ಪಂಜಾಬ್ ವಿಧಾನಸಭಾ ಚುನಾವಣೆ: ಕಾಮಿಡಿ ಸರದಾರರ ಸಮರ
Team Udayavani, Jan 31, 2022, 6:45 AM IST
ಕಾಮಿಡಿ ಮತ್ತು ರಾಜಕೀಯ. ಎರಡೂ ವೈರುಧ್ಯಗಳು. ಆದರೆ ಈ ಬಾರಿಯ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಮಿಡಿಯ ಜಲಕ್ ಜೊತೆ ರಾಜಕೀಯದ ಮೆರುಗು ಸೇರಿದೆ. ಅದಕ್ಕೆ ಕಾರಣ ಅಲ್ಲಿನ ಎರಡು ಪ್ರಮುಖ ಪಕ್ಷಗಳ ನಾಯ ಕರು. ಅರವಿಂದ್ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷದ ಪಂಜಾಬ್ ಮುಖ್ಯ ಮಂತ್ರಿ ಅಭ್ಯರ್ಥಿ ಭಗವಂತ್ ಮನ್ ಎಂದು ಘೋಷಿಸಿದ್ದರೆ, ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ತಮಗೇ ಮುಖ್ಯಮಂತ್ರಿ ಸ್ಥಾನ ಒಲಿಯುತ್ತದೆ ಎನ್ನುವ ನಂಬಿಕೆಯಲ್ಲಿದ್ದಾರೆ. ವಿಶೇಷವೆಂದರೆ ಈ ಇಬ್ಬರೂ ಅಭ್ಯರ್ಥಿಗಳು ರಾಜಕೀಯಕ್ಕೂ ಮೊದಲು ಹಾಸ್ಯ ಕ್ಷೇತ್ರದಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡವರು.
48 ವರ್ಷದ ಭಗವಂತ್ ಮನ್ ತಮ್ಮ ಕಾಲೇಜು ಜೀವನದಿಂದಲೇ ಹಾಸ್ಯ ಮಾಡಿ ಕೊಂಡು ಬಂದವರು. ಸಣ್ಣ ಪುಟ್ಟ ಟಿವಿ ಕಾರ್ಯ ಕ್ರಮಗಳನ್ನು ಮಾಡಿಕೊಂಡು ಬಂದಿದ್ದ ಅವರು ಹೆಚ್ಚು ಜನರಿಗೆ ತಲುಪಲು ಸಾಧ್ಯ ಮಾಡಿಸಿ ಕೊಟ್ಟಿದ್ದು 2006ರಲ್ಲಿ ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಬಂದ ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ ಕಾರ್ಯಕ್ರಮ. ಅಲ್ಲಿ ಮನ್ ಒಬ್ಬ ಸ್ಪರ್ಧಿ. ಕುತೂಹಲಕಾರಿ ಅಂಶವೆಂದರೆ ಆ ಕಾರ್ಯಕ್ರಮದ ತೀರ್ಪುಗಾರರ ಸ್ಥಾನದಲ್ಲಿದ್ದಿದ್ದು ಈಗ ಮನ್‌ಗೆ ವಿರೋಧವಾಗಿ ಸ್ಪರ್ಧಿಸುತ್ತಿರುವ ನವಜೋತ್ ಅವರೇ.
2011ರಲ್ಲಿ ಪೀಪಲ್ಸ್ ಪಾರ್ಟಿ ಆಫ್ ಪಂಜಾಬ್ ಮೂಲಕ ರಾಜಕೀಯ ರಂಗಕ್ಕೆ ಬಂದ ಮನ್ 2014ರಲ್ಲಿ ಎಎಪಿ ಸೇರಿಕೊಂಡರು. ಅದೇ ವರ್ಷ ಸಂಗ್ರೂರು ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ನಿಂತು 2 ಲಕ್ಷಕ್ಕೂ ಅಧಿಕ ಮತಗಳ ಅಂತರದೊಂದಿಗೆ ಜಯಭೇರಿ ಬಾರಿಸಿದರು. 2017ರ ವಿಧಾನ ಸಭಾ ಚುನಾವಣೆಯಲ್ಲಿ ಜಲಾಲಾಬಾದ್ ಕ್ಷೇತ್ರ ದಿಂದ ಸ್ಪರ್ಧಿಸಿದರಾರದೂ 18,500 ಮತ ಗಳಿಂದ ಸೋತಿದ್ದಾರೆ. ಮನ್ ತೆರೆ ಮೇಲೆ ಮಾತ್ರ ವಲ್ಲದೆ ತೆರೆಯಿಂದ ಹೊರಗೂ ಕಾಮಿಡಿ ಯನ್ ಆಗಿದ್ದರು ಎನ್ನುವ ಆರೋಪವಿದೆ. ಮನ್ ಎಲ್ಲ ರಾಜಕೀಯ ಕಾರ್ಯಕ್ರಮಗಳಿಗೂ ಕಂಠಪೂರ್ತಿ ಕುಡಿದು ಬರುತ್ತಿದ್ದರು ಎನ್ನುವ ದೂರಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಅವರು ತೇಲಾಡುವ ಕೆಲ ವಿಡಿಯೋಗಳು ವೈರಲ್ ಆಗಿದ್ದವು ಕೂಡ. ಅವರ ವಿರುದ್ಧ ಡ್ರಗ್ಸ್ ಆರೋಪವೂ ಕೇಳಿಬಂದಿತ್ತು. 2019ರಲ್ಲಿ ಸಾರ್ವಜನಿಕ ರ್ಯಾಲಿಯೊಂದರಲ್ಲಿ, ಅರವಿಂದ್ ಕೇಜ್ರಿವಾಲ್ ಅವರ ಎದುರೇ ಮನ್ ಅವರು ಮದ್ಯಪಾನ ತ್ಯಜಿಸುವುದಾಗಿ ಪ್ರಮಾಣ ಮಾಡಿದ್ದಾರೆ. ಅದಾದ ಮೇಲೂ ಹಲವು ಬಾರಿ ಪ್ರಮಾಣ ಮುರಿದಿದ್ದಾರೆ ಎನ್ನುವುದು ಬಿಜೆಪಿ ಆರೋಪ. ಆದರೆ ಮನ್ ಅವರ ಸರಳತೆ, ದೊಡ್ಡ ನಾಯಕರ ತಪ್ಪನ್ನೂ ಹೊರಗೆಳೆವ ನೇರ ಮಾತುಗಳಿಂದ ಅವರು ಪಂಜಾಬ್‌ನ ಜನರಿಗೆ ಹತ್ತಿರವಾಗಿರುವದಂತೂ ಸುಳ್ಳಲ್ಲ.
ನವಜೋತ್ ಸಿಧು ಅಪ್ಪಟ ಮಾತುಗಾರ. ಅವರು ನೇರ ಕಾಮಿಡಿಯನ್ ಅಲ್ಲದಿದ್ದರೂ, ಅವರ ಹ್ಯೂಮರ್, ಕಾಮಿಡಿ ಸೆನ್ಸ್‌ಗೆ ನಗು ಬರದೇ ಇರದು. ಕ್ರಿಕೆಟ್ ಆಟಗಾರನಾಗಿ ಸಿಕ್ಸರ್ ಸಿಧು ಎಂದು ಫೇಮಸ್ ಆಗಿದ್ದ ಅವರು, ನಂತರ ಕ್ರಿಕೆಟ್ ಕಾಮೆಂಟರಿಯಲ್ಲೂ ನಗುವಿನ ಚಟಾಕಿ ಹಾರಿಸುತ್ತಿದ್ದನ್ನು ಮರೆಯುವಂತಿಲ್ಲ. ಕಾಮಿಡಿ ನೈಟ್ಸ್ ವಿತ್ ಕಪಿಲ್, ದಿ ಕಪಿಲ್ ವರ್ಮಾ ಷೋ ಮೂಲಕ ಪ್ರತಿ ಮನೆಯ ಮಾತಾದವರು ಅವರು. ಪ್ರತಿ ಮಾತಿನಲ್ಲೂ ಹಾಸ್ಯ ಸೇರಿಸುವ ಕಲೆ ಗೊತ್ತಿರುವ ಅವರಿಗೆ ರಾಜಕೀಯ ವಿಚಾರದಲ್ಲೂ ಅಷ್ಟೇ ಚಾಕಚಕ್ಯತೆಯಿದೆ. 2004ರಲ್ಲಿ ಬಿಜೆಪಿ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟ ಅವರು ಇದೀಗ ಪಂಜಾಬ್ ಕಾಂಗ್ರೆಸ್‌ನ ಅಧ್ಯಕ್ಷ. ಮೂರು ಬಾರಿ ಸಂಸದರಾದ ಅವರು ಒಮ್ಮೆ ವಿಧಾನಸಭಾ ಚುನಾವಣೆಯಲ್ಲೂ ಗೆದ್ದು ಸಚಿವರಾಗಿದ್ದರು.
ಸದ್ಯ ಕಾಂಗ್ರೆಸ್ ಇನ್ನೂ ಪಂಜಾಬ್‌ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿ ಸಿಲ್ಲ. ಈಗಿನ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಛನ್ನಿ ಮತ್ತು ನವಜೋತ್ ಸಿಂಗ್ ಸಿಧು ಇಬ್ಬರೂ ಸಿಎಂ ರೇಸ್‌ನಲ್ಲಿರುವವರೇ. ಸಿಧುವನ್ನು ಎದುರಾಕಿಕೊಂಡ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಈಗಾಗಲೇ ಪಕ್ಷ ತ್ಯಜಿಸಿ ಬೇರೆ ಪಕ್ಷ ರಚಿಸಿ, ಬಿಜೆಪಿಯ ಕಮಲ ಹಿಡಿದಿರುವುದು ಗೊತ್ತಿರುವ ವಿಚಾರವೇ. ಹಾಗಾಗಿ ಸಿಧು ಅನ್ನು ಎದುರಾಕಿ ಕೊಂಡು ಬೇರೆಯವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವುದು ಹೈಕ ಮಾಂಡ್‌ಗೂ ಕಷ್ಟವಾಗಬಹುದು. ಹಾಗಾದರೆ ಸಿಧುವೇ ಸಿಎಂ ಕ್ಯಾಂಡಿಡೇಟ್ ಆದರೂ ಆಗಬಹುದು.
ಒಟ್ಟಿನಲ್ಲಿ ಇಬ್ಬರು ಕಾಮಿಡಿಯನ್ ಪಂಜಾಬ್‌ನ ಬಹುದೊಡ್ಡ ಜವಾಬ್ದಾರಿಗಾಗಿ ಸೆಣಸಾಟ ಆರಂಭಿಸಿದ್ದಾರೆ. ಅವರಿಬ್ಬರಲ್ಲಿ ಯಾರ ದಾರೂ ಒಬ್ಬರ ಕೈಗೆ ಅಧಿಕಾರದ ಚುಕ್ಕಾಣಿ ಸಿಗುತ್ತದೆಯೋ ಅಥವಾ ಬಿಜೆಪಿಯ ಕಮಲ ಅರಳುತ್ತದೆಯೋ ಎನ್ನುವ ಕುತೂಹಲ ರಾಜ್ಯದ ಜೊತೆ ಪೂರ್ತಿ ರಾಷ್ಟ್ರದ ಜನರದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.