ಪದವಿ ಪರೀಕ್ಷಾ ಶುಲ್ಕ ಹೆಚ್ಚಳಕ್ಕೆ ವಿರೋಧ
Team Udayavani, Feb 2, 2022, 6:48 PM IST
ಬಳ್ಳಾರಿ: ಪದವಿ ವಿದ್ಯಾರ್ಥಿಗಳ ಪರೀûಾ ಶುಲ್ಕ ಏರಿಕೆವಿರೋಧಿಸಿ, ಕೂಡಲೇ ಹಿಂಪಡೆಯಬೇಕೆಂದುಆಗ್ರಹಿಸಿ ನಗರದ ಸರಳಾದೇವಿ ಸರ್ಕಾರಿ ಪ್ರಥಮದರ್ಜೆ (ಸ್ವಾಯತ್ತ) ಪದವಿ ಕಾಲೇಜು ಎದುರುಎಐಡಿಎಸ್‌ಒ ಜಿಲ್ಲಾ ಸಮಿತಿಯಿಂದ ಮಂಗಳವಾರಪ್ರತಿಭಟನೆ ನಡೆಸಲಾಯಿತು.
ಸರಳಾದೇವಿ ಪದವಿ ಕಾಲೇಜು, ಸರ್ಕಾರಿ ಕಾಲೇಜು. ರಾಜ್ಯ ಸರ್ಕಾರ ಪದವಿ ವಿದ್ಯಾರ್ಥಿಗಳಪರೀûಾ ಶುಲ್ಕವನ್ನು ವಿನಾಯಿತಿ ದರದಲ್ಲಿ 150 ರೂ.ನಿಗದಿಪಡಿಸಿತ್ತು. ಅದನ್ನು ಇದೀಗ ಏಕಾಏಕಿ 1200ರೂ.ಗೆ ಹೆಚ್ಚಿಸಿರುವುದು ವಿದ್ಯಾರ್ಥಿಗಳಲ್ಲಿ ಅತಂಕಉಂಟುಮಾಡಿದೆ. ಈಗಾಗಲೇ ಕಳೆದ ಲಾಕ್‌ಡೌನ್‌ವೇಳೆ ಎಷ್ಟೋ ಬಡ ಕುಟುಂಬಗಳು ಮತ್ತು ಮಧ್ಯಮವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟವನ್ನುಅನುಭವಿಸಿದ್ದಾರೆ.
ಆ ತೀವ್ರತೆಯಿಂದ ಇನ್ನು ಅವರುಹೊರ ಬಂದಿಲ್ಲ. ಅವರ ಮಕ್ಕಳ ಶಿಕ್ಷಣವು ಸರ್ಕಾರಿಕಾಲೇಜುಗಳ ಮೇಲೆಯೇ ಅವಲಂಬಿತವಾಗಿದೆ.ಇಂತಹ ಸಂದರ್ಭದಲ್ಲಿ ಏಕಾಏಕಿ ಪರೀûಾ ಶುಲ್ಕವನ್ನು150 ರೂ.ಗಳಿಂದ 1200 ರೂ. ಗಳಿಗೆ ಹೆಚ್ಚಳ ಮಾಡಿದರೆವಿದ್ಯಾರ್ಥಿಗಳಿಗೆ ತುಂಬಾ ಸಮಸ್ಯೆಯಾಗುತ್ತದೆ.ಕಾಲೇಜಿಗೆ ಬರುವ ಬಹುತೇಕ ವಿದ್ಯಾರ್ಥಿಗಳುರೈತ-ಕಾರ್ಮಿಕರ ಬಡ ಕುಟುಂಬದವರಾಗಿದ್ದು,ಎಷ್ಟೋ ವಿದ್ಯಾರ್ಥಿಗಳು ಖಾಸಗಿ ಶಾಲಾ-ಕಾಲೇಜುಶುಲ್ಕವನ್ನು ಕಟ್ಟಲು ಸಾಧ್ಯವಿಲ್ಲ ಎಂದು ಸರ್ಕಾರಿ ಶಿಕ್ಷಣಸಂಸ್ಥೆಗಳಿಗೆ ಬರುತ್ತಿದ್ದಾರೆ.
ಈ ರೀತಿಯ ಪರೀûಾ ಶುಲ್ಕಏರಿಕೆಯಾದರೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಕುತ್ತುಬರುವ ಸಾಧ್ಯತೆಯಿದೆ ಎಂದು ಪ್ರತಿಭಟನಾನಿರತವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿಕ್ಷಣದ ವ್ಯಾಪರಿಕರಣ ವಿರುದ್ಧ ಹೋರಾಡಬೇಕು.ವಿದ್ಯಾರ್ಥಿಗಳ ಶಿಕ್ಷಣದ ಹಿತದೃಷ್ಟಿಯಿಂದಕಾಲೇಜು ವತಿಯಿಂದ ಹೆಚ್ಚಿಸಿರುವ ಪರೀûಾಶುಲ್ಕವನ್ನು ಹಿಂತೆಗೆದುಕೊಂಡು ಪ್ರತಿ ವರ್ಷದಂತೆವಿನಾಯಿತಿ ದರದಲ್ಲಿ (150 ರೂ) ಪರೀûಾ ಶುಲ್ಕತೆಗೆದುಕೊಳ್ಳಬೇಕು. ಈಗಾಗಲೇ ಹೆಚ್ಚುವರಿ ಶುಲ್ಕಪಾವತಿಸಿದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶುಲ್ಕವನ್ನುಮರುಪಾವತಿಸಬೇಕು ಮತ್ತು ಶುಲ್ಕ ಕಟ್ಟುವ ಅವ ಧಿಮುಂದೂಡಬೇಕು ಎಂದು ಒತ್ತಾಯಿಸಿದರು.
ಬಳಿಕಕಾಲೇಜು ಪ್ರಾಚಾರ್ಯ ಎಚ್. ಹೇಮಣ್ಣರಿಗೆ ಮನವಿಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಎಐಡಿಎಸ್‌ಒಜಿಲ್ಲಾಧ್ಯಕ್ಷ ಗುರಳ್ಳಿ ರಾಜ, ಜಿಲ್ಲಾ ಕಾರ್ಯದರ್ಶಿಜೆ.ಪಿ. ರವಿಕಿರಣ್, ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯಕಂಬಳಿ ಮಂಜುನಾಥ, ಜಿಲ್ಲಾ ಕಚೇರಿ ಕಾರ್ಯದರ್ಶಿಕೆ.ಈರಣ್ಣ, ಸದಸ್ಯರಾದ ಎಂ.ಶಾಂತಿ, ಅನುಪಮಾ,ಸಿದ್ದು, ನಿಹಾರಿಕ, ಪ್ರಮೋದ್, ಮೋಹನ್,ನಾಗರತ್ನ, ಶ್ವೇತಾ, ತಿಪ್ಪೇರುದ್ರ ಹಾಗೂ ಸಾವಿರಾರುವಿದ್ಯಾರ್ಥಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ: ಜನಾರ್ದನ ರೆಡ್ಡಿ
ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.