ದಾನ ನೀಡಿದ್ದ ಜಾಗದಲ್ಲಿ ಪುರಸಭೆ ಕಚೇರಿ ನಿರ್ಮಾಣ
Team Udayavani, Jan 31, 2022, 12:41 PM IST
ಬಂಗಾರಪೇಟೆ: ದಾನವಾಗಿ ನೀಡಿದ್ದ ಉದ್ಯಾನದಲ್ಲಿ ಯಾವುದೇ ಹೊಸ ಕಟ್ಟಡ ನಿರ್ಮಾಣ ಮಾಡಬಾರದೆಂದು ಹೈಕೋರ್ಟ್ ಆದೇಶ ನೀಡಿದ್ದರೂ ಗಾಳಿಗೆ ತೂರಿ ಪುರಸಭೆ ಹೊಸ ಕಾರ್ಯಾಲಯ ನಿರ್ಮಿಸಿರುವುದು ತೀವ್ರ ವಿವಾದಕ್ಕೆ ಗುರಿಯಾಗಿದೆ. ಫೆ.2ರಂದು ಉದ್ಘಾಟನೆ ಆಗಬೇಕಾಗಿದ್ದ ಕಾರ್ಯಕ್ರಮ ರದ್ದುಪಡಿಸಲಾಗಿದೆ.
ಬ್ರಿಟೀಷರಿಂದ ಮೈಸೂರು ರಾಜರ ಆಳ್ವಿಕೆ ಬಂದ ಸವಿನೆನಪಿಗಾಗಿ ಪಟ್ಟಣದ ಹೃದಯ ಭಾಗದಲ್ಲಿರುವ ಪಟ್ಟಾಭಿಷೇಕ ಉದ್ಯಾನಕ್ಕೆ ದಾನಿ ಹಾಜಿ ಇಸ್ಮಾಯಿಲ್ ಸೇಠ್ ಅವರು 4 ಎಕರೆ ಜಾಗವನ್ನು ಪುರಸಭೆಗೆ ದಾನವಾಗಿ ನೀಡಿದ್ದರು ಎನ್ನಲಾಗಿದೆ.
ಆದರೆ, ದಾನವಾಗಿಪಡೆದ ಜಾಗದಲ್ಲಿ ಪುರಸಭೆ ಕಟ್ಟಡ ನಿರ್ಮಾಣ ಮಾಡಿ ಪಾರ್ಕ್‌ನ ಸೌಂದರ್ಯ ಹಾಳು ಮಾಡುತ್ತಿದೆ ಎಂದು 2009ರಲ್ಲಿ ವಕೀಲ ರಾಜಗೋಪಾಲ್ ಅವರು ಹೈಕೋರ್ಟ್ ನ ಮೂಲಕ ತಡೆ ತಂದಿದ್ದರು. ಇದೀಗ ಆದೇಶ ಉಲ್ಲಂಘಿಸಿ ಪುರಸಭೆ ಉದ್ಯಾನದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಿದೆ ಎಂದು ದೂರಲಾಗಿದೆ.
20 ವರ್ಷ ಕಾರ್ಯನಿರ್ವಹಣೆ: ದಾನವಾಗಿ ನೀಡಿದ್ದ ಸ್ಥಳದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಕಟ್ಟಡ ನಿರ್ಮಾಣ ಮಾಡಿ, ದಾನಿ ಹಾಜಿ ಇಸ್ಮಾಯಿಲ್ ಸೇಠ್ ಭವನ, ಕಿಂಗ್‌ಎಡ್ವರ್ಡ್ ಹಾಲ್ ಎಂದು ಕರೆಯಲಾಗಿತ್ತು. ಮಹಾತ್ಮ ಗಾಂಧೀಜಿ ಅವರು ಕೆಜಿಎಫ್ಗೆ ತೆರಳುವ ವೇಳೆ ಇದೇಕಟ್ಟಡದಲ್ಲಿ ಸ್ವಲ್ಪ ಕಾಲ ವಿಶ್ರಾಂತಿ ಪಡೆದಿದ್ದರು. ಈ ಸವಿನೆನಪಿಗಾಗಿ ಗಾಂಧಿ ಭವನ ಎಂದು ಮರು ನಾಮಕರಣ ಮಾಡಲಾಗಿತ್ತು. ಬಂಗಾರಪೇಟೆ ಪುರಸಭೆ ಆದ ನಂತರ ಇದೇ ಕಟ್ಟಡದಲ್ಲಿ 20 ವರ್ಷ ಕಾರ್ಯನಿರ್ವಹಿಸಲಾಗಿತ್ತು.
ಈ ಉದ್ಯಾನದಲ್ಲಿರುವ ಗಾಂಧಿ ಭವನಕ್ಕೆ 100 ವರ್ಷ ಆಗಿರುವುದರಿಂದ ಪುರಾತತ್ವ ಇಲಾಖೆಯ ಗಮನಕ್ಕೆತರದೆ ರಿಪೇರಿ ಮಾಡಿಸುವ ಹೆಸರಿನಲ್ಲಿ ಹಳೆ ಕಟ್ಟಡ ಕೆಡವಿಹೈಕೋರ್ಟ್‌ನ ಆದೇಶ ಉಲ್ಲಂ ಸಿ ಹೊಸ ಕಟ್ಟಡನಿರ್ಮಾಣ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹೊಸ ಕಟ್ಟಡ ನಿರ್ಮಾಣ: ಈಗಾಗಲೇ ಪಟ್ಟಣದ ಪಾಂಡುರಂಗ ದೇವಸ್ಥಾನ ರಸ್ತೆಯಲ್ಲಿ 2010ರಲ್ಲಿ ಕೋಟ್ಯಂತರ ರೂ.ನಲ್ಲಿ ಎರಡು ಮಹಡಿವುಳ್ಳ ಪುರಸಭೆ ಹೊಸ ಕಟ್ಟಡ ನಿರ್ಮಾಣ ಮಾಡಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಅಧಿಕೃತ ಕಟ್ಟಡ ಇರುವುದರಿಂದ ಮತ್ತೆ 2018ರಲ್ಲಿ ಪಾರ್ಕ್ ನಲ್ಲಿದ್ದ ಮಹಾತ್ಮ ಗಾಂಧಿ ಭವನ ಕೆಡವಿ ಸುಸಜ್ಜಿತ ಹೊಸ ಕಟ್ಟಡ ಹಾಗೂ ಸರ್ಕಾರದ ನಿಯಾಮಾವಳಿ ಗಾಳಿಗೆ ತೂರಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುವ ಅವಶ್ಯಕತೆ ಏನಿತ್ತು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲು: ಈಗ ಕಟ್ಟಡ ಕಾಮಗಾರಿ ಪೂರ್ಣಗೊಂಡು ಫೆ.2ರಂದು ಕಟ್ಟಡಉದ್ಘಾಟನೆಗೆ ಪುರಸಭೆ ಸಜ್ಜಾಗಿತ್ತು. ಹೈಕೋರ್ಟ್ ಆದೇಶವನ್ನು ಮೀರಿ ಪುರಸಭೆ ಕಟ್ಟಡ ನಿರ್ಮಾಣ ಮಾಡಲು ಠರಾವು ಹೊರಡಿಸಿ ಕಾನೂನು ಬಾಹಿರಅಪರಾದ ಕೃತ್ಯ ಎಸಗಿದೆ ಎಂದು ಆರೋಪಿಸಿ ಕೋಲಾರದ ಗಾಂಧಿ ನಗರದ ಸಾಮಾಜಿಕ ಕಾರ್ಯಕರ್ತಕೆ.ಸಿ.ರಾಜಣ್ಣ ಎಂಬುವವರು ಮತ್ತೆ ಹೈಕೋರ್ಟ್‌ನಲ್ಲಿಪ್ರಶ್ನಿಸಿದ್ದು, ಈ ಕಟ್ಟಡ ಉದ್ಘಾಟನೆ ಮಾಡದಂತೆ ಜಿಲ್ಲಾಧಿಕಾರಿಗಳಿಗೂ ದೂರು ಸಲ್ಲಿಸಿದ್ದಾರೆ.
ಪಟ್ಟಾಭಿಷೇಕ ಉದ್ಯಾನದಲ್ಲಿ ಪುರಸಭೆ ಆಡಳಿತಕಚೇರಿ ನಿರ್ಮಾಣ ಮಾಡಲು ನಗರೋತ್ಥಾನ 3ನೇ ಹಂತದ ಅನುದಾನ 99 ಲಕ್ಷ ರೂ.ನಲ್ಲಿ ಹಾಲಿ ಇಸ್ಮಾಯಿಲ್ ಸೇಠ್ ಭವನ ಪುನಶ್ಚೇತನ ಮಾಡಲು ಮೀಸಲಿಟ್ಟು, ನಂತರ ಕಟ್ಟಡ ನಿರ್ಮಾಣಕ್ಕೆ 14ನೇ ಹಣಕಾಸು ಯೋಜನೆಯಲ್ಲಿ 96.52 ಲಕ್ಷ ರೂ. ಕಾಯ್ದಿರಿಸಿ ಅಭಿವೃದ್ಧಿಪಡಿಸಲಾಗಿದೆ.
ಈ ಹಳೇ ಕಟ್ಟಡ ಸಂಪೂರ್ಣ ಕೆಡವಿದ ನಂತರನಿರ್ಮಾಣ ಹಂತದಲ್ಲಿರುವ ವೇಳೆ ಹಳೆ ಕಟ್ಟಡವು ಸಾರ್ವಜನಿಕರ ಬಳಕೆಗೆ ಯೋಗ್ಯವಲ್ಲ ಎಂದು ಪಿಡಬ್ಲ್ಯೂಡಿ ಅಧಿಕಾರಿಗಳು ಸರ್ಟಿಫಿಕೇಟ್‌ನೀಡಿರುವುದು ಪುರಸಭೆ ಆಡಳಿತ ಮಂಡಳಿಯು ಅತುರ ಕಾರ್ಯಕ್ಕೆ ಕೈಹಾಕಿರುವುದು ಬಯಲಾಗಿದೆ.
ಈ ಉದ್ಯಾನದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನುಪ್ರಶ್ನಿಸಿ ಎಂ.ಶ್ರೀಧರ್ ಎಂಬುವವರು ಲೋಕಾಯುಕ್ತರಿಗೂ ದೂರು ನೀಡಿದ್ದು, ಈ ದೂರಿಗೆ ಸಮಜಾಯಿಷಿನೀಡಿರುವ ಹಿಂದಿನ ಪುರಸಭೆ ಮುಖ್ಯಾಧಿಕಾರಿವಿ.ಶ್ರೀಧರ್ ವರದಿಯಲ್ಲಿ ಎಲ್ಲಾ ವಿಚಾರಗಳು ಎಲ್ಲವೂ ಬಹಿರಂಗಗೊಂಡಿದೆ ಎನ್ನಲಾಗಿದೆ.
ಎರಡು ಕೋಟಿ ರೂ.ನಲ್ಲಿ ಪಟ್ಟಾಭಿಷೇಕ ಉದ್ಯಾನದಲ್ಲಿ ನಿರ್ಮಾಣ ಮಾಡಿರುವಪುರಸಭೆ ಆಡಳಿತ ಕಚೇರಿ ಕಟ್ಟಡ ಉದ್ಘಾಟನೆ ಮಾಡಲು ಫೆ.2ರಂದುದಿನಾಂಕ ನಿಗದಿಯಾಗಿತ್ತು. ರಾಜ್ಯಪೌರಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಒಟ್ಟಿಗೆ ಭಾಗವಹಿಸಲು ಸಾಧ್ಯವಿಲ್ಲದ ಕಾರಣ ಉದ್ಘಾಟನೆಮುಂದೂಡಲಾಗಿದೆ. ಉದ್ಘಾಟನೆ ಮಾಡಲು ಯಾವುದೇಕೋರ್ಟ್‌ನ ಆದೇಶವೂ ಇಲ್ಲ, ಸೂಚನೆಯೂ ಇಲ್ಲ. ಸಚಿವರ ಸೂಚನೆ ನಂತರ ಮರು ದಿನಾಂಕ ನಿಗದಿಗೊಳಿಸಲಾಗುವುದು. –ಎಸ್.ಬಿ.ಯಶವಂತಕುಮಾರ್, ಮುಖ್ಯಾಧಿಕಾರಿ, ಪುರಸಭೆ
ಪಟ್ಟಾಭಿಷೇಕ ಉದ್ಯಾನದಲ್ಲಿ ತೀರ ಹಳೆಯದಾದ ಹಾಜಿ ಇಸ್ಮಾಯಿಲ್ ಸೇಠ್ ಭವನ ಶಿಥಿಲಗೊಂಡಿತ್ತು.ಅದನ್ನು ಕೆಡವಿ ದೊಡ್ಡ ಕಟ್ಟಡ ನಿರ್ಮಿಸಲಾಗಿದೆ. ಹಾಲಿಪುರಸಭೆ ಕಟ್ಟಡವು ಸಾಕಾಗುತ್ತಿಲ್ಲ. ಈ ಕಾರಣಕ್ಕೆ ವಿಶಾಲವಾಗಿ ಆಡಳಿತ ಕಚೇರಿ ನಿರ್ಮಾಣ ಮಾಡಲಾಗಿದೆ. ಪಟ್ಟ ಣವು ಗಣನೀಯವಾಗಿ ಬೆಳೆಯುತ್ತಿದೆ. ಮುಂದೆ ನಗರಸಭೆಆಗುವ ಸಾಧ್ಯತೆ ಇದೆ. ಇದರಿಂದ ಉದ್ಯಾನ ಜಾಗದಲ್ಲಿ ಒಂದಿಂಚೂ ಸ್ಥಳ ಪಡೆದು ಕೊಳ್ಳದೇ ಹಾಲಿ ಇರುವ ಸ್ಥಳದಲ್ಲಿಯೇ ಕಟ್ಟಡ ನಿರ್ಮಾಣ ಮಾಡಲಾ ಗಿದೆ. ಫೆ.2ರಂದು ಉದ್ಘಾಟಿಸಲು ಸಚಿವರಿಂದಲೇ ದಿನಾಂಕ ನಿಗದಿಗೊಳಿಸ ಲಾಗಿತ್ತು. ಅಂದು ಸಚಿವರೊಬ್ಬರೂ ಇರುವುದಿಲ್ಲ ಎಂದು ಕಾರ್ಯಕ್ರಮ ಮುಂದೂಡಲಾಗಿದೆ. –ಎಸ್.ಫರ್ಜಾನಾ ಸುಹೇಲ್, ಅಧ್ಯಕ್ಷರು, ಪುರಸಭೆ.
–ಎಂ.ಸಿ.ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.