“ಬ್ಯಾಂಕ್‌ ಮಿತ್ರ’ರಿಗೆ ಸವಲತ್ತು ಕಹಿ!

ಆರ್ಥಿಕ ಸೇರ್ಪಡೆ ಕಾರ್ಯಕ್ರಮ ಅನುಷ್ಠಾನದಲ್ಲಿ ಮುಂಚೂಣಿ ಪಾತ್ರ

Team Udayavani, Feb 2, 2022, 7:10 AM IST

“ಬ್ಯಾಂಕ್‌ ಮಿತ್ರ’ರಿಗೆ ಸವಲತ್ತು ಕಹಿ!

ಕಾರ್ಕಳ: ರಾಷ್ಟ್ರೀಕೃತ ಬ್ಯಾಂಕ್‌ಗಳ ಬ್ಯಾಂಕಿಂಗ್‌ ಸೇವೆಯನ್ನು ಜನರಿಗೆ ತಲುಪಿಸುವಲ್ಲಿ ಶ್ರಮಿಸುತ್ತಿರುವ “ಬ್ಯಾಂಕ್‌ ಮಿತ್ರ’ರಿಗೆ ನಿರೀಕ್ಷಿತ ಆದಾಯ ಸಿಗುತ್ತಿಲ್ಲ. ಗುತ್ತಿಗೆದಾರ ಕಂಪೆನಿ ಗೌರವಧನ ಸರಿಯಾಗಿ ನೀಡದಿರುವುದರ ಜತೆಗೆ ಕಮಿಷನ್‌ಗೂ ಕತ್ತರಿ ಹಾಕುತ್ತಿರುವುದರಿಂದ ಇವರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.

2 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಯುಳ್ಳ ಹಳ್ಳಿಗಳಿಗೆ ಬ್ಯಾಂಕಿಂಗ್‌ ಸೇವೆಯನ್ನು ತಲುಪಿಸಲು “ಬ್ಯಾಂಕ್‌ ಮಿತ್ರ’ರು ಶ್ರಮಿಸುತ್ತಿದ್ದಾರೆ. ರಾಜ್ಯದಲ್ಲಿ 72 ಸಾವಿರ, ಉಡುಪಿ ಜಿಲ್ಲೆಯಲ್ಲಿ 79, ದ.ಕ. ಜಿಲ್ಲೆಯಲ್ಲಿ 90ರಷ್ಟು ಸಂಖ್ಯೆಯಲ್ಲಿದ್ದಾರೆ.

2010ರಿಂದ ಸೇವೆ
2010ರಲ್ಲಿ ಆರ್‌ಬಿಐ ನಿರ್ದೇಶನ ದಂತೆ ಇವರು “ಬ್ಯುಸಿನೆಸ್‌ ಕರೆ ಸ್ಪಾಂಡೆಂಟ್‌’ ಆಗಿ ರಾಷ್ಟ್ರೀಕೃತ ಬ್ಯಾಂಕ್‌ ಶಾಖೆ ಇಲ್ಲದ ಹಳ್ಳಿಗಳಲ್ಲಿ ಬ್ಯಾಂಕಿಂಗ್‌ ಸೇವೆ ಒದಗಿಸಲು ನಿಯೋಜನೆಗೊಂಡಿದ್ದರು.

ಕೇಂದ್ರ ಸರಕಾರದ ಸಾಮಾಜಿಕ ಭದ್ರತೆ ಯೋಜನೆ ಜಾರಿ ಸಹಿತ ಬ್ಯಾಂಕ್‌ನ ಎಲ್ಲ ಸೇವೆಗಳನ್ನು ತಲುಪಿಸುವ ಕೆಲಸ ಇವರದು. ಬಳಿಕ ಸರಕಾರದ ಆದೇಶ, ಬ್ಯಾಂಕ್‌ ನವರ ನಿರ್ದೇಶನದಂತೆ “ಆಲ್ಟರ್‌ ಸ್ಮಾಲ್‌ ಬ್ರ್ಯಾಂಚ್‌’ ತೆರೆದು ಇವರ ಮೂಲಕ ಬ್ಯಾಂಕ್‌ನ ಎಲ್ಲ ಸೇವೆ ನೀಡುವಂತೆ ಮಾಡ ಲಾಯಿತು. ಸೇವೆ ನೀಡಲು ಬ್ಯಾಂಕ್‌ನವರೇ ಎಚ್‌ಎಚ್‌ಎಂ ಮೆಷಿನ್‌ ಮತ್ತು ವ್ಯವಹಾರಕ್ಕೆ ಒ.ಡಿ. ರೂಪದಲ್ಲಿ 25 ಸಾವಿರ ರೂ. ನೀಡು ತ್ತಿದ್ದರು. ತಿಂಗಳಿಗೆ 2 ಸಾವಿರ ರೂ. ಗೌರವಧನ ನಿಗದಿಪಡಿಸಲಾಗಿತ್ತು.

ಈ ಸಿಬಂದಿಯನ್ನು 2014ರಲ್ಲಿ “ಬ್ಯಾಂಕ್‌ ಮಿತ್ರರು’ ಎಂದು ಪ್ರಧಾನಿ ಮೋದಿ ಘೋಷಿಸಿ ಕನಿಷ್ಠ 5 ಸಾವಿರ ರೂ. ಗೌರವಧನ ನಿಗದಿಪಡಿಸಿದ್ದರು.

ಖಾಸಗಿಯಡಿ ಸಂಕಷ್ಟ
2017ರ ಸೆಪ್ಟಂಬರ್‌ ತನಕ ಮಾಸಿಕ 5 ಸಾವಿರ ರೂ. ಕನಿಷ್ಠ ಗೌರವಧನ, ವರ್ಗಾವಣೆ ಕಮಿಷನ್‌ ಎಂದು ತಿಂಗಳಿಗೆ 5ರಿಂದ 30 ಸಾವಿರ ರೂ. ವರೆಗೆ ಗಳಿಸುತ್ತಿದ್ದರು. ಬಳಿಕ ಆದಾಯದಲ್ಲಿ ಇಳಿಕೆಯಾಗಿದೆ. ಬ್ಯಾಂಕ್‌ ಅಥವಾ ಕಂಪೆನಿ ಭದ್ರತೆ, ವಿಮಾ ಸುರಕ್ಷೆ ಇತ್ಯಾದಿ ನೀಡಿಲ್ಲ. ಬ್ಯಾಂಕ್‌ನವರು ಖಾಸಗಿ ಕಂಪೆನಿ ಜತೆ ಒಪ್ಪಂದ ಮಾಡಿಕೊಂಡ ಪರಿಣಾಮ ಟ್ಯಾಬ್‌ ಪ್ರಿಂಟಿಂಗ್‌ ಮೆಷಿನ್‌, ಬಯೋಮೆಟ್ರಿಕ್‌ ರೀಡರ್‌ ಮತ್ತು ಎಟಿಎಂ ಕಾರ್ಡ್‌ ರೀಡರ್‌ ಪಡೆಯಲು 25 ಸಾವಿರ ರೂ. ವರೆಗೆ ಕಂಪೆನಿಗೆ ನೀಡಬೇಕಿದೆ. ಕಂಪೆನಿ ಒಪ್ಪಂದದ ಪ್ರಕಾರ ಗೌರವಧನದಲ್ಲಿ 80:20 ಮತ್ತು ಹಣಕಾಸಿನ ವ್ಯವಹಾರದಲ್ಲಿ 60:40ರ ನಿಯಮ ಜಾರಿಗೊಂಡಿದ್ದು, ಹಿಂದೆ ದೊರೆಯುತ್ತಿದ್ದಷ್ಟು ಆದಾಯ ಸಿಗುತ್ತಿಲ್ಲ.

2021ರ ನವೆಂಬರ್‌ಗೆ ಹಿಂದಿನ ಕಂಪೆನಿಯ ಜತೆಗಿನ ಒಪ್ಪಂದ ಮುಗಿದಿದೆ. ಹೊಸ ಗುತ್ತಿಗೆದಾರ ಕಂಪೆನಿಯು ಭದ್ರತಾ ಠೇವಣಿ 10 ಸಾವಿರ ರೂ., 25 ಸಾವಿರ ರೂ.ಗಳ ಪಾಸ್‌ಬುಕ್‌ ಪ್ರಿಂಟಿಂಗ್‌ ಮೆಷಿನ್‌ಖರೀದಿಸಲು ಸೂಚಿಸಿದೆ. ಜತೆಗೆ ಹಣಕಾಸಿನವ್ಯವಹಾರಕ್ಕೆ ಶೇ. 0.15 ವ್ಯಾಲ್ಯುವೇಬಲ್‌ ಪೇ ನಿಗದಿಪಡಿಸಿದೆ. ಗೌರವಧನ ತಿಂಗಳಿಗೆ 2 ಸಾವಿರ ರೂ.ಗಿಂತಲೂ ಕಡಿಮೆಯಾಗಿದೆ. ವ್ಯವಹಾರದಲ್ಲಿ ಕಂಪೆನಿ ಯವರಿಗೆ ಶೇಕಡಾವಾರು ಪಾಲು ನೀಡುವ ನಿಬಂಧನೆ ಯಿಂದಾಗಿ ಬ್ಯಾಂಕ್‌ ಮಿತ್ರರಿಗೆ ನಷ್ಟ, ಗುತ್ತಿಗೆ ಕಂಪೆನಿಗೆ ಲಾಭವಾಗುತ್ತಿದೆ.

ಕನಿಷ್ಠ ಗೌರವಧನ, ಸೇವಾ ಭದ್ರತೆಗೆ ಆಗ್ರಹ
ಕನಿಷ್ಠ 5 ಸಾವಿರ ರೂ. ಗೌರವಧನ ಪಾವತಿ, ಮಧ್ಯವರ್ತಿ ಕಂಪೆನಿಗಳಿಂದ ಪಾರು ಮಾಡಿ ಭದ್ರತೆ ಒದಗಿಸಬೇಕು ಎಂಬುದು ಅವರ ಆಗ್ರಹವಾಗಿದ್ದು, ಪ್ರಧಾನಿಗೂ ಮನವಿ ಮಾಡಿದ್ದಾರೆ.

ಬ್ಯಾಂಕ್‌ ಮಿತ್ರರು ನೇರ ಬ್ಯಾಂಕ್‌ ಉದ್ಯೋಗಿಗಳಲ್ಲ. ಖಾಸಗಿ ಯಾಗಿ ನೇಮಿಸಿಕೊಳ್ಳಲಾಗುತ್ತದೆ. ಕಮಿಷನ್‌ ಆಧಾರದಲ್ಲಿ ಆದಾಯ ಗಳಿಸಲು ಅವರಿಗೆ ಅವಕಾಶವಿದೆ. ಒಂದೊಂದು ಬ್ಯಾಂಕಿಗೆ ಒಂದೊಂದು ಕಂಪೆನಿ ನೇಮಕಗೊಳಿಸಿಕೊಳ್ಳುತ್ತದೆ. ಸವಲತ್ತುಗಳಲ್ಲಿ ವ್ಯತ್ಯಾಸಗಳಿರುತ್ತವೆ. ಸಮಸ್ಯೆಯಾದಲ್ಲಿ ಸರಿಪಡಿಸುತ್ತೇವೆ.
– ಚಲವಾದಿ, ಗ್ರಾಮ ತರಂಗ (ಗುತ್ತಿಗೆದಾರ ಸಂಸ್ಥೆಗಳಲ್ಲಿ ಒಂದು)
ಕಂಪೆನಿ ಮುಖ್ಯಸ್ಥ, ಒಡಿಶಾ

 

ಟಾಪ್ ನ್ಯೂಸ್

Chalavadi2

Ambedkar Row: ಕಾಂಗ್ರೆಸ್‌ ಎಂದರೆ ಫೇಕ್‌ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ

police crime

Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Shabarimala

Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು

1-eng

Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್‌ ತಂಡ ಪ್ರಕಟ

PM Modi

PM Modi;ಇಂದು 71000ಕ್ಕೂ ಅಧಿಕ ಮಂದಿಗೆ ಉದ್ಯೋಗ ಪತ್ರ ವಿತರಣೆ

naksal (2)

Chhattisgarh; ನಕ್ಸಲ್‌ ವ್ಯಾಪ್ತಿ 9500 ಚ.ಕಿ.ಮೀ.ಗೆ ಇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chalavadi2

Ambedkar Row: ಕಾಂಗ್ರೆಸ್‌ ಎಂದರೆ ಫೇಕ್‌ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ

police crime

Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Shabarimala

Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು

1-eng

Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್‌ ತಂಡ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.