ಕೋವಿಡ್ ಟೆಸ್ಟ್ ವರದಿ ಯಾವಾಗ ಬರುತ್ತೆ?
Team Udayavani, Jan 22, 2022, 12:12 PM IST
ಬೆಂಗಳೂರು: “ಗಂಟಲು ದ್ರವದ ಮಾದರಿ ನೀಡಿದ ನಂತರ ಅದರ ಪರೀಕ್ಷಾ ವರದಿ ನನ್ನ ಕೈಸೇರುವಷ್ಟರಲ್ಲಿ ನಾನು ಸರ್ಕಾರದ ನಿಯಮಗಳ ಪ್ರಕಾರ ನೆಗೆಟಿವ್‌ಆಗಿರುತ್ತೇನೆ. ಹಾಗಿದ್ದರೆ, ಪರೀಕ್ಷೆ ಮಾಡಿಸಿ ಏನು ಉಪಯೋಗ?’
– ನಿತ್ಯ ಬೆಳಗಾದರೆ ಆಪ್ತಮಿತ್ರ ಸಹಾಯವಾಣಿಗೆಬಹುತೇಕರು ಕೇಳುತ್ತಿರುವ ಪ್ರಶ್ನೆ ಇದು.ಜತೆಗೆ, ಪಾಸಿಟಿವ್ ಬಂದ ಸೋಂಕಿತರು ಕರೆ ಮಾಡಿ, ಜ್ವರ, ಕೆಮ್ಮು, ಶೀತಕ್ಕೆ ಯಾವ ಮಾತ್ರೆತೆಗೆದುಕೊಳ್ಳಬೇಕು ಎಂಬ ಪ್ರಶ್ನೆ ಕೇಳುವವರ ಸಂಖ್ಯೆಯೂ ಮೊದಲ ಹಾಗೂ ಎರಡನೇ ಅಲೆಗಿಂತ ಮೂರನೇ ಅಲೆ ಸಂದರ್ಭದಲ್ಲಿ ಹೆಚ್ಚಾಗಿದೆ.
ಇನ್ನೂ ಕೆಲ ವರು ಬೂಸ್ಟರ್ ಡೋಸ್, ಮುನ್ನೆಚ್ಚರಿಕೆ ಡೋಸ್, ಎರಡನೆ ಡೋಸ್ ಲಸಿಕೆ ಬಗ್ಗೆ ಮಾಹಿತಿಹಾಗೂ ಲಸಿಕೆ ಪಡೆದ ಪ್ರಮಾಣ ಪತ್ರ ಪಡೆಯುವ ಬಗ್ಗೆ ಪ್ರಶ್ನಿಸಿ ಉತ್ತರ ಪಡೆಯುತ್ತಿದ್ದಾರೆ.ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಮರ್ಥ್ಯ ಮೀರಿಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಇದೀಗ ಕೋವಿಡ್ ಮಾದರಿ ಪರೀಕ್ಷೆವರದಿ ತಡವಾಗುತ್ತಿರುವ ಬಗ್ಗೆಸಾರ್ವಜನಿಕರಿಗೆ ಬೇಸರ ಉಂಟುಮಾಡಿದೆ. ಕೆಲವು ಪ್ರಕರಣಗಳಲ್ಲಿ ನಾಲ್ಕಾರುದಿನಗಳಾದರೂ ವರದಿ ಬರುತ್ತಿಲ್ಲ. ಈ ಬಗ್ಗೆ ಖುದ್ದು ಸಾರ್ವಜನಿಕರು ಆಪ್ತಮಿತ್ರ ಸಹಾಯವಾಣಿಗೆ ಕರೆ ಮಾಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ವರದಿಗೆ 2 ರಿಂದ 4ದಿನ ಬೇಕು: ಸೋಂಕಿತ ವ್ಯಕ್ತಿಯಿಂದ ಪಡೆದ ಸ್ವ್ಯಾಬ್‌ನ ವರದಿಯನ್ನು 24ಗಂಟೆಯೊಳಗೆ ನೀಡುವ ವ್ಯವಸ್ಥೆ ಹಿಂದೆ ಇತ್ತು.ಅನಂತರ ದಿನದಲ್ಲಿ 2021ರ ಎರಡನೇ ಅಲೆ ತೀವ್ರಗೊಂಡ ಸಮಯದಲ್ಲಿ ಕೆಲ ಜಿಲ್ಲೆಗಳಲ್ಲಿ ಕೋವಿಡ್ ವರದಿಗೆ 3ರಿಂದ 7ದಿನಗಳ ಸಮಯ ತೆಗೆದುಕೊಳ್ಳಲಾಗುತ್ತಿತ್ತು. 2022ರ ಮೊದಲ ವಾರದಲ್ಲಿ ಕೊರೊನಾ ವರದಿಯನ್ನು ಶೀಘ್ರದಲ್ಲಿ ನೀಡುವಲ್ಲಿಹೆಚ್ಚಿನ ಗಮನ ನೀಡಿತ್ತಾದರೂ, ಪ್ರಸ್ತುತ ಕೋವಿಡ್ ಮಾದರಿಗಳ ವರದಿ ಬರಲು ಸುಮಾರು 2ರಿಂದ 4 ದಿನಗಳ ತೆಗೆದುಕೊಳ್ಳುತ್ತಿರುವುದಾಗಿ ವರದಿಯಾಗಿದೆ.
ಸ್ವ್ಯಾಬ್ ನೀಡಿ 2ದಿನಗಳು ಕಳೆದರೂ ವರದಿ ಬರದೆ ಇರುವುದನ್ನು ಪ್ರಶ್ನಿಸಿ ಸಾರ್ವಜನಿಕರು ಆಪ್ತ ಸಹಾಯವಾಣಿ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ 1533 ಸಹಾಯವಾಣಿಗೆ ಬರುವ ಕರೆಗಳಲ್ಲಿ ಅತ್ಯಧಿಕ ಕರೆಗಳು ಬರುತ್ತಿದೆ ಎಂದು ಅಲ್ಲಿನ ಸಿಬ್ಬಂದಿ ತಿಳಿಸುತ್ತಾರೆ.
ರಾಜ್ಯದಲ್ಲಿ ಐಸಿಎಂಆರ್‌ನ ಆದೇಶದ ಅನ್ವಯ ಕೊರೊನಾ ಪರೀಕ್ಷೆಯನ್ನು ಹೆಚ್ಚಿಸಲಾಗಿದೆ. ಡಿ. 15ರಸಂದರ್ಭದಲ್ಲಿ ಒಂದು ಲಕ್ಷ ಮಾದರಿಗಳನ್ನು ಪರೀಕ್ಷೆಗೆಒಳಪಡಿಸುತ್ತಿದ್ದು, ಜ. 15ರ ಸುಮಾರಿಗೆ ಮಾದರಿಗಳಪರೀಕ್ಷಾ ಸಂಖ್ಯೆಯನ್ನು ಸಮಾರು 1.75ರಿಂದ 2ಲಕ್ಷದಗಡಿ ದಾಟಿದೆ. ಇದೀಗ ಆಯಾ ಜಿಲ್ಲಾ ಸರ್ಕಾರಿ ಲ್ಯಾಬ್‌ಗಳ ಮೇಲೆ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಖಾಸಗಿಆಸ್ಪತ್ರೆಗಳ ಲ್ಯಾಬ್‌ಗಳಿಗೆ ಸ್ವಾéಬ್ ಪರೀಕ್ಷೆ ನೀಡಲಾಗುತ್ತಿದೆ
ಹತ್ತು ದಿನಗಳ ಐಸೋಲೇಷನ್? : ಪ್ರಸ್ತುತ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮಾರ್ಗಸೂಚಿ ಅನ್ವಯ ವ್ಯಕ್ತಿಯ ಕೋವಿಡ್ ವರದಿ ಪಾಸಿಟಿವ್‌ಬಂದ ಏಳು ದಿನಗಳವರೆಗೆ ಸೋಂಕಿತರುಹೋಮ್ ಐಸೋಲೇಷನ್‌ಗೆಒಳಗಾಗಬೇಕು. ಪ್ರಸ್ತುತ ಲಕ್ಷಣಗಳಿರುವ ಸೋಂಕಿತರು ಮಾದರಿ ಪರೀಕ್ಷೆಗೆ ನೀಡಿದಮೂರು ದಿನಗಳ ಬಳಿಕ ವರದಿ ಬರುತ್ತಿರುವುದರಿಂದ, ಸೋಂಕಿತರು ಸುಮಾರು 10 ದಿನಗಳ ಹೋಮ್‌ಐಸೋಲೇಷನ್ ಪೂರೈಸಿದಂತಗಾಗುತ್ತಿದೆ.
82 ಲ್ಯಾಬ್‌ನಲ್ಲಿ ವರದಿ ತಡ :
ರಾಜ್ಯದಲ್ಲಿ 133 ಲ್ಯಾಬ್‌ಗಳಲ್ಲಿ ಕೊರೊನಾ ಸ್ವ್ಯಾಬ್‌ಗಳನ್ನು ಪರೀಕ್ಷೆ ಮಾಡಲಾಗುತ್ತಿದೆ. 24 ಗಂಟೆಯೊಳಗೆ 51 ಲ್ಯಾಬ್ ಗಳು ಸ್ವ್ಯಾಬ್‌ಗಳ ಮಾದರಿಗಳ ವರದಿ ನೀಡುತ್ತಿದೆ. 70 ಲ್ಯಾಬ್‌ಗಳು 1ರಿಂದ 2ದಿನಗಳ ಒಳಗಾಗಿ ವರದಿಯನ್ನು ನೀಡುತ್ತಿದೆ. ಸುಮಾರು 2ರಿಂದ ಮೂರು ದಿನಗಳ ಒಳಗೆ 6 ಲ್ಯಾಬ್ ಹಾಗೂ 3 ದಿನ ಮೇಲ್ಪಟ್ಟು 6 ಲ್ಯಾಬ್‌ಗಳು ವರದಿಯನ್ನು ನೀಡಲಾಗುತ್ತಿದೆ. ಬೆಂಗಳೂರು ನಗರದ 72 ಲ್ಯಾಬ್‌ಗಳಲ್ಲಿ ಕೇವಲ 19 ಲ್ಯಾಬ್‌ಗಳು 24 ಗಂಟೆಯೊಳಗೆ ವರದಿ ನೀಡುತ್ತಿದೆ. ಉಳಿದಂತೆ 1ರಿಂದ 2 ದಿನಗಳೊಳಗೆ 47 ಲ್ಯಾಬ್‌ಗಳು, ಸುಮಾರು 2 ರಿಂದ ಮೂರು ದಿನಗಳ ಒಳಗೆ 4, ಮೂರು ದಿನ ಮೇಲ್ಪಟ್ಟು 2 ಲ್ಯಾಬ್‌ಗಳು ವರದಿ ನೀಡುತ್ತಿದೆ. ರಾಜ್ಯಾದ್ಯಂತ 82 ಲ್ಯಾಬ್‌ಗಳಲ್ಲಿ 24 ಗಂಟೆ ಮೇಲ್ಪಟ್ಟ ಬಳಿಕವಷ್ಟೇ ವರದಿಯನ್ನು ನೀಡುತ್ತಿರುವುದರಿಂದ ವರದಿಗಳು ಸೋಂಕಿತರ ಕೈ ಸೇರುವುದು ತಡವಾಗುತ್ತಿದೆ.
-ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.