ಫೆ.4 ರಂದು ಸಿದ್ಧಾಪುರದಲ್ಲಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ 6ನೇ ಶಾಖೆ ಉದ್ಘಾಟನೆ
Team Udayavani, Feb 3, 2022, 10:51 AM IST
ಹೆಬ್ರಿ : ಗ್ರಾಮೀಣ ಪ್ರದೇಶವಾದ ಪೆರ್ಡೂರಿನಲ್ಲಿ ಕೇಂದ್ರ ಸ್ಥಾನವನ್ನು ಹೊಂದಿದ ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ(ನಿ.) ಈಗಾಗಲೇ ಸಹಕಾರಿ ಸೇವೆಯಲ್ಲಿ ಅದ್ವಿತೀಯ ಸಾಧನೆಗೈದು 2017-2018 ರಲ್ಲಿಯೇ ರಾಜ್ಯಮಟ್ಟದ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿಯನ್ನು ಪಡೆದು ಜನಮನ್ನಣೆ ಗಳಿಸಿದೆ.
ಅತೀ ಕಡಿಮೆ ಅವಧಿಯನ್ನು ಉನ್ನತಮಟ್ಟದ ಬ್ಯಾಂಕಿಂಗ್ ಸೇವೆ ಜತೆ ಪಾರಂಪರಿಕ ಹಾಗೂ ಅತ್ಯಾಧುನಿಕ ಶೈಲಿಯ ಮಣ್ಣಿನ ವಿಭಿನ್ನ ವಸ್ತುಗಳ ಬೃಹತ್ ಮಾರಾಟ ಮಳಿಗೆಯನ್ನು ತೆರೆದು ಜನರ ಆರೋಗ್ಯ ಕಾಳಜಿ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಈಗಾಗಲೇ ಪೆರ್ಡೂರು,ಉಡುಪಿ,ಶಿರ್ವ ಮಂಚಕಲ್, ಕುಂದಾಪುರ ,ಬ್ರಹ್ಮಾವರ ಪ್ರದೇಶಗಳಲ್ಲಿ ತನ್ನ ಶಾಖೆಯನ್ನು ತೆರೆದು ಸೇವಾ ವ್ಯಾಪ್ತಿಯನ್ನು ವಿಸ್ತರಿಸಿದ್ದು ಇದೀಗ ಸಿದ್ಧಾಪುರ ಮುಖ್ಯರಸ್ತೆ ಧರ್ಮದೇವ್ ಪೆಟ್ರೋಲ್ ಬಂಕ್ ಬಳಿ ಇರುವ ಸುಪ್ರೇಕ್ಷಾ ಕಾಂಪ್ಲೆಕ್ಸ್ ನಲ್ಲಿ ತನ್ನ ಬ್ಯಾಂಕಿಗ್ ಕ್ಷೇತ್ರದ 6 ನೇ ಶಾಖೆಯನ್ನು ಫೆ.4 ರಂದು ಬೆಳಿಗ್ಗೆ 11:30 ಕ್ಕೆ ಲೋಕಾರ್ಪಣೆ ಮಾಡಲಿದೆ.
ನೂತನ ಶಾಖೆಯನ್ನು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಬಿ.ಸುಕುಮಾರ್ ಶೆಟ್ಟಿ ಉದ್ಘಾಟಿಸಲಿದ್ದು, ಕುಂದಾಪುರ ಮಂಜುನಾಥ ಆಸ್ಪತ್ರೆಯ ಡಾ|ಎಂ.ವಿ.ಕುಲಾಲ್ ದೀಪ ಪ್ರಜ್ವನೆ ಮಾಡಲಿದ್ದಾರೆ.ಭದ್ರತಾ ಕೊಠಡಿಯನ್ನು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಉದ್ಘಾಟಿಸಲಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುಲಾಲ್ ಪಕ್ಕಾಲ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಪ್ರವೀಣ್ ಬಿ.ನಾಯಕ್,ಕುಂದಾಪುರ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ.,ಕುಂದಾಪುರ ಬಿದ್ಕಲ್‌ಕಟ್ಟೆ ಕುಲಾಲ ಸಮಾಜ ಸುಧಾರಕ ಸಂಘ(ರಿ) ಇದರ ಅಧ್ಯಕ್ಷ ವಿಶ್ವನಾಥ ಕುಲಾಲ್,ಸಿದ್ಧಾಪುರ ಗ್ರಾ.ಪಂ.ಅಧ್ಯಕ್ಷ ಶೇಖರ ಕುಲಾಲ್,ಕಟ್ಟಡ ಮಾಲೀಕ ರಾಜೀವ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.