ಕರಾವಳಿಯಲ್ಲಿ ಗರಿಗೆದರಿದ ಕಲಾ ಚಟುವಟಿಕೆ; ಕೋವಿಡ್ ವಿಧಿಸಲಾಗಿದ್ದ ನಿರ್ಬಂಧಗಳೆಲ್ಲ ತೆರವು
Team Udayavani, Jan 31, 2022, 7:10 AM IST
ಉಡುಪಿ: ರಾಜ್ಯ ಸರಕಾರ ರಾತ್ರಿ ಕರ್ಫ್ಯೂ ಸೇರಿದಂತೆ ವಿವಿಧ ನಿರ್ಬಂಧಗಳನ್ನು ಸಡಿಲಿಸಿದ ಕಾರಣ ಕರಾವಳಿ ಜಿಲ್ಲೆಗಳ ಬಹುತೇಕ ಮಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ವರ್ಷಾರಂಭ, ವಿವಿಧ ಸೀಸನ್‌ಗಳು ಇರುವ ಈ ಸಂದರ್ಭದಲ್ಲಿ ಕರ್ಫ್ಯೂ, ಲಾಕ್‌ಡೌನ್ ವಿಧಿಸಿದರೆ ಜನಸಾಮಾನ್ಯರ ಆದಾಯಕ್ಕೆ ಬಹುದೊಡ್ಡ ಹೊಡೆತ ಬೀಳುತ್ತದೆ. ಈ ಬಗ್ಗೆ ಸರಕಾರಕ್ಕೂ ಹಲವಾರು ಬಾರಿ ಮನವಿ ಸಲ್ಲಿಸಲಾಗಿತ್ತು.
ಕರಾವಳಿಯಲ್ಲಿ ಈ ಸಮಯದಲ್ಲಿ ಮುಖ್ಯವಾಗಿ ನೇಮ, ಯಕ್ಷಗಾನ, ದೈವಾ ರಾಧನೆ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯುವುದು ವಾಡಿಕೆ. ಕಳೆದ 2 ವರ್ಷಗಳಿಂದ ಸರಿಯಾಗಿ ಯಾವುದನ್ನೂ ನೆರವೇರಿಸಲಾಗದೆ ಜನರು ಆತಂಕದಲ್ಲಿದ್ದರು. ಈಗ ಎಲ್ಲ ಆಚರಣೆ ನಡೆಸಲು ಸರಕಾರ ಅಧಿಕೃತ ಅನುಮತಿ ನೀಡಿರುವು ದರಿಂದ ಸಂತಸಗೊಂಡಿದ್ದಾರೆ.
ಸಾಮಾನ್ಯ ದಿನಗಳಲ್ಲಿ ರಾತ್ರಿವೇಳೆ ಪ್ರಾರಂಭವಾಗುತ್ತಿದ್ದ ಯಕ್ಷಗಾನ ರಾತ್ರಿ ಕರ್ಫ್ಯೂ ಸಂದರ್ಭ ಅಪರಾಹ್ನದ ಬಳಿಕ ಆರಂಭಗೊಳ್ಳುತ್ತಿತ್ತು. ಇದರಿಂದ ಪ್ರೇಕ್ಷಕರ ಸಂಖ್ಯೆಯೂ ವಿಪರೀತ ಇಳಿಕೆ ಕಂಡಿತ್ತು. ರಾತ್ರಿ 10ರ ಮೊದಲು ಮುಗಿಸಬೇಕಾದ ಒತ್ತಡ ದಿಂದ ಈಗ ಮುಕ್ತಿ ಸಿಕ್ಕಿದೆ ಎಂದಿದ್ದಾರೆ ಮಂದಾರ್ತಿ ದೇವಸ್ಥಾನದ ಮೊಕ್ತೇಸರ ಧನಂಜಯ ಶೆಟ್ಟಿ.
ಸೀಸನ್ ಅವಧಿಯಲ್ಲಿಯೇ ದುಡಿ ಯುವ ವರ್ಗ ಕಲಾವಿದರದ್ದು. ನಾಟಕಗಳ ಲ್ಲಿಯೂ ಹಲವಾರು ಕಲಾವಿದರು ತಮ್ಮ ಇಡೀ ವರ್ಷದ ಆದಾಯವನ್ನು ಕೆಲವೇ ತಿಂಗಳುಗಳಲ್ಲಿ ಸಂಪಾದಿಸುವ ತುಡಿತದಲ್ಲಿರುತ್ತಾರೆ. ಕೆಲವು ವರ್ಷಗಳಿಂದ ಸರಿಯಾದ ದುಡಿಮೆ ಇಲ್ಲದೆ ಇವರ ಜೀವನ ಕಷ್ಟಕರವಾಗಿತ್ತು. ಈಗ ಸರಕಾರ ನಿರ್ಧಾರ ಬದಲಾಯಿಸಿರುವುದು ಉತ್ತಮ ಬೆಳವಣಿಗೆ ಎನ್ನುತ್ತಾರೆ ಉಡುಪಿ ರಂಗಭೂಮಿಯ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ.
ಶಾಮಿಯಾನದವರಿಗೂ ಸಂತಸ
ಸೀಮಿತ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರುತ್ತಿದ್ದುದರಿಂದ ಕುರ್ಚಿ, ಶಾಮಿಯಾನಗಳು ಕಡಿಮೆ ಸಂಖ್ಯೆಯಲ್ಲಿ ಬಾಡಿಗೆಗೆ ಹೋಗುತ್ತಿದ್ದವು. ಮುಂದಿನ ದಿನಗಳಲ್ಲಿಯಾದರೂ ಈ ಹಿಂದಿನಂತೆ ಬೇಡಿಕೆ ಬಂದರೆ ಇದನ್ನು ನಂಬಿ ಜೀವನ ನಡೆಸುವವರಿಗೆ ನೆಮ್ಮದಿ ಸಿಗಲಿದೆ. ಸೀಮಿತ ಸಂಖ್ಯೆಯಲ್ಲಿ ಜನರು ಸೇರಿ ಸರಳವಾಗಿ ಸಮಾರಂಭ ಆಯೋಜಿಸುತ್ತಿದ್ದುದರಿಂದ ಸಬಾಭವನಗಳಿಗೆ ನಷ್ಟ ಉಂಟಾಗಿತ್ತು ಎನ್ನುತ್ತಾರೆ ಉಡುಪಿ ಜಿಲ್ಲಾ ಸಭಾಭವನಗಳ ಒಕ್ಕೂಟದ ಅಧ್ಯಕ್ಷ ಶೇಡಿಕೊಡ್ಲು ವಿಠಲ ಶೆಟ್ಟಿ.
ದೈವಾರಾಧಕರಿಗೂ ನೆಮ್ಮದಿ
ನಮಗೆ ಡಿಸೆಂಬರ್‌ನಿಂದ ಮೇ ತನಕ ಸೀಸನ್. ಇದುವರೆಗೆ ಸೀಮಿತ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕು ಎನ್ನುವ ನಿಯಮ ಇದ್ದುದರಿಂದ ಕೆಲವರು ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದರು. ಇದರಿಂದ ದೈವಾರಾಧಕರಿಗೆ ತೊಂದರೆ ಉಂಟಾಗಿತ್ತು. ಈಗ ಸರಕಾರ ಅನುಮತಿ ಕೊಟ್ಟಿರುವುದರಿಂದ ಈ ಹಿಂದಿನಂತೆ ಸಂಪ್ರ ದಾಯವನ್ನು ಮುಂದುವರಿಸಿಕೊಂಡು ಹೋಗಬಹುದಾಗಿದೆ ಎಂದು ಅಖೀಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟದ ಕಾರ್ಯದರ್ಶಿ ವಿನೋದ ಶೆಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.