![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
Team Udayavani, Feb 3, 2022, 7:35 AM IST
ಹೊಸದಿಲ್ಲಿ: ಕೊರೊನಾ ಲಸಿಕೆಯನ್ನು ದೇಶದ ಜನತೆ ತೆಗೆದುಕೊಂಡಿದ್ದರಿಂದಾಗಿ ಕೊರೊನಾ ಮೂರನೇ ಅಲೆಯಲ್ಲಿ ಸುಮಾರು 90 ಸಾವಿರ ಜನರ ಜೀವ ಉಳಿದಿದೆ. ಈ ಅಂಶ ಎಎಸ್‌ಬಿಐನ ಆರ್ಥಿಕ ತಜ್ಞರು ನಡೆಸಿರುವ 2 ಸ್ಟೇಜ್ ಲೀಸ್ಟ್ ಸ್ಕ್ವೇರ್ ಪ್ಯಾನೆಲ್ ಮಾಡೆಲ್ ಸ್ಟಡಿಯಿಂದಾಗಿ ತಿಳಿದುಬಂದಿದೆ.
ತಜ್ಞರು 20 ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿ ಅಂದಾಜಿ ಸಿದ ಮರಣ ಪ್ರಮಾಣದ ಲೆಕ್ಕಾಚಾರದಲ್ಲಿ 3ನೇ ಅಲೆ ಯಲ್ಲಿ 93 ಸಾವಿರ ಜನರು ಸಾವನ್ನಪ್ಪಬೇಕಿತ್ತು. ಆದರೆ ಸರಕಾರಿ ಲೆಕ್ಕದ ಪ್ರಕಾರ ಕೇವಲ 14,756 ಜನರು 3ನೇ ಅಲೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಲಸಿಕೆಯಿಂದಾಗಿ ಸೋಂಕಿನಿಂದ ಬಚಾವಾದವರಲ್ಲಿ ಅತೀ ಹೆಚ್ಚು ಮಂದಿ ಅಂದರೆ 37 ಸಾವಿರ ಮಂದಿ ಮಹಾರಾಷ್ಟ್ರದವರಾಗಿದ್ದಾರೆ. ದಿಲ್ಲಿಯಲ್ಲಿ 11,176, ಕರ್ನಾಟಕದಲ್ಲಿ 10,907 ಮಂದಿ ಬಚಾವಾಗಿದ್ದಾರೆ.
ಬೂಸ್ಟರ್ ಡೋಸ್ ಉಚಿತವಲ್ಲ?: ಕೇಂದ್ರದ ಬಜೆಟ್ ಮಂಡನೆಯಾದ ಬೆನ್ನಲ್ಲೇ ಕೊರೊನಾ ಬೂಸ್ಟರ್ ಡೋಸ್ ಉಚಿತವಲ್ಲ ಎನ್ನುವ ಅನುಮಾನ ಹುಟ್ಟಿದೆಯೆಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. 2021-22ರ ಬಜೆಟ್‌ನಲ್ಲಿ ಲಸಿಕೆ ವಿತರಣೆಗಾಗಿ 35,000 ಕೋಟಿ ರೂ. ಮೀಸಲಿಡಲಾಗಿತ್ತು. ನಂತರ ಅದನ್ನು 39 ಸಾವಿರ ಕೋಟಿ ರೂ.ಗೆ ಏರಿಸಲಾಗಿತ್ತು. ಇದೀಗ ಮಂಡನೆಯಾಗಿರುವ ಬಜೆಟ್‌ನಲ್ಲಿ ಕೇವಲ 5,000 ಕೋಟಿ ರೂ. ಅನ್ನು ಲಸಿಕೆ ಅಭಿಯಾನಕ್ಕಾಗಿ ಮೀಸಲಿಡಲಾಗಿದೆ. ಅದರರ್ಥ ಸರಕಾರ ಇನ್ನಷ್ಟು ಹಣವನ್ನು ಲಸಿಕೆಗೆ ನೀಡಲು ಸಿದ್ಧವಿಲ್ಲ, ಬೂಸ್ಟರ್ ಡೋಸ್‌ನ್ನು ಜನಸಾಮಾನ್ಯರು ಹಣ ನೀಡಿಯೇ ಪಡೆಯಬಹುದಾಗಬಹುದು ಎನ್ನಲಾಗಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.