ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ: ಸಚಿವ ಭಗವಂತ್ ಖೂಬಾ
Team Udayavani, Jan 21, 2022, 7:18 PM IST
ಬೆಂಗಳೂರು:ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ವಿಮಾ ಪರಿಹಾರ ಕಂಪೆನಿಗಳ ವಿಷಯದಲ್ಲಾಗಲಿ ಬೇರೆ ಯಾವುದೇ ವಿಚಾರದಲ್ಲಾಗಲಿ ಯಾರಿಂದಲೂ ಯಾವುದೇ ರೀತಿಯ ರಾಜಿಯೂ ಇಲ್ಲ ಮುಲಾಜೂ ಇಲ್ಲ.ರೈತರ ಕಾಳಜಿಯೇ ಮುಖ್ಯವಾದ ಗುರಿಯಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕರ್ನಾಟಕ ರಾಜ್ಯದ ಕೃಷಿ ಸಚಿವರು ಇಲಾಖಾಧಿಕಾರಿಗಳೊಂದಿಗೆ ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆ ಸೇರಿದಂತೆ ಮತ್ತಿತ್ತರ ವಿಚಾರಗಳ ಬಗ್ಗೆ ಕೇಂದ್ರ ಸಚಿವರು ಅವಲೋಕನಾ ಸಭೆ ನಡೆಸಿ,ಸರ್ಕಾರಿ ಇನ್ಸೂರೆನ್ಸ್ ಕಂಪೆನಿಗಳು ಸರಿಯಾದ ಸಮಯಕ್ಕೆ ರೈತರಿಗೆ ಬೆಳೆ ವಿಮೆ ಪರಿಹಾರ ನೀಡಬೇಕೆಂಬ ನಿಟ್ಟಿನಲ್ಲಿ ಚರ್ಚಿಸಿದರು.
ಅವಲೋಕನಾ ಸಭೆಯಲ್ಲಿ ಸರ್ಕಾರಿ ವಿಮಾ ಕಂಪೆನಿಗಗಳಿಂದ ಸರಿಯಾದ ಸಮಯಕ್ಕೆ ಸರಿಯಾಗಿ ರೈತರಿಗೆ ಬೆಳೆ ವಿಮೆ ನೀಡಲು ಸಾಧ್ಯವಾಗುತ್ತದೆ ಎಂದ ಮೇಲೆ ಖಾಸಗಿ ವಿಮಾ ಕಂಪೆನಿಗಳಿಗೆ ಸರಿಯಾಗಿ ರೈತರಿಗೆ ವಿಮೆ ಪಾವತಿಸಲು ಸಾಧ್ಯವಾಗದೇ ಇರುವುದನ್ನು ಗಮನಿಸಿದ ಸಚಿವದ್ವಯರು ಸಭೆಯಲ್ಲಿ ಖಾಸಗಿ ವಿಮಾ ಕಂಪೆನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೇವಲ ಅಂಕಿಅಂಶಗಳಿಂದ ಕಾಗದದ ಮೇಲಿನ ಅಂಕಿಸಂಖ್ಯೆಗಳಿಂದ ರೈತರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಸರ್ಕಾರಿ ವಿಮಾ ಕಂಪೆನಿಗಳು ಸರಿಯಾಗಿ ನ್ಯಾಯ ಒದಗಿಸುತ್ತಿವೆ. ಖಾಸಗಿ ಕಂಪೆನಿಗಳು ಕೇವಲ ಅಂಕಿಸಂಖ್ಯೆಗಳನ್ನು ಮಾತ್ರ ಅಧಿಕಾರಿಗಳಿಗೆ ತೋರಿಸುತ್ತಿವೆ.ಈ ಹಿಂದೆಯೇ ರೈತ ಸಂಪರ್ಕ ಕೇಂದ್ರಗಳಲ್ಲಿ ವಿಮಾ ಕಂಪೆನಿಗಳು ಕಚೇರಿಗಳನ್ನು ತೆರೆಯಬೇಕೆಂದು ಸೂಚಿಸಲಾಗಿತ್ತು.ಆದರೆ ಅದು ಬರೀ ಸೂಚನೆಯಾಗಿಯಷ್ಟೇ ಉಳಿದಿದ್ದು,ಕಾರ್ಯಗತವಾಗಿಲ್ಲ ಎಂಬುದನ್ನು ಸಭೆಯಲ್ಲಿ ಕಮಿಷನರ್ ಗಮನಕ್ಕೆ ತಂದ ಕೃಷಿ ಸಚಿವ ಬಿ.ಸಿ.ಪಾಟೀಲ್, ಈ ಬಗ್ಗೆ ಕೃಷಿ ಕೇಂದ್ರ ಇಲಾಖೆಯ ಪ್ರಮುಖರು ಗಮನ ಹರಿಸಿ ಹದಿನೈದು ದಿನದೊಳಗೆ ಎಲ್ಲಾ ವಿಮಾ ಕಂಪೆನಿಗಳಿಗೆ ತಾಕೀತು ಮಾಡುವಂತೆ ಹೇಳಿದರು.
ರೈತರ ಪರವಾಗಿ ಅಧಿಕಾರಿಗಳು ಇರಬೇಕು.ಜಿಲ್ಲೆಯ ಕೃಷಿ ಅಧಿಕಾರಿಗಳಲ್ಲಿ ಪರಸ್ಪರ ಸಮನ್ವಯತೆ ಇರಬೇಕು. ವಿಮಾ ಇಲಾಖೆಯಲ್ಲಿ ಬೆಳೆ ವಿಮೆಗೆ ನೋಂದಣಿಯಾಗಿರುವ ಜಿಲ್ಲಾವಾರು ಪ್ರದೇಶ, ಬೆಳೆಗಳ ಬಗ್ಗೆ ರೈತರ ಮಾಹಿತಿ ಪಡೆದು ಸಾಂಖ್ಯಿಕ ಇಲಾಖೆಯ ಅಂಕಿಅಂಶಗಳ ಜೊತೆ ಪರಿಶೀಲನೆ ಮಾಡಿ ಒಂದು ವಾರದೊಳಗೆ ವರದಿ ಮಾಹಿತಿ ನೀಡಬೇಕು ಎಂದು ಆಯುಕ್ತರಿಗೆ ಭಗವಂತ್ ಖೂಬಾ ಸೂಚಿಸಿದರು.
ಈ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಕೇಂದ್ರ ಸಚಿವ ಭಗವಂತ್ ಖೂಬಾಗೆ “ಬೆಲೆ
ಭದ್ರತೆ” ಬಗ್ಗೆ ಮನವಿ ಸಲ್ಲಿಸಿದರು. ಸದ್ಯ ರಾಜ್ಯದಲ್ಲಿ 6.12 ಲಕ್ಷ ಟನ್ ವಿವಿಧ ಗ್ರೇಡ್ ಗಳ ರಸಗೊಬ್ಬರ ದಾಸ್ತಾನಿದ್ದು,2022 ರ ಮುಂಗಾರಿಗೆ 26.5 ಲಕ್ಷ ಟನ್ ಬೇಡಿಕೆಯಿರುವುದಾಗಿ ಅಂದಾಜಿಸಲಾಗಿದೆ. ಅಗತ್ಯವಿರುವ ರಸಗೊಬ್ಬರದ ಸರಬರಾಜು ಹಾಗೂ 3ಲಕ್ಷ ಟನ್ ವಿವಿಧ ರಸಗೊ ಬ್ಬರಗಳನ್ನು ಕಾಪು ದಾಸ್ತಾನಾಗಿ ಶೇಖರಣೆ ಮಾಡಲು ನಿರ್ಧರಿಸಲಾಗಿರುವುದರಿಂದ ಮುಂದಿನ ದಿನಗಳಲ್ಲಿ ಆಗಬಹುದಾದ ಬೆಲೆ ಏರಿಳಿತಕ್ಕೆ ರಕ್ಷಣೆ ನೀಡಲು ಮನವಿ ಪತ್ರದಲ್ಲಿ ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ:ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶನ
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.