ಕಾಗೆಯ ಸೇಡು? : ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!
ಗ್ರಾಮದ ಏಳು ಜನರೇ ಕಾಗೆಯ ಟಾರ್ಗೆಟ್.!
Team Udayavani, Jan 25, 2022, 10:54 AM IST
ಭರಮಸಾಗರ: ಇಲ್ಲೊಂದು ಕಾಗೆ ಹಳ್ಳಿ ಜನರ ಪಾಲಿಗೆ ಕಂಟಕವಾಗಿ ಪರಿಣಮಿಸಿದ್ದು, ಮನೆಯಿಂದ ಹೊರ ಬಂದರೆ ಸಾಕು ಹಾರಿ ಬಂದು ತಲೆಗೆ ಕುಕ್ಕುತ್ತದೆ!
ಚಿತ್ರದುರ್ಗ ಜಿಲ್ಲೆ ಭರಮಸಾಗರ ಹೋಬಳಿ ಸಮೀಪದ ಓಬಳಾಪುರ ಗ್ರಾಮಸ್ಥರು ಕಾಗೆ ಕಾಟದಿಂದ ಬೇಸತ್ತು ಪಾವಗಡದ ಶನೀಶ್ವರನ ಸನ್ನಿಧಿ ಸೇರಿ ಇತರೆ ಪುಣ್ಯ ಸ್ಥಳಗಳ ದರ್ಶನ ಪಡೆದು ಬಂದರೂ ಕಾಗೆ ಕಾಟ ತಪ್ಪಿಲ್ಲ. ಕಳೆದೊಂದು ತಿಂಗಳಿಂದ ಕಾಗೆ ಜನರ ನೆಮ್ಮದಿಗೆ ಭಂಗ ತಂದಿದೆ. ಏಳು ಜನರನ್ನು ಗುರಿಯಾಗಿಸಿಕೊಂಡು ಕಾಟ ಕೊಡುತ್ತಿದೆ.
ಮನೆ ಹೊಸಿಲು ದಾಟಿ ಹೊರ ಬಂದರೆ ಸಾಕು ಅಟ್ಯಾಕ್ ಮಾಡುತ್ತದೆ. ಅದಕ್ಕೆ ಯಾವುದೇ ತೊಂದರೆ ಕೊಡದೇ ಇದ್ದರೂ ಬಂದು ತಲೆಗೆ ಕುಕ್ಕುತ್ತದೆ. ಈ ಮೊದಲು ಎ.ಕೆ. ಕಾಲೋನಿಯ ಪರಶುರಾಮಪ್ಪ ಎಂಬುವವರ ಮೇಲೆ ಇದೇ ಕಾಗೆ ತನ್ನ ಪ್ರತಾಪ ತೋರುತ್ತಿತ್ತು. ಹರಸಾಹಸ ಪಟ್ಟು ಕಾಗೆಯನ್ನು ಅಲ್ಲಿಂದ ಓಡಿಸಲಾಗಿತ್ತು.
ಇದೀಗ ಸರ್ಕಾರಿ ಶಾಲೆ ಪಕ್ಕದ ರಸ್ತೆಯ ಇಕ್ಕೆಲಗಳಲ್ಲಿನ ಮನೆಗಳ ಬಳಿ ಈ ಕಾಗೆ ಹಾರಾಡುತ್ತಿದೆ. ಇಲ್ಲಿ ನೆಲೆಸಿರುವ ಏಳು ಜನರನ್ನು ಗುರಿಯಾಗಿಸಿಕೊಂಡು ತನ್ನ ಕುಕ್ಕುವ ಚಾಳಿಯನ್ನು ಮುಂದುವರಿಸಿದೆ. ಇತರೆ ಯಾರ ಮೇಲೂ ಕಾಗೆ ಈ ರೀತಿ ಮಾಡುತ್ತಿಲ್ಲ. ಇದರ ನಡೆಯಿಂದ ಬೇಸತ್ತಿರುವ ಜನರು ಪಾವಗಡದ ಶನೀಶ್ವರನ ಸನ್ನಿಧಿಗೆ ಹೋಗಿ ಪೂಜೆ ಮಾಡಿಸಿಕೊಂಡು ಬಂದರೂ ಕುಕ್ಕುವಿಕೆ ನಿಂತಿಲ್ಲ.
ಸೇಡಿನ ಮರ್ಮವೇನು?: ಕಾಗೆ ಕಾಟದಿಂದ ಪಾರಾಗಲು ಶತಾಯಗತಾಯಪ್ರಯತ್ನ ನಡೆಸಿರುವ ಓಬಳಾಪುರ ಗ್ರಾಮಸ್ಥರು, ಅದರ ದಾಳಿ ತಪ್ಪಿದರೆ ಸಾಕು ಎನ್ನುತ್ತಿದ್ದಾರೆ.ಕಾಗೆಯನ್ನು ಕಂಡವರೆಲ್ಲ ಹೆದರಿಸಿ ಓಡಿಸುವ ಕೆಲಸಮಾಡುತ್ತಿದ್ದಾರೆ. ಆದರೆ ಕಾಗೆ ಮಾತ್ರ ತಾನಿರುವಪ್ರದೇಶವನ್ನು ಬಿಟ್ಟು ಕದಲುತ್ತಿಲ್ಲ. ಹಾಗಾಗಿ ಕಾಗೆಯ ಸೇಡಿನ ಮರ್ಮವೇ ತಿಳಿಯದಂತಾಗಿದೆ.
ಬೆಳಗ್ಗೆ ಫ್ರೆಶ್ ಮೂಡ್ ನಲ್ಲಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಮುಂದಾದರೆ ಕಾಗೆ ಕಾಟ ಕೊಡುತ್ತಿದೆ. ಕಾಗೆಗೆ ನಾವೇನು ಮಾಡದಿದ್ದರೂ ಕಾಡುತ್ತಿದೆ. –ಅವಿನಾಶ್, ಓಬಳಾಪುರ ಗ್ರಾಮಸ್ಥ
–ಎಚ್.ಬಿ. ನಿರಂಜನಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.