ಉದ್ಯೋಗ ಖಾತ್ರಿ ಕಾಮಗಾರಿ ಆರಂಭಿಸಿ


Team Udayavani, Feb 1, 2022, 1:01 PM IST

14protest

ಆಳಂದ: ಬಡ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಕಾಮಗಾರಿ ಆರಂಭಿಸಿ ವಾರದಲ್ಲೇ ಕಾಮಗಾರಿ ಸ್ಥಗಿತಗೊಳಿಸಿದ ಚಿಂಚನಸೂರ ಗ್ರಾಪಂ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿ ನಡೆ ಖಂಡಿಸಿ ಕೂಲಿ ಕಾರ್ಮಿಕರು ಗ್ರಾಪಂ ಕಚೇರಿ ಎದುರು ಸೋಮವಾರ ದಿಢೀರ್‌ ಪ್ರತಿಭಟನಾ ಧರಣಿ ನಡೆಸಿದರು.

ದಲಿತ ಹಕ್ಕುಗಳ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಆಶ್ರಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಪಾಂಡುರಂಗ ಮಾವೀನಕರ್‌ ಅವರ ನೇತೃತ್ವದಲ್ಲಿ ಗ್ರಾಮದ ನೂರಾರು ಕೂಲಿ ಕಾರ್ಮಿಕರು ಸೇರಿ ಗ್ರಾಪಂ ಕಚೇರಿ ಎದುರು ಧರಣಿ ನಡೆಸಿ ಬೇಡಿಕೆ ಈಡೇರಿಸಲು ಒತ್ತಾಯಿಸಿದರು.

ಕೊರೊನಾ ವೈರಸ್‌ ಹಾಗೂ ಅತಿವೃಷ್ಟಿ ಅನಾವೃಷ್ಟಿಯಿಂದಾಗಿ ಕಾರ್ಮಿಕರಿಗೆ ಕೆಲಸವಿಲ್ಲದೆ ಹೊಟ್ಟೆ ತುಂಬಿಸಿಕೊಳ್ಳಲಾಗದ ಪರಿಸ್ಥಿತಿ ಉಂಟಾಗಿದ್ದು, ಉದ್ಯೋಗ ಖಾತ್ರಿ ಕಾಮಗಾರಿ ಆರಂಭಿಸಬೇಕು. ಕಾಟಾಚಾರ ಎನ್ನುವಂತೆ ಒಂದೇ ವಾರ ಕಾಮಗಾರಿ ನೀಡಿ ಈಗ ಕಾಮಗಾರಿ ಸ್ಥಗಿತಗೊಳಿಸಿ ಕೆಲಸವಿಲ್ಲವೆಂದು ಹೇಳಿ ಕಾರ್ಮಿಕ ವಿರೋಧಿ ನೀತಿ ಅನುಸರಿಸಲಾಗಿದೆ. ಸರ್ಕಾರ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಉದ್ಯೋಗ ಖಾತ್ರಿಯಡಿ ಕಾರ್ಮಿಕರಿಗೆ ನೂರುದಿನ ಕೆಲಸ ಕೊಡಬೇಕು ಎಂದು ಕಾಯ್ದೆ ಮೂಲಕ ಯೋಜನೆ ಜಾರಿಗೆ ತಂದಿದೆ. ಆದರೆ ಗ್ರಾಪಂ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ ಅವರು ಕಾಮಗಾರಿ ಸ್ಥಗಿತಗೊಳಿಸಿ ಬಡವರ ಹೊಟ್ಟೆಮೇಲೆ ಹೊಡೆಯುತ್ತಿದ್ದಾರೆ. ಕೂಡಲೇ ಕಾಮಗಾರಿ ನೀಡದೆ ಹೋದಲ್ಲಿ ಜಿಲ್ಲಾ ಹಾಗೂ ತಾಲೂಕು ಮುಖಂಡರೊಂದಿಗೆ ಹಾಗೂ ವ್ಯಾಪ್ತಿಯ ಕಾರ್ಮಿಕರು ಸೇರಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಸರ್ಕಾರಿ ಶಾಲೆಗೆ ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳುತ್ತಿಲ್ಲ. ಹಿಂದೆ ಎನ್‌ಎಂಆರ್‌ ತೆಗೆದಂತೆ ಕೆಲಸ ಆರಂಭಿಸಬೇಕು. ಉದ್ಯೋಗಖಾತ್ರಿ ಕಾಮಗಾರಿ ಬಯಸಿ ಫಾರಂ 6 ನೀಡುವ ಎಲ್ಲ ಕಾರ್ಮಿಕರಿಗೆ ಕೆಲಸ ಒದಗಿಸಬೇಕು. ಗ್ರಾಪಂನಲ್ಲಿ ಕಂಪ್ಯೂಟರ್‌ ನಿರ್ವಹಕರಿಲ್ಲ. ಕೂಡಲೇ ಗ್ರಾಪಂಗೆ ಅಗತ್ಯ ಸಿಬ್ಬಂದಿ ಒದಗಿಸಿ ಕಾರ್ಮಿಕರಿಗೆ ಕಾಮಗಾರಿ ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಪಿಡಿಒ ದಶರಥ ಪಾತ್ರೆ ಅವರು, ನಾಲ್ಕು ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಿ ಇನ್ನೂಳಿದ ಬೇಡಿಕೆ ಈಡೇರಿಸಲಾಗುವುದು. ಧರಣಿ ವಾಪಸ ಪಡೆಯಬೇಕು ಎಂದು ಮನವಿ ಮಾಡಿದ ಮೇಲೆ ಧರಣಿ ಹಿಂಪಡೆಯಲಾಯಿತು. ಜಟ್ಟೆಪ್ಪ ಮಾವೀನಕರ್‌, ಕೃಷ್ಣಪ್ಪ ಧನ್ನಿ, ಶಿಶುಪಾಲ ಧನ್ನಿ, ಕಸ್ತುರಾಬಾಯಿ ವಡೆಯರಾಜ, ರೇಖಾ ಜಮಾದಾರ, ಗಂಗಮ್ಮ ಕರ್‌, ಶ್ರೀದೇವಿ ಬಾಳಿ, ಶಶಿಕಲಾ ಮಗಿ, ಮಹಾದೇವ ಸುತಾರ, ಹಣಮಂತ ಮಗಿ, ಬಾಬು ಮಗಿ ಅನೇಕರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

adike

Areca nut; ಬಳಲಿರುವ ಅಡಿಕೆಗೆ ಚೀನ ವೈರಸ್‌ ಸಿಡಿಲು!

1-kb

Land; ಬಗರ್‌ ಹುಕುಂ ಅರ್ಜಿ: ಎರಡು ತಿಂಗಳು ಗಡುವು

Kharge (2)

Karnataka Politics; ದಲಿತ ಸಿಎಂ ಚರ್ಚೆಗೆ ಮತ್ತೆ ರೆಕ್ಕೆಪುಕ್ಕ

1-vara

Dowry; ವರದಕ್ಷಿಣೆ ಕಿರುಕುಳ: ಕುಂದಾಪುರ ಮೂಲದ ಮಹಿಳಾ ಟೆಕಿ ಆತ್ಮಹ *ತ್ಯೆ

Burkina Faso: ಬುರ್ಕಿನಫಾಸೋದಲ್ಲಿ ಒಂದೇ ಗಂಟೆಯಲ್ಲಿ 600 ಮಂದಿ ಹತ್ಯೆ

Burkina Faso: ಬುರ್ಕಿನಫಾಸೋದಲ್ಲಿ ಒಂದೇ ಗಂಟೆಯಲ್ಲಿ 600 ಮಂದಿ ಹತ್ಯೆ

naksal (2)

31 Naxal ಎನ್‌ಕೌಂಟರ್‌ಗೆ 1,500 ಮಂದಿ 25 ಕಿ.ಮೀ. ಟ್ರೆಕ್‌!

bjp jds

BJP, JDS ಮೈತ್ರಿ ಕಾಂಗ್ರೆಸ್‌ ಲೋಕಸಭಾ ಸೋಲಿಗೆ ಕಾರಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ತಜ್ಞರ ಸಮಿತಿ ರಚನೆ

Kalaburagi: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ತಜ್ಞರ ಸಮಿತಿ ರಚನೆ

ಹೊಸ ಮಾರುಕಟ್ಟೆಗೆ ಪ್ರವೇಶ: ಕೊಲ್ಹಾಪುರ ಮಾರುಕಟ್ಟೆಗೆ ಕಲಬುರಗಿ ಹಾಲು!

ಹೊಸ ಮಾರುಕಟ್ಟೆಗೆ ಪ್ರವೇಶ: ಕೊಲ್ಹಾಪುರ ಮಾರುಕಟ್ಟೆಗೆ ಕಲಬುರಗಿ ಹಾಲು!

Kalaburagi: ಅಧಿಕಾರಿಗಳಿಗೆ ಕೊಬ್ಬು‌ ಹೆಚ್ಚಾಗಿದೆ; ಛಳಿ ಬಿಡಿಸಬೇಕಿದೆ: ಬಿ.ಆರ್.ಪಾಟೀಲ್

Kalaburagi: ಅಧಿಕಾರಿಗಳಿಗೆ ಕೊಬ್ಬು‌ ಹೆಚ್ಚಾಗಿದೆ; ಚಳಿ ಬಿಡಿಸಬೇಕಿದೆ: ಬಿ.ಆರ್.ಪಾಟೀಲ್

ನಾಲ್ಕು ವರ್ಷವಾದರೂ ಸಿಕ್ಕಿಲ್ಲ ವಿವಾಹ ಪ್ರೋತ್ಸಾಹಧನ!  

Govt.,: ನಾಲ್ಕು ವರ್ಷವಾದರೂ ಸಿಕ್ಕಿಲ್ಲ ವಿವಾಹ ಪ್ರೋತ್ಸಾಹಧನ!  

5-kalburgi

Kalaburagi: ಮದ್ಯದ ಗುಂಗಿನಲ್ಲಿ ಪತ್ನಿಯನ್ನು ಕೊಂದ ಪತಿ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

adike

Areca nut; ಬಳಲಿರುವ ಅಡಿಕೆಗೆ ಚೀನ ವೈರಸ್‌ ಸಿಡಿಲು!

1-kb

Land; ಬಗರ್‌ ಹುಕುಂ ಅರ್ಜಿ: ಎರಡು ತಿಂಗಳು ಗಡುವು

Kharge (2)

Karnataka Politics; ದಲಿತ ಸಿಎಂ ಚರ್ಚೆಗೆ ಮತ್ತೆ ರೆಕ್ಕೆಪುಕ್ಕ

1-vara

Dowry; ವರದಕ್ಷಿಣೆ ಕಿರುಕುಳ: ಕುಂದಾಪುರ ಮೂಲದ ಮಹಿಳಾ ಟೆಕಿ ಆತ್ಮಹ *ತ್ಯೆ

Mangaluru: ಧರ್ಮ ದ್ವೇಷದ ಭಾಷಣ; ಶಿಕ್ಷಕನ ವಿರುದ್ದ ಪ್ರಕರಣ

Mangaluru: ಧರ್ಮ ದ್ವೇಷದ ಭಾಷಣ; ಶಿಕ್ಷಕನ ವಿರುದ್ದ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.