ತುರ್ತು ಸೇವೆಗೆ ಮತ್ತೆ ಬಂದಿವೆ 9 ಹೊಸ ಸಾರಥಿ! 108 ಸೇರಿ ಜಿಲ್ಲೆಯಲ್ಲೀಗ 72 ಆಂಬ್ಯುಲೆನ್ಸ್
Team Udayavani, Jan 23, 2022, 3:00 PM IST
ಬಾಗಲಕೋಟೆ: ಕೊರೊನಾ 1 ಮತ್ತು 2ನೇ ಅಲೆಯಲ್ಲಿ ತೀವ್ರ ಸಂಕಷ್ಟ ಎದುರಿಸಿದ ಬಳಿಕ, ಆರೋಗ್ಯ ಇಲಾಖೆ ಹಾಗೂ ಜಿಲ್ಲೆಯ ಬಹುತೇಕ ಆಸ್ಪತ್ರೆಗಳ ಸೌಲಭ್ಯಗಳು ಮೇಲ್ದರ್ಜೆಗೇರುತ್ತಿದ್ದು, ಈ ನಿಟ್ಟಿನಲ್ಲಿ ತುರ್ತು ಸೇವೆಗಾಗಿ ಹೊಸ ಆಂಬ್ಯುಲೆನ್ಸ್ ಕೂಡ ಬಂದಿವೆ. ಹೌದು, ಜಿಲ್ಲೆಗೆ ಕಳೆದೆರಡು ದಿನಗಳ ಹಿಂದೆ ಮತ್ತೆ 9 ಹೊಸ ಆಂಬ್ಯುಲೆನ್ಸ್ ಬಂದಿದ್ದು, ಪ್ರತಿಯೊಂದು ವಿಧಾನಸಭೆ ಮತಕ್ಷೇತ್ರಕ್ಕೂ ತಲಾ ಒಂದು ಹೊಸ ಆಂಬ್ಯುಲೆನ್ಸ್ ನೀಡಲಾಗಿದೆ. ಜತೆಗೆ ಹೆಚ್ಚುವರಿಯಾಗಿ ಜಮಖಂಡಿ ಮತ್ತು ಬಾಗಲಕೋಟೆ ಉಪವಿಭಾಗಕ್ಕೆ ತಲಾ ಒಂದು ಹಂಚಿಕೆ ಮಾಡಿದ್ದು, ತುರ್ತು ಸೇವೆಗಾಗಿಯೇ ಮೀಸಲಿಡಲಾಗಿದೆ.
23 ಆರೋಗ್ಯ ಸೇವೆಯ 108 ವಾಹನ: ತುರ್ತು ಸಂದರ್ಭದಲ್ಲಿ ಮಾನವನ ಜೀವ ಉಳಿಸಲು ಪಯುಕ್ತವಾಗಿರುವ ಆರೋಗ್ಯ ಸೇವೆಯ 108 ಯೋಜನೆಯಡಿ ಜಿಲ್ಲೆಗೆ 23 ವಾಹನ ನೀಡಿದ್ದು,
ಇಲ್ಲಿಯೂ 3 ಹೊಸ ಅಂಬ್ಯುಲೆನ್ಸ ನೀಡಲಾಗಿದೆ. ಬಾಗಲಕೋಟೆ ತಾಲೂಕಿನಲ್ಲಿ 5, ಜಮಖಂಡಿ-3, ರಬಕವಿ-ಬನಹಟ್ಟಿ-1, ಮುಧೋಳ-3, ಬೀಳಗಿ-3, ಹುನಗುಂದ-4, ಬಾದಾಮಿ ತಾಲೂಕಿನಲ್ಲಿ 4 ಸೇರಿ ಒಟ್ಟು 23 ಆಂಬ್ಯುಲೆನ್ಸ್ ವಾಹನಗಳು ಆರೋಗ್ಯ ಸೇವೆಯ 108 ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿವೆ.
ಇಲಾಖೆಯಿಂದ 46 ಆಂಬ್ಯುಲೆನ್ಸ್: 108 ಯೋಜನೆಯಡಿ ನೀಡಿದ ಅಂಬ್ಯುಲೆನ್ಸ ಜತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಜಿಲ್ಲೆಗೆ ಹೊಸದಾಗಿ 9 ಸೇರಿದಂತೆ ಒಟ್ಟು 46 ಆಂಬ್ಯುಲೆನ್ಸ್ ವಾಹನಗಳು ಸೇವೆಯಲ್ಲಿವೆ. ಬಾಗಲಕೋಟೆ-6, ಜಮಖಂಡಿ-9 (ರಬಕವಿ-ಬನಹಟ್ಟಿ ಸಹಿತ), ಮುಧೋಳ-6, ಬೀಳಗಿ-4, ಹುನಗುಂದ (ಇಳಕಲ್ಲ ಸಹಿತ) 10 ಹಾಗೂ ಬಾದಾಮಿ (ಗುಳೇದಗುಡ್ಡ ಸಹಿತ) 11 ಆಂಬ್ಯುಲೆನ್ಸ್ ಗಳಿವೆ.
ಹೊಸದಾಗಿ ಇಲಾಖೆಯಿಂದ 9 ಹೊಸ ಅಂಬ್ಯುಲೆನ್ಸ ಬಂದಿದ್ದು, ಅದರಲ್ಲಿ ಬಾಗಲಕೋಟೆ, ಹುನಗುಂದ, ಬಾದಾಮಿ, ಬೀಳಗಿ, ಮುಧೋಳ, ಜಮಖಂಡಿ ಹಾಗೂ ತೇರದಾಳ ಮತಕ್ಷೇತ್ರಕ್ಕೆ ತಲಾ ಒಂದು ಹಾಗೂ ಬಾಗಲಕೋಟೆ- ಜಮಖಂಡಿ ಉಪ ವಿಭಾಗಕ್ಕೆ ತಲಾ ಒಂದು ಪ್ರತ್ಯೇಕ ಹೊಸ ಆಂಬ್ಯುಲೆನ್ಸ್ ನೀಡಲಾಗಿದೆ. ನಗು-ಮಗು ವಿಶೇÐ ಆಂಬ್ಯುಲೆನ್ಸ್ : ತುರ್ತು ಸೇವೆಯ
ಸೇವೆಗಾಗಿ ಪ್ರತ್ಯೇಕ ಆಂಬ್ಯುಲೆನ್ಸ್ ಹೊರತುಪಡಿಸಿ, ಪ್ರತಿಯೊಂದು ತಾಲೂಕು ಆಸ್ಪತ್ರೆಗೂ ನಗು-ಮಗು ವಿಶೇಷ ಅಂಬ್ಯುಲೆನ್ಸಗಳಿವೆ. ಈ ಆಂಬ್ಯುಲೆನ್ಸ್ ಗಳು, ಸರ್ಕಾರಿ ಆಸ್ಪತ್ರೆಗೆಯಲ್ಲಿ ಹೆರಿಗೆ ಮಾಡಿಸಿಕೊಂಡ ಮಹಿಳೆಯರು, ಹುಟ್ಟಿದ ಮಗುವಿನೊಂದಿಗೆ ಮನೆಗೆ ಬಿಟ್ಟು ಬರಲೆಂದೇ ಈ ನಗು-ಮಗು ಆಂಬ್ಯುಲೆನ್ಸ್ ಬಳಸಲಾಗುತ್ತದೆ. ಆದರೆ, ಈಚಿನ ದಿನಗಳಲ್ಲಿ ಈ ಆಂಬ್ಯುಲೆನ್ಸ್ ಗಳ ಸದ್ಭಳಕೆಯಾಗುತ್ತಿಲ್ಲ ಎಂಬ ಮಾತು ಕೇಳಿ ಬಂದಿದೆ.
ಒಟ್ಟಾರೆ, ಜಿಲ್ಲೆಯಲ್ಲಿ ಆರೋಗ್ಯ ಸೇವೆಗಾಗಿ 108 ಆರೋಗ್ಯ ಸೇವೆ ಯೋಜನೆಯಡಿ 23, ಜಿಲ್ಲಾ ಆಸ್ಪತ್ರೆಗೆ ಪ್ರತ್ಯೇಕ 3 ಹಾಗೂ ಇಲಾಖೆಯಿಂದ 46 ಸೇರಿ ಒಟ್ಟು 72 ಆಂಬ್ಯುಲೆನ್ಸ್ ಗಳು ಜಿಲ್ಲೆಯಲ್ಲಿ
ಕಾರ್ಯ ನಿರ್ವಹಿಸುತ್ತಿವೆ.
ಬಾದಾಮಿ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ಬಾದಾಮಿ ತಾಲೂಕಿನಲ್ಲಿ 108ನ 4 ಹಾಗೂ ಇಲಾಖೆಯಿಂದ 11 ಆಂಬ್ಯುಲೆನ್ಸ್ ಗಳಿವೆ. ಅಲ್ಲದೇ ನಮ್ಮ ಕ್ಷೇತ್ರದ ಶಾಸಕರೂ ಆಗಿರುವ ಮಾಜಿ
ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ 2 ಹೊಸ ಆಂಬ್ಯುಲೆನ್ಸ್ ಅನ್ನು ಇಲಾಖೆಗೆ ನೀಡಿದ್ದಾರೆ. ಅದರಲ್ಲಿ ಗುಳೇದಗುಡ್ಡ ಮತ್ತು ಬಾದಾಮಿ ತಾಲೂಕಿಗೆ ಪ್ರತ್ಯೇಕ ತಲಾ ಒಂದೊಂದು ಆಂಬ್ಯುಲೆನ್ಸ್ ಬಳಸಲು ತಿಳಿಸಲಾಗಿದೆ. ಕ್ಷೇತ್ರದ ಪ್ರತಿ 10ರಿಂದ 15 ಕಿ.ಮೀ ವ್ಯಾಪ್ತಿಯಲ್ಲಿ ಆಂಬ್ಯುಲೆನ್ಸ್ ಸೇವೆ ದೊರೆಯಬೇಕು ಎಂಬುದು ನಮ್ಮ ಸಿದ್ದರಾಮಯ್ಯ ಅವರ ಬಯಕೆ.
– ಹೊಳಬಸು ಶೆಟ್ಟರ, ಕಾಂಗ್ರೆಸ್ ಮುಖಂಡ, ಗುಳೇದಗುಡ್ಡ-ಬಾದಾಮಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲೆಗೆ 9 ಹೊಸ ಅಂಬ್ಯುಲೆನ್ಸ ಬಂದಿದ್ದು, ಇಲಾಖೆಯ ನಿಯಮಾವಳಿ ಪ್ರಕಾರ ಸ್ಥಳೀಯ ಸಾರಿಗೆ ಇಲಾಖೆಯಲ್ಲಿ ನೋಂದಾವಣೆ ಮಾಡಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 46 ಆಂಬ್ಯುಲೆನ್ಸ್ ಇವೆ.
– ನಾಯ್ಕೋಡಿ ಆರೋಗ್ಯ ಮತ್ತು ಕಲ್ಯಾಣ ಇಲಾಖೆ
– ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ
Karnataka Govt,.: ಸಂಪುಟ ಹುತ್ತಕ್ಕೆ ಈಗಲೇ ಕೈಹಾಕಲು ಸಿಎಂ ನಿರಾಸಕ್ತಿ?
Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್ ಭೇಟಿ ಸಾಧ್ಯತೆ
DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ
DK Shivakumar: ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.