ಸಂವಿಧಾನದ ಸವಿ ನೆನಪಿಗೆ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಬೇಕು: ನಾಹಿದಾ ಜಮ್ ಜಮ್
Team Udayavani, Jan 26, 2022, 6:13 PM IST
ಕೊರಟಗೆರೆ: ಭಾರತ ದೇಶದ ಏಕತೆ ಅಖಂಡತೆ ಜನತೆ ಬದುಕಿಗೆ ಸುಭದ್ರ ಸಂವಿಧಾನದ ಸವಿ ನೆನಪಿಗೆ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ ಎಂದು ತಹಸೀಲ್ದಾರ್ ನಾಹಿದಾ ಜಮ್ ಜಮ್ ತಿಳಿಸಿದರು.
ಅವರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಗಣರಾಜ್ಯೋತ್ಸವ ರಾಷ್ಟೀಯ ದಿನಾಚರಣೆ ಅಂಗವಾಗಿ ರಾಷ್ಟಧ್ವಜವನ್ನು ಹಾರಿಸಿ ಮಾತನಾಡಿ, ಭಾರತವು ಹಲವು ದಶಕಗಳ ಕಾಲ ಹೋರಾಟ ಮಾಡಿ ಸ್ವಾತಂತ್ರ ಪಡೆಯಿತು. ತದ ನಂತರ ದೇಶದ ಎಲ್ಲಾ ರಾಜ್ಯಗಳನ್ನು ಒಟ್ಟುಗೂಡಿಸಿ ಅಖಂಡತೆಯನ್ನು ತರಲಾಯಿತು, ನಮ್ಮ ದೇಶದಲ್ಲಿರುವ ಎಲ್ಲಾ ಧರ್ಮಗಳ ಬಾಷೆಗಳ ಜಾತಿಗಳ ಜನರ ಬದುಕಿಗೆ ಅವರ ಜೀವನ ಬೆಳಕಿಗೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸುಭದ್ರ ಸಂವಿಧಾನವನ್ನು ನೀಡಿದರು, ಇದು ಎಲ್ಲರಿಗೂ ಸೇರಿದ್ದು, ನಾವೆಲ್ಲಾರೂ ಭಾರತೀಯರು ಎನ್ನುವ ಹೆಮ್ಮೆ ಇರಬೇಕು, ಅನಗತ್ಯ ಹಾರಟಗಳನ್ನು ನಿಲ್ಲಿಸಿ ದೇಶದ ಸೇವೆಗೆ ಎಲ್ಲರೂ ಒಂದಾಗಬೇಕು, ಮನುಕುಲದ ಏಳಿಗೆಗೆ ಮಾನವೀಯತೆ ದೇಶದ ಏಳಿಗೆಗೆ ಎಲ್ಲರು ಒಗಟ್ಟು ಶ್ರಮ ಅಡಿಪಾಯವಾಗಿದ್ದು ಭವ್ಯ ಭಾರತದ ಬುನಾದಿಗೆ ಎಲ್ಲರೂ ಒಂದಾಗೋಣ ಎಂದರು.
ನೂತನ ಪಟ್ಟಣ ಪಂಚಾಯಿತಿ ಅದ್ಯಕ್ಷೆ ಕಾವ್ಯಶ್ರೀರಮೇಶ್ ಮಾತನಾಡಿ ಭಾರತ ದೇಶವು 1947 ರಲ್ಲಿ ಸ್ವಾತಂತ್ರ ವಾದ ಬಳಿಕ 1950 ಜನವರಿ 26 ರಂದು ಸಂವಿಧಾನವನ್ನು ಅಂಗೀಕರಿಸಿ ಅನ್ವಹಿಸಿಕೊಂಡು ಗಣರಾಜ್ಯೋತ್ಸವ ಎನ್ನಿಸಿಕೊಂಡಿತು. ಈ ದಿನವನ್ನು ಭಾರತೀಯರಾದ ನಾವುಗಳು ಸಂತೋಷ ಸಂಭ್ರಮದಿಅದ ಆಚರಿಸಿ ಕೊಳ್ಳುತ್ತೇವೆ. ಡಾ.ಬಿ.ಆರ್.ಅಂಬೇಡ್ಕರ್ ರವರ ಸಂವಿಧಾನ ಫಲವಾಗಿ ದೇಶದಲ್ಲಿ ಶಾಸಕಾಂಗ ನ್ಯಾಯಾಂಗ ಕಾರ್ಯಾಂಗ ಗಳು ಕಾರ್ಯರೂಪಕ್ಕೆ ಬಂದು ಎಲ್ಲರೂ ಕ್ರಮಬದ್ದ ಜೀವನ ನಡೆಸಲು ಕಾರಣವಾಯಿತು ಎಂದರು.
ಸ್ಥಾಯಿಸಮಿತಿ ಅದ್ಯಕ್ಷ ನಟರಾಜು ಮಾತನಾಡಿ ಕೋವಿಡ್ ಕಾರಣದಿಂದ ಶಾಲಾ ಮಕ್ಕಳ ಗೈರು ಹಾಜರಿ ರಾಜ್ಯೋತ್ಸವಕ್ಕೆ ಸ್ವಲ್ಪ ಕೊರತೆ ಕಾಣುತ್ತಿದ್ದರು ಮುಂದಿನ ದಿನಗಳಲ್ಲಿ ಈ ರೋಗ ಹೊರಟು ಹೋಗಿ ಎಲ್ಲರೂ ಸಂಭ್ರಮದಿಅದ ದಿನಾಚರಣೆ ಆಚರಿಸುವಂತೆ ಆಗಲಿ ಎಂದರು.
ಕಾರ್ಯಕ್ರಮದಲ್ಲಿ ಪ.ಪಂ ಉಪಾದ್ಯಕ್ಷೆ ಭಾರತಿಸಿದ್ದಮಲ್ಲಯ್ಯ, ತಾಲೂಕು ಸ್ಕೌಟ್ – ಗೈಡ್ಸ್ ಅದ್ಯಕ್ಷ ಪ.ಪಂ ಸದಸ್ಯ ಕೆ.ಆರ್.ಓಬಳರಾಜು ಸದಸ್ಯರುಗಳಾದ ಎ.ಡಿ.ಬಲರಾಮಯ್ಯ, ಲಕ್ಷೀನಾರಾಯಣ, ಪುಟ್ಟನರಸಯ್ಯ, ನಾಗರಾಜು, ನಂದೀಶ್, ಪ್ರದೀಪ್‌ಕುಮಾರ್, ಹುಸ್ನಪಾರಿಯಾ, ಅನಿತ, ಕ.ಸಾ.ಪ ಅದ್ಯಕ್ಷ ಕೃಷ್ಣಮೂರ್ತಿ, ಸ.ನೌ.ಸಂಘದ ಅದ್ಯಕ್ಷ ರುದ್ರೇಶ್, ಎಸ್.ಸಿ,ಎಸ್.ಟಿ ಸಮನ್ವಯ ಸಮಿತಿ ಅದ್ಯಕ್ಷ ಹುನುಮಂತರಾಜು, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ದೊಡ್ಡಸಿದ್ದಯ್ಯ,ಸಿಪಿಐ ಸಿದ್ದರಾಮೇಶ್ವಜ, ಬಿ.ಇ.ಓ. ಡಾ.ಸುಧಾಕರ್, ಅಧಿಕಾರಿಗಳಾದ ಮಲ್ಲಯ್ಯ, ನಾಗರಾಜು, ರಘು, ಸುರೇಶ್, ಅಂಬಿಕಾ, ಸಿದ್ದನಗೌಟಿ, ಅನಿತ ಸೇರಿದಂತೆ ಇತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಹೊಸ ಸೇರ್ಪಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.