ಅಭಿನಂದನ ಸಮಾರಂಭದ ಯಶಸ್ಸಿಗೆ ಎಲ್ಲರೂ ಶ್ರಮಿಸೋಣ: ಡಾ| ಶಿವರಾಮ ಭಂಡಾರಿ
Team Udayavani, Feb 1, 2022, 10:56 AM IST
ಮುಂಬಯಿ: ಭಂಡಾರಿ ಮಹಾ ಮಂಡಲದ ಸ್ಥಾಪಕಾಧ್ಯಕ್ಷ, ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಲಹಾ ಸಮಿತಿಯ ಸದಸ್ಯ ಕಡಂದಲೆ ಸುರೇಶ್ ಎಸ್. ಭಂಡಾರಿ ಅವರ
ಷಷ್ಟ್ಯಬ್ದ ಪೂರ್ತಿ ಸಂಭ್ರಮ ಪ್ರಯುಕ್ತ ಪೂರ್ವಭಾವಿ ಸಭೆ ಜ. 29ರಂದು ಸಂಜೆ ಘಾಟ್ಕೋಪರ್ ಪಶ್ಚಿಮದ ಮನಿಫೋಲ್ಡ್ ಕಚೇರಿಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಿವಾಸ್ ಹೇರ್ ಡಿಸೈನರ್ ಪ್ರೈ. ಲಿ.ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೆ. ಭಂಡಾರಿ ಮಾತನಾಡಿ, ಜನ್ಮಭೂಮಿ ಮತ್ತು ಕರ್ಮಭೂಮಿಯಲ್ಲಿ ಸಮಾಜ ಸೇವಕರಾಗಿ, ಬಡವರ ಪಾಲಿನ ಆಶಾಕಿರಣವಾಗಿ, ಎಲ್ಲ ಜಾತಿ, ಧರ್ಮಗಳ ಜನರೊಂದಿಗೆ ಸೌಹಾರ್ದ, ಸಾಮರಸ್ಯದ ಪ್ರತೀಕವಾಗಿರುವ ಕಡಂದಲೆ ಸುರೇಶ್ ಭಂಡಾರಿ ಅವರ ಅಭಿನಂದನ ಸಂಭ್ರಮವನ್ನು ಚಾರಿತ್ರಿಕ ಸಂಭ್ರಮವನ್ನಾಗಿಸೋಣ. ಸುರೇಶಣ್ಣನವರ ಅಭಿನಂದನ ಗ್ರಂಥದ ಎಲ್ಲ ತಯಾರಿ ಈಗಾಗಲೇ ನಡೆದಿದ್ದು, ಕೋವಿಡ್‌ನಿಂದಾಗಿ ಸಮಾರಂಭವನ್ನು ಆಯೋಜಿಸಲು ಸಾಧ್ಯವಾಗಿಲ್ಲ. ಜೂ. 12ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಸಮಾರಂಭವನ್ನು ನಡೆಸಲು ಮುಂದಾಗಿದ್ದು, ಅವರ ಅಭಿಮಾನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳನ್ನು ಸೇರಿಸಿಕೊಂಡು ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲಾಗುವುದು. ಸಮಾರಂಭದ ಯಶಸ್ಸಿಗೆ ತುಳು – ಕನ್ನಡಿಗರ ಪ್ರೋತ್ಸಾಹ, ಸಹಕಾರ ಅಗತ್ಯ ವಾಗಿದೆ ಎಂದು ತಿಳಿಸಿದರು.
ಸಂಘಟಕ ಜಿ. ಟಿ. ಆಚಾರ್ಯ ಅವರು ಪ್ರಸ್ತಾವನೆಗೈದು ಸಮಾರಂಭದ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಮನಿಫೋಲ್ಡ್ ಕೋ- ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿ. ಮುಂಬಯಿ ಇದರ ಕಾರ್ಯಾಧ್ಯಕ್ಷರಾಗಿದ್ದು, ಕಚ್ಚಾರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಉಡುಪಿ ಇದರ ಆಡಳಿತ ಮೊಕ್ತೇಸರ, ಅಧ್ಯಕ್ಷರಾಗಿ, ಅನಘಾ ಇಂಟರ್‌ನ್ಯಾಶನಲ್ ಸಂಸ್ಥೆಯ ಮಾಲಕರು,
ಎಸ್.ಬಿ. ರಿಯಾಲಿಟಿ ಇದರ ಆಡಳಿತ ನಿರ್ದೇಶಕರಾಗಿ, ಕಡಂದಲೆ ಸುರೇಶ್ ಭಂಡಾರಿ ಚಾರಿಟೆಬಲ್ ಫ್ಯಾಮಿಲಿ ಟ್ರಸ್ಟ್ ಹಾಗೂ ಸಾಯಿನಾಥ್ ಮಿತ್ರ ಮಂಡಳ್ ಕಫ್‌ಪರೇಡ್ ಮುಂಬಯಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ, ನಾಗೇಶ್ವರ ಸಿನಿ ಕ್ರಿಯೇಶನ್ಸ್‌ನ ಆಡಳಿತ ನಿರ್ದೇಶಕ, ಚಲನಚಿತ್ರ ನಿರ್ಮಾಪಕ, ಉದಾರ ಕೊಡುಗೈದಾನಿ, ಸಮಾಜ ಸೇವಕ ಸುರೇಶ್ ಭಂಡಾರಿ ಅವರ ಸಾಧನೆ ಅಪಾರವಾಗಿದೆ. ಜನನಾಯಕ, ಬಹುಮುಖ ವ್ಯಕ್ತಿತ್ವದ ಸುರೇಶ್ ಭಂಡಾರಿ ಅವರ ಮೇರು ವ್ಯಕ್ತಿತ್ವವು ಇತರರಿಗೆ ಮಾದರಿಯಾಗಿದೆ. ಇವರು ತಮ್ಮ ಜೀವನದ ಸಾರ್ಥಕ 60 ಸಂವತ್ಸರಗಳನ್ನು ಪೂರೈಸಿದ್ದು, ಷಷ್ಟ éಬ್ದ ಪೂರ್ತಿ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಮುಂಬಯಿ ಹಾಗೂ ಊರಿನ ಗಣ್ಯರನ್ನು ಸೇರಿಸಿಕೊಂಡು ಅಭಿನಂದನ ಸಮಿತಿಯನ್ನು ರಚಿಸಿ ಕಾರ್ಯಕ್ರಮದ ಯಶಸ್ಸಿಗೆ ನಾವೆಲ್ಲರು ಶ್ರಮಿಸೋಣ ಎಂದು ತಿಳಿಸಿ ಸರ್ವರ ಸಹಕಾರ ಬಯಸಿದರು.
ಅಭಿನಂದನ ಸಮಿತಿಯ ಗೌರವಾಧ್ಯಕ್ಷರಾಗಿ ಸದಾಶಿವ ಭಂಡಾರಿ ಸಕಲೇಶು³ರ, ಅಧ್ಯಕ್ಷರಾಗಿ ಗುರ್ಮೆ ಸುರೇಶ್ ಶೆಟ್ಟಿ, ಉಪಾಧ್ಯಕ್ಷರಾಗಿ ಶಿವರಾಮ ಭಂಡಾರಿ, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಗೌರವ ಕೋಶಾಧಿಕಾರಿಯಾಗಿ ಜಿ. ಟಿ. ಆಚಾರ್ಯ, ಜತೆ ಕಾರ್ಯದರ್ಶಿಯಾಗಿ ಕರ್ನೂರು ಮೋಹನ್ ರೈ ಅವರನ್ನು ನೇಮಿಸಲಾಯಿತು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ವಿಶ್ವನಾಥ ವಿ. ಶೆಟ್ಟಿ, ಪ್ರಕಾಶ್ ಶೆಟ್ಟಿ ಸುರತ್ಕಲ್, ಸುರೇಖಾ ದೇವಾಡಿಗ, ಹೇಮಾ ಸದಾನಂದ ಅಮೀನ್, ಜಯಶೀಲ ಭಂಡಾರಿ, ಶಶಿಧರ ಭಂಡಾರಿ, ರಾಕೇಶ್ ಭಂಡಾರಿ, ರೋನ್ಸ್ ಬಂಟ್ವಾಳ್, ನವೀನ್ ಕೆ. ಇನ್ನ, ಅಭಿನಂದನ ಗ್ರಂಥದ ಸಂಪಾದಕ ಮಂಡಳಿಯ ಪ್ರಧಾನ ಸಂಪಾದಕರಾಗಿ ಸಾ. ದಯಾ, ಸದಸ್ಯರಾಗಿ ಅಶೋಕ್ ಸುವರ್ಣ, ವಿಶ್ವನಾಥ್ ದೊಡ್ಮನೆ, ಶ್ರೀನಿವಾಸ ಜೋಕಟ್ಟೆ, ಗಣೇಶ್ ಕುಮಾರ್ ಮೊದಲಾದವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನ್ಯಾಯವಾದಿ ಆರ್. ಎಂ. ಭಂಡಾರಿ, ಶೋಭಾ ಸುರೇಶ್ ಭಂಡಾರಿ, ಸೌರಭ್ ಸುರೇಶ್ ಭಂಡಾರಿ, ಹೇಮಾ ಎಸ್. ಅಮೀನ್, ವಿಶ್ವನಾಥ ದೊಡ್ಡಮನೆ, ಶಶಿಧರ ಡಿ. ಭಂಡಾರಿ, ಪ್ರಕಾಶ್ ಶೆಟ್ಟಿ ಸುರತ್ಕಲ್, ಸಾ. ದಯಾ, ಗಣೇಶ್ ಕುಮಾರ್, ಕರ್ನೂರ್ ಮೋಹನ್ ರೈ, ಅಶೋಕ್ ಪಕ್ಕಳ, ಸುಧಾಕರ ಭಂಡಾರಿ ಐರೋಲಿ, ಜಯಶೀಲ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು. ಪದ್ಮನಾಭ ಸಸಿಹಿತ್ಲು ಪ್ರಾರ್ಥಗೈದರು. ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿ, ಸಮಾರಂಭದ ಮಾಹಿತಿ ನೀಡಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.