ತಾಲೂಕಿನ ವಿವಿಧೆಡೆ 1.16 ಕೋಟಿ ರೂ. ಕಾಮಗಾರಿಗೆ ಶಾಸಕ ಮಂಜುನಾಥ್ ಚಾಲನೆ
Team Udayavani, Feb 2, 2022, 8:50 PM IST
ಹುಣಸೂರು : ತಾಲೂಕಿನ ಮೂರು ಗ್ರಾಮಗಳ ಅಭಿವೃದ್ದಿಗೆ ಎಸ್‌ಇಪಿ-ಟಿಎಸ್‌ಪಿ ಯೋಜನೆಯಡಿ 1.16 ಕೋಟಿರೂ ಮಂಜೂರಾಗಿದ್ದು, ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದ್ದು, ಸ್ಥಳೀಯರು ಒತ್ತವರಿ ತೆರವುಗೊಳಿಸಿ ಸಹಕಾರ ನೀಡಬೇಕೆಂದು ಶಾಸಕ ಎಚ್.ಪಿ. ಮಂಜುನಾಥ್ ಮನವಿ ಮಾಡಿದರು.
ಬುಧವಾರ ತಾಲೂಕಿನ ಬಿಳಿಕೆರೆ ಹೋಬಳಿಯ ಬೆಂಕಿಪುರದ ಪರಿಶಿಷ್ಟ ಪಂಗಡ ಕಾಲೋನಿಗೆ 35 ಲಕ್ಷ ರೂ ಹಾಗೂ ಹೊಸ ಬಡಾವಣೆಗೆ 26.11 ಲಕ್ಷ, ದೇವಗಳ್ಳಿ ಬೋವಿ ಕಾಲೋನಿಗೆ 15 ಲಕ್ಷ, ಗೌರಿಪುರ ಪರಿಶಿಷ್ಟ ಜಾತಿ ಕಾಲೋನಿಗೆ 20 ಲಕ್ಷ, ಪರಿಶಿಷ್ಟ ಪಂಗಡ ಕಾಲೋನಿಗೆ 20 ಲಕ್ಷರೂ ಸೇರಿದಂತೆ 1.16 ಕೋಟಿ ವೆಚ್ಚದ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಿದರು.
ಗೌರಿಪುರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಶಾಸಕರು ತಮ್ಮ ಅವಧಿಯಲ್ಲಿ ಸಿದ್ದರಾಮಯ್ಯನವರ ಸಹಕಾರದಿಂದ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳಾಗಿವೆ. ಕೆಲ ಹಳ್ಳಿಗಳಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಸಹ ಹಂತಹಂತವಾಗಿ ಕೈಗೊಳ್ಳುವುದಾಗಿ ತಿಳಿಸಿದರು.
ಗುಣಮಟ್ಟದ ಕಾಮಗಾರಿ ನಡೆಸುವಂತೆ ಗುತ್ತಿಗೆದಾರ ವಿವೇಕ್ ಹಾಗೂ ಇಲಾಖೆಯ ಎಇಇ ಭೋಜರಾಜ್‌ರಿಗೆ ಸೂಚಿಸಿ ಗ್ರಾಮಸ್ಥರು ಕೂಡ ಕಾಮಗಾರಿ ನಡೆಸಲು ಒತ್ತುವರಿ ತೆರವುಗೊಳಿಸುವಂತೆ ಮನವಿ ಮಾಡಿ, ಕಾಮಗಾರಿ ನಡೆಯುವ ವೇಳೆ ಹಳ್ಳಿಗರು ಉಸ್ತುವಾರಿ ವಹಿಸುವಂತೆ ಸೂಚಿಸಿದರು.
ಇದನ್ನೂ ಓದಿ : ಗೋವಾದಲ್ಲಿ ಬಿಜೆಪಿ 30 ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿಯಲಿದೆ : ಪ್ರಭು ಚವ್ಹಾಣ್
ಇದೇ ವೇಳೆ ದೇವಗಳ್ಳಿ ಗ್ರಾಮದಲ್ಲಿ ಬಾಕಿ ಉಳಿದಿರುವ ರಸ್ತೆಗೆ ಶಾಸಕರ ನಿಧಿಯಿಂದ ೬ ಲಕ್ಷ ರೂ ಅನುದಾನ ನೀಡುವುದಾಗಿ ಪ್ರಕಟಿಸಿ, ಈ ಕಾಮಗಾರಿ ಜೊತೆಗೆ ಗ್ರಾಮದಲ್ಲಿ ಉಳಿದ ಕಾಮಗಾರಿಯನ್ನು ಸಹ ಮುಗಿಸಬೇಕೆಂದು ಸ್ಥಳದಲ್ಲಿದ್ದ ಗುತ್ತಿಗೆದಾರರಿಗೆ ಶಾಸಕರು ಸೂಚಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ನಂದೀಶ್, ಉಪಧ್ಯಕ್ಷೆ ಗೌರಮ್ಮ, ಸದಸ್ಯರಾದ ವೀರಭದ್ರಸ್ವಾಮಿ, ಗೋವಿಂದಶೆಟ್ಟಿ, ವಿಜೇಂದ್ರಕುಮಾರ್, ಮನುಕುಮಾರ್, ರಾಮಬೋವಿ, ಶಾಂತಿ, ಉದ್ದೂರು ಕಾವಲ್ ಗ್ರಾ.ಪಂ.ಅಧ್ಯಕ್ಷೆ ಸಿಂಗರಮಾರನಹಳ್ಳಿ ಗ್ರಾ.ಪಂ. ಅಧ್ಯಕ್ಷ ಲಕ್ಷ್ಮೀ ಸುರೇಶ್, ಮಾಜಿ ಸದಸ್ಯರಾದ ಮುಖಂಡರಾದ ಮಂಜು, ಧರ್ಮಪುರ ಮಹದೇವ್, ಶೇಖರ್ ಕುಮಾರಸ್ವಾಮಿ, ಪಳನಿ, ಬಿಇಓ ನಾಗರಾಜ್, ಎಇಇಗಳಾದ ಭೋಜರಾಜ್, ಪ್ರಭಾಕರ್, ಇಂಜಿನಿಯರ್ ಚಂದ್ರಶೇಖರ್‌ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜ್, ಮುಖಂಡರಾದ ಜವರನಾಯಕ, ಮಾ.ತಾ.ಪಂ.ಸದಸ್ಯ ದೇವರಾಜ್, ಅಜ್ಗರ್‌ಪಾಷ ಸೇರಿದಂತೆ ಮುಖಂಡರು, ಆಯಾ ಗ್ರಾಮಸ್ಥರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.