ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಕಪ್ ಗೆದ್ದು ಇತಿಹಾಸ ಬರೆದ ಮಾಜಿ ಕ್ರಿಕೆಟರ್ ಆಶ್ಲಿ ಬಾರ್ಟಿ
Team Udayavani, Jan 29, 2022, 4:50 PM IST
ಮೆಲ್ಬೋರ್ನ್: ವಿಶ್ವದ ಅಗ್ರ ಶ್ರೇಯಾಂಕದ ಟೆನ್ನಿಸ್ ಆಟಗಾರ್ತಿ, ಆಸೀಸ್ ನ ಆಶ್ಲಿ ಬಾರ್ಟಿ ಅವರು ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಕೂಟವನ್ನು ಜಯಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಅವರು ಅಮೆರಿಕದ ಡೇನಿಯಲ್ ಕಾಲಿನ್ಸ್ ವಿರುದ್ಧ ಜಯ ಸಾಧಿಸಿದರು. ಈ ವಿಜಯದಿಂದ 44 ವರ್ಷಗಳ ಬಳಿಕ ಆಸ್ಟ್ರೇಲಿಯನ್ ಓಪನ್ ಮಹಿಳಾ ಪ್ರಶಸ್ತಿಯನ್ನು ಆಸ್ಟ್ರೇಲಿಯಾದ ಆಟಗಾರ್ತಿ ಗೆದ್ದಂತಾಯಿತು.
1978 ರಲ್ಲಿ ಕ್ರಿಸ್ ಓ’ನೀಲ್ ಮಹಿಳಾ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಬಳಿಕ ಯಾವುದೇ ಆಸೀಸ್ ಆಟಗಾರ್ತಿ ಆಸ್ಟ್ರೇಲಿಯನ್ ಓಪನ್ ಕಪ್ ಗೆದ್ದಿಲ್ಲ.
ಇದು 2019 ರ ಫ್ರೆಂಚ್ ಓಪನ್ ಮತ್ತು 2021 ರ ವಿಂಬಲ್ಡನ್ ಗೆದ್ದಿರುವ ಬಾರ್ಟಿ ಅವರ ಮೂರನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ.
ಇದನ್ನೂ ಓದಿ:ಇಂದು ಅಂಡರ್ 19 ಕ್ವಾರ್ಟರ್ ಫೈನಲ್: ಬಾಂಗ್ಲಾ ವಿರುದ್ಧ ಭಾರತಕ್ಕೆ ಸೇಡಿನ ಪಂದ್ಯ
ರಾಡ್ ಲೇವರ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಆಶ್ಲಿ ಬಾರ್ಟಿ ಅವರು ಅಮೆರಿಕದ ಡೇನಿಯಲ್ ಕಾಲಿನ್ಸ್ ಅವರನ್ನು 6-3 7-6(2) ಸೆಟ್‌ಗಳಿಂದ ಸೋಲಿಸಿ ಮೊದಲ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದರು.
ಮಾಜಿ ಕ್ರಿಕೆಟರ್: 2011ರಲ್ಲಿ ಟೆನಿಸ್ ಆರಂಭಿಸಿದ ಆ್ಯಶ್ಲಿ ಬಾರ್ಟಿ, ಜೂನಿಯರ್ ಮಟ್ಟದಲ್ಲಿ ಯಶಸ್ಸು ಕಾಣದೆ ಕ್ರಿಕೆಟ್‌ನತ್ತ ಒಲವು ತೋರಿದ್ದರು. 2015-16ರ ವನಿತಾ ಬಿಗ್ ಬಾಶ್ ಲೀಗ್‌ನಲ್ಲೂ ಆಡಿದ್ದರು. ಬ್ರಿಸ್ಬೇನ್ ಹೀಟ್ ಪರ ಮೊದಲ ಪಂದ್ಯದಲ್ಲಿ 27 ಎಸೆತಗಳಿಂದ 39 ರನ್ ಬಾರಿಸಿದ ಹೆಗ್ಗಳಿಕೆ ಬಾರ್ಟಿ ಅವರದಾಗಿತ್ತು. 2015ರಲ್ಲಿ ಕ್ವೀನ್ಸ್‌ಲ್ಯಾಂಡ್ ಪರ ಲಿಸ್ಟ್ ಎ ಪಂದ್ಯವನ್ನೂ ಆಡಿದ್ದರು. ಆದರೆ ಮರು ವರ್ಷವೇ ಕ್ರಿಕೆಟ್ ಬಿಟ್ಟು ಮತ್ತೆ ಟೆನಿಸ್ ರ್ಯಾಕೆಟ್ ಹಿಡಿಯತೊಡಗಿದರು. ಮುಂದಿನದು ಇತಿಹಾಸ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.