ಲವ್ ಮಾಕ್ಟೇಲ್-2 ಟ್ರೇಲರ್ ವಿಷಯದಲ್ಲಿ ಗಂಡ-ಹೆಂಡ್ತಿ ಜಗಳ!
Team Udayavani, Jan 29, 2022, 11:58 AM IST
ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿ, ನಿರ್ದೇಶಿಸಿರುವ “ಲವ್ ಮಾಕ್ಟೇಲ್-2′ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚಿತ್ರ ಫೆ.11ರಂದು ತೆರೆಗೆ ತರಲು ಚಿತ್ರತಂಡ ಯೋಚಿಸಿತ್ತು. ಆದರೆ, ಕೋವಿಡ್ ಮೂರನೇ ಅಲೆ ಭೀತಿಯಿಂದಾಗಿ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಈ ನಡುವೆಯೇ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿದೆ.
ಚಿತ್ರದ ಟ್ರೇಲರ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಕುರಿತು ಸಖತ್ ಮಜಾವಾದ ವಿಡಿಯೋ ಮಾಡಿದೆ. ಮಿಲನಾ ಹಾಗೂ ಕೃಷ್ಣ ಮಧ್ಯೆ ಟ್ರೇಲರ್ ರಿಲೀಸ್ ವಿಷಯದಲ್ಲಿ ಸಣ್ಣ ಜಗಳವಾದಂತಹ ವಿಡಿಯೋ ಮಾಡಿದ್ದಾರೆ.
ಇದನ್ನೂ ಓದಿ:‘ಒಂಬತ್ತನೇ ದಿಕ್ಕು’ ಚಿತ್ರ ವಿಮರ್ಶೆ: ಥ್ರಿಲ್ಲರ್ ಪಯಣದಲ್ಲಿ ಸಿಕ್ಕ ಹೊಸ ದಿಕ್ಕು
“ಯಾರ್ಯಾರೋ ಟ್ರೇಲರ್ ರಿಲೀಸ್ ಮಾಡ್ಕೊಂಡು ಓಡಾಡ್ತಾ ಇದಾರೆ. ನಿಂಗೇನೋ ಬಂದಿರೋದು ದೊಡ್ ರೋಗ? ಟ್ರೇಲರ್ ಆಗಿ ಒಂದು ತಿಂಗಳಾಯ್ತು ತಾನೆ? ಇವತ್ತು ರಿಲೀಸ್ ಆಗತ್ತೆ, ನಾಳೆ ರಿಲೀಸ್ ಆಗತ್ತೆ ಅಂತ ನಾನು ಕಾಯ್ತಾನೇ ಇದೀನಿ. ನೀವು ಬೇರೆ ಶೂಟಿಂಗ್ನಲ್ಲಿ ಮಜಾ ಮಾಡ್ಕೊಂಡು ಓಡಾಡ್ತಾ ಇದೀರಾ? ಮನೆಗೆ ಬಂದವರಿಗೆಲ್ಲ ಟ್ರೇಲರ್ ನೋಡಿ ಟ್ರೇಲರ್ ನೋಡಿ ಅಂತ ಹಲ್ಲು ಕಿಸ್ಕೊಂಡು ತೋರ್ಸೋಕೆ ಆಗತ್ತೆ. ಟ್ರೇಲರ್ ಮಾಡಿರೋದು ಜನರಿಗೆ ತೋರಿಸೋಕಾ ಅಥವಾ ಮನೆಗೆ ಬಂದವರಿಗೆ ತೋರಿಸೋಕಾ?’ ಎಂದು ಮಿಲನ ಗರಂ ಆಗಿ ಕೃಷ್ಣನಲ್ಲಿ ಕೇಳುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇದರ ಜೊತೆಗೆ ಶೀಘ್ರದಲ್ಲೇ ಟ್ರೇಲರ್ ರಿಲೀಸ್ ಮಾಡುವುದಾಗಿ ಕೃಷ್ಣ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.