‘ಬಾಗ್ಲು ತೆಗಿ ಮೇರಿ ಜಾನ್…’: ತೋತಾಪುರಿ ಕಲರ್‌ಫುಲ್ ಸಾಂಗ್
Team Udayavani, Feb 1, 2022, 11:12 AM IST
ರೆಗ್ಯುಲರ್ ಪ್ಯಾಟರ್ನ್ ಬಿಟ್ಟು ಮಾಡಿದ ಸಿನಿಮಾವಾಗಲೀ, ಹಾಡಾಗಲೀ ಬೇಗನೇ ಜನರ ಗಮನ ಸೆಳೆಯುತ್ತದೆ ಮತ್ತು ಇಷ್ಟವಾಗುತ್ತದೆ. ಅದಕ್ಕೆ ಕಾರಣ ಜನರಿಗೆ ಒಂದೇ ಶೈಲಿ ಕೇಳಿ ಬೇಸರ ಬಂದಿರೋದು. ಈಗ ಈ ವಿಚಾರ ಯಾಕೆ ಎಂದು ನೀವು ಕೇಳಬಹುದು.
ಅದಕ್ಕೆ ಕಾರಣ “ತೋತಾಪುರಿ’ ಚಿತ್ರದ ಹಾಡು. ಕೆಲ ದಿನಗಳ ಹಿಂದಷ್ಟೇ ಜಗ್ಗೇಶ್ ನಟನೆಯ “ತೋತಾಪುರಿ’ ಚಿತ್ರದ ಹಾಡಿನ ಟೀಸರ್ ಬಿಡುಗಡೆಯಾಗಿ ಕುತೂಹಲ ಹುಟ್ಟಿಸಿತ್ತು. ಈಗ ಆ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.
ರೆಗ್ಯುಲರ್ ಶೈಲಿ ಬಿಟ್ಟಿರುವ ಈ ಹಾಡು ಹಾಗೂ ಅದನ್ನು ಫನ್ನಿಯಾಗಿ ಚಿತ್ರೀಕರಿಸಿದ ರೀತಿ ಇಷ್ಟವಾಗುತ್ತದೆ. ಅದಿತಿ- ಜಗ್ಗೇಶ್ ಈ ಹಾಡಿನಲ್ಲಿ ಸಖತ್ ಕಲರ್‌ಫುಲ್ ಆಗಿ ಕಾಣಿಸಿಕೊಂಡಿದ್ದು, ಜಗ್ಗೇಶ್ ಅವರ ಮ್ಯಾನರಿಸಂ ಹಾಡಿನ ಫನ್ ಹೆಚ್ಚಿಸುವಂತಿದೆ. “ಬಾಗ್ಲು ತೆಗಿ ಮೇರಿ ಜಾನ್…’ ಎಂದು ಆರಂಭವಾಗುವ ಹಾಡು ಕೌಂಟರ್-ಪ್ರತಿ ಕೌಂಟರ್‌ನೊಂದಿಗೆ ಸಾಗುತ್ತದೆ.
ಇದನ್ನೂ ಓದಿ:ಯೂಟ್ಯೂಬ್ ವಿಡಿಯೋದಲ್ಲಿ ಬಂಟ್ವಾಳದ ಯುವತಿ ಫೋಟೋ ದುರ್ಬಳಕೆ: ಸಾಫ್ಟ್ವೇರ್ ದಂಪತಿ ಬಂಧನ
ಸಂಗೀತ ನಿರ್ದೇಶಕ ಅನೂಪ್ ಸೀಳೀನ್ ವಿಜಯ್ ಪ್ರಸಾದ್ ಅವರ ಸಾಹಿತ್ಯಕ್ಕೆ ಪೂರಕವಾದ ಸಂಗೀತ ನೀಡಿದ್ದಾರೆ. ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿನ ಕಲರ್‌ಫುಲ್ ಸೆಟ್‌ನಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಜಗ್ಗೇಶ್, ಅದಿತಿ, ವೀಣಾ ಸುಂದರ್ ಹಾಗೂ ಹೇಮಾದತ್ ಜೊತೆ ನೂರಾರು ಡ್ಯಾನ್ಸರ್ ಹೆಜ್ಜೆ ಹಾಕಿದ್ದಾರೆ. ವ್ಯಾಸರಾಜ್ ಸೋಸಲೆ, ಅನನ್ಯ ಭಟ್ ಹಾಗೂ ಸುಪ್ರಿಯಾ ರಾಮ್ ಈ ಹಾಡಿಗೆ ದನಿಗೂಡಿಸಿದ್ದಾರೆ.
ಗೋವಿಂದಾಯ ನಮಃ, ಶಿವಲಿಂಗ, ಶ್ರಾವಣಿ ಸುಬ್ರಹ್ಮಣ್ಯ ಮೊದಲಾದ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಕೆ.ಎ.ಸುರೇಶ್ ‘ತೋತಾಪುರಿ’ ಭಾಗ 1 ಹಾಗೂ ಭಾಗ 2 ಸಿನಿಮಾವನ್ನು ನಿರ್ಮಿಸಿದ್ದಾರೆ. ಮೋನಿಫಿಕ್ಸ್ ಸ್ಟುಡಿಯೋಸ್ ಹಾಗೂ ಸುರೇಶ್ ಆರ್ಟ್ಸ್ ಬ್ಯಾನರ್‌ನಲ್ಲಿ”ತೋತಾಪುರಿ’ ನಿರ್ಮಾಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.