ರಸಗೊಬ್ಬರ ದರ ಏರಿಕೆ ಖಂಡಿಸಿ ಭತ್ತದ ಗದ್ದೆಯಲ್ಲಿ ಗೊಬ್ಬರದ ಚೀಲವಿಟ್ಟು ರೈತರ ಪ್ರತಿಭಟನೆ
Team Udayavani, Jan 29, 2022, 5:47 PM IST
ಗಂಗಾವತಿ : ಭತ್ತದ ಗದ್ದೆಗಳಲ್ಲಿ ರಸಗೊಬ್ಬರದ ಚೀಲವಿಟ್ಟು ರೈತರು ತಾಲ್ಲೂಕಿನ ಆಜಾದ್ ನರಸಾಪುರದಲ್ಲಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಎಪಿಎಂಸಿ ನಿರ್ದೇಶಕ ರೆಡ್ಡಿ ಮಾತನಾಡಿ,ಕಳೆದ 2 3 ತಿಂಗಳ ಇಂದೆ 50 ಕೆ.ಜಿ. ಪೊಟ್ಯಾಷ್‌ಗೆ 950-1050 ರೂ. ಇದ್ದ ದರ ಇದೀಗ 1,700 ರೂ.ಗೆ ಏರಿಕೆಯಾಗಿದೆ. ಜತೆಗೆ ಮಾರುಕಟ್ಟೆಯಲ್ಲಿ ಕೊರತೆಯೂ ಉಂಟಾಗಿದ್ದು, ಪೊಟ್ಯಾಷ್ ಬಳಸಬೇಕಾಗಿರುವ ಬೆಳೆಗಾರರು ಗೊಬ್ಬರ ಸಿಗದೆ ಕಂಗಾಲಾಗಿದ್ದಾರೆ.ಕಳೆದ ತಿಂಗಳಲ್ಲಿ 50 ಕೆ.ಜಿ. ಪೊಟ್ಯಾಷ್‌ಗೆ 950-1050 ರೂ. ಇತ್ತು. ಅದೀಗ 1,700 ರೂ.ಗೆ ಏರಿಕೆಯಾಗಿದೆ. ಒಂದೆಡೆ ಕೃಷಿ ಇಲಾಖೆಯು ರಸಗೊಬ್ಬರದ ಕೊರತೆಯಿಲ್ಲ ಎನ್ನುತ್ತಿದೆ. ಆದರೆ ಮಾರಾಟಗಾರರು, ‘ಪೊಟ್ಯಾಷ್ ಸ್ಟಾಕ್ ಇಲ್ಲ. ಪೊಟ್ಯಾಷ್ ಮೊದಲಾದ ರಸಗೊಬ್ಬರಗಳ ಬೆಲೆಯಲ್ಲಿ ಶೇ. 30ರಷ್ಟು ದರ ಏರಿಕೆ ಮಾಡಲಾಗಿತ್ತು. ದರ ಏರಿಕೆಯನ್ನು ಸುಧಾರಿಸಿಕೊಳ್ಳುವ ಮುನ್ನವೇ ಪೊಟ್ಯಾಷ್ ದರ ಮತ್ತೆ ಏರಿಕೆ ಮಾಡಲಾಗಿದೆ.”ವರ್ಷಕ್ಕೆ ಎರಡು ಮೂರು ಬಾರಿ ರಸಗೊಬ್ಬರಗಳ ದರ ಹೆಚ್ಚಿಸಿದರೆ ರೈತರು ಏನು ಮಾಡಬೇಕೆಂದು ರೈತ ಮುಖಂಡರು ಪ್ರಶ್ನಿಸುತ್ತಿದ್ದಾರೆ.ಜಿಲ್ಲಾ ಸಚಿವರಾಗಲಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ದಡೇಸೊಗೂರು ಬಸವರಾಜ್ ರೈತರಿಗೆ ಆಗುವ ತೊಂದರೆಗಳ ಬಗ್ಗೆ ಅನ್ಯಾಯದ ಬಗ್ಗೆ ಧ್ವನಿ ಎತ್ತುತ್ತಿಲ್ಲ.ಶಾಸಕರಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಎಂದರು.
ಕೇವಲ ಮುಖ್ಯಮಂತ್ರಿ ಜೊತೆ ಫೋಟೋ ಫೋಸ್ ಮಾತ್ರ ಕೊಡುತ್ತಾರೆ. ರೈತರಿಗಾಗಿ ಉಪಯೋಗವಾಗುವಂತಹ ಉತ್ತಮ ಯೋಜನೆಗಳನ್ನು ನೀಡುವುದರಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ.ಇಂತಹ ಸರ್ಕಾರದಿಂದ ರೈತರು ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ.ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ. ರೈತ ಸಾಯುವ ಸ್ಥಿತಿಯಲ್ಲಿದ್ದಾನೆ ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು.ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಬೇಕು. ರಸಗೊಬ್ಬರ ಬೆಲೆ ಇಳಿಸಬೇಕು. ಒಂದು ವೇಳೆ ರಸಗೊಬ್ಬರ ಬೆಲೆ ಇಳಿಕೆಯಾಗದಿದ್ದರೆ.ಮುಂದಿನ ದಿನದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಈ ವೇಳೆ ರೈತ ಮುಖಂಡರಾದ ತಾಳೂರು ರುದ್ರಪ್ಪ ನರಸಾಪುರ. ದ್ಯಾಮಣ್ಣ ಬರಗೂರು. ವೀರಪ್ಪ ನಾಯಕ್.ಸೋಮಪ್ಪ ನಾಯಕ್. ಹುಲುಗಪ್ಪ ನರಸಾಪುರ.ವೀರೇಶ. ಡಿ ಕೊಂಡಯ್ಯ. ವೈ ಶ್ರೀನಿವಾಸ್. ರಾಜ. ರಾಕೇಶ್. ಶಾಂತಪ್ಪ ಹಾಗೂ ರೈತರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Forest Department: ಇದ್ದಲ್ಲಿಯೇ ಅರಣ್ಯ ಅಪರಾಧಗಳ ದಾಖಲು: “ಗರುಡಾಕ್ಷಿ’ಗೆ ಚಾಲನೆ
Commission: 60 ಪರ್ಸೆಂಟ್ ಕಮಿಷನ್: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.