ನೀರಾವರಿ ವಿಷಯದಲ್ಲಿ ರಾಜಕೀಯ ಸಲ್ಲ: ರಾಯರಡ್ಡಿ ಆಕ್ಷೇಪಕ್ಕೆ ಸಂಗಣ್ಣ ಕರಡಿ ತಿರುಗೇಟು
Team Udayavani, Jan 24, 2022, 7:58 PM IST
ಕೊಪ್ಪಳ: ಸಿಂಗಟಾಲೂರು ಏತ ನೀರಾವರಿ ವಿಚಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹನಿ ನೀರಾವರಿ ಬದಲಿಗೆ ಮಧ್ಯ ಪ್ರದೇಶ ಮಾದರಿ ನೀರಾವರಿ ಮಾಡಲು ದಿಟ್ಟ ಕ್ರಮ ಕೈಗೊಂಡಿದ್ದಾರೆ. ಆದರೆ ಇದಕ್ಕೆ ಮಾಜಿ ಸಚಿವ ಬಸವರಾಜ ರಾಯರಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದು ಸರಿಯಲ್ಲ. ತಮ್ಮದೇ ಕಾಂಗ್ರೆಸ್ ಸರ್ಕಾರ ಇದ್ದಾಗ ಏಕೆ ನೀರಾವರಿ ಪೂರ್ಣಗೊಳಿಸಲಿಲ್ಲ. ಸುಮ್ಮನೇ ನೀರಾವರಿ ವಿಷಯದಲ್ಲಿ ರಾಜಕೀಯ ಮಾಡುವುದು ಸಲ್ಲ ಎಂದು ಸಂಸದ ಸಂಗಣ್ಣ ಕರಡಿ ಅವರು ರಾಯರಡ್ಡಿ ಆಕ್ಷೇಪಕ್ಕೆ ತಿರುಗೇಟು ನೀಡಿದ್ದಾರೆ.
ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಬಲ ಭಾಗದಲ್ಲಿ ಸಂಪೂರ್ಣ ನೀರಾವರಿಯಾಗಿದೆ. ಅಲ್ಲಿನ ರೈತರು ಸಮೃದ್ಧಿ ಬೆಳೆ ಬೆಳೆಯುತ್ತಿದ್ದಾರೆ. ಗದಗ ಭಾಗದಲ್ಲಿಯೂ ಸಹ ಎಚ್.ಕೆ. ಪಾಟೀಲ್ ಅವರು ಕೆರೆಗಳಿಗೆ ನೀರು ತುಂಬಿಸಿಕೊಳ್ಳುತ್ತಿದ್ದಾರೆ. ಆದರೆ ಎಡ ಭಾಗದಲ್ಲಿನ ಮುಂಡರಗಿ, ಕೊಪ್ಪಳ ಜಿಲ್ಲೆಯ ಜನರು ನೀರಾವರಿ ಸೌಲಭ್ಯವನ್ನೇ ಕಂಡಿಲ್ಲ. ಈ ಭಾಗ ಸಂಪೂರ್ಣ ನೀರಾವರಿ ವಂಚಿತವಾಗಿದೆ. ಈ ಮೊದಲು ಸಿಂಗಟಾಲೂರು ಏತ ನೀರಾವರಿಯಡಿ ಕೊಪ್ಪಳ ಜಿಲ್ಲೆಯು ಸೇರಿರಲಿಲ್ಲ. ನಾವು ನಿರಂತರ ಹೋರಾಟ ಮಾಡಿದ ಫಲವಾಗಿ ಕೊಪ್ಪಳ ಜಿಲ್ಲೆಗೂ ಆ ಯೋಜನೆ ವಿಸ್ತರಣೆ ಮಾಡಿದರು. ಆದರೆ ಬಲದಂಡೆ ಭಾಗ ಕಾಲುವೆ ನೀರಾವರಿಯಾಗಿ ಯಶಸ್ವಿಯಾಗಿ ನಡೆಯುತ್ತಿದೆ. ಎಡ ಭಾಗದ ರೈತರು ಹತ್ತಾರು ವರ್ಷಗಳಿಂದ ನೀರಾವರಿ ವಂಚಿತರಾಗಿದ್ದಾರೆ. ಈ ವಿಚಾರ ರಾಯರಡ್ಡಿ ಅವರಿಗೆ ಗೊತ್ತಿಲ್ಲವೇ ಎಂದಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರವೇ ಅಧಿ ಕಾರದಲ್ಲಿತ್ತಲ್ಲ. ಆಗ ಏಕೆ ರಾಯರಡ್ಡಿ ಅವರು ಸಿಂಗಟಾಲೂರು ಏತ ನೀರಾವರಿ ಬಗ್ಗೆ ಮಾತನಾಡಲಿಲ್ಲ. ಸರ್ಕಾರದಲ್ಲಿ ಅವರೂ ಮಂತ್ರಿಯಾಗಿದ್ದವರು. ಆಗ ನೀರಾವರಿ ವಿಷಯವು ಇವರ ಗಮನಕ್ಕೆ ಬರಲಿಲ್ಲವೇಕೆ? ಬಲ ಭಾಗಕ್ಕೆ ಕಾಲುವೆ ನೀರು ಮಾಡಿ, ಎಡ ಭಾಗದಲ್ಲಿ ಹನಿ ನೀರಾವರಿ ಯೋಜನೆ ಜಾರಿಗೊಳಿಸಿದ್ದರು. ಆದರೆ ಹನಿ ನೀರಾವರಿ ಎಲ್ಲಿಯೂ ಯಶಸ್ವಿಯಾಗಿಲ್ಲ. ರಾಮತಾಳ ಸೇರಿದಂತೆ ಹಲವು ಹನಿ ನೀರಾವರಿ ಯೋಜನೆಯು ವಿಫಲವಾಗಿವೆ. ರೈತರ ಜಮೀನಿನಲ್ಲಿ ಹಾಕಿದ್ದ ಪೈಪ್ ಗಳೂ ಈಗ ಇಲ್ಲದಂತಾಗಿವೆ. ಕೆಲವೊಂದು ಕಡೆ ಪೈಪ್ ಗಳನ್ನೇ ಹಾಕಿಲ್ಲ. ಹಾಗಾಗಿ ಸಿಎಂ ಬೊಮ್ಮಾಯಿ ಅವರು ಸ್ವತಃ ನೀರಾವರಿ ಸಚಿವರಾಗಿದ್ದವರು. ನೀರಾವರಿ ಬಗ್ಗೆ ತುಂಬಾ ಅನುಭವ ಇದೆ. ಸಿಂಗಟಾಲೂರು ಏತ ನೀರಾವರಿ ಬಗ್ಗೆ ಅವರಿಗೆ ತುಂಬ ಜ್ಞಾನವಿದೆ. ನಮ್ಮ ಕಮಿಟ್‌ಮೆಂಟ್‌ಗೆ ಸಿಎಂ ಒಪ್ಪಿ ಹನಿ ನೀರಾವರಿ ಬದಲಿಗೆ ಎಂಪಿ ಮಾದರಿ ನೀರಾವರಿ ಯೋಜನೆಯನ್ನಾಗಿ ಮಾಡಿದ್ದಾರೆ. ಇದಕ್ಕೆ ರಾಯರಡ್ಡಿ ಎಂಪಿ ಮಾದರಿ ಯಶಸ್ವಿಯಾಗಲ್ಲ. ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ರಾಯರಡ್ಡಿ ಅವರು ನೀರಾವರಿ ಬಗ್ಗೆ ಜ್ಞಾನ ಇದ್ದವರು. ಸುಮ್ಮನೆ ರಾಜಕೀಯ ಕಾರಣಕ್ಕೆ ಮಾತನಾಡುವುದು ಸರಿಯಲ್ಲ. ರಾಜಕೀಯ ಮಾತನಾಡಲು ಬೇರೆ ವೇದಿಕೆಗಳಿವೆ. ನೀರಾವರಿ ವಿಚಾರದಲ್ಲಿ ರಾಜಕೀಯ ಮಾಡೋದು ಸರಿಯಲ್ಲ ಎಂದು ರಾಯರಡ್ಡಿ ಹೇಳಿಕೆಗೆ ಗರಂ ಆಗಿದ್ದಾರೆ.
ಮಧ್ಯ ಪ್ರದೇಶದಲ್ಲಿ ಚೇಂಬರ್ ಮೂಲಕ ನೀರು ಹರಿಸುವ ಯೋಜನೆ ಯಶಸ್ವಿಯಾಗಿದೆ. ಅಲ್ಲಿನ ನೀರಾವರಿ ವ್ಯವಸ್ಥೆಯ ಬಗ್ಗೆ ತಜ್ಞರು ತೆರಳಿ ಅಧ್ಯಯನ ಮಾಡಿ, ಅದನ್ನು ಇಲ್ಲಿ ಅನುಷ್ಠಾನ ಮಾಡಲಿದ್ದಾರೆ. ಮೊದಲು ಪೈಪ್‌ಗ್ಳ ಮೂಲಕ ರೈತರ ಜಮೀನಿಗೆ ನೀರು ಹರಿದು ಬರಲಿ. ನಂತರ ಹನಿ ನೀರಾವರಿ ಯೋಜನೆಯಡಿ ರೈತರಿಗೆ ಈಗಾಗಲೇ ಡ್ರಿಪ್ ಪೈಪ್‌ಗ್ಳನ್ನು ಸರ್ಕಾರವು ವಿವಿಧ ಯೋಜನೆಯಡಿಯಲ್ಲಿ ಕೊಡುತ್ತಿದೆ. ಅದರಲ್ಲಿ ರೈತರು ಈ ಸೌಲಭ್ಯ ಪಡೆದುಕೊಳ್ಳಲಿದ್ದಾರೆ. ಅಗತ್ಯವಿದ್ದರೆ ಸರ್ಕಾರವೂ ಮತ್ತೆ ನೆರವಾಗಲಿದೆ. ಸುಮ್ಮನೆ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ ಎಂದು ರಾಯರಡ್ಡಿ ಅವರ ಹೇಳಿಕೆಗೆ ಸಂಸದ ಸಂಗಣ್ಣ ಕರಡಿ ತಿರುಗೇಟು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
Puttur: ಚೆನ್ನಾಗಿ ಮಳೆ ಬಂದರೂ ಕುಸಿದ ಅಂತರ್ಜಲ ಮಟ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.