ಮಾತೆಯ ಮಕ್ಕಳಾಗಿ ಜೀವಿಸುವ ಪ್ರಯತ್ನ ನಡೆಸೋಣ : ಫಾ| ಸಲ್ದಾನಾ
ಶಿರ್ವ ಚರ್ಚ್‌ವಾರ್ಷಿಕ ಮಹೋತ್ಸವ ಸಂಪನ್ನ
Team Udayavani, Feb 2, 2022, 4:59 PM IST
ಶಿರ್ವ : ದೇವರಲ್ಲಿ ವಿಶ್ವಾಸ ವ್ಯಕ್ತಪಡಿಸಿ, ಭಕ್ತಿಯಿಂದ ಪ್ರಭು ಏಸುವಿನ ಸಮರ್ಪಣೆ ಮಾಡಿದಲ್ಲಿ ,ಪೀಡೆ, ಕಷ್ಟ ಕಾರ್ಪಣ್ಯಗಳು ದೂರವಾಗಿ ಜೀವನ ಪಾವನವಾಗುತ್ತದೆ. ಜೀವನದಲ್ಲಿ ಪವಿತ್ರರಾಗಲು ಮಾತೆ ಮೇರಿಯ ಆದರ್ಶಗಳನ್ನು ಪಾಲಿಸಿಕೊಂಡು ದೈನಂದಿನ ಬದುಕಿನಲ್ಲಿ ಉತ್ತಮ ಕಾರ್ಯ ನಿರ್ವಹಿಸಿ ಮಾತೆಯ ಮಕ್ಕಳಾಗಿ ಜೀವಿಸುವ ಪ್ರಯತ್ನ ನಡೆಸೋಣ ಎಂದು ಮಂಗಳೂರು ಬಿಜೈ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ವಂ.ಡಾ| ಜೋನ್ ಬ್ಯಾಪ್ಟಿಸ್ಟ್ ಸಲ್ದಾನಾ ಹೇಳಿದರು.
ಅವರು ಬುಧವಾರ ಬೆಳಿಗ್ಗೆ ಶಿರ್ವ ಆರೋಗ್ಯ ಮಾತಾ (ಸಾವುದ್ ಅಮ್ಮನವರ)ದೇವಾಲಯದ ವಾರ್ಷಿಕ ಮಹೋತ್ಸವದ ಪವಿತ್ರ ಬಲಿಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.
ಶಿರ್ವ ಆರೋಗ್ಯ ಮಾತೆಯ ದೇವಾಲಯದ ಪ್ರಧಾನ ಧರ್ಮಗುರು ರೆ|ಫಾ|ಡೆನ್ನಿಸ್‌ಡೇಸಾ, ಸಹಾಯಕ ಧರ್ಮಗುರುಗಳಾದ ರೆ|ಫಾ| ರೋಲ್ವಿನ್
ಅರಾನ್ಹಾ ಮತ್ತು ರೆ|ಫಾ|ಸ್ಟೀವನ್ ನೆಲ್ಸನ್ ಪೆರಿಸ್, ಉಡುಪಿ ಮತ್ತು ಮಂಗಳೂರು ಧರ್ಮ ಪ್ರಾಂತ್ಯದ 50ಕ್ಕೂ ಹೆಚ್ಚು ಧರ್ಮಗುರುಗಳು ಬಲಿ ಪೂಜೆಯಲ್ಲಿ ಭಾಗವಹಿಸಿದ್ದರು.
ಕಾಪು ಶಾಸಕ ಲಾಲಾಜಿ.ಆರ್.ಮೆಂಡನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ ,ಚರ್ಚ್ ಆರ್ಥಿಕ ಮಂಡಳಿಯ ಕಾರ್ಯದರ್ಶಿ ಲೀನಾ ಮಚಾದೊ, ಸದಸ್ಯರಾದ ಮೆಲ್ವಿನ್ ಅರಾನ್ಹಾ, ಜೂಲಿಯಾನ್ ರೊಡ್ರಿಗಸ್,ನೋರ್ಬರ್ಟ್ ಮಚಾದೋ, ಮೆಲ್ವಿನ್ ಡಿ’ಸೋಜಾ,ಡಯಾನಾ ಸಲ್ದಾನಾ, ಪುಷ್ಪಾ ಫೆರ್ನಾಂಡಿಸ್, ವಿಲ್ಸನ್ ರೊಡ್ರಿಗಸ್, ಪ್ರೊ| ರೊನಾಲ್ಡ್ ಮೊರಾಸ್ ಹಾಗೂ ಶಿರ್ವ ವಲಯದ ವಿವಿಧ ಚರ್ಚುಗಳ ಧರ್ಮಗುರುಗಳು, ಧರ್ಮಭಗಿನಿಯರು ಉಪಸ್ಥಿತರಿದ್ದರು.
ಇದನ್ನೂ ಓದಿ : ಕುಂದಾಪುರ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಹಿಜಾಬ್ ಕೇಸರಿ ಶಾಲು ವಿವಾದ.
ಆರೋಗ್ಯ ಮಾತೆಯ ವಾರ್ಷಿಕ ಮಹೋತ್ಸವದ ಸಂದರ್ಭದಲ್ಲಿ ಎಲ್ಲಾ ಭಕ್ತಾಧಿಗಳಿಗೆ ದೇವರ ಅಶೀರ್ವಾದ ಲಭಿಸಿ ಕೃತಾರ್ಥರಾಗಲೆಂದು ಕೋರುತ್ತೇನೆ. ಮಾತೆ ಮೇರಿಯ ಅನೇಕ ಪವಾಡಗಳು ಭಕ್ತರ ಕುಟುಂಬದಲ್ಲಿ ನಡೆದು ಭಕ್ತಾಧಿಗಳಿಗೆ ರಕ್ಷಣೆ ಸಿಗಲಿ.
– ರೆ|ಫಾ|ಡೆನ್ನಿಸ್‌ಡೇಸಾ, ಶಿರ್ವ ಚರ್ಚ್ ಧರ್ಮಗುರುಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.