ಅನಧಿಕೃತ ಲೇಔಟ್ ತೆರವು ಕಾರ್ಯಾಚರಣೆ
ವಿರೋಧ ವ್ಯಕ್ತಪಡಿಸಲು ಮುಂದಾದಾಗ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಿದರು
Team Udayavani, Jan 29, 2022, 5:57 PM IST
ಧಾರವಾಡ: ಹೊಸಯಲ್ಲಾಪುರ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಅನಧಿಕೃತ ಲೇಔಟ್‌ಗಳ ತೆರವು ಕಾರ್ಯಾಚರಣೆಗೆ ಹುಡಾದಿಂದ ಶುಕ್ರವಾರ ಚಾಲನೆ ನೀಡಲಾಯಿತು. ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ನೇತೃತ್ವದ ಹುಡಾ ಅಧಿಕಾರಿಗಳ ತಂಡ ಪೊಲೀಸ್ ಭದ್ರತೆಯಲ್ಲಿ ಜೆಸಿಬಿ ಮೂಲಕ ಅನಧಿಕೃತ ಲೇಔಟ್‌ಗಳನ್ನು ತೆರವುಗೊಳಿತು.
ನಿವೇಶನಗಳಲ್ಲಿ ಅಳವಡಿಸಿದ್ದ ಗುರುತು ಕಲ್ಲು, ರಸ್ತೆ, ಚರಂಡಿ, ವಿದ್ಯುತ್ ಕಂಬ, ಸೇರಿ ಇತರ ಸೌಲಭ್ಯಗಳನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಲಾಯಿತು. ಹುಡಾ ಸರ್ವೇ ಪ್ರಕಾರ ಹೊಸಯಲ್ಲಾಪುರ ವ್ಯಾಪ್ತಿಯಲ್ಲಿ ನವಲಗುಂದಕ್ಕೆ ಹೋಗುವ ಮಾರ್ಗದ ಮಧ್ಯೆ ಒಟ್ಟು 37 ಅನಧಿಕೃತ ಲೇಔಟ್ ಪತ್ತೆಯಾ ಗಿದ್ದು, ಈ ಲೇಔಟ್‌ಗಳ ತೆರವು ಕಾರ್ಯಾಚರಣೆಗೆ ಚಾಲನೆ ನೀಡಲಾಗಿದ್ದು, ಶನಿವಾರವೂ ಕಾರ್ಯಾಚರಣೆ ನಡೆಯಲಿದೆ.
ಕಾರ್ಯಾಚರಣೆಗೆ ಆಕ್ಷೇಪ: ತೆರವು ಕಾರ್ಯದ ಮಾಹಿತಿ ಅರಿತು ಸ್ಥಳಕ್ಕೆ ಆಗಮಿಸಿದ ಲೇಔಟ್ ಮಾಲೀಕರು ಅಧಿ ಕಾರಿಗಳೊಂದಿಗೆ ವಾಗ್ವಾದ ನಡೆಸಿ ತೆರವು ಕಾರ್ಯ ಮಾಡದಂತೆ ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಪಾಲಿಕೆ ಸದಸ್ಯ ಶಂಭುಗೌಡ ಸಾಲಮನಿ, ಹೋರಾಟಗಾರ ಬಸವರಾಜ ಜಾಧವ, ಯಾವುದೇ ಕಾರಣಕ್ಕೆ ತೆರವಿಗೆ ಅವಕಾಶ ನೀಡುವುದಿಲ್ಲ ಎಂದು ಜೆಸಿಬಿ ಎದುರು ನಿಂತು ಪ್ರತಿಭಟನೆಗೆ ಮುಂದಾದರು. ಆದರೆ ಅಧಿಕಾರಿಗಳು ಮಾತ್ರ ಅಕ್ರಮ ತೆರವು ನಿಲ್ಲಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಮಾಲೀಕರು ಹಾಗೂ ಜನರು ತೆರವಿಗೆ ವಿರೋಧ ವ್ಯಕ್ತಪಡಿಸಲು ಮುಂದಾದಾಗ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಿದರು. ಇಷ್ಟಾದರೂ ಮಾಲೀಕರು ಮಾತ್ರ ಜೆಸಿಬಿ ಎದುರು ನಿಂತು ತೆರವು ತಡೆಗೆ ಆಗ್ರಹಿಸಿದರು. ಈ ಎಲ್ಲ ವಿರೋಧಗಳ ಮಧ್ಯೆ ಅಧಿಕಾರಿಗಳು ತೆರವು ಕಾರ್ಯ ನಡೆಸಿದರು. ಹುಡಾ ಸದಸ್ಯರಾದ ಚಂದ್ರಶೇಖರ ಗೋಕಾಕ, ಆಯುಕ್ತ ನಿಂಗಪ್ಪ ಕುಮ್ಮಣ್ಣವರ, ಟಿಪಿಎಂ ವಿವೇಕ ಕಾರೇಕರ, ಬಸವರಾಜ ದೇವಗಿರಿ, ಮುಕುಂದ ಜೋಶಿ ಸೇರಿದಂತೆ ಸಿಬ್ಬಂದಿ ಇದ್ದರು.
ಒಂದೂವರೆ ವರ್ಷದಲ್ಲಿ 177 ಅಕ್ರಮ ಲೇಔಟ್ ತೆರವು
ಕಳೆದ ಒಂದೂವರೆ ವರ್ಷದಿಂದ ಹುಡಾದಿಂದ ಹು-ಧಾ ಅವಳಿನಗರದಲ್ಲಿನ ಅನಧಿಕೃತ ಲೇಔಟ್ ತೆರವು ಕಾರ್ಯಾಚರಣೆ ಸಾಗಿದ್ದು, ಈಗಾಗಲೇ 177 ಅಕ್ರಮ ಲೇಔಟ್ ತೆರವು ಮಾಡಲಾಗಿದೆ. ಇದೀಗ ಮೂರನೇ ಹಂತದ ಸರ್ವೇ ಕಾರ್ಯ ಕೈಗೊಂಡಾಗ 97 ಅನಧಿಕೃತ ಲೇಔಟ್ ಪತ್ತೆಯಾಗಿದ್ದು, ತೆರವುಗೊಳಿಸಲು ನಿರ್ಧರಿಸಿದ್ದೇವೆ. ಈಗ ಹೊಸಯಲ್ಲಾಪುರದಲ್ಲಿ 37 ಅನಧಿಕೃತ ಲೇಔಟ್ ಕಂಡು ಬಂದಿದ್ದು, ತೆರವು ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಿದ್ದು, ಶನಿವಾರವೂ ನಡೆಯಲಿದೆ. ಅನಧಿಕೃತ ಲೇಔಟ್‌ಗಳಿಂದ ಸರಕಾರಕ್ಕೆ ನಷ್ಟ ಉಂಟಾಗುತ್ತಿದ್ದು, ಲೇಔಟ್ ತೆರವು ಬಗ್ಗೆ ಮಾಲೀಕರಿಗೆ ನೋಟಿಸ್ ಕೊಡಲಾಗಿದೆ ಎಂದು ಹುಢಾ ಅಧ್ಯಕ್ಷ ನಾಗೇಶ ಕಲಬುರ್ಗಿ ಸ್ಪಷ್ಟಪಡಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸುಮಾರು 45 ಎಕರೆ ಜಮೀನು ಮಾತ್ರ ಲೇಔಟ್‌ಗೆ ಬರುತ್ತಿದ್ದವು. ಆದರೆ ಬಿಗಿಕ್ರಮ ಕೈಗೊಂಡ ಬಳಿಕ ಕೆಲ ದಿನಗಳ ಹಿಂದೆ ಸುಮಾರು 90 ಎಕರೆ ಜಮೀನು ಬಂದಿದೆ. ಭೂಮಿ ಪರಿವರ್ತನೆಗೆ ಅರ್ಜಿ ಸಲ್ಲಿಸಿದರೆ ಪರಿವರ್ತನೆ ಮಾಡಿಕೊಡಲಾಗುವುದು. ಈ ಕಾರ್ಯಕ್ಕೆ ಕಚೇರಿಗೆ ಬರುವ ಅಗತ್ಯವೂ ಇಲ್ಲ. ಎಲ್ಲವೂ ಆನ್‌ಲೈನ್ ಮೂಲಕವೇ ಇದೆ. ಅನಧಿಕೃತ ಲೇಔಟ್ ಬದಲು ಅಧಿಕೃತ ಲೇಔಟ್ ನಿರ್ಮಾಣ ಮಾಡಿದರೆ ಎಲ್ಲರಿಗೂ ಒಳಿತು.
ನಾಗೇಶ ಕಲಬುರ್ಗಿ, ಹುಡಾ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.