಮ ಸಲಹೆ ಸ್ವೀಕರಿಸಲಾಗುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.