ಶನಿದೇವರ ಅನುಗ್ರಹದಿಂದ ಮಂದಿರ ನಿರ್ಮಾಣ: ಹರೀಶ್‌ ಜಿ. ಅಮೀನ್‌


Team Udayavani, Jan 22, 2022, 11:42 AM IST

ಶನಿದೇವರ ಅನುಗ್ರಹದಿಂದ ಮಂದಿರ ನಿರ್ಮಾಣ: ಹರೀಶ್‌ ಜಿ. ಅಮೀನ್‌

ಮುಂಬಯಿ: ಸಮಿತಿಯ ಸದಸ್ಯರೆಲ್ಲರ ಪರಿ ಶ್ರಮ ಹಾಗೂ ಒಗ್ಗಟ್ಟಿನ ಪ್ರತೀಕವಾಗಿ ಸಂಸ್ಥೆಯು 77 ವರ್ಷಗಳನ್ನು ಪೂರೈಸಿದೆ. ಶನಿ ದೇವರ ಅನುಗ್ರ ಹ ದಿಂದ ಇಂದು ಮಹಾನ್‌ ಸಂಸ್ಥೆ ಬಿಲ್ಲ ವರ ಅಸೋಸಿಯೇಶನ್‌ನಲ್ಲಿ ಸೇವೆ ಮಾಡುವ ಭಾಗ್ಯ ನನಗೂ ಲಭಿಸಿದೆ. ಸಮಿತಿಯು ಮಂದಿ ರದ ಜಾಗದ ಅನ್ವೇಷಣೆಯಲ್ಲಿದ್ದು, ಶನಿದೇವರ ಇಚ್ಚಾನುಸಾರವಾಗಿ ಕೈಗೂಡುವ ನಿರೀಕ್ಷೆ ಇದೆ. ನಾವೆಲ್ಲ ಧಾರ್ಮಿಕ ಸೇವೆಯೊಂದಿಗೆ ಸಮಾಜ ಸೇವೆಯಲ್ಲೂ ಮುಂದಾಗಬೇಕು ಎಂದು ವೆಸ್ಟರ್ನ್ ಇಂಡಿಯಾ ಶನಿಮಹಾತ್ಮಾ ಸೇವಾ ಸಮಿತಿಯ ಗೌರವಾಧ್ಯಕ್ಷ ಹಾಗೂ ಬಿಲ್ಲವರ ಅಸೋಸಿ ಯೇಶನ್‌ ಮುಂಬಯಿ ಅಧ್ಯಕ್ಷ ಹರೀಶ್‌ ಜಿ. ಅಮೀನ್‌ ಹೇಳಿದರು.

ಅವರು ಜ. 15ರಂದು ಫೋರ್ಟ್‌ ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮಾ ಸೇವಾ ಸಮಿತಿಯ 77ನೇ ವಾರ್ಷಿಕ ಮಹಾಪೂಜೆಯ ಸಂದರ್ಭದಲ್ಲಿ ಫೋರ್ಟ್‌ ಮೋದಿ ಸ್ಟ್ರೀಟ್‌ನ ಧನರಾಜ್‌ ಕಟ್ಟಡದಲ್ಲಿರುವ ಮಂದಿರದ ವಠಾರದಲ್ಲಿ ನಡೆದ ಧಾರ್ಮಿಕ ಸಭೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭಹಾರೈಸಿದರು.

ಫೋರ್ಟ್‌ ಶ್ರೀ ಭುವನೇಶ್ವರಿ ಸೇವಾ ಸಮಿ ತಿಯ ಧರ್ಮದರ್ಶಿ ರಾಜೇಶ್‌ ಭಟ್‌ ಅವರು ಮಾತನಾಡಿ, ಸಮಿತಿಯು ಶನಿಗ್ರಂಥ ಪಾರಾಯಣ ದಲ್ಲಿ ಅತ್ಯುತ್ತಮ ಆಧ್ಯಾತ್ಮಿಕ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹರೀಶ್‌ ಜಿ. ಅಮೀನ್‌ ಅವರ ನೇತೃತ್ವದಲ್ಲಿ ಆದಷ್ಟು ಬೇಗ ಭವ್ಯ ಮಂದಿರ ನಿರ್ಮಾಣವಾಗಲಿ ಎಂದರು.

ಸಮಾಜ ಸೇವಕ ಹಾಗೂ ನಮ ಜವನೆರ್‌ ಮೀರಾ- ಭಾಯಂದರ್‌ ಸಂಸ್ಥೆಯ ಅಧ್ಯಕ್ಷ ಚೇತನ್‌ ಶೆಟ್ಟಿ ಮೂಡುಬಿದಿರೆಯವರು ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಭಾರತ್‌ ಬ್ಯಾಂಕ್‌ನ ನಿರ್ದೇಶಕ ಪುರುಷೋತ್ತಮ ಎಸ್‌. ಕೋಟ್ಯಾನ್‌, ಬಿಜೆಪಿ ನೇತಾರ ಸದಾನಂದ ಎಸ್‌. ಶೆಟ್ಟಿ ಕಿನ್ನಿಗೋಳಿ ಉಪಸ್ಥಿತರಿದ್ದರು. ಪರಿಸರದ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು, ದಾನಿಗಳನ್ನು, ಗಣ್ಯರನ್ನು ಹೂಗತ್ಛ ನೀಡಿ ಪದಾಧಿಕಾರಿಗಳು ಸತ್ಕರಿಸಿದರು.

77ನೇ ವಾರ್ಷಿಕ ಮಹಾಪೂಜೆಯ ಅಂಗವಾಗಿ ಹರೀಶ್‌ ಶಾಂತಿ ಹೆಜಮಾಡಿ ಹಾಗೂ ಕಾರ್ಕಳ ಹರೀಶ್‌ ಶಾಂತಿಯವರ ಪೌರೋಹಿತ್ಯದಲ್ಲಿ ಗಣ ಹೋಮ ಹಾಗೂ ಶ್ರೀ ಸತ್ಯನಾರಾಯಣ ಮಹಾ ಪೂಜೆಯು ನೇಹಾ ಮತ್ತು ಪ್ರತೀಕ್‌ ಲವ ಅಮೀನ್‌ ದಂಪ ತಿಯ ಯಜಮಾನಿಕೆಯಲ್ಲಿ ನಡೆಯಿತು. ವೆಸ್ಟರ್ನ್ ಇಂಡಿಯಾ ಭಜನ ಸಮಿತಿಯ ಸದಸ್ಯ ರಿಂದ ಭಜನೆ, ಸಮಿತಿಯ ಪ್ರಧಾನ ಅರ್ಚಕ ಸತೀಶ್‌ ಎನ್‌. ಕೋಟ್ಯನ್‌ ಅವರಿಂದ ಕಲಶ ಪ್ರತಿಷ್ಠೆ ನಡೆಯಿತು.

ಸಮಿತಿಯ ಸದಸ್ಯರಿಂದ ಮತ್ತು ಮುಂಬ ಯಿಯ ಇತರ ಶನಿಪೂಜಾ ಸಮಿತಿಯ ಸದಸ್ಯ ರಿಂದ ಶನಿ ಗ್ರಂಥ ಪಾರಾಯಣ ನಡೆಯಿತು. ಮಹಾ ಮಂಗ ಳಾರತಿ ಪ್ರಸಾದ ವಿತರಣೆ, ಅನ್ನ ಸಂತ ರ್ಪಣೆ ನಡೆಯಿತು. ಪುರೋಹಿತ ಹರೀಶ್‌ ಶಾಂತಿ, ಅರ್ಚಕ ಸುರೇಶ್‌ ಜೆ. ಕೋಟ್ಯಾನ್‌ ಪೂಜಾ ಕಾರ್ಯ ದಲ್ಲಿ ಸಹಕರಿಸಿದ್ದರು. ಜಗತ್ತಿನ ಸರ್ವ ಜನರು ಕೊರೊನಾ ಮಹಾಮಾರಿಯಿಂದ ಮುಕ್ತರಾಗುವಂತೆ ಶ್ರೀ ಶನೀಶ್ವರ ದೇವರಲ್ಲಿ ಪ್ರಾರ್ಥಿಸಲಾಯಿತು. ಸಮಿತಿಯ ಅದ್ಯಕ್ಷ ರವಿ ಎಲ….ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಧಾರ್ಮಿಕ ಸಲಹೆಗಾರ ಜೆ. ಜೆ. ಕೋಟ್ಯಾನ್‌ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಶರತ್‌ ಪೂಜಾರಿ ವಂದಿಸಿದರು. ಉಪಾಧ್ಯಕ್ಷ ಸುದೇಶ್‌ ಪೂಜಾರಿ, ಜತೆ ಕಾರ್ಯ ದರ್ಶಿಗಳಾದ ರಾಜೇಶ್‌ ಸುವರ್ಣ, ಗಣೇಶ್‌ ಪೂಜಾರಿ, ಕೋಶಾಧಿಕಾರಿ ಪ್ರಶಾಂತ್‌ ಕರ್ಕೇರ, ಜತೆ ಕೋಶಾಧಿಕಾರಿಗಳಾದ ಆಕಾಶ್‌ ಸುವರ್ಣ, ಸುಭಾಷ್‌ ಪೂಜಾರಿ ಹಾಗೂ ಸಮಿತಿಯ ಕಾರ್ಯ ಕಾರಿ ಸಮಿತಿಯ ಸದಸ್ಯರು, ವಿಶೇಷ ಆಮಂತ್ರಿತ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.

ಪ್ರಶಸ್ತಿ ಪ್ರದಾನ :

ಕಾರ್ಯಕ್ರಮದಲ್ಲಿ ಸಮಿತಿಯ ವತಿಯಿಂದ ಪ್ರತೀ ವರ್ಷ ನೀಡುತ್ತಿರುವ ಕೀರ್ತಿಶೇಷ ನಾರಾಯಣ ಬಿ. ಸಾಲ್ಯಾನ್‌ ಸ್ಮರಣಾರ್ಥ ಪ್ರಶಸ್ತಿಯನ್ನು ಭಾಂಡುಪ್‌ ಶ್ರೀ ಶನೀಶ್ವರ ಮಂದಿರದ ಕಾರ್ಯದರ್ಶಿ, ಶನಿಕಥಾ ಅರ್ಥದಾರಿ ಸದಾನಂದ ಎಸ್‌. ಅಮೀನ್‌ ಅವರಿಗೆ ನೀಡಿ ಗೌರವಿಸಲಾಯಿತು. ಸಮಿತಿಯ ವತಿಯಿಂದ ಹಿರಿಯ ಸದಸ್ಯರಿಗೆ ಕೊಡುವ ಸಮ್ಮಾವನ್ನು ಧಾರ್ಮಿಕ ಚಿಂತಕ ಭೋಜ ಎಸ್‌. ಪೂಜಾರಿ ಅವರಿಗೆ ನೀಡಿ ಗೌರವಿಸಲಾಯಿತು. ಸಮ್ಮಾನಿತರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು.

ಅರ್ಥಪೂರ್ಣ ಕಾರ್ಯಕ್ರಮ :

ಸಮಿತಿಯು ಇಂದು ಇಬ್ಬರು ಧಾರ್ಮಿಕ ಸೇವಾ ಧುರೀಣರನ್ನು ಸಮ್ಮಾನಿಸುವ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದೆ. 77 ವರ್ಷ ಕಂಡ ಈ ಸಂಸ್ಥೆಯನ್ನು ನಿಸ್ವಾರ್ಥ ಸೇವೆ ಮಾಡಿ ಬೆಳೆಸಿರುವ ಸ್ಥಾಪಕರನ್ನು ಇಂದು ನಾವು ನೆನಪಿಸಬೇಕು. ಶನಿದೇವರೆಂದರೆ ಎಲ್ಲರೂ ಹೆದರುತ್ತಾರೆ. ಆದರೆ ಅವರು ಕಷ್ಟ ಕೊಟ್ಟರೂ ಉತ್ತಮ ಬದುಕಿಗೆ ದಾರಿ ತೋರಿಸುವವರು. ಎಲ್ಲರನ್ನೂ ಶನಿದೇವರು ಅನುಗ್ರಹಿಸಲಿ.-ಪಂಡಿತ್‌ ನವೀನ್‌ಚಂದ್ರ ಸನಿಲ್‌, ವಾಸ್ತುತಜ್ಞರು

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

byndoor

Kundapura: ಪ್ರತ್ಯೇಕ ಅಪಘಾತ ಪ್ರಕರಣ; ಗಾಯ

1-p-r

US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.