ಸಚಿವರಿಂದ ರೈತರ ಅವಮಾನ ಖಂಡಿಸಿ ಪ್ರತಿಭಟನೆ
Team Udayavani, Jan 28, 2022, 5:57 PM IST
ಬಸವನಬಾಗೇವಾಡಿ: ರೈತರ ಸಮಸ್ಯೆ ಆಲಿಸದೆ ಉದ್ಧಟತನ ಪ್ರದರ್ಶಿಸಿದ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ವರ್ತನೆ ಖಂಡಿಸಿ ಗುರುವಾರ ರೈತರು ಮಿನಿ ವಿಧಾನಸೌಧ ತಹಶೀಲ್ದಾರ್ ಕಚೇರಿ ಎದುರು ಕೆಲಹೊತ್ತು ಪ್ರತಿಭಟನೆ ನಡೆಸಿ, ನಂತರ ತಹಶೀಲ್ದಾರ್ ಎಂ.ಎನ್. ಬಳಿಗಾರಗೆ ಮನವಿ ಸಲ್ಲಿಸಿದರು.
ಬುಧವಾರ ಪಟ್ಟಣದ ಮಾರ್ಗಮಧ್ಯ ಹೋಗುವಾಗ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿಯವರು ಕಾರಿನಲ್ಲೇ ಕುಳಿತು ಮನವಿ ಸ್ವೀಕರಿಸಿ ಹೋರಾಟಗಾರರಿಗೆ ಅಗೌರವ ತೋರಿಸಿದ್ದಾರೆ ಎಂದು ಆರೋಪಿಸಿ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಹಾಗೂ ರೈತರು ಪ್ರತಿಭಟಿಸಿದರು.
ಈ ವೇಳೆ ಅಖಂಡ ಕರ್ನಾಟಕ ರೈತ ಸಂಘ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ರಂಜಣಗಿ ಮಾತನಾಡಿ, ಸಚಿವರ ಪಕ್ಕದಲ್ಲಿಯೇ ಕುಳಿತಿದ್ದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಅವರು ರೈತ ಮುಖಂಡರಿಗೆ ಉಡಾಫೆ ಮಾತನಾಡಿ, ದಾರಿ ಮಧ್ಯದಲ್ಲಿ ಕಾರು ಏಕೆ ತಡೆದು ನಿಲ್ಲಿಸುತ್ತಿರಿ. ನಿಮ್ಮದು ಯಾವ ರೈತ ಸಂಘ. ಯಾವ ದಾರಿ ಸಮಸ್ಯೆ. ನಿಮಗೆ ತಿಳಿವಳಿಕೆ ಇಲ್ಲವೆಂದು ಅವಮಾನ ಮಾಡಿದ್ದಾರೆ. ಕೂಡಲೇ ಶಾಸಕರು ರೈತ ಮುಖಂಡರಿಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಗುರುಲಿಂಗಪ್ಪ ಪಡಸಲಗಿ, ಮಲ್ಲಪ್ಪ ಪಡಸಲಗಿ, ಶೇಖಪ್ಪ ಸಕ್ಕನ, ಗಿರಿಮಲ್ಲಪ್ಪ ದೊಡಮನಿ, ಚನ್ನಬಸಪ್ಪ ಸಿಂಧೂರ, ಹೊನಕೆರಪ್ಪ ತೆಲಗಿ, ಗೊಲ್ಲಾಳಪ್ಪ ಚೌಧರಿ, ಮಲ್ಲಪ್ಪ ಮಾಡ್ಯಾಳ, ರಾಜೇಸಾಬ ವಾಲಿಕಾರ, ಕೃಷ್ಣಪ್ಪ ಬೊಮ್ಮರಡ್ಡಿ, ರೇವಪ್ಪಗೌಡ ಸೇರಿದಂತೆ ಅನೇಕರು ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.