ನಡುಹಗಲೇ ಕಿಲ್ಲರ್ ವಾಹನಗಳ ಆರ್ಭಟ; ಬೆಂಗಳೂರು ಜನರ ಆಕ್ರೋಶ
ಹಗಲು ಹೊತ್ತಿನಲ್ಲಿ ಭಾರೀ ವಾಹನಗಳು ನಗರ ಪ್ರವೇಶ ಮಾಡುವಂತಿಲ್ಲ
Team Udayavani, Feb 3, 2022, 1:12 PM IST
ಬೆಂಗಳೂರು: ಒಂದು ತಿಂಗಳು…ಒಂದು ನಗರ… 19 ಸಾವು…! ಇತ್ತೀಚಿನ ದಿನಗಳಲ್ಲಿ ಬೆಂಗ ಳೂರು ಅಪಘಾತಗಳ ರಾಜಧಾನಿಯಾಗುತ್ತಿದೆ. ಅದರಲ್ಲೂ ಭಾರೀ ವಾಹನಗಳ ಅಜಾಗರೂಕತೆ ಸಾಲು ಸಾಲು ಸಾವುಗಳಿಗೆ ಕಾರಣವಾಗುತ್ತಿದೆ. ನಗರದಲ್ಲಿ ಲಾರಿ, ಟ್ರಕ್ ಗಳಂಥ ಭಾರಿ ವಾಹನಗಳು ನಗರದ ಜನನಿಬಿಡ ಪ್ರದೇಶಗಳಲ್ಲಿ ಎಗ್ಗಿಲ್ಲದೆ ಸಂಚರಿಸುತ್ತಿದ್ದು, ಸಾರ್ವಜನಿಕರ ಭೀತಿಗೆ ಕಾರಣವಾಗಿದೆ.
ನಡುಹಗಲು ಭಾರಿ ವಾಹನಗಳಿಗೆ ಪ್ರವೇಶ ನೀಡಿದ ಪೊಲೀಸರ ಜನರ ಆಕ್ರೋಶ ತಿರುಗಿದೆ. ಭಾರೀ ವಾಹನಗಳ ಚಾಲಕರು ಪ್ರತ್ಯಕ್ಷವಾಗಿ ಜನರ ಸಾವಿಗೆ ಕಾರಣರಾದರೆ, ಪೊಲೀಸರು ಪರೋಕ್ಷವಾಗಿ ಹೊಣೆಯಾಗುತ್ತಿದ್ದಾರೆ.
ನಿರ್ದಿಷ್ಟ ಸಮಯ ಹೊರತುಪಡಿಸಿ, ಉಳಿದ ಸಮಯದಲ್ಲೂ ಭಾರೀ ವಾಹನಗಳನ್ನು ನಗರ ದೊಳಗೆ ಓಡಾಡಲು ಬಿಟ್ಟಿರುವುದೇ ಪೊಲೀಸರು ಮಾಡುತ್ತಿರುವ ದೊಡ್ಡ ತಪ್ಪು. ನಗರದಲ್ಲಿರುವ ನಿಯಮಗಳ ಪ್ರಕಾರ, ಹಗಲು ಹೊತ್ತಿನಲ್ಲಿ ಭಾರೀ ವಾಹನಗಳು ನಗರ ಪ್ರವೇಶ ಮಾಡುವಂತಿಲ್ಲ. ಆದರೂ, ಲಾಕ್ ಡೌನ್ ವೇಳೆಯಲ್ಲಿ ಮಾಡಲಾಗಿದ್ದ ನಿಯಮಗಳನ್ನೇ ಬಳಸಿ ಕೊಂಡಿರುವ ಭಾರೀ ವಾಹನಗಳು ನಗರ ಪ್ರವೇಶ ಮಾಡುತ್ತಿವೆ. ಹೀಗಾಗಿಯೇ ಅಪಘಾತಗಳ ಪ್ರಮಾಣವೂ ಹೆಚ್ಚಾಗುತ್ತಿದೆ. ಆದರೂ, ಇತ್ತೀಚಿನವರೆಗೂ ಇವರನ್ನೂ ಯಾರೂ ಪ್ರಶ್ನಿಸಿರಲಿಲ್ಲ.
ಆದರೆ, ಇತ್ತೀಚೆಗಷ್ಟೇ ರಿಯಾಲಿಟಿ ಶೋವೊಂದರ ಸ್ಪರ್ಧಿ ಆರು ವರ್ಷದ ಬಾಲಕಿ ಮತ್ತು ಪತ್ರಕ ರ್ತರೊಬ್ಬರು ಲಾರಿಗಳ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದ ಬಳಿಕ, ಭಾರೀ ವಾಹನಗಳು ನಗರದೊಳಗೆ ಬರುತ್ತಿರುವುದು ಹೇಗೆ? ಇವರನ್ನು ಬಿಡುತ್ತಿರುವುದು ಯಾರು ಎಂಬ ಪ್ರಶ್ನೆಗಳು ಉದ್ಭವವಾಗುತ್ತಿವೆ. ಜನಸಾಮಾನ್ಯರೂ ಸಾಮಾಜಿಕ ಜಾಲತಾಣಗಳ ಮೂಲಕ ಸಂಚಾರಿ ಪೊಲೀಸರನ್ನು ಪ್ರಶ್ನಿಸುತ್ತಿದ್ದಾರೆ.
ಅಲ್ಲದೆ, ಹಗಲು ಹೊತ್ತಿನಲ್ಲಿಯೂ ಎಗ್ಗಿಲ್ಲದೇ ಭಾರೀ ವಾಹನಗಳನ್ನು ಸಂಚಾರಿ ಪೊಲೀಸರೇಕೆ ತಡೆದು ನಿಲ್ಲಿಸುತ್ತಿಲ್ಲ? ಇವರ ಮೇಲೆ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಪ್ಪಿತಸ್ಥರಿಗೆ ಶಿಕ್ಷೆ ಕಡಿಮೆ:
ನಿರ್ಲಕ್ಷ್ಯ ವಾಹನ ಚಾಲನೆಗಾಗಿ ಅಪಘಾತ ಎಸಗಿದ ಚಾಲಕರನ್ನು ಸಂಚಾರ ಪೊಲೀಸರು ಬಂಧಿಸುತ್ತಾರೆ. ಕಠಿಣ ಸೆಕ್ಷನ್ ಗಳ ಅನ್ವಯ ಕೇಸು ದಾಖಲಿಸದೇ ಇರುವುದರಿಂದ ಜಾಮೀನು ಪಡೆದು ಹೊರ ಬರು ತ್ತಾರೆ. ಸಾಕ್ಷ್ಯ ಸಂಗ್ರಹದಲ್ಲಿಯೂ ನಿರ್ಲಕ್ಷ್ಯ ವಹಿಸುವ ಆರೋಪಗಳಿವೆ.
*ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.