ಜಯಂತಿಗಷ್ಟೇ ಸೀಮಿತವಾದ ಅಧ್ಯಯನ ಪೀಠಗಳು!


Team Udayavani, Jan 29, 2022, 6:35 AM IST

ಜಯಂತಿಗಷ್ಟೇ ಸೀಮಿತವಾದ ಅಧ್ಯಯನ ಪೀಠಗಳು!

ದೇಶ, ನಾಡು, ನುಡಿಗೆ, ನಮ್ಮ ಸಮಾಜ ಮತ್ತು ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆ ನೀಡಿದವರನ್ನು ಬೇರೆ ಬೇರೆ ಲೆಕ್ಕಾಚಾರಗಳಲ್ಲಿ ಸ್ಮರಿಸಿಕೊಳ್ಳುವುದು ಹಿಂದಿನಿಂದಲೂ ನಡೆದುಬಂದಿರುವ ವಾಡಿಕೆ. ಅದರಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ಇಂಥ ಮಹನೀಯರ ಹೆಸರಿನಲ್ಲಿ ಅಧ್ಯಯನ ಪೀಠಗಳನ್ನು ರಚಿಸಿ, ಈ ಮುಖಾಂತರ ಅವರ ಸಾಧನೆಯನ್ನು ಜಗತ್ತಿಗೆ ಬಿತ್ತರಿಸುವ ಕೆಲಸವೂ ನಡೆದುಕೊಂಡು ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಅಧ್ಯಯನ ಪೀಠಗಳ ಮೇಲೆ ವಿದ್ಯಾರ್ಥಿಗಳ ಆಸಕ್ತಿ ಕಡಿಮೆಯಾಗುತ್ತಿದೆ. ಎಷ್ಟೋ ವಿವಿಗಳಲ್ಲಿ ಅಧ್ಯಯನ ಪೀಠಗಳಷ್ಟೇ ಇವೆ, ಆದರೆ ವಿದ್ಯಾರ್ಥಿಗಳೇ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾದರೆ ಇದಕ್ಕೆ ಏನು ಕಾರಣ ಎಂಬ ಒಂದು ನೋಟ ಇಲ್ಲಿದೆ..

ಮೈಸೂರು ವಿಶ್ವವಿದ್ಯಾನಿಲಯ
17 ಒಟ್ಟು ಅಧ್ಯಯನ ಪೀಠಗಳು

ಡಾ|ಸರ್‌ ಎಂ. ವಿಶ್ವೇಶ್ವರಯ್ಯ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಸಾಮಾಜಿಕ ಮತ್ತು ಅಭಿವೃದ್ಧಿ ಅಧ್ಯಯನ, ನಾಟಕರತ್ನ ಗುಬ್ಬಿ ವೀರಣ್ಣ, ರಾಷ್ಟ್ರಕವಿ ಕುವೆಂಪು, ಕ್ರೈಸ್ತ ಅಧ್ಯಯನ ಪೀಠ, ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು, ಡಾ|ಬಿ.ಆರ್‌. ಅಂಬೇಡ್ಕರ್‌ ಸಂಶೋಧನ ಮತ್ತು ವಿಸ್ತರಣ ಕೇಂದ್ರ, ಸ್ವಾಮಿ ವಿವೇಕಾನಂದ, ಡಾ| ಝಾಕೀರ್‌ ಹುಸೇನ್‌ ಪೀಠ, ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು ಪೀಠ, ಬಾಬು ಜಗಜೀವನರಾಂ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣೆ ಕೇಂದ್ರ, ಯೋಜನಾ ಆಯೋಗ ಪೀಠ, ಟಿಪ್ಪು ಸುಲ್ತಾನ್‌ ಪೀಠ, ಶ್ರೀ ಬಸವೇಶ್ವರ ಸಂಶೋಧನ ಮತ್ತು ವಿಸ್ತರಣಾ ಕೇಂದ್ರ, ಪಿ.ಆರ್‌. ತಿಪ್ಪೇಸ್ವಾಮಿ ಪೀಠ, ಮಂಟೇಸ್ವಾಮಿ, ಸಿದ್ದಪ್ಪಾಜಿ ಮತ್ತು ರಾಚಪ್ಪಾಜಿ ಅಧ್ಯಯನ ಪೀಠ, ಎನ್‌. ರಾಚಯ್ಯ ಅಧ್ಯಯನ ಪೀಠ. (ಬುದ್ಧ ಅಧ್ಯಯನ ಪೀಠ ಮತ್ತು ಯು.ಆರ್‌. ಅನಂತಮೂರ್ತಿ ಅಧ್ಯಯನ ಪೀಠ ಸ್ಥಾಪನೆಗೆ ಸಿದ್ಧತೆ). ಇದರಲ್ಲಿ ಶ್ರೀ ಬಸವೇಶ್ವರ ಸಂಶೋಧನ ಮತ್ತು ವಿಸ್ತರಣಾ ಕೇಂದ್ರ, ಡಾ|ಬಿ.ಆರ್‌. ಅಂಬೇಡ್ಕರ್‌ ಸಂಶೋಧನ ಮತ್ತು ವಿಸ್ತರಣ ಕೇಂದ್ರ ಆಗಾಗ ವಿಶೇಷ ಉಪನ್ಯಾಸ, ಸರಣಿ ಉಪನ್ಯಾಸ, ವಿಚಾರ ಸಂಕಿರಣ ನಡೆಸುವ ಮೂಲಕ ಸಕ್ರಿಯ. ಉಳಿದ ಪೀಠಗಳಲ್ಲಿ ವರ್ಷಕ್ಕೆ ಒಂದು ಅಥವಾ ಎರಡು ಕಾರ್ಯಕ್ರಮಕ್ಕೆ ಸೀಮಿತ. ಅಂಬೇಡ್ಕರ್‌ ಅಧ್ಯಯನ ಪೀಠದಲ್ಲಿ ಸರ್ಟಿಫಿಕೆಟ್‌ ಕೋರ್ಸ್‌ ಆರಂಭಿಸಲಾಗಿದ್ದು, 20 ಮಂದಿ ಕಲಿಯು ತ್ತಿದ್ದಾರೆ. ಈ ಅಧ್ಯಯನ ಪೀಠಗಳ ನಿರ್ವಹಣೆಗೆ ಮೈಸೂರು ವಿವಿ 5 ಲಕ್ಷದಿಂದ 5 ಕೋಟಿ ರೂ. ವರೆಗೆ ಠೇವಣಿ ಹಣವನ್ನು ಇರಿಸಿದ್ದು, ಇದರಲ್ಲಿ ಬರುವ ಬಡ್ಡಿ ಹಣದಿಂದ ಪೀಠಗಳು ಕಾರ್ಯನಿರ್ವಹಿಸುತ್ತಿವೆ. ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರೊಬ್ಬರನ್ನು ಸಂದರ್ಶಕ ಪ್ರಾಧ್ಯಾಪಕರನ್ನಾಗಿ ನೇಮಕ ಮಾಡಲಾಗಿದ್ದು, ಇವರ ಜತೆಗೆ ಮೈಸೂರು ವಿವಿಯಿಂದ ಸಹಾಯಕ ಸಿಬಂದಿ ಇದ್ದಾರೆ.

ಬೆಂಗಳೂರು ವಿಶ್ವವಿದ್ಯಾನಿಲಯ
19 ಒಟ್ಟು ಅಧ್ಯಯನ ಪೀಠಗಳು

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಒಟ್ಟಾರೆ 19 ಅಧ್ಯಯನ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ ಸರಕಾರ‌ದಿಂದ 4 ಅಧ್ಯಯನ ಕೇಂದ್ರಗಳಿಗೆ ಅನುದಾನ ಒದಗಿಸುತ್ತಿದ್ದು, ಉಳಿದ ಕೇಂದ್ರಗಳಿಗೆ ಆಯಾ ವಿಭಾಗದ ಅನುದಾನವನ್ನೇ ಬಳಸಿಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ.

19 ಕೇಂದ್ರಗಳು ಯಾವುವು?
ಡಾ| ಬಾಬುಜಗಜೀವನ್‌ರಾಮ್‌, ಬಸವಲಿಂಗಪ್ಪ, ಆಲಂಪಲ್ಲಿ ವೆಂಕಟರಾಮ್‌ ಕಾರ್ಮಿಕ, ಸರ್‌ ಎಂ. ವಿಶ್ವೇಶ್ವರಯ್ಯ ಅಧ್ಯಯನ ಇಸ್ರೋ ಪೀಠ, ನಾಡಪ್ರಭು ಕೆಂಪೇಗೌಡ ಮಾನವೀಯ ಮತ್ತು ಸಾಮಾಜಿಕ ಅಧ್ಯಯನ ಪೀಠ, ಡಾ| ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ಗಾಂಧೀಜಿ ಅಧ್ಯಯನ ಕೇಂದ್ರ, ವಿವೇಕಾನಂದ ಅಧ್ಯಯನ ಕೇಂದ್ರ, ಯೋಗ ಅಧ್ಯಯನ ಕೇಂದ್ರ, ಭಗವಾನ್‌ ಬುದ್ಧ ಧ್ಯಾನ ಕೇಂದ್ರ, ಯುಜಿಸಿ ಮಹಿಳಾ ಅಧ್ಯಯನ ಕೇಂದ್ರ, ಯುಜಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ, ಐಎಎಸ್‌/ಐಪಿಎಸ್‌ ತರಬೇತಿ ಕೇಂದ್ರ, ಸಾಮಾಜಿಕ ಅಂತರ್ಗತ ಮತ್ತು ವಿಶೇಷ ನೀತಿಯ ಕೇಂದ್ರ, ಮಾನಸಿಕ ಸಮಾಲೋಚನ ಕೇಂದ್ರ, ಬ್ರೈಲ್‌ ಸಂಪನ್ಮೂಲ ಕೇಂದ್ರ, ಅಂಗವಿಕಲರ ಸಶಕ್ತೀಕರಣ ಕೋಶ, ಸಮಾನ ಅವಕಾಶ ಕೋಶ, ಪರಿಶಿಷ್ಟ ಜಾತಿ/ಪಂಗಡ ಕೋಶ.

ಹಂಪಿ ವಿಶ್ವವಿದ್ಯಾನಿಲಯ
12 ಒಟ್ಟು ಅಧ್ಯಯನ ಪೀಠಗಳು

ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ ಅಸ್ತಿತ್ವಕ್ಕೆ ಬಂದಿರುವ ಹಂಪಿ ಕನ್ನಡ ವಿವಿಯಲ್ಲಿನ ಅಧ್ಯಯನ ಪೀಠಗಳು ಹೆಸರಿಗಷ್ಟೇ ಸ್ಥಾಪನೆಯಾಗಿದ್ದು, ದಶಕಗಳು ಕಳೆದರೂ ಅವುಗಳ ಮೂಲ ಉದ್ದೇಶ ಈಡೇರದೆ ಕೇವಲ ಜಯಂತಿಗಳಿಗೆ ಮಾತ್ರ ಸೀಮಿತವಾಗಿವೆ. ರಾಜ್ಯ ಸರಕಾರ‌ದ ಸೂಚನೆಯಂತೆ ಹಂಪಿ ಕನ್ನಡ ವಿವಿಯಲ್ಲಿ 12ಅಧ್ಯಯನ ಪೀಠಗಳು ಸ್ಥಾಪನೆಯಾಗಿವೆ. ಇವುಗಳಿಗೆ ಅನುದಾನವೇ ಬಿಡುಗಡೆಯಾಗಿಲ್ಲ.

ಹಂಪಿ ಕನ್ನಡ ವಿವಿ ಭಾಷೆಗಾಗಿ ಇರುವ ವಿಶ್ವದ ಏಕೈಕ ವಿವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1991ರಲ್ಲಿ ಹಂಪಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಈ ವಿವಿಯಲ್ಲಿ ವೀರನಾರಿ ಒನಕೆ ಓಬವ್ವ, ಸಮಗ್ರ ದಾಸಸಾಹಿತ್ಯ, ರಾಮ ಮನೋಹರ ಲೋಹಿಯಾ, ದಲಿತ ಸಂಸ್ಕೃತಿ, ಶಂಭಾಜೋಶಿ, ಪುರಂದರದಾಸ, ವಾಲ್ಮೀಕಿ, ಎಚ್‌ಕೆಡಿಬಿ, ಜೈನ ಸಂಸ್ಕೃತಿ, ಹಾಲುಮತ ಸಂಸ್ಕೃತಿ, ಡಾ| ರಾಜ್‌ಕುಮಾರ್‌, ದೇವರ ದಾಸಿಮಯ್ಯ ಸೇರಿ ಒಟ್ಟು 12 ಅಧ್ಯಯನ ಪೀಠಗಳನ್ನು ಸ್ಥಾಪಿಸಲಾಗಿದೆ.

ಅಕ್ಕಮಹಾದೇವಿವಿಶ್ವವಿದ್ಯಾನಿಲಯ
9 ಒಟ್ಟು ಅಧ್ಯಯನ ಪೀಠಗಳು

ವಿಜಯಪುರದಲ್ಲಿರುವ ರಾಜ್ಯದ ಏಕೈಕ ಮಹಿಳಾ ವಿವಿ ಎಂಬ ಹಿರಿಮೆ ಹೊಂದಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ 9 ಅಧ್ಯಯನ ಪೀಠಗಳಿವೆ. ಆದರೆ ಡಾ| ಬಿ.ಆರ್‌. ಅಂಬೇಡ್ಕರ್‌ ಅಧ್ಯಯನ ಕೇಂದ್ರದ ಹೊರತಾಗಿ ಇತರ ಅಧ್ಯಯನ ಪೀಠಗಳು, ಕೇಂದ್ರಗಳು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿವೆ. ಡಾ| ಬಿ.ಆರ್‌. ಅಂಬೇಡ್ಕರ್‌ ಅಧ್ಯಯನ ಪೀಠದಲ್ಲಿ ಮಾತ್ರ ವಿಶೇಷ ಅಧ್ಯಯನ ಕಾರ್ಯಗಳು ನಡೆಯುತ್ತಿವೆ. ವಿಶ್ವವಿದ್ಯಾನಿಲಯವೇ 50 ಲಕ್ಷ ರೂ. ಅನುದಾನ ನೀಡಿದ್ದು, ಇದರಿಂದ ಸರ್ಟಿಫಿಕೆಟ್‌ ಕೋರ್ಸ್‌ಗಳನ್ನು ನೀಡಲಾಗುತ್ತಿದೆ. ಈ ಪೀಠದಲ್ಲಿ ಪ್ರತೀ ವರ್ಷ ಒಂದಷ್ಟು ಸಂಶೋಧನೆ, ಅಧ್ಯಯನಗಳು ನಡೆಯುತ್ತಿವೆ ಎಂಬುದು ಆಶಾದಾಯಕ ಬೆಳವಣಿಗೆ.  ಉಳಿದಂತೆ ಖಗೋಳ ವಿಜ್ಞಾನಿ ಭಾಸ್ಕರಾಚಾರ್ಯ ಪೀಠ, ಅಕ್ಕಮಹಾದೇವಿ ಪೀಠ, ಯಶೋಧಮ್ಮ ದಾಸಪ್ಪ ಪೀಠ, ಮುಂಡರಗಿ ಅನ್ನದಾನೇಶ್ವರ ಪೀಠ, ದಾಸಶ್ರೇಷ್ಠ ಕನಕ ಪೀಠ, ಸ್ವಾಮಿ ವಿವೇಕಾನಂದ ಪೀಠ, ಮೌಲಾನಾ ಆಝಾದ್‌ ಅಧ್ಯಯನ ಕೇಂದ್ರಗಳಿವೆ. ಇವುಗಳಿಗೆ ಕೊಂಚ ಅನುದಾನವಿದ್ದರೂ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂಬುದು ನೋವಿನ ಸಂಗತಿ.

ದಾವಣಗೆರೆ ವಿಶ್ವವಿದ್ಯಾನಿಲಯ
5 ಒಟ್ಟು ಅಧ್ಯಯನ ಪೀಠಗಳು

ಬಾಬು ಜಗಜೀವನರಾಂ ಸಂಶೋಧನೆಹಾಗೂ ಅಧ್ಯಯನ ಕೇಂದ್ರ, ಸರ್ವಜ್ಞ, ಬಸವೇಶ್ವರ, ನಂಜುಂಡಪ್ಪ ಹಾಗೂ ಬಸವ ಅಧ್ಯಯನ ಪೀಠ. ಜತೆಗೆ ಅಂಬೇಡ್ಕರ್‌ ಸಂಶೋಧನ ಹಾಗೂ ಅಧ್ಯಯನ ಕೇಂದ್ರ ಘೋಷಣೆಯ ಪ್ರಸ್ತಾವನೆ ಸರಕಾರ‌ದ ಮಟ್ಟದಲ್ಲಿದೆ. ಇದರಲ್ಲಿ ಎರಡು ಮಾತ್ರ ಕಾರ್ಯ ನಿರ್ವಹಣೆ. ಮೂರು ಸರಕಾರದ ಅನುದಾನದ ನಿರೀಕ್ಷೆಯಲ್ಲಿವೆ.  ಬಾಬು ಜಗಜೀವನರಾಂ ಪೀಠದಲ್ಲಿ ಎರಡು ಕೋಟಿ ರೂ. ಸರ್ವಜ್ಞ ಪೀಠದಲ್ಲಿ 40 ಲಕ್ಷ ರೂ. ಇದ್ದು, ಇದರ ಬಡ್ಡಿ ಹಣದಲ್ಲಿ ಕಾರ್ಯ ನಿರ್ವಹಣೆ ಮಾಡಲಾಗುತ್ತಿದೆ. ಬಾಬು ಜಗಜೀವನರಾಂ ಸಂಶೋಧನ ಹಾಗೂ ಅಧ್ಯಯನ ಕೇಂದ್ರ ಹಾಗೂ ಸರ್ವಜ್ಞ ಅಧ್ಯಯನ ಪೀಠಗಳಲ್ಲಿ ಪ್ರತಿ ವರ್ಷ 80-100 ವಿದ್ಯಾರ್ಥಿಗಳು ಪ್ರತಿ ಅಧ್ಯಯನ ಪೀಠದಲ್ಲಿ ನೇರ ಅಧ್ಯಯನ, ಸಂಶೋಧನೆ, ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

ತುಮಕೂರು ವಿಶ್ವವಿದ್ಯಾನಿಲಯ
14 ಒಟ್ಟು ಅಧ್ಯಯನ ಪೀಠಗಳು

ಕುಮಾರವ್ಯಾಸ, ರಮಣ ಮಹರ್ಷಿ, ಡಾ|ಜಿ.ಎಸ್‌.ಪರಮಶಿವಯ್ಯ, ಡಾ|ಬಾಬು ಜಗಜೀವನ ರಾಮ್‌, ಸ್ವಾಮಿ ವಿವೇಕಾನಂದ‌, ಶ್ರೀ ಬಸವೇಶ್ವರ, ನಾಡ ಪ್ರಭು ಶ್ರೀ ಕೆಂಪೇಗೌಡ, ಪ್ರೊ|ಎಂ.ಡಿ.ನಂಜುಂಡ ಸ್ವಾಮಿ, ಗೌತಮ ಬುದ್ದ‌, ಸಂತ ಶಿಶುನಾಳ ಶರೀಫ‌, ಶ್ರೀ ಕುವೆಂಪು, ಶ್ರೀ ಜುಂಜಪ್ಪ‌, ಶ್ರೀ ದೇವರಾಜು ಅರಸು, ನೊಳಂಬ ಸಂಸ್ಕೃತಿ ಅಧ್ಯಯನ ಪೀಠಗಳನ್ನು ಸ್ಥಾಪಿಸಿದ್ದು ಅವು ಕುಂಟುತ್ತಾ ಕಾರ್ಯನಿರ್ವಹಿಸುತ್ತಿವೆ. ಇವುಗಳಿಗೆ ಅನುದಾನದ ಕೊರತೆ ಇದ್ದು, ಕೇವಲ ಜಯಂತಿ ಹಾಗೂ ಉಪನ್ಯಾಸ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗಿವೆ. ಅಲ್ಲದೆ ಇಲ್ಲಿ ಯಾವುದೇ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿಲ್ಲ. ಕೆಲವು ಅಧ್ಯಯನ ಪೀಠಗಳಲ್ಲಿ ಹಣವಿದ್ದರೆ, ಆರು ಪೀಠಗಳಿಗೆ ಯಾವುದೇ ಅನುದಾನ ಮೀಸಲಿಟ್ಟಿಲ್ಲ.

ಮಂಗಳೂರು ವಿಶ್ವವಿದ್ಯಾನಿಲಯ
20 ಒಟ್ಟು ಅಧ್ಯಯನ ಪೀಠಗಳು

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ಡಾ|ಶಿವರಾಮ ಕಾರಂತ ಪೀಠ, ಕನಕದಾಸ ಪೀಠ, ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠ, ಶ್ರೀ ಅಂಬಿಗರ ಚೌಡಯ್ಯ ಅಧ್ಯಯನ ಪೀಠ, ಜೈನಕವಿ ರತ್ನಾಕರವರ್ಣಿ ಅಧ್ಯಯನ ಪೀಠ, ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ, ಕೊಂಕಣಿ ಅಧ್ಯಯನ ಪೀಠ, ಬ್ಯಾರಿ ಅಧ್ಯಯನ ಪೀಠ, ನೆಹರೂ ಚಿಂತನ ಕೇಂದ್ರ, ರಾಣಿ ಅಬ್ಬಕ್ಕ ಪೀಠ, ಧರ್ಮನಿಧಿ ಯೋಗ ಪೀಠ, ಆಯುರ್ವೇದ ಭೂಷಣ ಎಂ.ವಿ ಶಾಸ್ತ್ರಿ ಮೆಮೋರಿಯಲ್‌ ಪೀಠ, ಕ್ರಿಶ್ಚಿಯಾನಿಟಿ ಪೀಠ, ಬ್ಯಾಂಕ್‌ ಆಫ್‌ ಬರೋಡಾ ಪರಿಸರ ವ್ಯವಸ್ಥೆ ಹಾಗೂ ಪರಿಸರ ಪೀಠ, ಯೂನಿಯನ್‌ ಬ್ಯಾಂಕ್‌ ಪೀಠ, ಕೆನರಾ ಬ್ಯಾಂಕ್‌ ಪೀಠ, ಎನ್‌.ಜಿ. ಪಾವಂಜೆ ಲಲಿತಾಕಲಾ ಪೀಠ, ಡಾ|ಪಿ.ದಯಾನಂದ ಪೈ ಹಾಗೂ ಪಿ.ಸತೀಶ್‌ ಪೈ ಯಕ್ಷಗಾನ ಅಧ್ಯಯನ ಕೇಂದ್ರ, ಸ್ವಾಮಿ ವಿವೇಕಾನಂದ ಅಧ್ಯಯನ ಪೀಠ.

ತುಳು, ಕೊಂಕಣಿ, ಬ್ಯಾರಿ ಭಾಷೆ, ಸಂಸ್ಕೃತಿಯ ಅಧ್ಯಯನ, ಸಂಶೋಧನೆ, ಸರಣಿ ಉಪನ್ಯಾಸ, ವಿಶೇಷ ಉಪನ್ಯಾಸ, ಕಾರ್ಯಕ್ರಮಗಳು, ವಿವಿಧ ಸಾಮಾಜಿಕ ಸ್ವರೂಪಗಳ ದಾಖಲಾತಿ/ಸಂಶೋಧನೆ, ಅಧ್ಯಯನ ಕೈಗೊಳ್ಳಲಾಗಿದೆ. ಯಕ್ಷಗಾನದ ಎಲ್ಲ ಶೈಲಿಗಳ ಸಾಕ್ಷéಚಿತ್ರ ಸಂಗ್ರಹಣೆ, ಸಂರಕ್ಷಣೆ, ಅಧ್ಯಯನ, ಸಂಶೋಧನೆ ಮುಂತಾದ ಕಾರ್ಯಕ್ರಮಗಳು ನಡೆದಿದೆ. ಪ್ರತೀ ತಿಂಗಳು ಸ್ವಾಮಿ ವಿವೇಕಾನಂದರ ಉಪನ್ಯಾಸ ಕಾರ್ಯಕ್ರಮ ನಡೆಯುತ್ತಿದೆ.

ಪ್ರತೀ ಪೀಠವು ಪ್ರತೀ ವರ್ಷ ನಡೆಸುವ ಕಾರ್ಯಕ್ರಮಗಳಿಗೆ ಸುಮಾರು 50 ಸಾವಿರ ರೂ.ಗಳಿಂದ 75 ಸಾವಿರ ರೂವರೆಗೆ ಅನುದಾನ ಅಗತ್ಯವಿರುತ್ತದೆ. ಈ ಪೈಕಿ ಬಹುತೇಕ ಪೀಠಕ್ಕೆ  ಶೇ.75ರಷ್ಟು ಅನುದಾನ ಲಭ್ಯವಾಗುತ್ತಿದೆ. ಬಹುತೇಕ ಪೀಠದಲ್ಲಿ ಸರಾಸರಿ ಪ್ರತೀ ವರ್ಷ 25 ಮಂದಿ ವಿವಿಧ ಸ್ವರೂಪದಲ್ಲಿ ಅಧ್ಯಯನ ಕೈಗೊಳ್ಳುತ್ತಿದ್ದಾರೆ.

ಗುಲ್ಬರ್ಗ ವಿಶ್ವವಿದ್ಯಾನಿಲಯ
11 ಒಟ್ಟು ಅಧ್ಯಯನ ಪೀಠಗಳು

ಗುಲ್ಬರ್ಗಾ ವಿವಿಯಲ್ಲಿ ಒಟ್ಟು 11 ಪೀಠಗಳಿವೆ. ಅಂಬೇಡ್ಕರ್‌, ಜಗಜೀವನ್‌ರಾಂ, ಸೇವಾಲಾಲ್‌, ಹೇಮರೆಡ್ಡಿ ಮಲ್ಲಮ್ಮ, ಅಂಬಿಗರ ಚೌಡಯ್ಯ, ವಾಲ್ಮೀಕಿ, ದಾಸ ಸಾಹಿತ್ಯ ಅಧ್ಯಯನ ಹೀಗೆ 11 ಪೀಠಗಳಿವೆ. ಇವುಗಳಲ್ಲಿ ಕೆಲವು ಮಾತ್ರ ಸಕ್ರಿಯವಾಗಿದ್ದರೆ, ಉಳಿದವವುಗಳಿಗೆ ಅನುದಾನವೂ ಇಲ್ಲ, ಸ್ವಂತ ಕಟ್ಟಡವೂ ಇಲ್ಲ. ಈ ಪೀಠಗಳಲ್ಲಿಯೂ ಕೇವಲ ಮಹನೀಯರ ಜಯಂತಿ ಆಚರಿಸಲಾಗುತ್ತಿದೆ. ಇವುಗಳಲ್ಲಿ ಅಂಬೇಡ್ಕರ್‌ ಅಧ್ಯಯನ ಕೇಂದ್ರದಲ್ಲಿ ಮಾತ್ರ ಕೆಲವು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ವಿಜಯನಗರ ಶ್ರೀಕೃಷ್ಣದೇವರಾಯ ವಿವಿ
3 ಒಟ್ಟು ಅಧ್ಯಯನ ಪೀಠಗಳು

ಬಳ್ಳಾರಿ ಜಿಲ್ಲೆಯಲ್ಲಿ ಹಂಪಿ ವಿವಿ ಜತೆಗೆ ಮತ್ತೂಂದು ವಿಶ್ವವಿದ್ಯಾನಿಲಯವೂ ಶುರುವಾಗಿದೆ. ಇದು 2010-11ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಡಾ| ಬಿ.ಆರ್‌.ಅಂಬೇಡ್ಕರ್‌, ಜಗಜೀವನರಾಮ್‌, ಮಹಾತ್ಮಗಾಂಧಿಯವರ ಅಧ್ಯಯನ ಪೀಠಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ಒಂದು ಪೀಠಕ್ಕೆ ಸರಕಾರ‌ದಿಂದ 2 ಕೋಟಿ ರೂ. ಅನುದಾನ ಬಂದಿದೆ. ಇನ್ನೆರಡು ಪೀಠಗಳಿಗೆ ಬಂದಿಲ್ಲ. ಪೀಠಗಳ ಹೆಸರಲ್ಲಿ ಇಟ್ಟಿರುವ 10-20 ಲಕ್ಷ ರೂ.ಗಳ ಠೇವಣಿ ಹಣದಿಂದ ಬಂದ ಬಡ್ಡಿಯಲ್ಲಿ ಸಂಶೋಧನ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಫೆಲೋಶಿಪ್‌ ನೀಡಲು, ಇನ್ನಿತರೆ ಖರ್ಚು ವೆಚ್ಚಗಳನ್ನು ನಿಭಾಯಿಸಲು ಆಗಲ್ಲ. ಹಾಗಾಗಿ ಅಧ್ಯಯನ ಪೀಠಗಳಲ್ಲಿ ಸಂಶೋಧನ ವಿದ್ಯಾರ್ಥಿಗಳನ್ನು ತೆಗೆದುಕೊಂಡಿಲ್ಲ.

ಕುವೆಂಪು ವಿಶ್ವವಿದ್ಯಾನಿಲಯ
20 ಒಟ್ಟು ಅಧ್ಯಯನ ಪೀಠಗಳು

ರಾಜ್ಯದ ಪ್ರತಿಷ್ಠಿತ ವಿವಿಗಳಲ್ಲಿ ಒಂದಾದ ಕುವೆಂಪು ವಿವಿಯಲ್ಲಿ 20 ಮಹನೀಯರ ಹೆಸರಿನಲ್ಲಿ ಅಧ್ಯಯನ ಪೀಠಗಳಿದ್ದು ಅವುಗಳು ಕಾರ್ಯಾಗಾರ, ವಿಚಾರ ಸಂಕಿರಣ, ಜನ್ಮದಿನ, ಜಾಗೃತಿ ಕಾರ್ಯಕ್ರಮಗಳಿಗೆ ಸೀಮಿತವಾಗಿದೆ. 1999ರಲ್ಲಿ ಆರಂಭವಾದ ಡಾ| ಅಂಬೇಡ್ಕರ್‌ ಮತ್ತು ಬೌದ್ಧ ಅಧ್ಯಯನ ಕೇಂದ್ರಕ್ಕೆ 3 ಲಕ್ಷ ರೂ. ಒದಗಿಸಲಾಗಿದೆ. ಬಸವೇಶ್ವರ ಅಧ್ಯಯನ ಪೀಠಕ್ಕೆ (2001) 2 ಲಕ್ಷ ರೂ., ಶಾಂತವೇರಿ ಗೋಪಾಲಗೌಡ ಅಧ್ಯಯನ ಪೀಠ (1998) 2 ಲಕ್ಷ ರೂ., ಅಬ್ದುಲ್‌ ನಜೀರ್‌ ಅಧ್ಯಯನ ಪೀಠಕ್ಕೆ (2001) 8 ಲಕ್ಷ ರೂ., ಕೆ.ಎಚ್‌. ಪಾಟೀಲ್‌ ಅಧ್ಯಯನ ಪೀಠಕ್ಕೆ (2003) 10 ಲಕ್ಷ, ಪ್ರೊ| ಬಿ. ಕೃಷ್ಣಪ್ಪ ಅಧ್ಯಯನ ಕೇಂದ್ರಕ್ಕೆ (2016) ಒಂದು ಕೋಟಿ, ಡಾ| ಬಾಬು ಜಗಜೀವನ್‌ ರಾಮ್‌ ಅಧ್ಯಯನ ಪೀಠಕ್ಕೆ (2016) 2 ಕೋಟಿ ಅನುದಾನ ಒದಗಿಸಲಾಗಿದೆ.  2020-21ನೇ ಶೈಕ್ಷಣಿಕ ವರ್ಷದಲ್ಲಿ ಶ್ರೀ ಶಿವಶರಣ ಅಲ್ಲಮಪ್ರಭು, ಛತ್ರಪತಿ ಶಿವಾಜಿ ಮಹಾರಾಜ, ಅಕ್ಕಮಹಾದೇವಿ, ಡಾ| ಸಿ.ಎನ್‌.ಆರ್‌.ರಾವ್‌, ಡಾ| ರಾಜ್‌ಕುಮಾರ್‌, ಡಾ| ಜಿ.ಎಸ್‌.ಶಿವರುದ್ರಪ್ಪ,ಕೆಳದಿ ರಾಣಿ ಚನ್ನಮ್ಮ, ಡಾ| ಪೂರ್ಣಚಂದ್ರ ತೇಜಸ್ವಿ, ಶ್ರೀ ಜಗದ್ಗುರು ರೇಣುಕಾಚಾರ್ಯ, ರಾಷ್ಟ್ರ ಕವಿ ಕುವೆಂಪು, ಮಹಾಕವಿ ಮಹರ್ಷಿ ವಾಲ್ಮೀಕಿ,ಮಹಾತ್ಮ ಗಾಂಧೀಜಿ, ಭಾರತ ಸೈನ್ಯ ಇತಿಹಾಸ ಅಧ್ಯಯನ ಪೀಠಗಳನ್ನು ಸಿಂಡಿಕೇಟ್‌ ಸಭೆಯಲ್ಲಿ 2020ರ ಅ.16ರಂದು ಅನುಮೋದನೆಪಡೆಯಲಾಗಿದೆ. ಸರಕಾರ‌ಕ್ಕೆ ವರದಿ ಸಲ್ಲಿಕೆಯಾಗಿದ್ದು ಅನುದಾನ ಬಿಡುಗಡೆಯಾಗಿಲ್ಲ.

ಕರ್ನಾಟಕ ವಿಶ್ವವಿದ್ಯಾನಿಲಯ
13 ಒಟ್ಟು ಅಧ್ಯಯನ ಪೀಠಗಳು

ಬಸವೇಶ್ವರ ಅಧ್ಯಯನ ಪೀಠ, ಕನಕದಾಸ ಅಧ್ಯಯನ ಪೀಠ, ವಿವೇಕಾನಂದ ಅಧ್ಯಯನ ಪೀಠ, ವೇಮನ ಅಧ್ಯಯನ ಪೀಠ, ಗಾಂಧಿ ಅಧ್ಯಯನ ಪೀಠ, ಡಾ|ಅಂಬೇಡ್ಕರ್‌ ಅಧ್ಯಯನ ಪೀಠ, ಡಾ|ಝಾಕೀರ್‌ ಹುಸೇನ್‌ ಅಧ್ಯಯನ ಪೀಠ, ಡಾ|ಬಾಬು ಜಗಜೀವನರಾಮ್‌ ಅಧ್ಯಯನ ಪೀಠ, ಸೋಮವಂಶ ಸಹಸ್ರಾರ್ಜುನ ಅಧ್ಯಯನ ಪೀಠ, ಕನ್ನಡ ಅಧ್ಯಯನ ಪೀಠ, ಜೈನ್‌ ಪೀಠ.

ಈ ಪೈಕಿ ಕೆಲವು ಪೀಠದಿಂದ ಪದೋನ್ನತಿ ಪಡೆದು ಅಧ್ಯಯನ ವಿಭಾಗಗಳಾಗಿ ಮಾರ್ಪಾಟಾಗಿವೆ. ಇದರಲ್ಲಿ ಕೆಲವು ಡಿಪ್ಲೊಮಾ ಕೋರ್ಸ್‌ ಗಳಾದರೆ, ಕೆಲವು ಸರ್ಟಿಫಿಕೆಟ್‌ ಕೋರ್ಸ್‌ಗಳಿಗೆ ಸೀಮಿತವಾಗಿವೆ.

ವಿವಿಯಿಂದ ಆಯಾ ಹೆಸರಿನ ಮಹಾಪುರುಷರ ಜಯಂತಿ ಮತ್ತು ತನ್ನಿಮಿತ್ತ ನಡೆಯುವ ಕಾರ್ಯಕ್ರಮಗಳಿಗೆ ಮಾತ್ರ ಒಂದಿಷ್ಟು ಬಿಡಿಗಾಸಿನ ಅನುದಾನ ಲಭ್ಯವಿರುವುದು ಬಿಟ್ಟರೆ ಇನ್ನುಳಿದಂತೆ ವರ್ಷವಿಡಿ ಕಾರ್ಯ ನಿರ್ವಹಿಸಲು ಯಾವುದೇ ಅನುದಾನ ಲಭ್ಯವಿಲ್ಲ. ವರ್ಷಕ್ಕೆ ಹೆಚ್ಚೆಂದರೆ ಅದರಲ್ಲೂ ಕೆಲವು ಅಧ್ಯಯನ ಪೀಠಕ್ಕೆ 30-50 ಸಾವಿರ ರೂ. ಮಾತ್ರ ಅನುದಾನವಿದೆ. ಭಾಷಾ ಕೌಶಲವೃದ್ಧಿ ಸೇರಿದಂತೆ ಅನೇಕ ವಿಚಾರಗಳನ್ನು ಮುನ್ನೆಲೆಗೆ ತಂದು ವಿದ್ಯಾರ್ಥಿಗಳನ್ನು ಇನ್ನಷ್ಟು ಕ್ರಿಯಾಶೀಲರನ್ನಾಗಿ ಮಾಡುವ ಅಗತ್ಯವಿದೆ. ಅದಕ್ಕಾಗಿ ಪ್ರತೀ ವರ್ಷ ಕನಿಷ್ಠ 4-5 ಲಕ್ಷ ರೂ. ಅನುದಾನ ಬೇಕಾಗುತ್ತದೆ.

ಟಾಪ್ ನ್ಯೂಸ್

Belagavi: C.T. Ravi arrest case shifted to Bengaluru

Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

egg

Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi: C.T. Ravi arrest case shifted to Bengaluru

Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

7(1

Lalbagh: ಆಸ್ತಿ ತೆರಿಗೆ ಇಳಿಕೆಗೆ ಪಾಲಿಕೆ ಅವಳಿ ಪ್ರಸ್ತಾವನೆ

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belagavi: C.T. Ravi arrest case shifted to Bengaluru

Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

7(1

Lalbagh: ಆಸ್ತಿ ತೆರಿಗೆ ಇಳಿಕೆಗೆ ಪಾಲಿಕೆ ಅವಳಿ ಪ್ರಸ್ತಾವನೆ

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.