ಹುಲಿ ಗಣತಿಯಲ್ಲಿ ಕಾಫಿ ನಾಡಿಗೆ ಪ್ರಥಮ ಸ್ಥಾನ?
Team Udayavani, Jan 28, 2022, 7:04 PM IST
ಚಿಕ್ಕಮಗಳೂರು: ಕಾಫಿ ನಾಡು ಪ್ರಕೃತಿ ಸೌಂದರ್ಯದ ಖನಿ. ಇಲ್ಲಿನ ಪ್ರಕೃತಿ ತನ್ನೊಡಲಿನಲ್ಲಿ ಸಾವಿರಾರುಜಾತಿಯ ವೃಕ್ಷ, ಪ್ರಾಣಿ- ಪಕ್ಷಿಗಳಿಗೆ ನೆಲೆ ನೀಡಿದೆ.ರಾಷ್ಟ್ರೀಯ ಪ್ರಾಣಿ ಹುಲಿ ಇಲ್ಲಿನ ದಟ್ಟಾರಣ್ಯದಲ್ಲಿನೆಲೆಸಿವೆ. ಸದ್ಯ ಜಿಲ್ಲೆಯಲ್ಲಿ ಹುಲಿ ಗಣತಿ ನಡೆಯುತ್ತಿದ್ದು,ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇದೆಎಂದು ಹೇಳಲಾಗುತ್ತಿದೆ.
ಪ್ರತೀ ನಾಲ್ಕು ವರ್ಷಕ್ಕೊಮ್ಮೆ ಹುಲಿಗಳಗಣತಿ ನಡೆಸಲಾಗುತ್ತದೆ. ಅದರಂತೆ ಜಿಲ್ಲೆಯಲ್ಲಿ ಜ.23ರಿಂದ ಹುಲಿಗಣತಿ ಆರಂಭವಾಗಿದ್ದು, ಜ. 29ಕ್ಕೆಮುಕ್ತಾಯಗೊಳ್ಳಲಿದೆ. ಕಳೆದ ಹುಲಿ ಗಣತಿಯಲ್ಲಿ ಭದ್ರಾ ಅಭಯಾರಣ್ಯದಲ್ಲಿ 39 ಹುಲಿಗಳನ್ನುಗುರುತಿಸಿದ್ದು, ಹುಲಿ ಸಂಖ್ಯೆಯಲ್ಲಿ ಚಿಕ್ಕಮಗಳೂರು ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡಿತ್ತು. ಈ ಬಾರಿರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಳ್ಳುವ ಸಾಧ್ಯತೆಗಳುದಟ್ಟವಾಗಿದೆ.
ಹುಲಿ ಸಂತತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರಅನೇಕ ಕ್ರಮಗಳನ್ನು ಕೈಗೊಂಡಿದೆ. ಅದರಂತೆದಟ್ಟಾರಣ್ಯದಲ್ಲಿ ಹುಲಿಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿಹೆಚ್ಚಿನ ಸಂಖ್ಯೆಯಲ್ಲಿರುವುದು ಗೋಚರಿಸುತ್ತಿದೆ.ಸದ್ಯ ಹುಲಿ ಗಣತಿ ಸಂದರ್ಭದಲ್ಲಿ ಹುಲಿಗಳು ನೇರದರ್ಶನವನ್ನು ನೀಡಿವೆ. ಕಳೆದ 1 ವರ್ಷದಲ್ಲಿ ಕೇವಲ 2ಹುಲಿಗಳು ಮಾತ್ರ ಸ್ವಾಭಾವಿಕವಾಗಿ ಸಾವನ್ನಪ್ಪಿವೆ.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹುಲಿಗಳಸಂಖ್ಯೆ ಹೆಚ್ಚಳದಲ್ಲಿ ಚಿಕ್ಕಮಗಳೂರು ಜಿಲ್ಲೆ ರಾಜ್ಯಕ್ಕೆಮೊದಲ ಸ್ಥಾನ ಪಡೆದುಕೊಳ್ಳುವ ಎಲ್ಲಾ ಲಕ್ಷಣಗಳುಕಂಡು ಬರುತ್ತಿವೆ. ಇದರೊಂದಿಗೆ ಕಾಫಿ ನಾಡು ರಾಜ್ಯದಗಮನ ಸೆಳೆಯಲು ಸಜ್ಜಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
B. Y. Raghavendra: 10 ವರ್ಷದಲ್ಲಿ ವಕ್ಫ್ ಆಸ್ತಿ ಶೇ.135 ಹೆಚ್ಚಳ
Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿಟ್ಟು ವ್ಯಕ್ತಿ ನಾಪತ್ತೆ ಪ್ರಕರಣ; ಶವ ಪತ್ತೆ
ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಯತ್ನಕ್ಕೆ ಹಿನ್ನಡೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.