ಕಾಂಗ್ರೆಸ್‌ಗೆ ನೋಟಿಸ್ ಬಿಕ್ಕಟ್ಟು; ಅಶೋಕ್ ಪಟ್ಟಣ್‌ಗೆ ನೋಟಿಸ್ ನೀಡಿದ್ದಕ್ಕೆ ಗುದ್ದಾಟ
Team Udayavani, Feb 3, 2022, 7:05 AM IST
ಬೆಂಗಳೂರು: ಮಾಜಿ ಶಾಸಕ ಅಶೋಕ್ ಪಟ್ಟಣ್ ಅವರಿಗೆ ನೋಟಿಸ್ ನೀಡಿದ ವಿಚಾರದಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಆ ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ಬಣ ರಾಜಕೀಯ ಸದ್ದು ಮಾಡುತ್ತಿದೆ. ಮೇಕೆದಾಟು ಪಾದಯಾತ್ರೆಯಲ್ಲಿ ಪ್ರದರ್ಶಿಸಿದ್ದ ಒಗ್ಗಟ್ಟು ಈಗ ನೋಟಿಸ್ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಗುದ್ದಾಟಕ್ಕೆ ಕಾರಣವಾದಂತಿದೆ.
ಅಶೋಕ್ ಪಟ್ಟಣ್ ವಿರುದ್ಧ ಪರಾಮರ್ಶಿಸಿ ಕ್ರಮ ಕೈಗೊಳ್ಳಬಹುದಾಗಿತ್ತು. ದಿಢೀರ್ ನೋಟಿಸ್ ನೀಡಿರುವುದು ಸಿದ್ದರಾಮಯ್ಯನವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಮೈಸೂರಿ ನಲ್ಲಿ ಪತ್ರಿಕಾಗೋಷ್ಠಿಯಲ್ಲೂ “ಅಲ್ಲಿನ ಸಮಸ್ಯೆ ಬಗ್ಗೆ ಹೇಳಿದ ಅಷ್ಟೇ. ನೋಟಿಸ್ ನೀಡಿದ್ದರೆ ಅದಕ್ಕೆ ಉತ್ತರ ಕೊಡುತ್ತಾನೆ ಬಿಡಿ’ ಎಂದು ಹೇಳಿದ್ದರು.
ಸುದ್ದಿಗೋಷ್ಠಿಯಲ್ಲಿ ಕುಳಿತವರು ನಾಲಿಗೆ ಹರಿಬಿಟ್ಟು ಪಕ್ಷಕ್ಕೆ ಹಾನಿ ಮಾಡುತ್ತಿದ್ದು ಹೀಗೇ ಬಿಟ್ಟರೆ ಕಷ್ಟವಾಗುತ್ತದೆ. ತತ್‌ಕ್ಷಣ ಕ್ರಮ ಕೈಗೊಂಡರೆ ಪಕ್ಷದ ಬಗ್ಗೆ ಭಯ ಇರುತ್ತದೆ ಎಂದು ಹಿರಿಯ ನಾಯಕರು ಹೇಳುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಯುಗಾದಿ ಹೊತ್ತಿಗೆ ಬದಲಾವಣೆ ನಿಶ್ಚಿತ: ಬಸನಗೌಡ ಪಾಟೀಲ್ ಯತ್ನಾಳ್
ಹಿರಿಯರ ದೂರು
ಇತ್ತೀಚೆಗೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಿಸುಮಾತು ಪ್ರಕರಣ, ಇದರ ಬೆನ್ನಲ್ಲೇ ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಪ್ರಕರಣ ಮುಂತಾದವು ಪಕ್ಷಕ್ಕೆ ಹಾನಿ ಮಾಡುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಅಲ್ಲದೆ ಈ ಬೆಳ ವ ಣಿಗೆಗಳಿಗೆ ಇಬ್ಬರೂ ನಾಯಕರು ಅವಕಾಶ ಕೊಡಬಾರದು ಎಂದು ಹಿರಿಯ ನಾಯ ಕರು ಹೈಕ ಮಾಂಡ್‌ಗೆ ಮನವಿ ಮಾಡಿದ್ದಾರೆ.
ಪ್ರತಿಯೊಂದು ಕ್ಷೇತ್ರದಲ್ಲೂ ಹಲವರಿಗೆ ಟಿಕೆಟ್ ಕೊಡುವ ಭರವಸೆ ನೀಡಿರುವುದು ಸಂಘರ್ಷಕ್ಕೆ ಕಾರಣವಾಗುತ್ತಿದೆ. ಶಾಸಕರು ಇರುವ ಕ್ಷೇತ್ರದಲ್ಲೂ ಇಂತಹ ಸಮಸ್ಯೆ ತಲೆದೋರಿದೆ. ಇದನ್ನು ತಪ್ಪಿಸಬೇಕು. ಇದಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕಾರಣರಲ್ಲ. ಆದರೂ ಕೆಲವು ನಾಯಕರು ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಇದು ತಪ್ಪಬೇಕು ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳುತ್ತಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.