ಮೊಮ್ಮಗಳ ಆತ್ಮಹತ್ಯೆ; ಸಾಹೇಬ್ರು ಇಷ್ಟು ಕಣ್ಣೀರಿಟ್ಟಿದ್ದು ನೋಡಿರಲಿಲ್ಲ;ಕಂಬನಿಯಾದ ಸಿಬ್ಬಂದಿ
ಆತ್ಮಹತ್ಯೆಗೆ ಮುನ್ನ ಆ ಮಗುವನ್ನು ಒಮ್ಮೆ ನೆನೆಸಿಕೊಂಡರೆ ಈ ರೀತಿ ಮಾಡುತ್ತಿರಲಿಲ್ಲವೇನೋ ?
Team Udayavani, Jan 29, 2022, 10:42 AM IST
ಬೆಂಗಳೂರು :“ಪಾಪ ಸಾಹೇಬ್ರು ತುಂಬಾನೆ ಅತ್ತು ಬಿಟ್ಟರು. ಅವರು ಕಣ್ಣೀರು ಹಾಕಿದ್ದೇ ನೋಡಿರಲಿಲ್ಲ. ಈ ರೀತಿ ಬಿಕ್ಕಿ ಬಿಕ್ಕಿ ಅತ್ತಿದ್ದು ಇದೇ ಮೊದಲು. ಎಲ್ಲರಿಗೂ ಅಯ್ಯೋ ಅನ್ನಿಸಿಬಿಡ್ತು”……ಮೊಮ್ಮಗಳು ಡಾ.ಸೌಂದರ್ಯ ಆತ್ಮಹತ್ಯೆ ಬಳಿಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಣ್ಣೀರಿಟ್ಟಿದ್ದನ್ನು ಕಂಡು ಕಾವೇರಿಯಲ್ಲಿ ಇರುವ ಉದ್ಯೋಗಿಗಳು ಈ ರೀತಿ ನೋವು ತೋಡಿಕೊಂಡಿದ್ದಾರೆ.
ಎಂಥ ವಿಷಮ ಸ್ಥಿತಿಯಲ್ಲೂ ಧೃತಿಗೆಡದ ಯಡಿಯೂರಪ್ಪ ಮೊಮ್ಮಗಳ ಸಾವಿನಿಂದ ಅಕ್ಷರಶಃ ಕುಸಿದು ಹೋಗಿದ್ದರಂತೆ . ಎರಡು ದಿನ ಹಿಂದಿನವರೆಗೂ ತಮ್ಮ ಜತೆಯೇ ಇದ್ದ ಮೊಮ್ಮಗಳು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಅವರನ್ನು ತೀವ್ರವಾಗಿ ಕಾಡುತ್ತಿದ್ದು, ಇಷ್ಟೊಂದು ದುಃಖಪಟ್ಟಿದ್ದನ್ನು ಇದುವರೆಗೆ ಯಾರೂ ನೋಡೇ ಇರಲಿಲ್ಲ ಎನ್ನುತ್ತಾರೆ ಸಿಬ್ಬಂದಿ.
ಖಿನ್ನತೆ ಕಾರಣವೇ ? : ಯಡಿಯೂರಪ್ಪ ಆಪ್ತ ಮೂಲದ ಪ್ರಕಾರ ಸೌಂದರ್ಯ ಕುಟುಂಬದಲ್ಲಿ ಯಾವುದೇ ವಿವಾದ ಇರಲಿಲ್ಲ. ಅವರ ಪತಿ ಡಾ.ನೀರಜ್ ತುಂಬಾ ಒಳ್ಳೆಯ ವ್ಯಕ್ತಿ. ಹೆರಿಗೆ ಬಳಿಕ ಕಾಣಿಸಿಕೊಂಡ ಖಿನ್ನತೆಯೇ ಇದಕ್ಕೆ ಕಾರಣ ಎಂದು ಪ್ರತಿಪಾದಿಸುತ್ತಾರೆ.
ಆತ್ಮಹತ್ಯೆಗೆ ಮುನ್ನ ಆ ಮಗುವನ್ನು ಒಮ್ಮೆ ನೆನೆಸಿಕೊಂಡರೆ ಈ ರೀತಿ ಮಾಡುತ್ತಿರಲಿಲ್ಲವೇನೋ ? ಒಳ್ಳೆ ಗೊಂಬೆ ತರ ಇದ್ದ ಮಗುವನ್ನು ನೆನೆಸಿಕೊಂಡರೆ ಬೇಸರವಾಗುತ್ತದೆ. ಇತ್ತೀಚೆಗಂತೂ ಸಾಹೇಬ್ರು ಆ ಮಗುವಿನ ಜತೆಯೇ ಇರುತ್ತಿದ್ದರು ಎಂದು ಸಿಬ್ಬಂದಿ ಬೇಸರ ತೋಡಿಕೊಂಡಿದ್ದಾರೆ.
ಮಹಜರು :
ಪ್ರಕರಣ ಸಂಬಂಧ ಹೈಗ್ರೌಂಡ್ಸ್ ಠಾಣೆ ಪೊಲೀಸರು ಇಂದು ಘಟನಾ ಸ್ಥಳದ ಮಹಜರು ನಡೆಸಲಿದ್ದಾರೆ. ಡಾ.ನೀರಜ್ ಅವರ ಹೇಳಿಕೆ ದಾಖಲಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?
Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್
Agriculture; ರಾಜ್ಯದ ರೈತರು, ಜನತೆಗೆ ಶುಭ ಸುದ್ದಿ: ಈ ಬಾರಿ ಬಂಪರ್ ಇಳುವರಿ!
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.