ಎಲೆಕ್ಟ್ರಿಕ್ ವೆಹಿಕಲ್‌ಗೆ ಕಿಕ್; ಆತ್ಮನಿರ್ಭರದ ಕನ್ನಡಿಯಲ್ಲಿ “ಇವಿ ಕ್ರಾಂತಿ’ಯ ಕನಸು
ಇವಿ ಉದ್ಯಮಕ್ಕೆ ಭಾರೀ ಕೊಡುಗೆ ಬರೋಬ್ಬರಿ 2908 ಕೋಟಿ ರೂಪಾಯಿ ವಿನಿಯೋಗ
Team Udayavani, Feb 2, 2022, 5:15 AM IST
ಭಾರತದಲ್ಲಿಂದು ವಿದ್ಯುತ್‌ಚಾಲಿತ ವಾಹನಗಳ (ಎಲೆಕ್ಟ್ರಿಕ್ ವೆಹಿಕಲ್ಸ್) ಪರ್ವ ಶುರುವಾಗಿದೆ. 2021ರಲ್ಲಿ ಹಿಂದೆಂದಿಗಿಂತಲೂ ಹೆಚ್ಚು, ಬರೋಬ್ಬರಿ 3,29,190 ವಾಹನಗಳು ಖರೀದಿ ಆಗಿದ್ದೇ ಇದಕ್ಕೆ ಸಾಕ್ಷಿ. ಪೆಟ್ರೋಲ್ ಮೇಲಿನ ಅವಲಂಬನೆ ತಗ್ಗಿಸುವಲ್ಲಿ ಮತ್ತು ಎಲೆಕ್ಟ್ರಿಕ್ ವೆಹಿಕಲ್‌ಗಳತ್ತ ಜನತೆಯನ್ನು ಮತ್ತಷ್ಟು ಆಕರ್ಷಿಸಲು, ದೇಶಾದ್ಯಂತ “ಇವಿ-ಇಕೋ ಸಿಸ್ಟಂ’ ರೂಪಿಸಲು ಕೇಂದ್ರ ಸರಕಾರ ಮುಂದಾಗಿದೆ. ಇದರ ಭಾಗವಾಗಿ ಬಜೆಟ್‌ನಲ್ಲಿ ಬ್ಯಾಟರಿ ಸ್ವಾಪ್ಪಿಂಗ್ ಪಾಲಿಸಿ ಜಾರಿಗೆ ತಂದಿದೆ.
ಎಲೆಕ್ಟ್ರಿಕ್ ವಾಹನಗಳ ಕ್ರಾಂತಿಯನ್ನು “ಆತ್ಮನಿರ್ಭರ’ದ ಅಡಿ ಯಲ್ಲೇ ನಿರ್ಮಿಸಲು ಕೇಂದ್ರ ಪಣತೊಟ್ಟಿದೆ. ನಗರ ಪ್ರದೇಶಗಳಲ್ಲಿ ಬ್ಯಾಟರಿ ವ್ಯವಸ್ಥೆಯುಳ್ಳ ಚಾರ್ಜಿಂಗ್ ಸ್ಟೇಶನ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆರೆಯಲು ಈ ಪಾಲಿಸಿ ಉತ್ತೇಜಿಸಲಿದೆ. ಯಾವುದೇ ಎಲೆಕ್ಟ್ರಿಕ್ ವಾಹನಗಳು ಬ್ಯಾಟರಿಯ ಕಾರಣಕ್ಕೇ ದುಬಾರಿ ಎನ್ನಿಸಿಕೊಳ್ಳುತ್ತವೆ. ಇದನ್ನು ತಗ್ಗಿಸಲು ಚಾರ್ಜಿಂಗ್ ಸ್ಟೇಶನ್‌ಗಳಲ್ಲಿ ಬ್ಯಾಟರಿ ವ್ಯವಸ್ಥೆ ಅಗತ್ಯವಾಗಿ ನೆರವಾಗಲಿದೆ ಎಂಬುದು ಕೇಂದ್ರದ ಲೆಕ್ಕಾಚಾರ. ಎಲೆಕ್ಟ್ರಿಕ್ ವೆಹಿಕಲ್‌ಗಳ ಉತ್ಪಾದನೆ ಹೆಚ್ಚಳವಲ್ಲದೆ, ಈ ಸಂಬಂಧ ಕಾರ್ಯನಿರ್ವಹಿಸುತ್ತಿರುವ ಸ್ಟಾರ್ಟ್ ಅಪ್‌ಗ್ಳಿಗೂ ಈ ಪಾಲಿಸಿ ವರದಾನವಾಗುವ ಸಾಧ್ಯತೆ ಇದೆ.
2030ರೊಳಗೆ ಭಾರತದಲ್ಲಿ ಪೆಟ್ರೋಲ್ ವಾಹನಗಳ ಬಳಕೆಯನ್ನು ಶೂನ್ಯಕ್ಕಿಳಿಸುವ ಕನಸಿನ ಬಗ್ಗೆ ಈಗಾಗಲೇ ಕೇಂದ್ರ ಇಂಧನ ಸಚಿವರು ಪ್ರಸ್ತಾವಿಸಿದ್ದಾರೆ. ಇದಕ್ಕೆ ಪೂರಕವಾಗಿ ದೇಶದಲ್ಲೆಡೆ “ಇವಿ-ಇಕೋ ಸಿಸ್ಟಂ’ ಅಳವಡಿಸಲು ಸರಕಾರ ನಿರ್ಧರಿಸಿದಂತಿದೆ. ವಿದ್ಯುತ್ ವಾಹನಗಳಿಗೇ ಮೀಸಲಾದ ಸ್ಪೆಷಲ್ ಮೊಬಿಲಿಟಿ ಝೋನ್ ರಚಿಸಲೂ ಸರಕಾರ ಆಸಕ್ತಿ ತೋರಿದೆ. ವಿಶೇಷವಾಗಿ, ಶೂನ್ಯ ಪಳೆಯುಳಿಕೆ ಇಂಧನ ನೀತಿಯನ್ನು ಉತ್ತೇಜಿಸಲು ನಿರ್ಧರಿಸಿದೆ. ಅಲ್ಲದೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಯನ್ನೂ ಪರಿಸರಸ್ನೇಹಿಯಾಗಿ ಪರಿವರ್ತಿಸುವ ಗುರಿಯನ್ನೂ ಇಟ್ಟುಕೊಂಡಿದೆ.
ಹಿಂದೆಂದಿಗಿಂತಲೂ ಅಧಿಕ
ವಿದ್ಯುತ್‌ಚಾಲಿತ ವಾಹನಗಳ ಉತ್ಪಾದನೆ ಮತ್ತು ಉತ್ತೇಜನಕ್ಕೆ ಸಂಬಂಧಿಸಿದಂತೆ ಕೇಂದ್ರ ಈ ಬಾರಿ ಬರೋಬ್ಬರಿ 2,908 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಹಿಂದೆಂದಿಗಿಂತಲೂ ಅಧಿಕ. ಈ ಹಿಂದಿನ ಮೂರು ವರ್ಷಗಳ ಬಜೆಟ್‌ನಲ್ಲಿ ಕ್ರಮವಾಗಿ 318 ಕೋಟಿ ರೂ., 757 ಕೋಟಿ ರೂ., 800 ಕೋಟಿ ರೂ.ಗಳನ್ನು ಮೀಸಲಿಟ್ಟಿತ್ತು.
ಉದ್ಯಮಕ್ಕೆ ತಕ್ಕಂತೆ ಪ್ರತಿಭೆ ಸೃಷ್ಟಿ
ಉದ್ಯಮಗಳ ಅಗತ್ಯಕ್ಕೆ ಪೂರಕವಾಗಿ ಕೌಶಲಾಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಕೇಂದ್ರ ಮುಂದಡಿ ಇಟ್ಟಿದೆ. ಈಗಾಗಲೇ ನಿರುದ್ಯೋಗ ನಿವಾರಿಸುವ ನಿಟ್ಟಿನಲ್ಲಿ “ರಾಷ್ಟ್ರೀಯ ಕೌಶಲ ಅರ್ಹತಾ ಕಾರ್ಯಕ್ರಮ’ ಜಾರಿಯಲ್ಲಿದೆ. ಈ ಕಾರ್ಯಕ್ರಮದಡಿ ಪ್ರಮುಖ ಕೈಗಾರಿಕಾ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡು, ಅವರ ಅಗತ್ಯಕ್ಕೆ ತಕ್ಕಂಥ ಪ್ರತಿಭೆಗಳನ್ನು ಸೃಷ್ಟಿಸಲು ಸರಕಾರ ಕ್ರಮ ಕೈಗೊಳ್ಳಲಿದೆ. ಇದರಿಂದ ಉದ್ಯೋಗ ಕೇಂದ್ರಿತ ತರಬೇತಿಗಳಿಗಷ್ಟೇ ಮಾನ್ಯತೆ ಸಿಗಲಿದೆ.
ಮತ್ತಷ್ಟು ಮನೆಗಳಿಗೆ ನಲ್ಲಿ ನೀರು
ಪ್ರತೀ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಈಗಾಗಲೇ “ಹರ್ ಘರ್, ನಲ್ ಸೆ ಜಲ್’ ಯೋಜನೆ ಜಾರಿಗೊಂಡಿದೆ. ಈ 2 ವರ್ಷಗಳಲ್ಲಿ ದೇಶಾದ್ಯಂತ 5.5 ಕೋಟಿ ಮನೆಗಳಿಗೆ ನಲ್ಲಿ ನೀರು ಪೂರೈಕೆ ಕಲ್ಪಿಸಲಾಗಿದೆ. ಪ್ರಸ್ತುತ ಈ ಯೋಜನೆಗೆ 60 ಸಾವಿರ ಕೋಟಿ ರೂ.ಗಳನ್ನು ಕೇಂದ್ರ ಎತ್ತಿಟ್ಟಿದ್ದು, 2022-23ರಲ್ಲಿ ಒಟ್ಟು 3.8 ಕೋಟಿ ಮನೆಗಳಿಗೆ ನಲ್ಲಿ ಮೂಲಕ ನೀರು ಪೂರೈಸಲು ಸರಕಾರ ಮುಂದಾಗಿದೆ.
“ವಿಸ್ತಾ’ಗೆ ಹೆಚ್ಚುವರಿ ಅನುದಾನ
ಕೇಂದ್ರ ವಿಸ್ತಾ ಯೋಜನೆಯಡಿ ನೂತನ ಸಂಸತ್, ನೂತನ ಪ್ರಧಾನಮಂತ್ರಿ ಕಚೇರಿ ಸೇರಿದಂತೆ ಹಲವು ಮಹತ್ವದ ಕಾಮಗಾರಿಗಳನ್ನು ಕೈಗೊಂಡಿರುವ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ 2,600 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಮೊತ್ತ 767 ಕೋಟಿ ರೂ. ಅಧಿಕ. ರಾಜಧಾನಿ ದಿಲ್ಲಿ ಸೇರಿದಂತೆ ವಿವಿಧೆಡೆಯ ಕೇಂದ್ರ ಸರಕಾರ ಸ್ವಾಮ್ಯದ ವಸತಿಯೇತರ ಕಟ್ಟಡ ಕಾಮಗಾರಿಗಳಿಗೆ ಈ ಹಣ ವಿನಿಯೋಗವಾಲಿದೆ.
ರಕ್ಷಣರಂಗದ ಆವಿಷ್ಕಾರಕ್ಕೆ ಮತ್ತಷ್ಟು ಉತ್ತೇಜನ
ಚೀನ, ಪಾಕಿಸ್ಥಾನದಂಥ ಬದ್ಧವೈರಿಗಳನ್ನು ಅಕ್ಕಪಕ್ಕದಲ್ಲೇ ಇಟ್ಟು ಕೊಂಡಿರುವ ಭಾರತ, ರಕ್ಷಣ ಬಜೆಟ್ ಅನ್ನು ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸಲು ಸಾಧ್ಯವೇ ಇಲ್ಲ. ಪ್ರತೀ ವರ್ಷ ರಕ್ಷಣಾ ಕ್ಷೇತ್ರದ ಬಜೆಟ್ ಹಿಗ್ಗುತ್ತಲೇ ಇದ್ದು, ಈ ಬಾರಿ ಅದು ಶೇ.10ರಷ್ಟು ಹಿಗ್ಗಿದೆ. 2021-22ರಲ್ಲಿ 4.78 ಲಕ್ಷ ಕೋಟಿ ರೂ.ಗಳನ್ನು ರಕ್ಷಣ ರಂಗಕ್ಕೆ ಸರಕಾರ ಮೀಸಲಿಟ್ಟಿತ್ತು. ಈ ಬಾರಿ 5.25 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡುವ ಮೂಲಕ ಭದ್ರತಾ ವಿಭಾಗಕ್ಕೆ ಹೆಚ್ಚು ಒತ್ತುಕೊಟ್ಟಿದೆ. ರಕ್ಷಣರಂಗವನ್ನು ಸಂಪೂರ್ಣ ಸ್ವಾವಲಂಬಿ ಯಾಗಿಸುವ ಮಂತ್ರವನ್ನು ಕೇಂದ್ರ ಪುನರುತ್ಛರಿಸಿದೆ. ಆಮದು ಪ್ರಮಾಣ ತಗ್ಗಿಸಿ, ಸ್ವದೇಶದಲ್ಲೇ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುವ ತನ್ನ ಹಿಂದಿನ ನಿರ್ಧಾರಕ್ಕೆ ಮತ್ತೆ ಬದ್ಧವಾಗಿದೆ. ಇದಕ್ಕಾಗಿ ಪ್ರಾದೇಶಿಕ ಉದ್ಯಮಗಳಿಗೆ ರತ್ನಗಂಬಳಿ ಹಾಸಲು ಯೋಜನೆಗಳನ್ನು ಕೈಗೊಂಡಿದೆ. ರಕ್ಷಣರಂಗಕ್ಕೆ ಅಗತ್ಯವಿರುವ ಉಪಕರಣಗಳ ಆವಿಷ್ಕಾರಕ್ಕೆ, ಶಸ್ತ್ರಾಸ್ತ್ರಗಳ ಸುಧಾರಣೆಗಾಗಿ ಶೇ.25ರಷ್ಟು ಹಣವನ್ನು ಮೀಸಲಿರಿಸಿದೆ.
ಎಸ್‌ಪಿವಿ ಮಾದರಿ ಆವಿಷ್ಕಾರಕ್ಕೆ ಒತ್ತು
ಡಿಆರ್‌ಡಿಒ ಜತೆಗೂಡಿ ಮಿಲಿಟರಿ ಉಪಕರಣಗಳ ವಿನ್ಯಾಸ ಮತ್ತು ಅಭಿವೃದ್ಧಿ ಕೈಗೊಳ್ಳಲು ಖಾಸಗಿ ಉದ್ಯಮಗಳಿಗೆ ಉತ್ತೇಜನ ನೀಡಿದೆ. ವಿಶೇಷ ಉದ್ದೇಶಿತ ವಾಹನ (ಎಸ್‌ಪಿವಿ) ಮಾದರಿ ಅಡಿಯಲ್ಲಿ ಖಾಸಗಿ ಉದ್ಯಮಗಳು ಇದನ್ನು ಕೈಗೊಳ್ಳಲು ಅವಕಾಶ ಕಲ್ಪಿಸಿದೆ.
ಯಾವ ಪಡೆಗೆ ಎಷ್ಟು?
ಪ್ರಸ್ತುತ ಬಜೆಟ್‌ನಲ್ಲಿ ವಾಯುಪಡೆಯ ಆಧುನೀಕರಣಕ್ಕಾಗಿ 56,851 ಕೋಟಿ ರೂ., ನೌಕಾಪಡೆಯ ಅಭಿವೃದ್ಧಿಗೆ 47,590 ಕೋಟಿ ರೂ. ಹಾಗೂ ಭೂಸೇನೆಯ ಸುಧಾರಣೆಗೆ 32,102 ಕೋಟಿ ರೂ. ಮೀಸಲಿಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.