ಶತಕದ ದಾರಿಗೆ ಅಮೃತಧಾರೆ; ಸ್ವಾತಂತ್ರ್ಯದ ಶತಮಾನೋತ್ಸವಕ್ಕೆ ನವಭಾರತ ನಿರ್ಮಾಣದ ಗುರಿ
25 ವರ್ಷಗಳಿಗೆ ನೀಲನಕ್ಷೆ,ಪ್ರಧಾನಮಂತ್ರಿ ಗತಿ ಶಕ್ತಿಗೆ ಮತ್ತಷ್ಟು ಬಲ
Team Udayavani, Feb 2, 2022, 6:10 AM IST
union budget 2022,
“ಭಾರತ @75ನಿಂದ ಭಾರತ @ 100ವರೆಗೆ…, ಸ್ವಾತಂತ್ರ್ಯದ ಅಮೃತ ಮಹೋತ್ಸವದಿಂದ ಅಮೃತ ಕಾಲದವರೆಗೆ…
ಮುಂದಿನ 25 ವರ್ಷಗಳಲ್ಲಿ ದೇಶದಲ್ಲಿ “ಅಭಿವೃದ್ಧಿಯ ಪರ್ವ’ ವನ್ನು ಸಾಧಿಸುವ ಗುರಿಯೊಂದಿಗೆ, ಕೇಂದ್ರ ಸರಕಾರವು ಮುಂಗಡ ಪತ್ರದ ಮೂಲಕ “ಅಮೃತ ಕಾಲ’ಕ್ಕೆ ಭದ್ರ ಅಡಿಪಾಯ ಹಾಕಿದೆ.
ಕನಿಷ್ಠ ಸರಕಾರ- ಗರಿಷ್ಠ ಆಡಳಿತ, ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣ, ವಿಶ್ವಾಸಾಧಾರಿತ ಆಡಳಿತ ಮುಂತಾದ ಥೀಮ್‌ಗಳನ್ನು ಇಟ್ಟುಕೊಂಡು, ಮುಂದಿನ 25 ವರ್ಷಗಳಿಗೆ ನೀಲನಕ್ಷೆ ರೂಪಿಸಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತು 100 ವರ್ಷಗಳು ತುಂಬುವ ವೇಳೆಗೆ “ನವಭಾರತ’ ನಿರ್ಮಾಣದ ಕನಸನ್ನು ಸಾಕಾರಗೊಳಿಸುವ ಧ್ಯೇಯವನ್ನು ಹಾಕಿಕೊಳ್ಳಲಾಗಿದೆ.
ಇದನ್ನು ಭವಿಷ್ಯದ ಬಜೆಟ್ ಎಂದು ಕರೆದಿರುವ ಸರಕಾರ, 7 ಪ್ರಮುಖ ಅಂಶಗಳಿಗೆ ಆದ್ಯತೆ ನೀಡಿದೆ. ಪಿಎಂ ಗತಿಶಕ್ತಿ, ಎಲ್ಲರನ್ನೊಳಗೊಂಡ ಅಭಿವೃದ್ಧಿ, ಉತ್ಪಾದಕತೆ ಹೆಚ್ಚಳ, ಉದಯೋನ್ಮುಖ ಅವಕಾಶಗಳು, ಇಂಧನ ಪರಿವರ್ತನೆ, ಹವಾಮಾನ ಸಂಬಂಧಿ ಕಾರ್ಯಕ್ರಮಗಳು, ಹಣಕಾಸು ಹೂಡಿಕೆಗಳನ್ನು ಕೇಂದ್ರೀಕರಿಸಿ ಮುಂಗಡ ಪತ್ರ ರೂಪಿಸಿದೆ. ದೇಶದಲ್ಲಿ 25 ಸಾವಿರ ಕಿ.ಮೀ. ಹೆದ್ದಾರಿ ವಿಸ್ತರಣೆ, ನಳದಿಂದ ಜಲ ಯೋಜನೆಗೆ 60 ಸಾವಿರ ಕೋಟಿ ರೂ., 5 ನದಿಗಳ ಜೋಡಣೆ, ಪಿಎಂ ಗೃಹ ನಿರ್ಮಾಣ ಯೋಜನೆಗೆ 48,000 ಕೋಟಿ ರೂ., ಮೂಲಸೌಕರ್ಯ ಯೋಜನೆಗಳಿಗೆ ಒತ್ತು ನೀಡಲಾಗಿದೆ.
ಈಗಾಗಲೇ 14 ಕ್ಷೇತ್ರಗಳಲ್ಲಿ ಉತ್ಪಾದನೆ ಆಧರಿತ ಪ್ರೋತ್ಸಾಹ ಧನ ಘೋಷಿಸಲಾಗಿದ್ದು, ಆತ್ಮನಿರ್ಭರ ಭಾರತ ನಿರ್ಮಾಣದ ನಿಟ್ಟಿನಲ್ಲಿ ಮುಂದಡಿಯಿಡಲಾಗಿದೆ. ಇದರಿಂದ ಮುಂದಿನ 5 ವರ್ಷಗಳಲ್ಲಿ 60 ಲಕ್ಷ ಹೊಸ ಉದ್ಯೋಗ ಸೃಷ್ಟಿಯ ಜತೆಗೆ ಹೆಚ್ಚುವರಿ 30 ಲಕ್ಷ ಕೋಟಿ ರೂ.ಗಳ ಉತ್ಪಾದನೆಯೂ ಸಾಧ್ಯವಾಗಲಿದೆ.
ನಗರ ಯೋಜನೆಗೆ ಒತ್ತು: ದೇಶಕ್ಕೆ ಸ್ವಾತಂತ್ರ್ಯ ಬಂದು 100 ವರ್ಷಗಳು ತುಂಬುವ ಹೊತ್ತಿಗೆ, ಅರ್ಧದಷ್ಟು ಜನಸಂಖ್ಯೆಯು ನಗರಪ್ರದೇಶಗಳಲ್ಲಿ ಬದುಕು ಕಟ್ಟಿಕೊಂಡಿರುತ್ತದೆ. ಇದಕ್ಕಾಗಿ ಈಗಲೇ ಸಿದ್ಧತೆ ಆರಂಭಿಸಲಾಗಿದೆ. ವ್ಯವಸ್ಥಿತವಾಗಿ ನಗರಾಭಿವೃದ್ಧಿ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ನಗರ ಸಾಮರ್ಥ್ಯ ವೃದ್ಧಿಗಾಗಿ ರಾಜ್ಯಗಳಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಕೇಂದ್ರ ಸರಕಾರ ಘೋಷಿಸಿದೆ. ಕಟ್ಟಡ ಬೈಲಾಗಳ ಆಧುನೀಕರಣ, ನಗರ ಯೋಜನೆ ಅನುಷ್ಠಾನ ಮಾಡುವುದಾಗಿಯೂ ತಿಳಿಸಿದೆ. ನಗರ ಯೋಜನೆ ರೂಪಿಸುವವರು, ಆರ್ಥಿಕ ತಜ್ಞರು ಮತ್ತು ಸಂಸ್ಥೆಗಳನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ, ನಗರಾಭಿವೃದ್ಧಿ, ಸಾಮರ್ಥ್ಯ ವೃದ್ಧಿ, ಯೋಜನೆ, ಅನುಷ್ಠಾನಕ್ಕೆ ಸಂಬಂಧಿಸಿದ ಶಿಫಾರಸುಗಳನ್ನು ಪಡೆಯಲಾಗುತ್ತದೆ ಎಂದು ನಿರ್ಮಲಾ ಹೇಳಿದ್ದಾರೆ.
ಏನಿದು “ಅಮೃತಕಾಲ’?
ವೈದಿಕ ಜ್ಯೋತಿಷದಲ್ಲಿ “ಅಮೃತ ಕಾಲ’ ಎಂಬ ಪದದ ಉಲ್ಲೇಖವಿದೆ. ಸಮುದ್ರಮಥನದ ವೇಳೆ ಅಸುರರು ಮತ್ತು ಸುರರ ಮುಂದೆ ಅಮೃತವು ಪ್ರತ್ಯಕ್ಷವಾಗಿ “ಅದೃಷ್ಟ’ದ ಬಾಗಿಲು ತೆರೆದ ಸಮಯವನ್ನು ಅಮೃತ ಕಾಲ(ಅಮೃತ ಗಳಿಗೆ) ಎನ್ನುತ್ತಾರೆ. ಇದನ್ನು ಯಾವುದೇ ಹೊಸ ಕಾರ್ಯವನ್ನು ಆರಂಭಿಸಲು ಪ್ರಶಸ್ತವಾದ ಶುಭ ಕಾಲ ಎಂದು ಪರಿಗಣಿಸಲಾಗಿದೆ. ಕಳೆದ ವರ್ಷ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಪ್ರಧಾನಿ ಮೋದಿ ಅವರು ಮುಂದಿನ 25 ವರ್ಷಗಳಿಗಾಗಿ ಹೊಸ ನೀಲನಕ್ಷೆಯನ್ನು ಅನಾವರಣಗೊಳಿಸಿ, ಅದನ್ನು “ಅಮೃತ ಕಾಲ’ ಎಂದು ಘೋಷಿಸಿದ್ದರು. ಪ್ರತಿಯೊಂದು ಕ್ಷೇತ್ರದಲ್ಲೂ ಅತ್ಯುತ್ತಮ ಪ್ರಗತಿ ಸಾಧಿಸುವ, ನಾಗರಿಕರ ಜೀವನಮಟ್ಟ ಸುಧಾರಿಸುವ, ಗ್ರಾಮಗಳು ಮತ್ತು ನಗರಗಳ ನಡುವಿನ ಅಂತರವನ್ನು ತಗ್ಗಿಸುವ ನಿಟ್ಟಿನಲ್ಲಿ ಎಲ್ಲರೂ “ಪ್ರಯತ್ನ'(ಸಬ್‌ಕಾ ಪ್ರಯಾಸ್) ಪಡಬೇಕು ಎಂದೂ ಕರೆ ನೀಡಿದ್ದರು.
ಗಿರಿಧಾಮಗಳಿಗಾಗಿ ಪರ್ವತಮಾಲಾ
ಭಾರತ್‌ಮಾಲಾ, ಸಾಗರಮಾಲಾ ಬಳಿಕ ಈಗ ಪರ್ವತಮಾಲಾ ಯೋಜನೆಯನ್ನು ಸರಕಾರ ಘೋಷಿಸಿದೆ. ಗಿರಿಧಾಮಗಳಿಗೆ ಇದು ವರವಾಗಿ ಪರಿಣಮಿಸಲಿದೆ. ರೋಪ್‌ವೇ, ಕೇಬಲ್ ಕಾರ್, ವರ್ನಾಕ್ಯುಲರ್ ರೈಲ್ವೇಗಳು ಕೂಡ ಇದರಲ್ಲಿ ಸೇರಿದ್ದು, 8 ಹೊಸ ರೋಪ್‌ವೇ(60 ಕಿ.ಮೀ.) ಯೋಜನೆಗಳನ್ನೂ ಆರಂಭಿಸಲು ನಿರ್ಧರಿಸಲಾಗಿದೆ. ರಾಷ್ಟ್ರೀಯ ರೋಪ್‌ವೇ ಅಭಿವೃದ್ಧಿ ಯೋಜನೆಗಳು ಈಶಾನ್ಯ ರಾಜ್ಯ, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಕಾಶ್ಮೀರಕ್ಕೆ ಅನುಕೂಲ ಕಲ್ಪಿಸಲಿದೆ. ಪರ್ವತ ಪ್ರದೇಶಗಳು ಅಂದರೆ ಗಿರಿಧಾಮಗಳಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನದ ಜತೆಗೆ ಸಾಕಷ್ಟು ಉದ್ಯೋಗಾವಕಾಶಗಳನ್ನೂ ಸೃಷ್ಟಿಸುವುದು ಇದರ ಉದ್ದೇಶವಾಗಿದೆ. ಈ ಯೋಜನೆ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, “ಪರ್ವತಮಾಲಾ ಯೋಜನೆಯಿಂದ ಗಿರಿಧಾಮಗಳಿಗೆ ಸಾರಿಗೆ ಸಂಪರ್ಕ ಹೆಚ್ಚಲಿದೆ. ಮಾತ್ರವಲ್ಲ ಮಾಲಿನ್ಯಮುಕ್ತ ಸಾರಿಗೆಯನ್ನೇ ಪರಿಚಯಿಸಲಿದ್ದೇವೆ. ಮೂಲಸೌಕರ್ಯಗಳ ಅಭಿವೃದ್ಧಿಯು ನವಭಾರತ ನಿರ್ಮಾಣಕ್ಕೆ ಸಹಕಾರಿಯಾಗಲಿದೆ’ ಎಂದು ಹೇಳಿದ್ದಾರೆ.
ಪಿಎಂ ಗತಿಶಕ್ತಿಗೆ ವೇಗ
ಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲ್ರಾನ್ ಮೂಲಕ ಆರ್ಥಿಕ ಪ್ರಗತಿ ಮತ್ತು ಸುಸ್ಥಿರ ಅಭಿವೃದ್ಧಿ ಸಾಧಿಸಲು ಪಣ ತೊಡಲಾಗಿದೆ. ರಸ್ತೆ, ರೈಲ್ವೇ, ಏರ್‌ಪೋರ್ಟ್, ಬಂದರುಗಳು, ಸಾಮೂಹಿಕ ಸಾರಿಗೆ, ಜಲಮಾರ್ಗಗಳು ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಇದನ್ನು ಸಾಧಿಸುವುದಾಗಿ ಸರಕಾರ ಹೇಳಿದೆ. ಈ ಯೋಜನೆಯಡಿ ಸರಕಾರವು ರಾಷ್ಟ್ರೀಯ ಹೆದ್ದಾರಿ ಜಾಲವನ್ನು 25 ಸಾವಿರ ಕಿ.ಮೀ.ನಷ್ಟು ವಿಸ್ತರಿಸಲು ನಿರ್ಧರಿಸಿದೆ. ಜನರು ಮತ್ತು ಸರಕುಗಳ ಸಂಚಾರಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಎಕ್ಸ್‌ಪ್ರಸ್‌ವೇಗಳನ್ನು ನಿರ್ಮಿಸುವ ಗುರಿ ಹಾಕಿಕೊಳ್ಳಲಾಗಿದೆ.
ಸರಕಾರಿ-ಖಾಸಗಿ ಸಹಭಾಗಿತ್ವದಲ್ಲಿ ದೇಶದ 4 ಕಡೆ ಮಲ್ಟಿಮಾಡೆಲ್ ಲಾಜಿಸ್ಟಿಕ್ಸ್ ಪಾರ್ಕ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
MUST WATCH
ಹೊಸ ಸೇರ್ಪಡೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.