ಗ್ರಾಪಂ ಸ್ವಚ್ಛತಾ ಕಾರ್ಯಕ್ಕೆ ಜನಮೆಚ್ಚುಗೆ


Team Udayavani, Jan 30, 2022, 3:26 PM IST

Untitled-1

ಹಳೇಬೀಡು: ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಗ್ರಾಪಂನಿಂದ ಜಾನುವಾರುಗಳ ನೀರಿನ ಟ್ಯಾಂಕ್‌ ಸ್ವಚ್ಛ ಗೊಳಿಸುವ ಅಭಿಯಾನಕ್ಕೆ ಪಿಡಿಒ ರವಿಕುಮಾರ್‌ ಚಾಲನೆ ನೀಡಿದ್ದು, ಗ್ರಾಪಂ ಸ್ವಚ್ಛತಾ ಕಾರ್ಯಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಸಮೀಪದ ಬಸ್ತಿಹಳ್ಳಿ ಮುಖ್ಯ ರಸ್ತೆಯಲ್ಲಿರುವ ನೀರಿನ ಟ್ಯಾಂಕ್‌ (ನೀರಿನ ತೊಟ್ಟಿ), ಅಂಬೇಡ್ಕರ್‌ ಕಾಲೋನಿ, ಚೀಲನಾಯ್ಕನ ಹಳ್ಳಿ, ಜೋಡಿತಿಪ್ಪನಹಳ್ಳಿ , ಹಳೇಬೀಡಿನ ಹೊಯ್ಸಳ ಬಡಾವಣೆ,ಬೇಲೂರು ಮುಖ್ಯ ರಸ್ತೆ ಸೇರಿದಂತೆ ಸುಮಾರು 35ಕ್ಕೂ ಹೆಚ್ಚು ನೀರಿನ ತೊಟ್ಟಿ ಸ್ವಚ್ಛಗೊಳಿಸುವ ಕಾರ್ಯವನ್ನು ಗ್ರಾಪಂನಿಂದ ಮಾಡಲಾಗುತ್ತಿದೆ.

ನೀರುಗಂಟಿಗಳಿಗೆ ಹೊಣೆಗಾರಿಗೆ: ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕಟ್ಟಿಸಲಾಗಿರುವ ನೀರಿನ ತೊಟ್ಟಿಗಳನ್ನು ಸ್ವಚ್ಛಗೊಳಿಸದೇ ಪಾಚಿ ಬೆಳೆದು ಕಲುಷಿತಗೊಂಡಿದ್ದ ನೀರಿನ ಟ್ಯಾಂಕ್‌ಗಳನ್ನು ಗುರುತಿಸಿ, ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಪ್ರತಿ ಗ್ರಾಮದ ನೀರುಗಂಟಿಗಳು ತಮ್ಮ ತಮ್ಮ ಹಳ್ಳಿಗಳಲ್ಲಿನ ಕುಡಿಯುವ ನೀರಿನ ಟ್ಯಾಂಕ್‌ಗಳಿಗೆ ಬ್ಲೀಚಿಂಗ್‌ ಪೌಡರ್‌, ಸೋಪು, ಪೆನಾಯಿಲ್‌, ಸ್ಯಾನಿಟೈಸರ್‌ ಸಿಂಪಡಿಸಿ ನೀರಿನ ಟ್ಯಾಂಕ್‌ ಒಳಭಾಗವನ್ನು ಸಂಪೂರ್ಣಸ್ವಚ್ಛಗೊಳಿಸಿ ಗ್ರಾಮಗಳ ಜಾನುವಾರುಗಳಿಗೆ ಶುದ್ಧ ಕುಡಿಯುವ ನೀರಿನವ್ಯವಸ್ಥೆ ಕಲ್ಪಿಸಿಕೊಡಲು ಗ್ರಾಪಂ ಅಭಿವೃದ್ಧಿ ಅಧಿಕಾರಿ ಕ್ರಮ ತೆಗೆದುಕೊಂಡಿದ್ದು, ಅದರಂತೆ ತೊಟ್ಟಿಗಳನ್ನು ಸ್ವಚ್ಛ ಮಾಡಲಾಗುತ್ತಿದೆ.

ಜನರ ಮೆಚ್ಚುಗೆ: ವಿಶೇಷವಾಗಿ ಬೇಸಿಗೆ ಆರಂಭವಾಗಿರುವ ಕಾರಣ ಬಿಸಿಲ ಬೇಗೆ ಹೆಚ್ಚಿರುವುದರಿಂದ ಜಾನುವಾರುಗಳೂ ಸೇರಿದಂತೆ ಇನ್ನಿತರ ಪ್ರಾಣಿ- ಪಕ್ಷಿಗಳಿಗೆ ಬೇಸಿಗೆಯ ನೀರಿನ ದಾಹ ತಪ್ಪಿಸಲು ಜಾನುವಾರುಗಳ ನೀರಿನ ತೊಟ್ಟಿಗಳಿಗೆ ಬಣ್ಣಸುಣ್ಣ ಮಾಡಿಸುವ ಮೂಲಕ ಸ್ವಚ್ಛತೆ ಕಾಪಾಡಿ, ಶುದ್ಧ ಕುಡಿಯುವ ನೀರನ್ನು ಜನಜಾನುವಾರಗಳಿಗೆ ಕಲ್ಪಿಸುವ ಕಾರ್ಯವನ್ನು ಹಳೇಬೀಡಿನ ಗ್ರಾಪಂ ವತಿಯಿಂದ ಪ್ರತಿ ಗ್ರಾಮಗಳಲ್ಲಿ ಮಾಡುತ್ತಿರುವ ಕಾರ್ಯ ಜನ ಸಾಮಾನ್ಯರ ಮೆಚ್ಚುಗೆ ಕಾರಣವಾಗಿದೆ.

ಜಿಲ್ಲಾ ಸಿಇಒ ಪ್ರಶಂಸೆ: ಹಳೇಬೀಡು ಗ್ರಾಪಂ ಬೇಲೂರು ತಾಲೂಕಿನಲ್ಲಿಯೇ ಅತ್ಯಂತ ದೊಡ್ಡ ಪಂಚಾಯಿತಿ ಜತೆಗೆ ವಿಶ್ವ ಪ್ರಸಿದ್ಧಸ್ಥಳ ಹೊಂದಿರುವ ತಾಣ. ಈ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಕರ್ತವ್ಯ. ಹಾಸನ ಜಿಲ್ಲಾ ಕಾರ್ಯನಿರ್ವಾಹಣ ಅಧಿಕಾರಿಗಳ ಆದೇಶದ ಮೇರೆಗೆ ಹಾಸನ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಅದರಂತೆ ಗ್ರಾಪಂಗಳ ಆವರಣ ಸ್ವಚ್ಛತೆ, ಸುತ್ತಮುತ್ತಲಿನ ಪರಿಸರ ಸ್ವಚ್ಛಗೊಳಿಸುವುದು, ಬಡಾವಣೆಗಳ ಸ್ವಚ್ಛತಾ ಕಾರ್ಯ ವಿಶೇಷವಾಗಿ ಜನ ಮತ್ತು ಜಾನುವಾರುಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಕಲ್ಪಿಸುವುದು. ಈ ನಿಟ್ಟಿನಲ್ಲಿ ಹಳೇಬೀಡು ಗ್ರಾಪಂ ಎಲ್ಲಾ ರೀತಿಯ ಕ್ರಮ ಕೈಗೊಂಡು ಮಾದರಿ ಗ್ರಾಪಂ ಎನಿಸಿಕೊಂಡಿದೆ. ಈ ರೀತಿಯ ಕಾರ್ಯಮಾಡಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್‌ ಹಾಗೂಗ್ರಾಪಂ ಪದಾಧಿಕಾರಿಗಳು, ಸಿಬ್ಬಂದಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದುಜಿಲ್ಲಾ ಕಾರ್ಯನಿರ್ವಾಹಣ ಅಧಿಕಾರಿ ಕಾಂತರಾಜ್‌ ತಿಳಿಸಿದ್ದಾರೆ.

ತೊಟ್ಟಿ ಒಳಭಾಗದಲ್ಲಿ ಗ್ರಾಪಂ ನಾಮಫ‌ಲಕ :

ಹಳೇಬೀಡು ಗ್ರಾಪಂ ವ್ಯಾಪ್ತಿಯ ಎಲ್ಲಾ ನೀರಿನ ತೊಟ್ಟಿಗಳನ್ನು ಪಟ್ಟಿ ಮಾಡಿಸಿ, ಸುಮಾರು 35ಕ್ಕೂ ತೊಟ್ಟಿಗಳನ್ನು ಗುರುತಿಸಿ, ಅವುಗಳನ್ನು ಸ್ವಚ್ಛ ಮಾಡುವ ಕಾರ್ಯ ಮಾಡುತ್ತಿದ್ದೇವೆ. ಒಂದೊಂದು ತೊಟ್ಟಿಗಳನ್ನು ಸ್ವಚ್ಛಗೊಳಿಸಿ, ಸುಣ್ಣ ಮತ್ತು ಬಣ್ಣ ಹಾಕಿ ತೊಟ್ಟಿ ಒಳಭಾಗದಲ್ಲಿ ಗ್ರಾಪಂ ನಾಮಫ‌ಲಕ ಹಾಕಿಸಲಾಗಿದೆ. ಜನರು ಈ ತೊಟ್ಟಿಗಳನ್ನು ಸ್ವಚ್ಛವಾಗಿ ಇಟ್ಟುಕೊವಂತೆ ನಿರ್ದೇಶನ ಮಾಡಿದ್ದು, ಜನರು ಅದನ್ನು ಸ್ವಚ್ಛವಾಗಿಟ್ಟುಕೊಂಡು ಜಾನುವಾರುಗಳಿಗೆ ಶುದ್ಧ ನೀರು ಕಲ್ಪಿಸಿದರೆ,ನಾವು ಮಾಡಿದ ಕಾರ್ಯ ಸಾರ್ಥಕವಾಗುತ್ತದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್‌ ತಿಳಿಸಿದ್ದಾರೆ.

ಬೇಲೂರು ತಾಲೂಕಿನಲ್ಲೇ ಹಳೇಬೀಡು ಸ್ವಚ್ಛತೆಯಲ್ಲಿ ಮಾದರಿ ಗ್ರಾಪಂ ಆಗಿರುವುದ ಸಂತೋಷದ ಸಂಗತಿ. ಮುಂದಿನ ದಿನಗಳಲ್ಲಿ ಪ್ರತಿ ಬಡಾವಣೆಗಳ ಸ್ವಚ್ಛತೆಗೆ ದಿನಾಂಕ ನಿಗದಿ ಮಾಡಿಕೊಂಡು ರಸ್ತೆ, ಚರಂಡಿ ಸ್ವಚ್ಛತೆಯನ್ನು ಆಯಾ ವಾರ್ಡ್‌ಗಳಸದಸ್ಯರ ನೇತೃತ್ವದಲ್ಲಿ ಕಾರ್ಯರೂಪಕ್ಕೆ ತರಲಾಗುವುದು. ಗೀತಾ ಅರುಣ್‌, ಗ್ರಾಪಂ ಅಧ್ಯಕ್ಷೆ, ಹಳೇಬೀಡು

ಟಾಪ್ ನ್ಯೂಸ್

Kodagu-SP

Madikeri: ಅರೆಸುಟ್ಟ ಮೃತದೇಹ ಪ್ರಕರಣ: ಹಣಕ್ಕಾಗಿ ಸಂಚು ರೂಪಿಸಿ ಪತಿಯ ಹತ್ಯೆಗೈದ ಪತ್ನಿ!

1-shabari

Sabarimala;ಯಾತ್ರಾರ್ಥಿಗಳು ವಿಮಾನ ಕ್ಯಾಬಿನ್ ಬ್ಯಾಗೇಜ್‌ನಲ್ಲಿ ತೆಂಗಿನಕಾಯಿ ಒಯ್ಯಬಹುದು

1-isreel

India ನಮ್ಮ ಆತ್ಮರಕ್ಷಣೆ ಹಕ್ಕನ್ನು ಬೆಂಬಲಿಸಿದೆ: ಇಸ್ರೇಲ್ ರಾಯಭಾರಿ ರುವೆನ್ ಅಜರ್

1-hockey

Sultan of Johor Cup men’s hockey: ನ್ಯೂಜಿಲ್ಯಾಂಡ್ ಗೆ ಸೋಲುಣಿಸಿ ಕಂಚು ಗೆದ್ದ ಭಾರತ

1-aree

Deepavali; ಹಸುರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶ: ಸಿಎಂ ಸಿದ್ದರಾಮಯ್ಯ

Jio-Bharath

Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!

DK SHI NEW

Bengaluru; ಅನಧಿಕೃತ ಕಟ್ಟಡಗಳೆಲ್ಲ ನೆಲಸಮ ಮಾಡುತ್ತೇವೆ: ಡಿಸಿಎಂ ಡಿ.ಕೆ.ಶಿವಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ

Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ

Hassan: ಹಾಸನಾಂಬೆ ದರ್ಶನ ಆರಂಭ: ದೇವಿಯ ಪವಾಡಕ್ಕೆ ಭಕ್ತರು ಪರವಶ

Hassan: ಹಾಸನಾಂಬೆ ದರ್ಶನ ಆರಂಭ: ದೇವಿಯ ಪವಾಡಕ್ಕೆ ಭಕ್ತರು ಪರವಶ

ಹಾಸನದಲ್ಲೂ ಮೂವರು ಬಾಂಗ್ಲಾ ವಲಸಿಗರ ಬಂಧನ

Hassan: ಮೂವರು ಬಾಂಗ್ಲಾ ವಲಸಿಗರ ಬಂಧನ

Hassan: ಎಂಪಿ ಮತದಾನಕ್ಕೆ ಕಾಂಗ್ರೆಸ್‌ನಿಂದ 65 ಕೋಟಿ ರೂ. ಖರ್ಚು: ದೇವರಾಜೇಗೌಡ

Hassan: ಎಂಪಿ ಮತದಾನಕ್ಕೆ ಕಾಂಗ್ರೆಸ್‌ನಿಂದ 65 ಕೋಟಿ ರೂ. ಖರ್ಚು: ದೇವರಾಜೇಗೌಡ

Sakleshpura: ವಿದ್ಯುತ್‌ ತಂತಿ ತಗಲಿ ಕಾಡಾನೆ ಸಾವು

Sakleshpura: ವಿದ್ಯುತ್‌ ತಂತಿ ತಗಲಿ ಕಾಡಾನೆ ಸಾವು

MUST WATCH

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Pro Kabaddi: ಮುಂಬಾ-ಬೆಂಗಾಲ್‌ ರೋಚಕ ಟೈ

Pro Kabaddi: ಮುಂಬಾ-ಬೆಂಗಾಲ್‌ ರೋಚಕ ಟೈ

14

Ranji Trophy: ಕರ್ನಾಟಕದ ಬೌಲಿಂಗ್‌ ದಾಳಿಗೆ ಬಿಹಾರ ತತ್ತರ

jenu nona

Belgavi; ಅರಣ್ಯಾಧಿಕಾರಿ, ಸಿಬಂದಿ ಮೇಲೆ ಜೇನು ನೊಣಗಳ ದಾಳಿ

Kodagu-SP

Madikeri: ಅರೆಸುಟ್ಟ ಮೃತದೇಹ ಪ್ರಕರಣ: ಹಣಕ್ಕಾಗಿ ಸಂಚು ರೂಪಿಸಿ ಪತಿಯ ಹತ್ಯೆಗೈದ ಪತ್ನಿ!

1-shabari

Sabarimala;ಯಾತ್ರಾರ್ಥಿಗಳು ವಿಮಾನ ಕ್ಯಾಬಿನ್ ಬ್ಯಾಗೇಜ್‌ನಲ್ಲಿ ತೆಂಗಿನಕಾಯಿ ಒಯ್ಯಬಹುದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.