ಸಿಎನ್ಜಿ ಕಿಟ್ ಹಾಕಿಸಿ; ಜೇಬು ಹಗುರಾಗಿಸಿ!
ಕೇಂದ್ರ ಸರ್ಕಾರದಿಂದ ಕರಡು ಮಾರ್ಗಸೂಚಿ ಬಿಡುಗಡೆ
Team Udayavani, Jan 30, 2022, 6:30 AM IST
ನವದೆಹಲಿ: ಪೆಟ್ರೋಲ್ ದರ ಹೆಚ್ಚಾಯಿತು. ಅಯ್ಯೋ ಈ ಹೊಡೆತವನ್ನು ಹೇಗೆ ತಡೆದುಕೊಳ್ಳುವುದು ಎಂಬ ಚಿಂತೆ ಬಿಡಿ. ಕೇಂದ್ರ ಸರ್ಕಾರ ಜನರ ಜೇಬಿನ ಮೇಲಿನ ಹೊರೆ ಇಳಿಸಲು ಮುಂದಾಗಿದೆ.
1,500 ಸಿಸಿ ವರೆಗಿನ ವಾಹನಗಳಿಗೆ ಸಿಎನ್ಜಿ ಕಿಟ್ ಹಾಕುವ ಸೌಲಭ್ಯ ನೀಡಲು ಮುಂದಾ ಗಿದೆ. ಕೇಂದ್ರ ಸರ್ಕಾರ ಹೊರಡಿಸಿದ ಕರಡು ನಿಯಮಗಳ ಪ್ರಕಾರ ಮುಂದಿನ ದಿನಗಳಲ್ಲಿ ಬಿಎಸ್-6 ಪರಿಸರ ಮಾಲಿನ್ಯ ನಿಯಂತ್ರಣ ವ್ಯವಸ್ಥೆ ಹೊಂದಿರುವ ಪೆಟ್ರೋಲ್ ಕಾರುಗಳಲ್ಲಿ ಸಿಎನ್ಜಿ ಕಿಟ್ ಅಳವಡಿಸಬಹುದು. ಇದರಿಂದಾಗಿ ಪೆಟ್ರೋಲ್ ಮೇಲಿನ ವೆಚ್ಚವನ್ನು ಶೇ.40ರಿಂದ ಶೇ.50ರಷ್ಟು ತಗ್ಗಿಸಲು ಅವಕಾಶ ಇದೆ. ಸದ್ಯದ ನಿಯಮಗಳ ಪ್ರಕಾರ ಬಿಎಸ್-4 ಮಾದರಿಯ ಪರಿಸರ ಮಾಲಿನ್ಯ ನಿಯಂತ್ರಣ ವ್ಯವಸ್ಥೆ ಹೊಂದಿರುವ ಕಾರುಗಳಿಗೆ ಸಿಎನ್ಜಿ ಕಿಟ್ ಅಳವಡಿಸಲು ಕಾನೂನಿನ ಅನ್ವಯ ಅವಕಾಶ ಉಂಟು.
ಕರಡು ನಿಯಮಗಳನ್ನು ಸಮರ್ಥಿಸಿಕೊಂಡ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು “ಈ ಕ್ರಮದಿಂದ ಪೆಟ್ರೋಲ್ಗೆ ಹಾಕುವ ವೆಚ್ಚದ ಪ್ರಮಾಣ ಕಡಿಮೆಯಾಗಲಿದೆ. ಸಿಎನ್ಜಿ ಹೆಚ್ಚು ಪರಿಸರ ಸ್ನೇಹಿ ಇಂಧನ. 1,500 ಸಿ.ಸಿ. ವರೆಗಿನ ಸಾಮರ್ಥ್ಯದ ಕಾರುಗಳು ಮತ್ತು ಈ ವ್ಯಾಪ್ತಿಯಲ್ಲಿ ಬರುವ ಕೆಲವು ಎಸ್ಯುವಿಗಳಿಗೂ ಇದರಿಂದ ಅನುಕೂಲವಾಗಲಿದೆ’ ಎಂದು ಹೇಳಿದ್ದಾರೆ.
ಲಾಭ ಲೆಕ್ಕಾಚಾರ
50 ಸಾವಿರ ರೂ. – ಸಿಎನ್ಜಿ ಕಿಟ್ ಅಳವಡಿಕೆ ವೆಚ್ಚ
3 ವರ್ಷ- ಒಮ್ಮೆ ಸಿಎನ್ಜಿ ಕಿಟ್ ಅಳವಡಿಸಿದ ಬಳಿಕ ನವೀಕರಣ
ಅನುಕೂಲ ಹೇಗೆ?
– ಸದ್ಯ ಪ್ರತಿ ಕೆಜಿ ಸಿಎನ್ಜಿ ಗೆ ಬೆಂಗಳೂರಿನಲ್ಲಿ 55 ರೂ.
– ಪೆಟ್ರೋಲ್ಗೆ ಹೋಲಿಕೆ ಮಾಡಿದರೆ ಅರ್ಧದಷ್ಟು ಕಡಿಮೆ
– ಪೆಟ್ರೋಲ್ ವೆಚ್ಚಕ್ಕೆ ಬೇಕಾಗುವಷ್ಟು ಮೊತ್ತ ಸಿಎನ್ಜಿಗೆ ಬೇಡ
– ಕಿಟ್ ಅಳವಡಿಸಿದ ವೆಚ್ಚ ವಾಹನ ಮಾಲೀಕರಿಗೆ ಶೀಘ್ರವೇ ವಾಪಸ್
– ಪರಿಸರ ಮಾಲಿನ್ಯವೂ ಕಡಿಮೆಯಾಗುವ ಸಾಧ್ಯತೆ
– ಪ್ರತಿ ಕೆಜಿ ಸಿಎನ್ಜಿಗೆ ಸರಾಸರಿ 30 ಕಿ.ಮೀ. ಮೈಲೇಜ್
ಅನಾನುಕೂಲಗಳೇನು?
– ಎಲ್ಲಾ ಕಡೆಗಳಲ್ಲಿ ಸಿಎನ್ಜಿ ಬಂಕ್ಗಳು ಇಲ್ಲ
– ಸಿಎನ್ಜಿ ಕಿಟ್ ಹಾಕಿದ ಮೇಲೆ ಕಾರಿನ ಲಗೇಜ್ ಇಡುವ ಸ್ಥಳದ ಕಡಿತ
– ಸಿಎನ್ಜಿ ಟ್ಯಾಂಕ್ನ ಸಾಮ ರ್ಥ್ಯವೂ ಕಡಿಮೆ
– ಕಾಲ ಕಾಲಕ್ಕೆ ಸಿಎನ್ಜಿ ಕಿಟ್ ಅನ್ನು ಪರೀಕ್ಷಿಸಬಹುದಾದ ಅನಿವಾರ್ಯತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ
Assembly Election: ಮಹಾರಾಷ್ಟ್ರಕ್ಕೆ ಫಡ್ನವೀಸ್ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ
Maha Election: ಡಿಕೆಶಿ ಸೇರಿ ಕಾಂಗ್ರೆಸ್ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.