ವರಕವಿ ದ.ರಾ.ಬೇಂದ್ರೆ ಜನ್ಮ ದಿನಾಚರಣೆ
Team Udayavani, Feb 1, 2022, 1:09 PM IST
ಚಿಕ್ಕಬಳ್ಳಾಪುರ: ಸಾಹಿತ್ಯ ಕೃತಿಗಳ ಅಧ್ಯಯನದಿಂದ ವಿದ್ಯಾರ್ಥಿ, ಯುವಜನತೆ ಮಾನವೀಯ ಮೌಲ್ಯಗಳಕಲಿಕೆ ಜೊತೆಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲುಮುಂದಾಗಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಕೋಡಿರಂಗಪ್ಪ ಸಲಹೆ ಮಾಡಿದರು.
ನಗರದ ಶಾಂತಿನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಜಿಲ್ಲಾ ಕಸಾಪ ಆಯೋಜಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ವರಕವಿ ದ.ರಾ.ಬೇಂದ್ರೆ ಅವರ126ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿಮಾತನಾಡಿದ ಅವರು, ಸಾಹಿತ್ಯಕ್ಕೆ ಸಮಾಜದಮನೋಭಾವ ಬದಲಿಸುವ ಶಕ್ತಿ ಇದೆ. ಉತ್ತಮ ಸಾಹಿತ್ಯಕೃತಿಗಳ ಅಧ್ಯಯನದಿಂದ ಉತ್ತಮ ವ್ಯಕ್ತಿತ್ವವನ್ನುರೂಪಿಸಿಕೊಳ್ಳಬಹುದು. ಶಿಕ್ಷಣ ವ್ಯವಸ್ಥೆಯಲ್ಲಿ ಐಚ್ಚಿಕವಿಷಯಗಳ ಮಧ್ಯೆ ಭಾಷೆ, ಸಾಹಿತ್ಯದಂತಹವಿಷಯಗಳು ಮಂಕಾಗುತ್ತಿರುವುದು ದುರದೃಷ್ಟಕರ ಎಂದು ಹೇಳಿದರು.
ಬೇಂದ್ರೆ ಕಾವ್ಯ ಪ್ರತಿಭೆಗೆ ಅವರೇ ಸಾಟಿ: ದ. ರಾ.ಬೇಂದ್ರೆಯವರು ಕಷ್ಟಗಳ ಕುಲುಮೆಯಲ್ಲಿ ಅರಳಿನಿಂತ ಅಪೂರ್ವ ಪ್ರತಿಭೆ. ಪ್ರಕೃತಿ, ಆಧ್ಯಾತ್ಮ, ಸ್ತ್ರೀಸಂಕಟಗಳು ಸೇರಿ ಹಲವು ವಿಷಯಗಳ ಕುರಿತು ಕಾವ್ಯರಚನೆ ಮಾಡಿ ಗಮನ ಸೆಳೆದಿದ್ದಾರೆ. ಅವರಲ್ಲಿನಕಾವ್ಯ ಪ್ರತಿಭೆಗೆ ಅವರೇ ಸಾಟಿ ಎಂದು ವಿವರಿಸಿದರು. ಕನ್ನಡ ಸಾರಸ್ವತ ಲೋಕದ ಮಿನುಗು ತಾರೆ: ಬೇಂದ್ರೆಹುಟ್ಟಿಬೆಳೆದ ಧಾರವಾಡದ ಸಾಧನಕೇರಿಯ ಪರಿಸರ ಬೇಂದ್ರೆಯವರ ಸಾಧನೆಯಿಂದ ಸಾಧನೆಕೇರಿಯಾಯಿತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತಸಾಹಿತಿಯ ಸಾಹಿತ್ಯ ಜಾನಪದ ಸೊಗಡಿನ ಮೂಲಕ ಜನಸಾಮಾನ್ಯರನ್ನು ಮುಟ್ಟುವಂತದ್ದಾಗಿದೆ.ಬೇಂದ್ರೆಯವರು ಕನ್ನಡ ಸಾರಸ್ವತ ಲೋಕದ ಮಿನುಗುತಾರೆ ಎಂದು ಹೇಳಿದರು.
ಕನ್ನಡ ಸಾಹಿತ್ಯಕ್ಕೆ ನಿರೀಕ್ಷೆಗೂ ಮೀರಿ ಕೊಡುಗೆ: ದ.ರಾ.ಬೇಂದ್ರೆಯವರ ಬದುಕು-ಬರಹದ ಕುರಿತು ಕನ್ನಡ ಉಪನ್ಯಾಸಕ ಎನ್.ಚಂದ್ರಶೇಖರ್ ಮಾತನಾಡಿ,ಬೇಂದ್ರೆಯವರ ಮಾತೃಭಾಷೆ ಮರಾಠಿಯಾದರೂಕನ್ನಡ ಸಾಹಿತ್ಯಕ್ಕೆ ನಿರೀಕ್ಷೆಗೂ ಮೀರಿದ ಕೊಡುಗೆ ನೀಡಿ ಗಮನ ಸೆಳೆದಿದ್ದಾರೆ. ಅವರ ಸಾಹಿತ್ಯ ಕೃತಿಗಳು ಜನಸಾಮಾನ್ಯರಿಗೆ ಹತ್ತಿರವಾಗಿದ್ದು, ಅವರವ್ಯಕ್ತಿತ್ವದಂತೆಯೇ ಭಾಷೆಯೂ ಸರಳವಾಗಿದೆ ಎಂದು ತಿಳಿಸಿದರು.
ನರಬಲಿ ಶೀರ್ಷಿಕೆಯ ಕವಿತೆಯನ್ನು ಬರೆದು ಬ್ರಿಟಿಷರಿಂದ ರಾಷ್ಟ್ರದ್ರೋಹದ ಪಟ್ಟದ ಜೊತೆಗೆಶಿಕ್ಷೆಯನ್ನೂ ಅನುಭವಿಸುವಂತಾಯಿತು. ಆದರೂ,ಅವರೆಂದಿಗೂ ತಮ್ಮ ತತ್ವ ಆದರ್ಶಗಳ ವಿಚಾರದಲ್ಲಿ ರಾಜಿಯಾಗಲಿಲ್ಲ ಎಂದು ತಿಳಿಸಿದರು.
ಯುವಪೀಳಿಗೆಗೆ ಮಾದರಿ: ಬೇಂದ್ರೆಯವರ ಸಾಹಿತ್ಯ ಕೃತಿಗಳಲ್ಲಿ ಸ್ತ್ರೀ ಸಂವೇದನೆ, ನೋವು ನಲಿವುಗಳ ಗಟ್ಟಿಹೂರಣವಿದೆ. ತಮ್ಮ ಬದುಕಿನುದ್ದಕ್ಕೂಅನುಭವಿಸಿಕೊಂಡು ಬಂದ ವಿವಿಧ ಆಯಾಮಗಳೇಸಾಹಿತ್ಯವಾಗಿ ನಂತರ ಅದು ಸಾರ್ವತ್ರಿಕವಾದಸಾಹಿತ್ಯವಾಗಿ ಹೊರಹೊಮ್ಮಿತು. ದ.ರಾ.ಬೇಂದ್ರೆಯವರಬದುಕಿನ ಏರಿಳಿತಗಳ ಮೂಲಕ ಬರುವ ಸಂದೇಶಗಳುಇಂದಿನ ಯುವಪೀಳಿಗೆಗೆ ಮಾದರಿಯಾಗಬೇಕು.ಅವರ ಸಾಹಿತ್ಯ ಕೃತಿಗಳನ್ನು ಗಂಭೀರವಾಗಿ ಅಧ್ಯಯನಮಾಡಿ, ಬದುಕಿಗೆ ಪ್ರೇರಣೆ ಪಡೆಯುವಷ್ಟರ ಮಟ್ಟಿಗೆಒಂದು ವಿಶ್ವವಿದ್ಯಾಲಯದಂತೆ ಬೇಂದ್ರೆಯವರ ಜೀವನಮತ್ತು ಸಾಹಿತ್ಯ ನಮ್ಮ ಮುಂದಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪುಸ್ತಕ ಬಹುಮಾನ: ವರಕವಿ ದ.ರಾ.ಬೇಂದ್ರೆಯವರ ಜನ್ಮ ದಿನಾಚರಣೆ ಪ್ರಯುಕ್ತವಿದ್ಯಾರ್ಥಿಗಳಿಗೆ ಬೇಂದ್ರೆ ಕುರಿತ ಪ್ರಬಂಧ, ಭಾಷಣಮತ್ತು ಗೀತಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.
ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗಾಯಕ ಗ.ನ.ಅಶ್ವತ್ಥ್ ಅವರು ಬೇಂದ್ರೆ ಅವರ ಗೀತಗಾಯನದ ಮೂಲಕ ಗಮನ ಸೆಳೆದರು.
ಕಾಲೇಜಿನ ಕಾರ್ಯದರ್ಶಿ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ನಿಕಟಪೂರ್ವ ಕಾರ್ಯದರ್ಶಿ ಎಸ್.ಎನ್.ಅಮೃತ್‌ಕುಮಾರ್, ಕಸಾಪ ತಾಲೂಕುಅಧ್ಯಕ್ಷ ಯಲುವಳ್ಳಿ ಸೊಣ್ಣೇಗೌಡ, ಕಸಾಪ ಆಜೀವ ಸದಸ್ಯರಾದ ಚೆನ್ನಮಲ್ಲಿಕಾರ್ಜುನ್, ನಾಗಭೂಷಣ್‌ರೆಡ್ಡಿ,ಪ್ರೇಮಾಲೀಲಾ ವೆಂಕಟೇಶ್, ಗೊಳ್ಳುಚಿನ್ನಪ್ಪನಹಳ್ಳಿವೆಂಕಟೇಶ್, ಜಾನಪದ ಪರಿಷತ್ ತಾಲೂಕು ಅಧ್ಯಕ್ಷಮಂಚನಬಲೆ ಶ್ರೀನಿವಾಸ್, ಕಾಲೇಜಿನ ಬೋಧಕ,ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.