![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jan 25, 2022, 11:28 AM IST
ನವದೆಹಲಿ : ದಕ್ಷಿಣ ಆಫ್ರಿಕಾ ವಿರುದ್ಧದ ಆಘಾತಕಾರಿ ಟೆಸ್ಟ್ ಮತ್ತು ಏಕದಿನ ಸರಣಿಯ ಸೋಲಿನ ನಂತರ ಗಾಬರಿಗೊಳ್ಳಬೇಕಾದ ಯಾವುದೇ ಕಾರಣವಿಲ್ಲ, ಸೋಲು ತಾತ್ಕಾಲಿಕ ಹಂತ ಮತ್ತು ತಂಡವು ಶೀಘ್ರದಲ್ಲೇ ಹಳಿಗೆ ಮರಳಲಿದೆ ಎಂದು ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಲೆಜೆಂಡ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ವೇಳೆ ಪಿಟಿಐಗೆ ನೀಡಿದ ಹೇಳಿಕೆಯಲ್ಲಿ, ” ಒಂದು ಸರಣಿಯನ್ನು ಕಳೆದುಕೊಂಡರೆ, ಜನರು ಟೀಕಿಸಲು ಪ್ರಾರಂಭಿಸುತ್ತಾರೆ. ಎಲ್ಲಾ ಪಂದ್ಯಗಳನ್ನು ಗೆಲ್ಲಲು ಸಾಧ್ಯವಿಲ್ಲ, ಗೆಲುವು ಮತ್ತು ಸೋಲುಗಳು ಇದ್ದೇ ಇರುತ್ತವೆ” ಎಂದರು.
“ಹಲವು ದಿಗ್ಗಜ ಆಟಗಾರರು ವಿಶ್ವಕಪ್ ಗೆದ್ದಿಲ್ಲ.ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಕೂಡ ಗೆದ್ದಿಲ್ಲ. ಹಾಗಾದರೆ ನಾವು ಅವರನ್ನು ಕಳಪೆ ಆಟಗಾರರು ಎಂದು ಹೆಸರಿಸಬಹುದೇ? “ನೀವು ಸಾಮಾನ್ಯೀಕರಿಸಲು ಸಾಧ್ಯವಿಲ್ಲ. ನಮ್ಮಲ್ಲಿ ಎಷ್ಟು ವಿಶ್ವಕಪ್ ವಿಜೇತ ನಾಯಕರಿದ್ದಾರೆ. ಸಚಿನ್ ತೆಂಡೂಲ್ಕರ್ ಗೆಲ್ಲುವ ಮೊದಲು ಆರು ವಿಶ್ವಕಪ್‌ಗಳನ್ನು ಆಡಬೇಕಾಗಿತ್ತು”ಎಂದರು.
ದಕ್ಷಿಣ ಆಫ್ರಿಕಾ ಸರಣಿಯ ವೇಳೆ ಗಾಯಾಳು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಅನುಪಸ್ಥಿತಿಯನ್ನು ಭಾರತ ಅನುಭವಿಸಿದೆಯೇ ಎಂಬ ಪ್ರಶ್ನೆಗೆ, ”ನಾನು ಎರಡೂ ಕಡೆಯ ವಿಚಾರಗಳನ್ನು ತಿಳಿದುಕೊಳ್ಳದೆ ಪ್ರತಿಕ್ರಿಯಿಸಲಾರೆ. ನಮಗೆ ಕಡಿಮೆ ಮಾಹಿತಿ ಇದ್ದರೆ ಬಾಯಿ ಮುಚ್ಚಿಕೊಳ್ಳುವುದು ಉತ್ತಮ, ಸರಿಯಾದ ಮಾಹಿತಿ ಸಿಕ್ಕಾಗ ಮಾತನಾಡಬೇಕು.ಇದು ಈಗ ಫಿಟ್‌ನೆಸ್ ಆಟವಾಗಿದೆ. ನೀವು ಫಿಟ್ ಆಗಿದ್ದರೆ, ನೀವು ಆಡುತ್ತೀರಿ. ನೀವು ಫಿಟ್ ಆಗದಿದ್ದರೆ, ಬೇರೆಯವರು ಆಡುವಂತೆ ನೀವು ಆಡಲಾಗುವುದಿಲ್ಲ”ಎಂದರು.
“ದಿನದ ಕೊನೆಯಲ್ಲಿ, ಹೇಗೆ ಆಡುತ್ತೀರಿ ಎಂಬುದರ ಮೂಲಕ ನಿರ್ಣಯಿಸಲಾಗುತ್ತದೆ, ನೀವು ಆಟದ ರಾಯಭಾರಿಯಾಗಿದ್ದೀರಾ? ನೀವು ಸಮಗ್ರತೆಯಿಂದ ಆಟವನ್ನು ಆಡುತ್ತೀರಾ ಮತ್ತು ನೀವು ದೀರ್ಘಕಾಲದವರೆಗೆ ಆಡುತ್ತೀರಾ? ಎಲ್ಲದರ ಕೊನೆಯಲ್ಲಿ ನೀವು ಆಟಗಾರರನ್ನು ಹೇಗೆ ನಿರ್ಣಯಿಸುತ್ತೀರಿ ಎಂದು ಪ್ರಶ್ನಿಸಿದರು.
ಶಾಸ್ತ್ರಿ ಕಳೆದ ವರ್ಷ ಯುಎಇಯಲ್ಲಿ ನಡೆದ ಟಿ 20 ವಿಶ್ವಕಪ್ ನಂತರ ತಮ್ಮ ಅಧಿಕಾರಾವಧಿಯನ್ನು ಕೊನೆಗೊಳಿಸಿದ್ದರು.
ವಿರಾಟ್ ಕೊಹ್ಲಿ ಎಲ್ಲಾ ಸ್ವರೂಪಗಳಿಂದ ನಾಯಕರಾಗಿ ನಿರ್ಗಮಿಸಿದ ಬಳಿಕ, ಸ್ಟ್ಯಾಂಡ್-ಇನ್ ನಾಯಕ ಕೆ ಎಲ್ ರಾಹುಲ್ ನೇತೃತ್ವದಲ್ಲಿ ಭಾರತವು ದಕ್ಷಿಣ ಆಫ್ರಿಕಾದಲ್ಲಿ ಮರೆಯಲಾಗದ ಸೋಲಿನ ಪ್ರವಾಸವನ್ನು ಕೊನೆಗೊಳಿಸಿತ್ತು. ಏಕದಿನ ಸರಣಿಯನ್ನು 0-3 ಅಂತರದಲ್ಲಿ ಕಳೆದುಕೊಂಡಿತ್ತು. ವಾಂಡರರ್ಸ್ ಮತ್ತು ಕೇಪ್ ಟೌನ್‌ನಲ್ಲಿ ಸತತ ಸೋಲುಗಳನ್ನು ಅನುಭವಿಸಿ ಟೆಸ್ಟ್ ಸರಣಿಯನ್ನು 1-2 ಅಂತರದಲ್ಲಿ ಕಳೆದುಕೊಂಡಿತ್ತು. ಸರಣಿಯ ಕೊನೆಯಲ್ಲಿ, ಕೊಹ್ಲಿ ಸುದೀರ್ಘ ನಾಯಕತ್ವದಿಂದ ಕೆಳಗಿಳಿದಿದ್ದರು, ಇದು ಭಾರತೀಯ ಕ್ರಿಕೆಟ್‌ನಲ್ಲಿ ಒಂದು ಯುಗವನ್ನು ಕೊನೆಗೊಂಡಿತು ಎಂದು ವಿಶ್ಲೇಷಣೆ ಮಾಡಲಾಗಿತ್ತು.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.