ಹನಗೋಡು, ನೇರಳಕುಪ್ಪೆಯಲ್ಲಿ ಹುಲಿ ಹೆಜ್ಜೆಗುರುತು ಪತ್ತೆ : ಭೀತಿಯಲ್ಲಿ ಗ್ರಾಮಸ್ಥರು
Team Udayavani, Jan 31, 2022, 8:40 PM IST
ಹುಣಸೂರು : ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ತಾಲೂಕಿನ ಹನಗೋಡು ಹಾಗೂ ನೇರಳಕುಪ್ಪೆ ಗ್ರಾಮದಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿದ್ದು ಜನತೆ ಭಯಭೀತಿಗೊಂಡಿದ್ದಾರೆ.
ತಾಲೂಕಿನ ಹನಗೋಡು ಗ್ರಾಮದ ಕೃಷಿಕ ನಾಗೇಶರ ಲಕ್ಷ್ಮಣತೀರ್ಥ ನದಿಯಂಚಿನ ತೋಟದಲ್ಲಿ ಆಗಾಗ್ಗೆ ಹುಲಿ ಓಡಾಡಿರುವ ಹೆಜ್ಜೆಯ ಕುರುಹು ಪತ್ತೆಯಾಗಿದ್ದು, ಈ ಭಾಗದಲ್ಲಿ ಹಲವರ ತೋಟ ಹಾಗೂ ಹೊಲ-ಗದ್ದೆಗಳಿದ್ದು, ಓಡಾಡಲು ಭಯಪಡುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಸ್ಥಳಕ್ಕೆ ಭೇಟಿ ನೀಡಿಲ್ಲವೆಂದು ರೈತರು ಆರೋಪಿಸಿದ್ದಾರೆ.
ನೇರಳಕುಪ್ಪೆಯಲ್ಲೂ ಹುಲಿ ಹೆಜ್ಜೆ:
ಉದ್ಯಾನದಂಚಿನ ನೇರಳಕುಪ್ಪೆ ಗ್ರಾಮದ ಎ.ವಿ. ಶಂಕರ್‌ಶಗ್ರಿತ್ತಾಯ, ಕಮಲಮ್ಮ, ಹಾಗೂ ವಸುಧ ರವೀಂದ್ರರ ತೋಟದಲ್ಲಿ ಹುಲಿ ಓಡಾಟ ನಡೆಸಿರುವ ಜಾಡು ಪತ್ತೆಯಾಗಿದ್ದು. ಎರಡೂ ಕಡೆ ಇದೇ ಹುಲಿಯೋ ಆಥವಾ ಬೇರೆಯದೋ ಎಂಬುದು ಪತ್ತೆಯಾಗಬೇಕಿದೆ.
ಕಳೆದ ವಾರವಷ್ಟೆ ಶೆಟ್ಟಹಳ್ಳಿ-ಲಕ್ಕಪಟ್ಟಣದ ಸುತ್ತ ಮುತ್ತಲ ಜಮೀನುಗಳಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿತ್ತು. ಇದೀಗ ಭಾನುವಾರ ರಾತ್ರಿ ನೇರಳಕುಪ್ಪೆ ಸುತ್ತಮುತ್ತಲ ಜಮೀನಿನಲ್ಲಿ ಹುಲಿ ಓಡಾಟ ನಡೆಸಿರುವುದು ಹೆಜ್ಜೆ ಪತ್ತೆಯಾಗಿರುವುದರಿಂದ ಹುಲಿ ಇರುವಿಕೆ ಧೃಡಪಡಿಸಿದ್ದು, ಕಾಡಂಚಿನಲ್ಲಿರುವ ಜಮೀನುಗಳಿಗೆ ತೆರಳಲು ರೈತರು ಭಯಭೀತರಾಗಿದ್ದಾರೆ.
ನೇರಳಕುಪ್ಪೆ ಭಾಗಕ್ಕೆ ಹುಣಸೂರು ವಲಯದ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಪಾರ್ಸೆಲ್ ಕೊಟ್ಟು ಬರುವಷ್ಟರಲ್ಲಿ ಸ್ಕೂಟರನ್ನೇ ಎಗರಿಸಿದ ಕಳ್ಳ : ಕಳ್ಳತನದ ದೃಶ್ಯ ಸೆರೆ
ಹುಲಿ ಸೆರೆಗೆ ಆಗ್ರಹ:
ವರ್ಷದ ಹಿಂದೆ ನೇರಳಕುಪ್ಪೆ ಎ ಹಾಡಿಯ ವೃದ್ದ ಕುರಿ ಕಾಯುತ್ತಿದ್ದ ವೇಳೆ ಹುಲಿಯು ಕೊಂದು ರುಂಡವನ್ನು ಬಿಟ್ಟು ಹೋಗಿತ್ತು, ಹುಲಿಯನ್ನು ಸೆರೆ ಹಿಡಿಯಲಾಗಿತ್ತು. ಅಯ್ಯನಕೆರೆ ಹಾಡಿ ಬಳಿ ಯುವಕನೊರ್ವನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿತ್ತು.
ಇದೀಗ ಹನಗೋಡು ಸುತ್ತಮುತ್ತಲ ಹಳ್ಳಿಗಳಲ್ಲಿ ಹುಲಿ ಕಾಣಿಸಿಕೊಂಡಿದ್ದು, ನಗರದಿಂದ ತಡವಾಗಿ ಬರುವ ಈ ಭಾಗದ ವಿದ್ಯಾರ್ಥಿಗಳು-ಗ್ರಾಮಸ್ಥರು ಓಡಾಡಲು, ರೈತರು ಜಮೀನಿಗೆ ತೆರಳಲು, ವಾಹನ ಸವಾರರು ಸಂಚರಿಸಲು ಹೆದರುತ್ತಿದ್ದು. ಅರಣ್ಯ ಇಲಾಖೆ ಅನಾಹುತವಾಗುವ ಮೊದಲೇ ಹುಲಿ ಸೆರೆಗೆ ಕ್ರಮವಹಿಸುವಂತೆ ಹನಗೋಡು ಹಾಗೂ ನೇರಳಕುಪ್ಪೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.