ಅಮೃತಧಾರೆಯಲ್ಲಿ ಗಣತಂತ್ರ ಮೆರುಗು; ಎಲ್ಲೆಲ್ಲೂ ತ್ರಿವರ್ಣ ಧ್ವಜದ ರಂಗು, ದೇಶಭಕ್ತಿಯ ಕಂಪು

ರಾಷ್ಟ್ರ ರಾಜಧಾನಿಯಲ್ಲಿ ಗಣರಾಜ್ಯೋತ್ಸವದ ಸಡಗರ

Team Udayavani, Jan 27, 2022, 6:40 AM IST

ಅಮೃತಧಾರೆಯಲ್ಲಿ ಗಣತಂತ್ರ ಮೆರುಗು; ಎಲ್ಲೆಲ್ಲೂ ತ್ರಿವರ್ಣ ಧ್ವಜದ ರಂಗು, ದೇಶಭಕ್ತಿಯ ಕಂಪು

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರ್ಣಗೊಂಡ ಸವಿನೆನಪಿನ ಸುಸಂದರ್ಭದಲ್ಲಿಯೇ 73ನೇ ಗಣರಾಜ್ಯೋತ್ಸವವೂ ನಡೆದಿದೆ. ಹಲವು ಪ್ರಥಮಗಳ ಜತೆಗೆ ಅದ್ದೂರಿಯಾಗಿ, ವಿವಿಧ ಇಲಾಖೆಗಳು ಮತ್ತು ರಾಜ್ಯಗಳ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವ ಸಾರುವ ಸ್ತಬ್ಧ ಚಿತ್ರಗಳ ಹಾಗೂ ಯೋಧರ ಶಿಸ್ತಿನ ಪಥ ಸಂಚಲನದ ಜತೆಗೆ ಕಾರ್ಯಕ್ರಮ ನಡೆದಿದೆ.

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯೆಲ್ಲೆಡೆ ಬುಧವಾರ ಹಬ್ಬದ ವಾತಾವರಣ. ಎಲ್ಲೆಲ್ಲೂ ದೇಶಭಕ್ತಿಯ ಅನಾವರಣ. ನಗರದ ಧ್ವಜ ಸ್ತಂಭಗಳಲ್ಲಿ ಬೆಳ್ಳಂಬೆಳಗ್ಗೆ ಹಾರಿದ ರಾಷ್ಟ್ರ ಧ್ವಜ. ಎತ್ತ ನೋಡಿದರೂ ತ್ರಿವರ್ಣ ಧ್ವಜದ ಬೆಡಗು. ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷದ ಮೆರುಗಿನ ನಡುವೆ ದಿಲ್ಲಿಯಲ್ಲಿ ಬುಧವಾರ ಜರಗಿದ 73ನೇ ಗಣರಾಜ್ಯೋತ್ಸವದ ಸಡಗರದ ಝಲಕ್‌ ಇದು.

ಬೆಳಗಿನ ಸೂರ್ಯೋದಯ ಎಲ್ಲರ ಮನಸ್ಸಿನಲ್ಲಿ ದೇಶಭಕ್ತಿಯ ಕಿರಣಗಳನ್ನು ಮೂಡಿಸಿದ್ದ. ಅದು, ಹಾದಿ ಬೀದಿಗಳಲ್ಲಿ ಶುಭಾಶಯ ಕೋರಿ ಕಟ್ಟಲಾಗಿದ್ದ ಬ್ಯಾನರ್‌- ಕಟೌಟ್‌ಗಳಲ್ಲಿ, ಮನೆಗಳ ಮುಂದಿನ ರಂಗೋಲಿಗಳಲ್ಲಿ, ಜನರ ದಿರಿಸಿನಲ್ಲಿ ಅಭಿವ್ಯಕ್ತವಾಗುತ್ತಿತ್ತು! ಕೊರೊನಾ ಇತಿಮಿತಿಗಳ ನಡುವೆಯೂ ಎಲ್ಲರೂ ಗಣರಾಜ್ಯೋತ್ಸವ ಸಡಗರವನ್ನು ಹೊದ್ದುಕೊಂಡು ಓಡಾಡುತ್ತಿದ್ದರು.

ಇತ್ತ, ರಾಷ್ಟ್ರಪತಿ ಭವನದಿಂದ ನ್ಯಾಶನಲ್‌ ಸ್ಟೇಡಿಯಂವರೆಗಿನ ರಾಜಪಥ್‌ ಕೂಡ ಸಾಂಪ್ರದಾಯಿಕವಾದ ಗಣರಾಜ್ಯ
ಪರೇಡ್‌ಗೆ ಸಜ್ಜಾಗಿ ನಿಂತಿತ್ತು. ದಿಲ್ಲಿಯಲ್ಲಿ ಬೆಳಗಿನಿಂದಲೇ ಮಂಜು ಕವಿದ ವಾತಾವರಣ ಇದ್ದಿದ್ದರಿಂದ ಪರೇಡ್‌ ಅನ್ನು 10:30ಕ್ಕೆ ಆರಂಭಿಸಲಾಯಿತು.

ಅದಕ್ಕೂ ಮುನ್ನ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ದಿಲ್ಲಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಅಗ್ನಿಷ್ಟಿಕೆಗೆ ನಮಿಸುವ ಮೂಲಕ ದೇಶಕ್ಕಾಗಿ ಪ್ರಾಣ ಮುಡಿಪಿಟ್ಟ ಯೋಧರಿಗೆ ಪುಷ್ಪನಮನ ಸಲ್ಲಿಸಿದರು.

ಕೂಲಿಗಳು, ಸ್ವಚ್ಛಾಗ್ರಹ ಕಾರ್ಮಿಕರೇ ವಿಶೇಷ ಆಹ್ವಾನಿತರು!: ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನ‌ ವೀಕ್ಷಣೆಗಾಗಿ ಕೆಲವು ವ್ಯಕ್ತಿಗಳನ್ನು ವಿಶೇಷ ಆಹ್ವಾನಿತರನ್ನಾಗಿ ಪರಿಗಣಿಸಿ ಆಮಂತ್ರಿಸ ಲಾಗಿತ್ತು. ಅವರ್ಯಾರೋ ವಿದೇಶಿ ರಾಜಕೀಯ ಗಣ್ಯರಲ್ಲ ಅಥವಾ ಯಾವುದೋ ಕ್ಷೇತ್ರದಲ್ಲಿ ಮೌಂಟ್‌ ಎವರೆಸ್ಟ್‌ ಶಿಖರದಷ್ಟು ಸಾಧನೆ ಮಾಡಿದವರಲ್ಲ. ಅವರೆ ಲ್ಲರೂ ಸ್ವಚ್ಛಾಗ್ರಹ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಫಾಯಿ ಕರ್ಮ ಚಾರಿಗಳು, ಕೊರೊನಾ ನಿರ್ಮೂಲನೆ ಯಲ್ಲಿ ಮಂಚೂಣಿ ಕಾರ್ಯಕರ್ತರೆನಿಸಿರುವ ಪೌರ ಕಾರ್ಮಿಕರು, ಆಟೋ ಚಾಲಕರು, ಕಟ್ಟಡ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರು!

ಕೊರೊನಾ ನಿರ್ಬಂಧಗಳ ಹಿನ್ನೆಲೆಯಲ್ಲಿ, ಈ ಬಾರಿಯ ಪರೇಡ್‌ ವೀಕ್ಷಿಸಲು 5,000ರಿಂದ 8,000 ವೀಕ್ಷಕರಿಗಷ್ಟೇ ಅವಕಾಶ ಕಲ್ಪಿಸಲಾಗಿತ್ತು. ಅಷ್ಟು ಆಸನಗಳಲ್ಲಿ ಈ ವಿಶೇಷ ಆಮಂತ್ರಿತರೆಲ್ಲರಿಗೂ ಪ್ರತ್ಯೇಕ ಆಸನಗಳನ್ನು ಮೀಸರಿಸಲಾಗಿತ್ತು.

ಯಶಸ್ಸಿಗೆ ಕಾರಣರಾದ ಅಧಿಕಾರಿಗಳು!
ಭಾರತೀಯ ಸೇನೆಯ ಲೆಫ್ಟನೆಂಟ್‌ ಜನರಲ್‌ ವಿಜಯ್‌ ಕುಮಾರ್‌ ಮಿಶ್ರಾ ಅವರು ಈ ಬಾರಿಯ ಗಣರಾಜ್ಯೋತ್ಸವದ ಪರೇಡ್‌ ಕಮಾಂಡರ್‌ ಆಗಿದ್ದರೆ, ಸೇನೆಯ ಮತ್ತೂಬ್ಬ ಅಧಿಕಾರಿ ಮೇಜರ್‌ ಜನರಲ್‌ ಅಲೋಕ್‌ ಕಚರ್‌ ಅವರು ಪರೇಡ್‌ನ‌ ಉಪ- ಕಮಾಂಡರ್‌ ಆಗಿ ಸೇವೆ ಸಲ್ಲಿಸಿದರು. ಪರೇಡ್‌ ಅತ್ಯಂತ ಶಿಸ್ತುಬದ್ಧವಾಗಿ, ಕ್ರಮಬದ್ಧವಾಗಿ, ಎಲ್ಲಿಯೂ ಹದ ತಪ್ಪದಂತೆ ನಡೆಯುವಂತೆ ಮಾಡಿದ್ದು ಇವರ ಕಾರ್ಯಕ್ಷಮತೆಗೆ ಸಿಕ್ಕ ಸಾಕ್ಷ್ಯ ಎನಿಸಿತು. ಅತಿ ವಿಶಿಷ್ಟ ಸೇವಾ ಪದಕ ಪಡೆದ ಹೆಗ್ಗಳಿಕೆ ಹೊಂದಿರುವ ವಿಜಯ್‌ ಕುಮಾರ್‌ ಮಿಶ್ರಾ, ಸೇನೆಯಲ್ಲಿ 2ನೇ ಪೀಳಿಗೆಯ ಅಧಿಕಾರಿಯೆಂದೇ ಗುರುತಿಸಿಕೊಂಡವರು. 1985ರ ಡಿಸೆಂಬರ್‌ನಲ್ಲಿ ಜಮ್ಮ ಕಾಶ್ಮೀರ ರೈಫ‌ಲ್ಸ್‌ ತುಕಡಿಯನ್ನು ಮುನ್ನಡೆಸಿದ ಹೆಗ್ಗಳಿಕೆ ಇವರದ್ದು. ಮೇಜರ್‌ ಜನರಲ್‌ ಅಲೋಕ್‌ ಕಾಕರ್‌ ಅವರು, ಖಾಡಕ್ವಾಸ್ಲಾದಲ್ಲಿರುವ ನ್ಯಾಶನಲ್‌ ಡಿಫೆನ್ಸ್‌ ಅಕಾಡೆಮಿ ಹಾಗೂ ಡೆಹ್ರಾಡೂನ್‌ನಲ್ಲಿರುವ ಇಂಡಿಯನ್‌ ಮಿಲಿಟರಿ ಅಕಾಡೆಮಿಯ ಹಳೆಯ ವಿದ್ಯಾರ್ಥಿ. 1985ರಲ್ಲಿ ಇವರು 9ನೇ ಗೋರ್ಖಾ ರೈಫ‌ಲ್ಸ್‌ ಬೆಟಾಲಿಯನ್‌ ಅನ್ನು ಯಶಸ್ವಿಯಾಗಿ ಮುನ್ನಡೆಸಿದ ಹೆಗ್ಗಳಿಕೆ ಹೊಂದಿದ್ದಾರೆ. ಇವರೂ ಸಹ ಭಾರತೀಯ ಸೇನೆಯ 2ನೇ ಪೀಳಿಗೆಯ ಸೇನಾಧಿಕಾರಿಯೆಂದು ಪರಿಗಣಿಸಲ್ಪಟ್ಟಿದ್ದಾರೆ.

ಮಹಿಳಾ ಸೈನಿಕರಿಂದ ಆಕ್ರೋಬಾಟಿಕ್ಸ್‌
ಪರೇಡ್‌ನ‌ಲ್ಲಿ ಭಾಗವಹಿಸಿದ್ದ ಬಿಎಸ್‌ಎಫ್, ಐಟಿಬಿಪಿಯ ಮಹಿಳಾ ಸಿಬಂದಿ, ಆಕ್ರೋಬಾಟಿಕ್ಸ್‌ (ಜಿಮ್ನಾಸ್ಟಿಕ್‌ ಮಾದರಿಯ ಕಸರತ್ತು) ಪ್ರದರ್ಶಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು. ರೋಚಕವಾಗಿ ಬೈಕ್‌ ರೇಸ್‌ ಅಂತೂ ನೋಡುಗರಿಗೆ ರೋಮಾಂಚನಗೊಳಿಸಿತು. ಇವರ ಸ್ಟಂಟ್‌ಗಳಲ್ಲಿ ಸಾಮಾಜಿಕ ಸಂದೇಶವಿದ್ದಿದ್ದು ವಿಶೇಷ. ಹೆಣ್ಣುಮಕ್ಕಳ ವಿದ್ಯಾಭ್ಯಾಸ ಮತ್ತು ಮಹಿಳಾ ಸಶಕ್ತೀಕರಣವೇ ಅವರ ಸಾಮಾಜಿಕ ಸಂದೇಶ ತಿರುಳಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸೀಮಾ ಭವಾನಿ ಮೋಟಾರ್‌ ಸೈಕಲ್‌ ತಂಡ ನಡೆಸಿದ ಕಸರತ್ತಿಗೆ ಕೇಂದ್ರದ ಸಚಿವರು, ಜನಸಾಮಾನ್ಯರು ತಮ್ಮ ಆಸನಗಳಿಂದ ಮೇಲೆದ್ದು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.

ಟ್ಯಾಂಕರ್‌ಗಳ ಪ್ರದರ್ಶನ
1971ರಲ್ಲಿ ನಡೆದಿದ್ದ ಭಾರತ- ಪಾಕ್‌ ಯುದ್ಧದಲ್ಲಿ ಬಳಸಲಾಗಿದ್ದ ಯುದ್ಧ ಟ್ಯಾಂಕರ್‌ಗಳನ್ನು ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ಪ್ರದರ್ಶಿಸಲಾಯಿತು. ಪಿಟಿ-76, 75/24 ಪ್ಯಾಕ್‌ ಹೊವಿಟ್ಜರ್‌ ಹಾಗೂ ಒ.ಟಿ.-62 ಟೋಪಾಜ್‌ ಮಾದರಿಯ ಟ್ಯಾಂಕ್‌ಗಳು ಸೇರಿ ಹಲವು ಟ್ಯಾಂಕರ್‌ಗಳನ್ನು ಪ್ರದರ್ಶಿಸಲಾಯಿತು. ಈ ಯುದ್ಧದಲ್ಲಿ ಭಾರತ ಗೆಲುವು ಸಾಧಿಸಿದ್ದರ ಸ್ಮರಣೆಗಾಗಿ 2021ರ ವರ್ಷವನ್ನು “ಸ್ವರ್ಣಿಮ್‌ ವಿಜಯ್‌ ವರ್ಷ್‌’ ಎಂದು ಆಚರಿಸಲಾಗಿದೆ.

ಗಮನ ಸೆಳೆದ ಪ್ರಧಾನಿ ಟೋಪಿ
ಆಯಾ ಸಮಾರಂಭಕ್ಕೆ ಒಪ್ಪುವಂಥ ಉಡುಪು ಧರಿಸುವುದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಭ್ಯಾಸ. ಗಣರಾಜ್ಯ ದಿನದಂದೂ ಪ್ರಧಾನಿಯವರು ಉತ್ತರಾಖಂಡದ ಸಾಂಪ್ರದಾಯಿಕ ಟೋಪಿ ಧರಿಸಿದ್ದು ಗಮನಾರ್ಹವಾಗಿತ್ತು. ಅದನ್ನು ರಾಜ್ಯದ ಪುಷ್ಪ ಬ್ರಹ್ಮಕಮಲದ ಆಕಾರದಲ್ಲಿ ವಿನ್ಯಾಸಗೊಳಿಸ ಲಾಗಿತ್ತು. ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿದ ವೇಳೆ ಪೂಜೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬ್ರಹ್ಮ ಕಮಲವನ್ನೇ ಬಳಕೆ ಮಾಡುತ್ತಾರೆ. ಜಾಮ್‌ನಗರದ ಪಗಡಿ, ಕೊಲ್ಹಾಪುರ ಶೈಲಿಯ ಪೇಟದ ವರೆಗೆ ವಿವಿಧ ಸಂದರ್ಭಗಳಲ್ಲಿ ಅತ್ಯುತ್ತಮ ರೀತಿಯ ವಸ್ತ್ರಗಳನ್ನು ಈ ಹಿಂದೆ ಧರಿಸಿದ್ದರು.

ಪರೇಡ್‌ನ‌ಲ್ಲಿ ರಫೇಲ್‌
ಇತ್ತೀಚೆಗಷ್ಟೇ ಭಾರತೀಯ ವಾಯುಪಡೆಗೆ (ಐಎಎಫ್) ಸೇರ್ಪಡೆಗೊಂಡಿರುವ ರಫೇಲ್‌ ಯುದ್ಧ ವಿಮಾನಗಳು, ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ಭಾಗವಹಿಸಿದ್ದವು. ಈ ವಿಮಾನವನ್ನು ಹೊತ್ತಿದ್ದ ಟ್ಯಾಬ್ಲೋ ಪರೇಡ್‌ನ‌ ವೇಳೆ ಎಲ್ಲರ ಗಮನ ಸೆಳೆಯಿತು. ರಫೇಲ್‌ ಯುದ್ಧ ವಿಮಾನಗಳನ್ನು ಚಲಾಯಿಸಿದ ದೇಶದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿರುವ ಶಿವಾಂಗಿ ಸಿಂಗ್‌ ಅವರು ಟ್ಯಾಬ್ಲೋದಲ್ಲಿ ರಫೇಲ್‌ ಜತೆಗೆ ನಿಂತಿದ್ದರು. ಕಳೆದ ವರ್ಷ ಫ್ಲೈಟ್‌ ಲೆಫ್ಟಿನೆಂಟ್‌ ಕಾಂತ್‌ ಅವರು ರಫೇಲ್‌ ಜೆಟ್‌ ವಿಮಾನಗಳನ್ನು ಚಲಾಯಿಸಿದ ಮೊದಲ ಮಹಿಳಾ ಪೈಲಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ವಾರಾಣಸಿ ಮೂಲದ ಶಿವಾಂಗಿ ಸಿಂಗ್‌, 2017ರಲ್ಲಿ ಐಎಎಫ್ಗೆ ಸೇರ್ಪಡೆಗೊಂಡಿದ್ದವರು. ಐಎಎಫ್ ಮಹಿಳಾ ಪೈಲಟ್‌ಗಳ 2ನೇ ಬ್ಯಾಚ್‌ನ ವಿದ್ಯಾರ್ಥಿನಿಯಾಗಿದ್ದ ಇವರು, ಈ ಮೊದಲು ಮಿಗ್‌-21 ಬೈಸನ್‌ ಮಾದರಿಯ ಯುದ್ಧ ವಿಮಾನ ಗಳನ್ನು ಚಲಾಯಿಸುತ್ತಿದ್ದರು. ಅವರ ಪ್ರಾವೀಣ್ಯವನ್ನು ಗಮನಿಸಿ ಅವರಿಗೆ ರಫೇಲ್‌ ಚಲಾಯಿಸುವ ಅವಕಾಶ ನೀಡಲಾಗಿತ್ತು.

“ವಿರಾಟ್‌’ಗೆ ಹೃತೂ³ರ್ವಕ ವಿದಾಯ
ರಾಷ್ಟ್ರಪತಿಯವರ ಅಂಗರಕ್ಷಕ ದಳದ ಸದಸ್ಯನಾಗಿ, ಈ ವರ್ಷ ಗಣರಾಜ್ಯೋತ್ಸವ ದಿನದಂದು ಅಧಿಕೃತವಾಗಿ ಸೇವೆಯಿಂದ ನಿವೃತ್ತಿಯಾದ ವಿರಾಟ್‌ ಎಂಬ ಕುದುರೆಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಹಾಗೂ ಪ್ರಧಾನಿ ಮೋದಿ ಅದರ ಮೈದಡವಿ ಸಕಲ ಸಮ್ಮಾನಗಳೊಂದಿಗೆ ಬೀಳ್ಕೊಟ್ಟರು. ಹಾನೋವೇರಿ ಯನ್‌ ಜಾತಿಯ “ವಿರಾಟ್‌’ ಅತೀ ಎತ್ತರದ ಹಾಗೂ ಕಟ್ಟುಮಸ್ತಾಗಿದ್ದ ಕುದುರೆ. ಅಂಗರಕ್ಷಕ ಪಡೆಯಲ್ಲಿ ಅತ್ಯಂತ ಶಿಸ್ತುಬದ್ಧ ಹಾಗೂ ನಂಬುಗಸ್ತ ಕುದುರೆ ಎಂದೇ ಖ್ಯಾತಿ ಗಳಿಸಿತ್ತು. ಕಳೆದ 13 ವರ್ಷಗಳಿಂದಲೂ ಪ್ರತೀ ವರ್ಷದ ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ಈ ವಿರಾಟ್‌ ಭಾಗವಹಿಸಿತ್ತು. ಇದರ ಸೇವೆಯನ್ನು ಪರಿಗಣಿಸಿ, ಇದೇ ತಿಂಗಳ 15ರಂದು “ಚೀಫ್ ಆಫ್ ಆರ್ಮಿ ಸ್ಟಾಫ್ ಕಮೆಂಡೇಷನ್‌’ ಎಂಬ ಗೌರವವನ್ನು ಪ್ರದಾನ ಮಾಡಲಾಗಿತ್ತು.

ಈ ಬಾರಿ ಭಿನ್ನ ಹೇಗೆ?
-ಗಣರಾಜ್ಯೋತ್ಸವ ಸಂಭ್ರಮಾಚರಣೆ ಜ. 23ರಂದು ಶುರುವಾಗಿದೆ. ಸ್ವಾತಂತ್ರ್ಯ ಸೇನಾನಿ ಸುಭಾಷ್‌ ಚಂದ್ರ ಬೋಸ್‌ ಅವರ 125ನೇ ಜನ್ಮದಿನಾಚರಣೆ ಅಂಗವಾಗಿ ಅಂದಿನಿಂದಲೇ ಈ ಸಂಭ್ರಮಾಚರಣೆಗೆ ಚಾಲನೆ ನೀಡಲಾಗಿದೆ.

-ಈ ಬಾರಿಯ ಪರೇಡ್‌ ಸ್ವಲ್ಪ ತಡವಾಗಿ, ಅಂದರೆ ಬೆಳಗ್ಗೆ 10:30ಕ್ಕೆ ಶುರುವಾಯಿತು. ಅದಕ್ಕೆ ಕಾರಣ ದಿಲ್ಲಿಯಲ್ಲಿ ಬೆಳ್ಳಂಬೆಳಗ್ಗೆ ಕವಿಯುತ್ತಿರುವ ಮಂಜು.

-ಪರೇಡ್‌ನ‌ಲ್ಲಿ ಪ್ರದರ್ಶಿಸಲಾಗುತ್ತಿದ್ದ ಟ್ಯಾಬ್ಲೋಗಳ ಸಂಖ್ಯೆಯನ್ನು ಇಳಿಸಲಾಗಿತ್ತು. 12 ರಾಜ್ಯಗಳು, ಕೇಂದ್ರ ಸರಕಾರದ 9 ಸಚಿವಾಲಯಗಳು ಅಥವಾ ಇಲಾಖೆಗಳಿಗೆ ಈ ಬಾರಿಯ ಪರೇಡ್‌ನ‌ಲ್ಲಿ ಟ್ಯಾಬ್ಲೋಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿತ್ತು.

-ಪರೇಡ್‌ನ‌ಲ್ಲಿ ಪ್ರದರ್ಶನಗೊಂಡ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನೃತ್ಯಗೈದ ಕಲಾವಿದರನ್ನು ದೇಶದ ಎಲ್ಲ ಜಿಲ್ಲೆಗಳಲ್ಲಿ ಆಡಿಷನ್‌ ನಡೆಸುವ ಮೂಲಕ ಆಯ್ಕೆ ಮಾಡಲಾಗಿತ್ತು. ರಕ್ಷಣ ಇಲಾಖೆ ಹಾಗೂ ಕೇಂದ್ರ ಸಂಸ್ಕೃತಿ ಇಲಾಖೆ ಜಂಟಿಯಾಗಿ ನಡೆಸಿದ್ದ “ವಂದೇ ಮಾತರಂ’ ಶೀರ್ಷಿಕೆಯ ನೃತ್ಯ ಸ್ಪರ್ಧೆಯಲ್ಲಿ ಒಟ್ಟು 3,800 ನೃತ್ಯಪಟುಗಳು ಭಾಗವಹಿಸಿದ್ದರು. ಅವರಲ್ಲಿ 480 ನೃತ್ಯಪಟುಗಳು ಆಯ್ಕೆಯಾಗಿದ್ದರು.

-ಇದೇ ಮೊದಲ ಬಾರಿಗೆ ವಿಶೇಷವಾದ ಡ್ರೋನ್‌ ಹಾಗೂ ಲೇಸರ್‌ ಶೋ ಪ್ರದರ್ಶನ ಏರ್ಪಡಿಸಲಾಗಿದೆ. ಜ. 29ರಂದು ನಡೆಯ ಲಿರುವ ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನ‌ ವಿದಾಯ ಕೂಟದಲ್ಲಿ ಈ ಪ್ರದರ್ಶನ ಜರಗಲಿದೆ.

-ರಾಜಪಥ್‌ನಲ್ಲಿ ನಡೆಯುತ್ತಿದ್ದ ಪರೇಡ್‌, ಸಾಮಾನ್ಯವಾಗಿ ಕೆಂಪು ಕೋಟೆಯವರೆಗೂ ಸಾಗುತ್ತಿತ್ತು. ಆದರೆ, ಈ ಬಾರಿ ಅದು ನ್ಯಾಶನಲ್‌ ಸ್ಟೇಡಿಯಂನಲ್ಲಿ ಅಂತ್ಯಗೊಳ್ಳಲಿದೆ.

-ಈ ಬಾರಿಯೂ ಯಾವುದೇ ವಿದೇಶಿ ಗಣ್ಯರಿಗೆ ಆಹ್ವಾನವಿರಲಿಲ್ಲ. ಪರೇಡ್‌ನ‌ಲ್ಲಿ ವಿದೇಶಿ ಸೇನಾ ತುಕಡಿ ಭಾಗವಹಿಸಿರಲಿಲ್ಲ.

-ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲೆಮರೆ ಕಾಯಿ ಗಳಂತೆ ದುಡಿದ ದೇಶಾಭಿಮಾನಿಗಳನ್ನು ಸ್ಮರಿ ಸುವ ಸಲುವಾಗಿ “ಕಲಾ ಕುಂಭ’ ಪ್ರದರ್ಶನ.

ಟಾಪ್ ನ್ಯೂಸ್

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

High-Court

High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ

Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!

Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

Ajit Pawar

Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್‌: ಮಹಾಯುತೀಲಿ ಬಿರುಕು?

tirupati

Supreme Court; ಧರ್ಮಕ್ಕೊಂದು ರಾಜ್ಯ ಕೂಡದು: ತಿರುಪತಿ ಕುರಿತ ಅರ್ಜಿ ತಿರಸ್ಕೃತ

1-eeee

1857 ಸಿಪಾಯಿ ದಂಗೆ ಕಾಲದ ಶಸ್ತ್ರಾಸ್ತ್ರ ಹೊಲದಲ್ಲಿ ಪತ್ತೆ!

Modi 2

BJP; ಒಂದಾಗಿದ್ದರಷ್ಟೇ ಸುರಕ್ಷೆ: ಯೋಗಿ ಬಳಿಕ ಮೋದಿ ಹೊಸ ಸ್ಲೋಗನ್‌!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

High-Court

High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.