ಬೇವಿನ ಮರಗಳ ಮಾರಣ ಹೋಮ
Team Udayavani, Jan 24, 2022, 1:00 PM IST
ತುಮಕೂರು: ನಗರದ ಮುಖ್ಯರಸ್ತೆಯಲ್ಲಿ ಬೆಳೆದು ಜನರಿಗೆ ನೆರಳು ನೀಡುತ್ತಿದ್ದ ಬೇವಿನ ಮರಗಳನ್ನು ಜಾಹೀರಾತು ಫಲಕ ಅಳವಡಿಸುವ ಗುತ್ತಿಗೆದಾರನೊಬ್ಬ ಕಡಿದು ಹಾಕಿರುವುದು ನಗರದ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಇಲ್ಲಿಯವರೆಗೆ ಸಾವಿರಾರು ಮರಗಳ ಮಾರಣಹೋಮ ನಡೆದಿದೆ. ನಗರದ ರಸ್ತೆಗಳ ಅಭಿವೃದ್ಧಿಯಾದ ಮೇಲೆ ಮುಖ್ಯರಸ್ತೆಯಲ್ಲಿ ಮರಗಳು ಇರಲಿ ಎಂದು ಪರಿಸರಪ್ರೇಮಿ ಸಾಹಿತಿ ಪೊ›. ಸಿದ್ದಪ್ಪ ಮತ್ತು ಅವರ ಸ್ನೇಹ ಬಳಗ, ಮಹಾನಗರ ಪಾಲಿಕೆ, ಅರಣ್ಯ ಇಲಾಖೆಯಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರ ಪಡೆದು ರಸ್ತೆ ವಿಭಜಕದಲ್ಲಿ ಬೇವಿನ ಮರಗಳನ್ನು ಬೆಳೆಸಲಾಗಿತ್ತು. ನಗರದ ಬಿ.ಎಚ್. ರಸ್ತೆಯಲ್ಲಿ ಕಳೆದ 11 ವರ್ಷ ದಿಂದ ಬೆಳೆಸಿದ್ದ ಬೇವಿನಮರಗಳನ್ನು ಗುತ್ತಿಗೆದಾರರು ಯಾವುದೇ ಅನುಮತಿ ಪಡೆಯದೆ ರಾತ್ರೋರಾತ್ರಿ ಕಡಿದು ಹಾಕಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆಯಲ್ಲಿ ಬೇವಿನ ಮರಗಳು ಹೆಚ್ಚಾಗಿದ್ದು, ಚೆನ್ನಾಗಿ ಬೆಳೆದು ನಿಂತಿದ್ದವು. ಆದರೆ, ಪಾಲಿಕೆಯಿಂದ ಜಾಹೀರಾತು ನಾಮಫಲಕಗಳನ್ನುಅಳವಡಿಸುವ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಪಾಲಿಕೆಯಿಂದಾಗಲಿ, ಅರಣ್ಯ ಇಲಾಖೆಯಿಂದಾಗಲೀ ಯಾವುದೇ ಅನುಮತಿ ಪಡೆಯದೇ ಏಕಾಏಕಿ ಮರಗಳ ಮಾರಣ ಹೋಮ ನಡೆಸಿದ್ದಾರೆ.
ಕೂಡಲೇ ಬಂಧಿಸಿ: ಮರಗಳ ಮಾರಣಹೋಮ ನಡೆಸಿರುವುದನ್ನು ಬೆಳಗ್ಗೆ ನೋಡಿದ ಪರಿಸರ ಪ್ರೇಮಿಗಳು ತಕ್ಷಣ ರಸ್ತೆಗಿಳಿದು ಮರಗಳನ್ನು ಕಡಿದು ಹಾಕಿರುವ ಗುತ್ತಿಗೆದಾರ ಮತ್ತು ಸಿಬ್ಬಂದಿಯನ್ನುಕೂಡಲೇ ಬಂಧಿಸಲೇಬೇಕು ಎಂದು ಆಗ್ರಹಿಸಿಪ್ರತಿಭಟನೆ ನಡೆಸಿದರು. ಮರ ಕಡಿದು ಹಾಕಿರುವಗುತ್ತಿಗೆದಾರ ಮತ್ತು ಸಿಬ್ಬಂದಿಯನ್ನು ಬಂಧಿಸಬೇಕು. ಬಂಧಿಸದಿದ್ದರೆ ಸೋಮವಾರ ಧರಣಿ ಸತ್ಯಾಗ್ರಹ ಮಾಡುವುದಾಗಿ ಕನ್ನಡಪರ ಸಂಘಟನೆಗಳ ಮುಖಂಡ ಧನಿಯಾಕುಮಾರ್ ಎಚ್ಚರಿಕೆ ನೀಡಿದರು.
ನಗರಾದ್ಯಂತ ಸದರಿ ಗುತ್ತಿಗೆದಾರ ಹಾಕಿರುವ ಜಾಹೀರಾತು ನಾಮಫಲಕದ ಬೋರ್ಡ್‌ಗಳನ್ನು ತಕ್ಷಣದಿಂದಲೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಅಕ್ಷಮ್ಯ ಅಪರಾಧ: ಘಟನಾ ಸ್ಥಳಕ್ಕೆ ಧಾವಿಸಿದ ಮಹಾ ನಗರ ಪಾಲಿಕೆ ಆಯುಕ್ತ ರೇಣುಕಾ ಮಾತನಾಡಿ, ನಗರದಲ್ಲಿ 4 ಲಕ್ಷಕ್ಕೂ ಅಧಿಕ ಜನವಾಸಿಸುತ್ತಿದ್ದಾರೆ. ಅವರಿಗೆಲ್ಲ ಉತ್ತಮ ಗಾಳಿ, ಉತ್ತಮಪರಿಸರ ಒದಗಿಸುವ ಆದ್ಯ ಕರ್ತವ್ಯ ನಮ್ಮದಾಗಿದೆ. ಮರಗಳನ್ನು ಉಳಿಸಿ-ಬೆಳೆಸುವ ಜವಾಬ್ದಾರಿಪ್ರತಿಯೊಬ್ಬರ ಮೇಲಿದೆ. ಸ್ವತ್ಛ ಸರ್ವೇಕ್ಷಣೆಯಲ್ಲಿ ತುಮಕೂರು ಪಾಲಿಕೆಗೆ ಉತ್ತಮ ರ್‍ಯಾಂಕಿಂಗ್‌ಬರುತ್ತಿದೆ. ಹೀಗಿರುವಾಗ ಏಕಾಏಕಿ ಮರಗಳನ್ನು ಕಡಿದು ಹಾಕಿರುವುದು ಅಕ್ಷಮ್ಯ ಅಪರಾಧ ಇದನ್ನುಸಹಿಸಲು ಸಾಧ್ಯವಿಲ್ಲ ಎಂದರು.
ಅನುಮತಿ ಕೊಟ್ಟಿಲ್ಲ: 2020ರಲ್ಲಿ ಪಾಲಿಕೆ ವತಿಯಿಂದ ಜಾಹೀರಾತು ನಾಮಫಲಗಳನ್ನು ಅಳವಡಿಸಲು ಟೆಂಡರ್ ಗುತ್ತಿಗೆ ನೀಡಲಾಗಿದೆ. ಬಿ.ಎಚ್. ರಸ್ತೆ. ಎಂ.ಜಿ. ರಸ್ತೆ, ಅಶೋಕ ರಸ್ತೆ ಸೇರಿದಂತೆಪ್ರಮುಖ ರಸ್ತೆಗಳಲ್ಲಿ ಜಾಹೀರಾತು ನಾಮಫಲಕಅಳಪಡಿಸುವ ಗುತ್ತಿಗೆಯನ್ನು 15 ಲಕ್ಷ ರೂ.ಗಳಿಗೆ ನೀಡಲಾಗಿದೆ. ಆದರೆ, ಗುತ್ತಿಗೆದಾರರಿಗೆ ಮರ ಕಡಿಯಲು ಯಾರೂ ಅನುಮತಿ ಕೊಟ್ಟಿಲ್ಲಎಂದರು.
ಆಟೋ ನವೀನ್, ಜಯಕರ್ನಾಟಕ ಸಂಘಟನೆಯ ಚಂದನ್ ಪಟೇಲ್, ಕುಮಾರ್ ನಗರದ ವಿವಿಧ ಸಂಘಟನೆಗಳ ಪದಾಧಿಕಾರಿ ಹಾಗೂ ಪರಿಸರ ಪ್ರೇಮಿಗಳು ಇದ್ದರು.
ಕಠಿಣ ಕ್ರಮಗೊಳ್ಳಲು ಶಾಸಕ ಜ್ಯೋತಿಗಣೇಶ್‌ಸೂಚನೆ :
ತುಮಕೂರು: ನಗರದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ರಸ್ತೆಯಲ್ಲಿರುವ ಶ್ರೀ ಸಿದ್ಧಗಂಗಾ ಆಸ್ಪತ್ರೆಯ ಮುಂಭಾಗ ರಸ್ತೆ ವಿಭಜಕದಲ್ಲಿದ್ದಂ ತಹ ಮರವನ್ನು ಕಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾ ಗಿದೆ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ತಿಳಿಸಿದರು.
ಈಗಾಗಲೇ ಅರಣ್ಯ ಇಲಾಖೆ ಯವರು ಈ ಸಂಬಂಧವಾಗಿ ಎಫ್ಐಆರ್ ದಾಖಲಿಸಿದ್ದಾರೆ. ಮಹಾನಗರ ಪಾಲಿಕೆಯಿಂದ ತುಮಕೂರು ನಗರದಲ್ಲಿ ಜಾಹೀರಾತು ಫಲಕ ಅಳವಡಿಸುಲುಅನುಮತಿ ಪಡೆದಿರುವ ಗುತ್ತಿಗೆದಾರರು ಈ ಕೆಲಸವನ್ನು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಗುತ್ತಿಗೆದಾರರನ್ನು ಅನರ್ಹಗೊಳಿಸಲು ಮಹಾನಗರ ಪಾಲಿಕೆ ಆಯುಕ್ತರಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗು ುದು ಎಂದು ತಿಳಿಸಿದ್ದಾರೆ.
ಇಂದಿನ ದಿನದಲ್ಲಿ ಪ್ರಕೃತಿಯನ್ನುಪೋಷಿಸುವ ಜವಾಬ್ದಾರಿ ಪ್ರತಿಯೊಬ್ಬರಮೇಲಿದೆ. ಆಮ್ಲಜನಕವಿಲ್ಲದೆ ಸಾಯುತ್ತಿರುವ ದಾರುಣ ಪರಿಸ್ಥಿತಿ ಒಂದು ಕಡೆಯಾಗಿದೆ, ಇಂತಹ ಪರಿಸ್ಥಿತಿಯಲ್ಲಿ ಹೀಗೆ ವಿನಾಕಾರಣಮರ ಕಡಿದು ಮಾರಣಹೋಮ ನಡೆಸುತ್ತಿರುವುದು ಎಗ್ಗಿಲ್ಲದಂತೆ ಸಾಗಿದೆ. ಮರಕಡಿಯುವ ಹೇಯ ಕೃತ್ಯವನ್ನು ಎಸಗಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು. –ಸೊಗಡು ಎಸ್. ಶಿವಣ್ಣ, ಮಾಜಿ ಸಚಿವ
ನಗರದಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲು ಮಾತ್ರ ಗುತ್ತಿಗೆ ನೀಡಲಾಗಿದೆ ಅಷ್ಟೇ. ಅವರು ನಮ್ಮ ಪಾಲಿಕೆಯ ಅನುಮತಿ ಕೇಳಿಲ್ಲ, ಅರಣ್ಯ ಇಲಾಖೆ ಅನುಮತಿಯನ್ನು ನೀಡಿಲ್ಲ. ಯಾರ ಅನುಮತಿ ಪಡೆಯದೇ ಮರ ಕಡಿದು ಹಾಕಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ. ಜಾಹೀರಾತು ಫಲಕ ಅಳವಡಿಸುವ ಗುತ್ತಿಗೆ ರದ್ದು ಮಾಡಲು ಕ್ರಮ ಕೈಗೊಳ್ಳುತ್ತೇನೆ. – ರೇಣುಕಾ, ಪಾಲಿಕೆ ಆಯುಕ್ತೆ
ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಂದನೂರಾರು ಮರಗಳ ಮಾರಣ ಹೋಮ ನಡೆದಿದೆ. ರಸ್ತೆ ವಿಭಜಕದಲ್ಲಿ ಬೆಳೆದಿರುವಮರಗಳನ್ನು ಗುತ್ತಿಗೆದಾರ ಕಡಿದುಹಾಕಿದ್ದಾರೆ. ಮರ ಕಡಿದಿರುವ ಗುತ್ತಿಗೆದಾರನ ಮೇಲೆ ಕ್ರಮ ಕೈಗೊಂಡು ಅವರ ಜಾಹೀರಾತು ಗುತ್ತಿಗೆ ರದ್ದು ಪಡಿಸಲಿ. –ಧನಿಯಾಕುಮಾರ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು
Kunigal: ಕೆಂಪನಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.