ವೈರಲ್ ಸಾಂಗ್ ‘ಕಚಾ ಬದಾಮ್’ ಹಾಡಿ ಟ್ರೋಲಾದ ರಾನು ಮಂಡಲ್: ವಿಡಿಯೋ ನೋಡಿ
Team Udayavani, Jan 29, 2022, 2:52 PM IST
ಸದ್ಯ ಇಂಟರ್ನೆಟ್ ನಲ್ಲಿ ಹವಾ ಸೃಷ್ಟಿಸಿರುವ ಕಚಾ ಬದಾಮ್ ಹಾಡನ್ನು ನೀವು ಕೇಳಿರಬಹುದು. ಪಶ್ಚಿಮ ಬಂಗಾಳದ ಕಡಲೆಕಾಯಿ ವ್ಯಾಪಾರಿ ಭೂಬನ್ ಬದ್ಯಾಕರ್ ಹಾಡಿದ ಈ ಹಾಡು ಸದ್ಯ ಟ್ರೆಂಡಿಂಗ್ ನಲ್ಲಿದೆ. ಕಚಾ ಬದಾಮ್ ಹಾಡಿನ ಡಿಜೆ ಸೇರಿದಂತೆ ಹಲವು ವರ್ಶನ್ ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಈ ಹಿಂದೆ ಒಂದೇ ಒಂದು ಹಾಡಿನಿಂದ ಸೆನ್ಸೇಶನ್ ಆಗಿದ್ದ ರಾನು ಮಂಡಲ್ ಈ ವೈರಲ್ ಹಾಡನ್ನು ಹಾಡಿದ್ದಾರೆ. ರಾನು ಗಾಯನದ ಕಚಾ ಬದಾಮ್ ಹಾಡು ಕೂಡಾ ಈಗ ವೈರಲ್ ಆಗುತ್ತಿದೆ.
ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ರಾನು ಮಂಡಲ್ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದು, ‘ಓಂ ಶಾಂತಿ ಬದಾಮ್” “ಆರ್ ಐಪಿ ಬದಾಮ್ ಸಾಂಗ್” ಎಂದೆಲ್ಲಾ ಟ್ರೋಲ್ ಮಾಡಿದ್ದಾರೆ.
ಇದನ್ನೂ ಓದಿ:ಏನಿದು ಪ್ರಸವ ನಂತರದ ಖಿನ್ನತೆ? ಯಾವ ವೈದ್ಯರನ್ನು ಸಂಪರ್ಕಿಸಬೇಕು? ಇದಕ್ಕೆ ಚಿಕಿತ್ಸೆ ಏನು?
ರಾನು ಮಂಡಲ್ ಅವರು ಮೊದಲ ಬಾರಿಗೆ ಏಕ್ ಪ್ಯಾರ್ ಕಾ ನಗ್ಮಾ ಹೈ ಹಾಡಿನ ವೀಡಿಯೊದ ನಂತರ ರಾತ್ರೋರಾತ್ರಿ ಇಂಟರ್ನೆಟ್ ಸ್ಟಾರ್ ಆಗಿದ್ದರು. 2019ರ ಆಗಸ್ಟ್ ನಲ್ಲಿ ಪಶ್ಚಿಮ ಬಂಗಾಳದ ರಾಣಾಘಾಟ್ ರೈಲ್ವೆ ನಿಲ್ದಾಣದಲ್ಲಿ ಯುವ ಇಂಜಿನಿಯರ್ ಅತಿಂದ್ರ ಚಕ್ರವರ್ತಿ ಅವರು ರಾನು ಮಂಡಲ್ ಅವರ ಹಾಡನ್ನು ರೆಕಾರ್ಡ್ ಮಾಡಿ, ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ರಾತ್ರೋರಾತ್ರಿ ಸೆನ್ಸೇಶನ್ ಆದ ರಾನು ಮಂಡಲ್ ಮುಂದೆ ಹಿಮೇಶ್ ರೇಶಮಿಯಾ ಅವರ ಚಲನಚಿತ್ರ ಹ್ಯಾಪಿ ಹಾರ್ಡಿ ಮತ್ತು ಹೀರ್‌ಗಾಗಿ ಹಾಡುಗಳನ್ನೂ ಹಾಡಿದ್ದರು.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.