ಭಾರತವನ್ನು ಕ್ಲೀನ್‌ ಸ್ವೀಪ್‌ ಮಾಡಿದ ದಕ್ಷಿಣ ಆಫ್ರಿಕಾ


Team Udayavani, Jan 23, 2022, 11:04 PM IST

ಭಾರತವನ್ನು ಕ್ಲೀನ್‌ ಸ್ವೀಪ್‌ ಮಾಡಿದ ದಕ್ಷಿಣ ಆಫ್ರಿಕಾ

ಕೇಪ್‌ಟೌನ್‌: ಭಾರತ ವಿರುದ್ಧದ ಏಕದಿನ ಸರಣಿಯನ್ನು ದಕ್ಷಿಣ ಆಫ್ರಿಕಾ 3-0 ಅಂತರದಿಂದ ಕ್ಲೀನ್‌ ಸ್ವೀಪ್‌ ಆಗಿ ವಶಪಡಿಸಿಕೊಂಡಿದೆ. ರವಿವಾರ ಕೇಪ್‌ಟೌನ್‌ನಲ್ಲಿ ನಡೆದ ಅಂತಿಮ ಪಂದ್ಯವನ್ನಾದರೂ ಗೆದ್ದು ಗೌರವ ಉಳಿಸಿಕೊಳ್ಳುವ ರಾಹುಲ್‌ ಪಡೆಯ ಪ್ರಯತ್ನ ಕೈಗೂಡಲಿಲ್ಲ. ಭಾರತ ಕೇವಲ 4 ರನ್ನುಗಳ ಸೋಲಿಗೆ ತುತ್ತಾಯಿತು.

ಮೊದಲು ಬ್ಯಾಟಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾ ಕ್ವಿಂಟನ್‌ ಡಿ ಕಾಕ್‌ ಶತಕ ಸಾಹಸದಿಂದ 49.5 ಓವರ್‌ಗಳಲ್ಲಿ 287 ರನ್‌ ಪೇರಿಸಿತು. ಭಾರತ 49.2 ಓವರ್‌ಗಳಲ್ಲಿ 283ಕ್ಕೆ ಆಲೌಟ್‌ ಆಯಿತು.

ಧವನ್‌, ಕೊಹ್ಲಿ ಹೋರಾಟ
ನಾಯಕ ರಾಹುಲ್‌ (9) ಅವರನ್ನು ಬೇಗನೇ ಕಳೆದುಕೊಂಡ ಬಳಿಕ ಶಿಖರ್‌ ಧವನ್‌-ವಿರಾಟ್‌ ಕೊಹ್ಲಿ ಸೇರಿಕೊಂಡು ತಂಡದ ನೆರವಿಗೆ ನಿಂತರು. ಇಬ್ಬರಿಂದಲೂ ಅರ್ಧ ಶತಕ ದಾಖಲಾಯಿತು. ದ್ವಿತೀಯ ವಿಕೆಟಿಗೆ 98 ರನ್‌ ಒಟ್ಟುಗೂಡಿತು. ಇಬ್ಬರೂ ಎಚ್ಚರಿಕೆಯ ಆಟದ ಮೂಲಕ ಇನ್ನಿಂಗ್ಸ್‌ ವಿಸ್ತರಿಸತೊಡಗಿದರು.

ಮೊದಲು ಅರ್ಧ ಶತಕ ಪೂರೈಸಿದ ಧವನ್‌ 73 ಎಸೆತಗಳಿಂದ 61 ರನ್‌ ಮಾಡಿದರು (5 ಬೌಂಡರಿ, 1 ಸಿಕ್ಸರ್‌). ಪಂದ್ಯದ 23ನೇ ಓವರ್‌ನಲ್ಲಿ ಫೆಲುಕ್ವಾಯೊ ಅವಳಿ ಆಘಾತವಿಕ್ಕಿ ಭಾರತವನ್ನು ಸಂಕಟಕ್ಕೆ ತಳ್ಳಿದರು. ಧವನ್‌ ಜತೆಗೆ ರಿಷಭ್‌ ಪಂತ್‌ ಅವರನ್ನೂ ಪೆವಿಲಿಯನ್ನಿಗೆ ಅಟ್ಟಿದರು. ಪಂತ್‌ ಅವರದು “ಗೋಲ್ಡನ್‌ ಡಕ್‌’!

ಶ್ರೇಯಸ್‌ ಅಯ್ಯರ್‌ ಜತೆಗೂಡಿದ ಕೊಹ್ಲಿ ತಂಡದ ಮೊತ್ತವನ್ನು ನೂರೈವತ್ತರ ಗಡಿ ದಾಟಿಸಿದರು. ಅಷ್ಟರಲ್ಲಿ ಮಹಾರಾಜ್‌ ಮೋಡಿಗೆ ಸಿಲುಕಿದರು. ಕೊಹ್ಲಿ ಕೊಡುಗೆ 65 ರನ್‌. 84 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಒಳಗೊಂಡಿತ್ತು.

ಶ್ರೇಯಸ್‌ ಅಯ್ಯರ್‌ ಇನ್ನಿಂಗ್ಸ್‌ ವಿಸ್ತರಿಸುವಲ್ಲಿ ಯಶಸ್ವಿಯಾಗಲಿಲ್ಲ. ಅವರ ಆಟ 26 ರನ್ನಿಗೆ ಮುಗಿಯಿತು. ಸರಣಿಯಲ್ಲಿ ಮೊದಲ ಸಲ ಆಡಲಿಳಿದ ಸೂರ್ಯಕುಮಾರ್‌ ಯಾದವ್‌ ಉತ್ತಮ ಲಯದಲ್ಲಿದ್ದರು. ಆದರೆ 40ನೇ ಓವರ್‌ನಲ್ಲಿ ಪ್ರಿಟೋರಿಯಸ್‌ ಈ ವಿಕೆಟ್‌ ಕಿತ್ತರು. ಸೂರ್ಯಕುಮಾರ್‌ ಗಳಿಕೆ 39 ರನ್‌ (32 ಎಸೆತ, 4 ಬೌಂಡರಿ, 1 ಸಿಕ್ಸರ್‌).

ಚಹರ್‌ ದಿಟ್ಟ ಬ್ಯಾಟಿಂಗ್‌
ಆಗಲೇ ಭಾರತದ ಆಟ ಮುಗಿದಿತ್ತು. ಆದರೆ ದೀಪಕ್‌ ಚಹರ್‌ ಹರಿಣಗಳ ದಾಳಿಯನ್ನು ಪುಡಿಗಟ್ಟಿ ಪಂದ್ಯಕ್ಕೆ ಕುತೂಹಲವನ್ನು ಹೆಚ್ಚಿಸುವಂತೆ ಮಾಡಿ ದರು. ಭಾರತವನ್ನು ಗೆಲುವಿನ ಬಾಗಿಲ ತನಕ ತಂದು ನಿಲ್ಲಿಸಿದರು. ಚಹರ್‌ 34 ಎಸೆತಗಳಿಂದ 54 ರನ್‌ ಬಾರಿಸಿದರೆ (5 ಬೌಂಡರಿ, 2 ಸಿಕ್ಸರ್‌), ಬುಮ್ರಾ ಜತೆಗೂಡಿ 8ನೇ ವಿಕೆಟಿಗೆ 31 ಎಸೆತಗಳಿಂದ 55 ರನ್‌ ಒಟ್ಟುಗೂಡಿಸಿದರು. ಚಹರ್‌ ನಿರ್ಗಮನದೊಂದಿಗೆ ಪಂದ್ಯ ಮತ್ತೆ ಹರಿಣಗಳ ಪಾಲಾಯಿತು.

ಡಿ ಕಾಕ್‌-ಡುಸೆನ್‌ ಅಬ್ಬರ
ಕ್ವಿಂಟನ್‌ ಡಿ ಕಾಕ್‌ ಬಾರಿಸಿದ ಆಕರ್ಷಕ ಶತಕ, ಡುಸೆನ್‌ ಅವರ ಅರ್ಧ ಶತಕ, ಇವರಿಬ್ಬರು 4ನೇ ವಿಕೆಟಿಗೆ ಪೇರಿಸಿದ 144 ರನ್‌ ಸಾಹಸದಿಂದ ದಕ್ಷಿಣ ಆಫ್ರಿಕಾ ಸರದಿ ಬೆಳೆಯಿತು. ಉಳಿದಂತೆ ಮೊದಲ ಹಾಗೂ ಕೊನೆಯ ಹಂತದಲ್ಲಿ ಭಾರತದ ಬೌಲರ್‌ಗಳೇ ಹಿಡಿತ ಸಾಧಿಸಿದರು.

ಮೊದಲು ಬೌಲಿಂಗ್‌ ಆಯ್ದುಕೊಳ್ಳುವ ರಾಹುಲ್‌ ನಿರ್ಧಾರಕ್ಕೆ ದೀಪಕ್‌ ಚಹರ್‌ ಅಮೋಘ ಪ್ರತಿಫ‌ಲ ತಂದಿತ್ತರು. ಮಲಾನ್‌ (1) ಮಾರ್ಕ್‌ರಮ್‌ (15) ವಿಕೆಟ್‌ಗಳನ್ನು ಅಗ್ಗಕ್ಕೆ ಉರುಳಿಸಿದರು. ಈ ನಡುವೆ ಕಪ್ತಾನ ಬವುಮ (8) ರನೌಟಾದರು. 3 ವಿಕೆಟ್‌ 70 ರನ್ನಿಗೆ ಬಿತ್ತು.

ಇಲ್ಲಿಂದ ಮುಂದೆ ಡಿ ಕಾಕ್‌-ಡುಸೆನ್‌ ಜೋಡಿಯ ಹೊಡಿಬಡಿ ಆಟ ಮೊದಲ್ಗೊಂಡಿತು. ತಂಡದ ಕುಸಿತವನ್ನು ತಡೆದು ನಿಂತರು.ಪ್ರವಾಸಿಗರ ಎಲ್ಲ ಬಗೆಯ ದಾಳಿಗೂ ಇವರಲ್ಲಿ ಉತ್ತರವಿತ್ತು. ಡಿ ಕಾಕ್‌ 130 ಎಸೆತಗಳಿಂದ 124 ರನ್‌ ರಾಶಿ ಹಾಕಿದರು. ಇದು ಭಾರತದ ವಿರುದ್ಧ ಡಿ ಕಾಕ್‌ ಬಾರಿಸಿದ 6ನೇ ಶತಕ. 12 ಬೌಂಡರಿ, 2 ಸಿಕ್ಸರ್‌ ಬಾರಿಸಿ ಅಬ್ಬರಿಸಿದರು. ಇನ್ನೊಂದೆಡೆ ಡುಸೆನ್‌ ಕೂಡ ತಮ್ಮ ಬ್ಯಾಟಿಂಗ್‌ ಫಾರ್ಮ್ ಮುಂದುವರಿಸಿ ಭಾರತವನ್ನು ಕಾಡಿದರು. ಇವರ ಗಳಿಕೆ 52 ರನ್‌. 59 ಎಸೆತಗಳ ಈ ಸೊಗಸಾದ ಆಟದಲ್ಲಿ 4 ಫೋರ್‌, ಒಂದು ಸಿಕ್ಸರ್‌ ಸೇರಿತ್ತು.

ಆರು ವರ್ಷಗಳ ಬಳಿಕ ಜಯಂತ್‌ ಯಾದವ್‌!
ಅಂತಿಮ ಏಕದಿನ ಪಂದ್ಯಕ್ಕಾಗಿ ಭಾರತ ಬರೋಬ್ಬರಿ 4 ಬದಲಾವಣೆ ಮಾಡಿಕೊಂಡಿತು. ಸ್ಪಿನ್ನರ್‌ ಜಯಂತ್‌ ಯಾದವ್‌ ಸೇರ್ಪಡೆಯೂ ಇದರಲ್ಲೊಂದು. ವಿಶೇಷವೆಂದರೆ, ಜಯಂತ್‌ ಯಾದವ್‌ 6 ವರ್ಷಗಳ ಬಳಿಕ ಆಡುತ್ತಿರುವ ಏಕದಿನ ಪಂದ್ಯ ಇದಾಗಿತ್ತು!

2016ರ ಪ್ರವಾಸಿ ನ್ಯೂಜಿಲ್ಯಾಂಡ್‌ ವಿರುದ್ಧ ವಿಶಾಖಪಟ್ಟಣದಲ್ಲಿ ಆಡಲಾದ 5ನೇ ಏಕದಿನ ಪಂದ್ಯದಲ್ಲಿ ಜಯಂತ್‌ ಯಾದವ್‌ ಪದಾರ್ಪಣೆ ಮಾಡಿದ್ದರು. ಅನಂತರ ಅವರು ಏಕದಿನ ಪಂದ್ಯವಾಡಿದ್ದು ಇದೇ ಮೊದಲು. ಈ ನಡುವೆ 6 ವರ್ಷ 151 ದಿನಗಳು ಉರುಳಿ ಹೋಗಿದ್ದವು!

ವಿಶಾಖಪಟ್ಟಣ ಪಂದ್ಯದ ತ್ರಿವಳಿ ಸ್ಪಿನ್ನರ್‌ಗಳಲ್ಲಿ ಜಯಂತ್‌ ಯಾದವ್‌ ಕೂಡ ಒಬ್ಬರಾಗಿದ್ದರು. ಉಳಿದಿಬ್ಬರೆಂದರೆ ಅಮಿತ್‌ ಮಿಶ್ರಾ ಮತ್ತು ಅಕ್ಷರ್‌ ಪಟೇಲ್‌. 4 ಓವರ್‌ ಎಸೆದಿದ್ದ ಜಯಂತ್‌ ಯಾದವ್‌ 8 ರನ್‌ ನೀಡಿ ಕೋರಿ ಆ್ಯಂಡರ್ಸನ್‌ ವಿಕೆಟ್‌ ಉಡಾಯಿಸಿದ್ದರು.

ಕೊನೆಯ ಪಂದ್ಯದಲ್ಲಿ ಅವಕಾಶ ಪಡೆದ ಉಳಿದ ಮೂವರೆಂದರೆ ಸೂರ್ಯಕುಮಾರ್‌ ಯಾದವ್‌, ಪ್ರಸಿದ್ಧ್ ಕೃಷ್ಣ ಮತ್ತು ದೀಪಕ್‌ ಚಹರ್‌. ಹೊರಗುಳಿದವರು ಆರ್‌. ಅಶ್ವಿ‌ನ್‌,  ಠಾಕೂರ್‌, ವೆಂಕಟೇಶ್‌ ಅಯ್ಯರ್‌ ಮತ್ತು ಭುವನೇಶ್ವರ್‌. ದಕ್ಷಿಣ ಆಫ್ರಿಕಾ ತಬ್ರೇಜ್‌  ಬದಲು ಡ್ವೇನ್‌ ಪ್ರಿಟೋರಿಯಸ್‌ ಅವರನ್ನು ಆಡಿಸಿತು.

ಸ್ಕೋರ್‌ ಪಟ್ಟಿ
ದಕ್ಷಿಣ ಆಫ್ರಿಕಾ
ಕ್ವಿಂಟನ್‌ ಡಿ ಕಾಕ್‌ ಸಿ ಧವನ್‌ ಬಿ ಬುಮ್ರಾ 124
ಮಲಾನ್‌ ಸಿ ಪಂತ್‌ ಬಿ ಚಹರ್‌ 1
ಟೆಂಬ ಬವುಮ ರನೌಟ್‌ 8
ಮಾರ್ಕ್‌ರಮ್‌ ಸಿ ಗಾಯಕ್ವಾಡ್‌ ಬಿ ಚಹರ್‌ 15
ಡುಸೆನ್‌ ಸಿ ಅಯ್ಯರ್‌ ಬಿ ಚಹಲ್‌ 52
ಡೇವಿಡ್‌ ಮಿಲ್ಲರ್‌ ಸಿ ಕೊಹ್ಲಿ ಬಿ 39
ಫೆಲುಕ್ವಾಯೊ ರನೌಟ್‌ 4
ಪ್ರಿಟೋರಿಯಸ್‌ ಸಿ ಸೂರ್ಯಕುಮಾರ್‌ ಬಿ ಕೃಷ್ಣ 20
ಮಹಾರಾಜ್‌ ಸಿ ಕೊಹ್ಲಿ ಬಿ ಬುಮ್ರಾ 6
ಸಿಸಾಂಡ ಸಿ ರಾಹುಲ್‌ ಬಿ ಕೃಷ್ಣ 0
ಎನ್‌ಗಿಡಿ ಔಟಾಗದೆ 0
ಇತರ 18
ಒಟ್ಟು (49.5 ಓವರ್‌ಗಳಲ್ಲಿ ಆಲೌಟ್‌) 287
ವಿಕೆಟ್‌ ಪತನ:1-8, 2-34, 3-70, 4-214, 5-218, 6-228, 7-272, 8-282, 9-287.
ಬೌಲಿಂಗ್‌; ದೀಪಕ್‌ ಚಹರ್‌ 8-0-53-2
ಜಸ್‌ಪ್ರೀತ್‌ ಬುಮ್ರಾ 10-0-52-2
ಪ್ರಸಿದ್ಧ್ ಕೃಷ್ಣ 9.5-0-59-3
ಜಯಂತ್‌ ಯಾದವ್‌ 10-0-53-0
ಯಜುವೇಂದ್ರ ಚಹಲ್‌ 9-0-47-1
ಶ್ರೇಯಸ್‌ ಅಯ್ಯರ್‌ 3-0-21-0

ಭಾರತ
ಕೆ.ಎಲ್‌. ರಾಹುಲ್‌ ಸಿ ಮಲಾನ್‌ ಬಿ ಎನ್‌ಗಿಡಿ 9
ಶಿಖರ್‌ ಧವನ್‌ ಸಿ ಡಿ ಕಾಕ್‌ ಬಿ ಫೆಲುಕ್ವಾಯೊ 61
ವಿರಾಟ್‌ ಕೊಹ್ಲಿ ಸಿ ಬವುಮ ಬಿ ಮಹಾರಾಜ್‌ 65
ರಿಷಭ್‌ ಪಂತ್‌ ಸಿ ಮಗಾಲ ಬಿ ಫೆಲುಕ್ವಾಯೊ 0
ಶ್ರೇಯಸ್‌ ಅಯ್ಯರ್‌ ಸಿ ಫೆಲುಕ್ವಾಯೊ ಬಿ ಮಗಾಲ 26
ಸೂರ್ಯಕುಮಾರ್‌ ಸಿ ಬವುಮ ಬಿ ಪ್ರಿಟೋರಿಯಸ್‌ 39
ದೀಪಕ್‌ ಚಹರ್‌ ಸಿ ಪ್ರಿಟೋರಿಯಸ್‌ ಬಿ ಎನ್‌ಗಿಡಿ 54
ಜಯಂತ್‌ ಯಾದವ್‌ ಸಿ ಬವುಮ ಬಿ ಎನ್‌ಗಿಡಿ 2
ಜಸ್‌ಪ್ರೀತ್‌ ಬುಮ್ರಾ ಸಿ ಬವುಮ ಬಿ ಫೆಲುಕ್ವಾಯೊ 12
ಯಜುವೇಂದ್ರ ಚಹಲ್‌ ಸಿ ಮಿಲ್ಲರ್‌ ಬಿ ಪ್ರಿಟೋರಿಯಸ್‌ 2
ಪ್ರಸಿದ್ಧ್ ಕೃಷ್ಣ ಔಟಾಗದೆ 2
ಇತರ 11
ಒಟ್ಟು (49.2 ಓವರ್‌ಗಳಲ್ಲಿ ಆಲೌಟ್‌) 283
ವಿಕೆಟ್‌ ಪತನ:1-18, 2-116, 3-118, 4-156, 5-195, 6-210, 7-223, 8-278, 9-281.
ಬೌಲಿಂಗ್‌; ಲುಂಗಿ ಎನ್‌ಗಿಡಿ 10-0-58-3
ಡ್ವೇನ್‌ ಪ್ರಿಟೋರಿಯಸ್‌ 9.2-0-54-2
ಸಿಸಾಂಡ ಮಗಾಲ 10-0-69-1
ಕೇಶವ್‌ ಮಹಾರಾಜ್‌ 10-0-39-1
ಆ್ಯಂಡಿಲ್‌ ಫೆಲುಕ್ವಾಯೊ 7-0-40-3
ಐಡೆನ್‌ ಮಾರ್ಕ್‌ರಮ್‌ 3-0-21-0

ಟಾಪ್ ನ್ಯೂಸ್

1-qrrewr

Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

vidan-soudha-kannada

Golden Jubilee: ಕನ್ನಡವೇ ಅಧಿಕಾರಿಗಳ‌ ಹೃದಯದ ಭಾಷೆ ಆಗಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Afro-Asia Cup after 2 decades?

Afro-Asia Cup: 2 ದಶಕಗಳ ಬಳಿಕ ಆಫ್ರೋ -ಏಷ್ಯಾ ಕಪ್‌?

Bid for 2036 Olympics: Official application from India to IOC

Olympics; 2036ರ ಒಲಿಂಪಿಕ್ಸ್‌ಗೆ ಬಿಡ್‌: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ

IPL Mega Auction: 24th and 25th IPL auction in Jeddah

IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್‌ ಹರಾಜು

Ranji trophy: ಕರ್ನಾಟಕ-ಬಂಗಾಲ ಸೆಣಸಾಟ

Ranji trophy: ಕರ್ನಾಟಕ-ಬಂಗಾಲ ಸೆಣಸಾಟ

PKL 11: Panthers won against Yoddhas

PKL 11: ಯೋಧಾಸ್‌ ವಿರುದ್ಧ ಗೆದ್ದ ಪ್ಯಾಂಥರ್

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-qrrewr

Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.