ನಕಲಿ ಕೋವಿಡ್ ವರದಿ: ಪ್ರಯಾಣಿಕರ ಆಕ್ರೋಶ
Team Udayavani, Jan 31, 2022, 11:46 AM IST
ದೇವನಹಳ್ಳಿ: ಪ್ರತಿನಿತ್ಯ ಸಾವಿರಾರು ಪ್ರಯಾಣಿಕರುವಿಮಾನ ನಿಲ್ದಾಣಕ್ಕೆ ಬಂದುಹೋಗುತ್ತಾರೆ. ಬರು ವಂತಹ ಪ್ರಯಾಣಿಕರು ಕೊರೊನಾ ತಪಾಸಣೆ ಮಾಡಿ ಸಿಕೊಳ್ಳುತ್ತಾರೆ. ತಾಲೂಕಿನ ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಆರಿಗಾ ಲ್ಯಾಬ್‌ನಲ್ಲಿ ಕೋವಿಡ್ ತಪಾಸಣೆ ಮಾಡುವ ಸಿಬ್ಬಂದಿ ಕುಡಿದ ಅಮಲಿನಲ್ಲಿ ಪರೀಕ್ಷಿಸಿ ನಕಲಿ ವರದಿನೀಡುತ್ತಿದ್ದಾರೆ ಎಂದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವಿಮಾನ ನಿಲ್ದಾಣದ ನಿರ್ಗಮನ ಗೇಟ್ನ ಬಳಿ ಆರಿಗಾ ಲ್ಯಾಬ್ ಸಹಯೋಗದೊಂದಿಗೆ ಪ್ರಯಾಣಿಕರ ರ್ಯಾಪಿಡ್, ಆರ್‌ಟಿಪಿಸಿಆರ್ ಪರೀಕ್ಷೆಗೆ ಅನುವು ಮಾಡಿ ಕೊಡಲಾಗಿದೆ. ಆದರೆ, ಈ ಲ್ಯಾಬ್‌ಸೂಕ್ತ ರೀತಿಯಲ್ಲಿ ಪರೀಕ್ಷೆ ನಡೆಸದೆ ನಕಲಿ ಕೋವಿಡ್‌ವರದಿ ನೀಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.ಲ್ಯಾಬ್ ಸಿಬ್ಬಂದಿ ರ್ಯಾಪಿಡ್, ಆರ್‌ಟಿಪಿಸಿಆರ್ ಹಾಗೂಇತರ ಕೋವಿಡ್ ಪರೀಕ್ಷೆಗಿಂತ ವಿಭಿನ್ನವಾಗಿವೆ. ಆನ್ ಲೈನಿನನಲ್ಲಿ ಉತ್ತರ ಪಡೆದುಕೊಳ್ಳಿ ಎಂಬ ಉತ್ತರದಿಂದಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ ಬರುವ ಹಿಂದಿನ ದಿನ ಅದೇ ಪ್ರಯಾಣಿಕರು ಹೊರಗಡೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿದ್ದು ನೆಗೆಟಿವ್ ವರದಿ ಬಂದಿದೆ. ಆದರೆ ಪ್ರಯಾಣಿಕರಿಗೆ ಯಾವುದೇ ಕೋವಿಡ್‌ಸಂಬಂಧಿಸಿದ ಯಾವುದೇ ಲಕ್ಷಣಗಳಿಲ್ಲ. ಆರಿಗಾ ಲ್ಯಾಬ್‌ನಲ್ಲಿ ಮಾತ್ರ ಪಾಸಿಟಿವ್ ಬರುತ್ತಿದೆ. ಹಾಗೂ ಸಿಬ್ಬಂದಿ ಕುಡಿದ ಅಮಲಿನಲ್ಲಿ ಟೆಸ್ಟ್ ಮಾಡುತ್ತಿದ್ದಾರೆ ಎಂದು ವಿಡಿಯೋ ಮಾಡಿ ಪ್ರಯಾಣಿಕರು ಆರೋಪಿಸಿದ್ದಾರೆ. ಲ್ಯಾಬ್ ಸಿಬ್ಬಂದಿಯಿಂದ ಬೇಸತ್ತ ಪ್ರಯಾಣಿಕರ ಗುಂಪೊಂದು ಲ್ಯಾಬ್ ಸಿಬ್ಬಂದಿಯೊಂದಿಗೆ ನಡೆಸಿರುವ ಮಾತಿನ ಚಕಮಕಿ ವಿಡಿಯೋ ವೈರಲ್ ಆಗಿದೆ.
ರಕ್ಷಣಾ ಪಡೆ ಮೂಲಕ ಪರಿಸ್ಥಿತಿ ನಿರ್ವಹಣೆ :
ಕೊರೊನಾ ವರದಿಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿ ಜೊತೆ ಗಲಾಟೆ ನಡೆಸಿದರು. ಪರಿಸ್ಥಿತಿ ನಿಭಾಯಿಸಲು ವಿಮಾನ ನಿಲ್ದಾಣದ ಸಿಬ್ಬಂದಿ ಪರದಾಡಬೇಕಾಯಿತು. ಸಿಟ್ಟಿಗೆದ್ದ ಪ್ರಯಾಣಿಕರನ್ನು ನಿಯಂತ್ರಿಸಲು ಕೇಂದ್ರ ಕೈಗಾರಿಕಾ ರಕ್ಷಣಾ ಪಡೆಯನ್ನು ಸ್ಥಳಕ್ಕೆ ಕರೆಸಿ ಪರಿಸ್ಥಿತಿಯನ್ನು ನಿರ್ವಹಿಸಲಾಯಿತು.
ನಕಲಿ ವರದಿಯಿಂದ ನೆಟ್ಟಿಗರು ಕಿಡಿ : ಕಳೆದ ವಾರ ಯುವತಿಯೊಬ್ಬರಿಗೆ ಕೋವಿಡ್ ಪಾಸಿಟಿವ್ ವರದಿ ನೀಡಿದ್ದ ಆರಿಗಾ ಲ್ಯಾಬ್ ಮತ್ತೆ ನಕಲಿ ವರದಿ ನೀಡಿ ಪೆಚ್ಚಿಗೆ ಸಿಲುಕಿರುವುದುಪ್ರಯಾಣಿಕರು ಸೇರಿದಂತೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಹೊರಗಡೆ ಎರಡು ಖಾಸಗಿಲ್ಯಾಬಿನಲ್ಲಿ ಪರೀಕ್ಷೆ ಮಾಡಿಸಿದ್ದು ನೆಗಟಿವ್ ಎಂದು ಬಂದ ರಿಪೋರ್ಟ್ ವಿಮಾನ ನಿಲ್ದಾಣದಲ್ಲಿ ಮಾತ್ರಪಾಸಿಟಿವ್ ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುವ ವ್ಯಕ್ತಿಯೊಬ್ಬರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಇಂಥ ಆರೋಪಗಳಿದ್ದರೂ ಸೂಕ್ತ ಕ್ರಮಕೈಗೊಳ್ಳಲುಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಮದ್ಯಪಾನಮಾಡಿ ಕರ್ತವ್ಯ ನಿರ್ವಹಣೆ ಮಾಡುವ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.