ಆಸ್ಟ್ರೇಲಿಯನ್ ಓಪನ್ ಟೆನಿಸ್: ಒಸಾಕಾ ಆಟ ಮುಗಿಸಿದ ಅನಿಸಿಮೋವಾ
Team Udayavani, Jan 22, 2022, 5:00 AM IST
ಮೆಲ್ಬರ್ನ್: ಹಾಲಿ ವನಿತಾ ಸಿಂಗಲ್ಸ್ ಚಾಂಪಿಯನ್ ನವೋಮಿ ಒಸಾಕಾ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್‌ನಿಂದ ಹೊರಬಿದ್ದಿದ್ದಾರೆ.
ಶುಕ್ರವಾರ ನಡೆದ ತೃತೀಯ ಸುತ್ತಿನ ಮುಖಾಮುಖಿಯಲ್ಲಿ ಅವರನ್ನು ಅಮೆರಿಕದ ಅಮಂಡಾ ಅನಿಸಿಮೋವಾ ದಿಟ್ಟ ಹೋರಾಟದ ಬಳಿಕ 4-6, 6-3, 7-6 (10-5) ಅಂತರದಿಂದ ಮಣಿಸಿದರು.
60ರಷ್ಟು ಕೆಳ ರ್‍ಯಾಂಕಿಂಗ್ ಹೊಂದಿರುವ ಅನಿಸಿಮೋವಾ ಮತ್ತು 4 ಗ್ರ್ಯಾನ್‌ಸ್ಲಾಮ್ ಒಡತಿ ಒಸಾಕಾ ನಡುವಿನ ಮೊದಲ ಮುಖಾಮುಖಿ ಇದಾಗಿತ್ತು. ಅನಿಸಿಮೋವಾ ಅವರಿನ್ನು ವಿಶ್ವದ ಅಗ್ರಮಾನ್ಯ ಆಟಗಾರ್ತಿ, ಆತಿಥೇಯ ದೇಶದ ಆ್ಯಶ್ಲಿ ಬಾರ್ಟಿ ಅವರನ್ನು ಎದುರಿಸಲಿದ್ದಾರೆ.
ಬಾರ್ಟಿ ಇಟಲಿಯ ಕ್ಯಾಮಿಲಾ ಜಾರ್ಜಿ ವಿರುದ್ಧ 6-2, 6-3 ಅಂತರದ ಸುಲಭ ಜಯ ಸಾಧಿಸಿದರು.
4ನೇ ಸುತ್ತು ತಲುಪಿದ ಮತ್ತೋರ್ವ ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ. ಅವರು 15ನೇ ಶ್ರೇಯಾಂಕದ ಎಲಿನಾ ಸ್ವಿಟೋಲಿನಾಗೆ 6-0, 6-2 ಅಂತರದ ಸೋಲುಣಿಸಿದರು.
ಫ್ರೆಂಚ್ ಓಪನ್ ಚಾಂಪಿಯನ್, ಜೆಕ್ ಗಣರಾಜ್ಯದ ಕ್ರೆಜಿಕೋವಾ ಲಾತ್ವಿಯಾದ ಜೆಲೆನಾ ಒಸ್ಟಾಪೆಂಕೊ ವಿರುದ್ಧ ಮೊದಲ ಸೆಟ್ ಕಳೆದುಕೊಂಡೂ ಗೆದ್ದು ಬಂದರು. ಅಂತರ 2-6, 6-4, 6-4.
ಇದನ್ನೂ ಓದಿ:ಪ್ರೊ ಕಬಡ್ಡಿ: ದಬಾಂಗ್ ಡೆಲ್ಲಿ ವಿರುದ್ಧ ಹರ್ಯಾಣಗೆ ಗೆಲುವು
ಜ್ವೆರೇವ್ ಗೆಲುವಿನ ಓಟ
ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ ನಂ.3 ಆಟಗಾರ ಹಾಗೂ ಒಲಿಂಪಿಕ್ಸ್ ಚಾಂಪಿಯನ್ ಕೂಡ ಆಗಿರುವ ಅಲೆಕ್ಸಾಂಡರ್ ಜ್ವೆರೇವ್ ಅವರ ಗೆಲುವಿನ ಓಟ 4ನೇ ಸುತ್ತಿಗೆ ಮುಂದುವರಿದಿದೆ. ಅವರು ರಾಡು ಅಲ್ಬೋಟ್ ವಿರುದ್ಧ 6-3, 6-4, 6-4 ಅಂತರದ ಜಯ ಸಾಧಿಸಿದರು. ಜ್ವೆರೇವ್ ಈವರೆಗೆ ಒಂದೂ ಸೆಟ್ ಕಳೆದುಕೊಳ್ಳಲಿಲ್ಲ ಎಂಬುದು ವಿಶೇಷ.
ಹಾಲಿ ಚಾಂಪಿಯನ್ ನೊವಾಕ್ ಜೊಕೋವಿಕ್ ಅವರನ್ನು ಮೊದಲ ಸುತ್ತಿನಲ್ಲಿ ಎದುರಿಸಿ ಬೇಗನೇ ನಿರ್ಗಮಿಸಬೇಕಿದ್ದ ಅವರದೇ ನಾಡಿನ ಮಿಯೋಮಿರ್ ಕೆಕಾ¾ನೋವಿಕ್ ಕನಸಿನ ಓಟ ಮುಂದುವರಿಸಿದ್ದಾರೆ. 25ನೇ ಶ್ರೇಯಾಂಕದ ಲೊರೆಂಜೊ ಸೊನೆಗೊ ವಿರುದ್ಧದ 3ನೇ ಸುತ್ತಿನ ಮುಖಾಮುಖಿಯನ್ನು ಅವರು 6-4, 6-7 (8), 6-2, 7-5 ಅಂತರದಿಂದ ತಮ್ಮದಾಗಿಸಿಕೊಂಡರು. ಈ 77ನೇ ರ್‍ಯಾಂಕಿಂಗ್ ಆಟಗಾರನ ಮುಂದಿನ ಎದುರಾಳಿ ಫ್ರಾನ್ಸ್‌ನ ಗೇಲ್ ಮಾನ್‌ಫಿಲ್ಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.