![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Feb 3, 2022, 1:24 PM IST
ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ “ಜೇಮ್ಸ್’ ಚಿತ್ರದಲ್ಲಿ ನಟ ಶಿವರಾಜ ಕುಮಾರ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ನಿಮಗೆ ಗೊತ್ತಿರಬಹುದು. ತಿಂಗಳ ಹಿಂದಷ್ಟೇ ಶಿವಣ್ಣ “ಜೇಮ್ಸ್’ ಚಿತ್ರದಲ್ಲಿ ತಮ್ಮ ಪಾತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು, ಇತ್ತೀಚೆಗಷ್ಟೇ “ಜೇಮ್ಸ್’ ಚಿತ್ರತಂಡ ಕೂಡ ಚಿತ್ರೀಕರಣವನ್ನು ಪೂರ್ಣಗೊಳಿಸಿತ್ತು.
ಇದೀಗ “ಜೇಮ್ಸ್’ ಚಿತ್ರತಂಡದ ಕಡೆಯಿಂದ ಮತ್ತೂಂದು ಸುದ್ದಿ ಹೊರಬಿದ್ದಿದೆ. ಅದೇನೆಂದರೆ, ಶಿವರಾಜ ಕುಮಾರ್ “ಜೇಮ್ಸ್’ ಚಿತ್ರದಲ್ಲಿ ತಮ್ಮ ಪಾತ್ರದ ಜೊತೆಗೆ ಪುನೀತ್ ರಾಜಕುಮಾರ್ ಅವರ ಪಾತ್ರಕ್ಕೂ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ. ಹೌದು, “ಜೇಮ್ಸ್’ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಧ್ವನಿ ಇರುತ್ತದೆಯಾ? ಅಥವಾ ಪುನೀತ್ ಪಾತ್ರಕ್ಕೆ ಬೇರೆ ಯಾರಾದರು ಡಬ್ಬಿಂಗ್ ಮಾಡುತ್ತಾರಾ? ಎಂಬ ಕುತೂಹಲ ಸಿನಿಪ್ರಿಯರಲ್ಲಿ ಮತ್ತು ಸಿನಿಮಂದಿಯಲ್ಲಿತ್ತು. ಇದೀಗ ಚಿತ್ರತಂಡದ ಮೂಲಗಳ ಮಾಹಿತಿ ಪ್ರಕಾರ, ಪುನೀತ್ ರಾಜಕುಮಾರ್ ಪಾತ್ರಕ್ಕೆ ಶಿವರಾಜ ಕುಮಾರ್ ಧ್ವನಿಯಾಗಿದ್ದು, ಎರಡೂವರೆ ದಿನಗಳಲ್ಲಿ ಶಿವಣ್ಣ ಇಡೀ ಸಿನಿಮಾದ
ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ.
ಇನ್ನು “ಜೇಮ್ಸ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್ಸ್ ಮತ್ತು ಡಬ್ಬಿಂಗ್ ಬಗ್ಗೆ “ಉದಯವಾಣಿ’ ಜೊತೆ ಮಾತನಾಡಿರುವ ನಿರ್ದೇಶಕ ಚೇತನ್ ಕುಮಾರ್, “ಶಿವಣ್ಣ “ಜೇಮ್ಸ…’ ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದಾರೆ. ಅವರ ಆ ಪಾತ್ರದ ಜೊತೆಗೆ ಅಪ್ಪು ಅವರ ಪಾತ್ರಕ್ಕೂ ಕೂಡ ಶಿವಣ್ಣ ಅವರೇ ವಾಯ್ಸ ನೀಡಿದ್ದು, ಇಡೀ ಸಿನಿಮಾಕ್ಕೆ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ.
ಆದಷ್ಟು ಸಿನಿಮಾದಲ್ಲಿ ಅಪ್ಪು ಅವರ ಧ್ವನಿಯೇ ಇರಬೇಕೆಂದು ಎಲ್ಲರೂ ಬಯಸುತ್ತಿದ್ದಾರೆ. ನಾವು ಕೂಡ ಅವರ ಧ್ವನಿಯನ್ನೇ ಇಟ್ಟುಕೊಳ್ಳಲು ಸಾಕಷ್ಟು ಪರಿಶ್ರಮ ಹಾಕುತ್ತಿದ್ದೇವೆ. ಅದಕ್ಕಾಗಿ ಟೆಕ್ನಿಕಲ್ ಎಕ್ಸ್‌ಪರ್ಟ್ಸ್ ತುಂಬ ಕೆಲಸ ಮಾಡುತ್ತಿದ್ದಾರೆ. ಆದರೆ ಅದು ಎಷ್ಟರ ಮಟ್ಟಿಗೆ ವರ್ಕೌಟ್ ಆಗಲಿದೆ ಎನ್ನುವುದನ್ನ ಫೈನಲ್ ಔಟ್‌ಪುಟ್ ಬರದೆ ಹೇಳಲಾಗುವುದಿಲ್ಲ. ಫೆ. 12ರ ವೇಳೆಗೆ ಈ ಬಗ್ಗೆ ನಮಗೆ ಸ್ಪಷ್ಟತೆ ಸಿಗಬಹುದು. ಒಂದು ವೇಳೆ ಅಪ್ಪು ಅವರ ಪಾತ್ರಕ್ಕೆ ಅವರ ಧ್ವನಿಯನ್ನು ಬಳಸಲು ಸಾಧ್ಯವಾಗದಿದ್ದರೆ, ಶಿವಣ್ಣ ಅವರ ಧ್ವನಿಯನ್ನು ಬಳಸಲು ಯೋಚಿಸಿದ್ದೇವೆ. ಹೀಗಾಗಿ ಸಿನಿಮಾದ ಕೆಲಸಗಳು ತಡವಾಗಬಾರದು ಎಂದು ಸ್ವತಃ ಶಿವಣ್ಣ ಅವರೇ ಬೇಗ ಡಬ್ಬಿಂಗ್ ಮುಗಿಸಿದ್ದಾರೆ’ ಎಂದು ತಿಳಿಸಿದ್ದಾರೆ.
ಅಂದಹಾಗೆ, ನಟ ಪುನೀತ್ ರಾಜಕುಮಾರ್ ಹುಟ್ಟುಹಬ್ಬದಂದು “ಜೇಮ್ಸ್’ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ. “ಈಗಿನ ನಮ್ಮ ಪ್ಲಾನ್‌ನಂತೆ, ಮಾರ್ಚ್ 17ಕ್ಕೆ “ಜೇಮ್ಸ್’ ತೆರೆಗೆ ತರಬೇಕು. ಅದಕ್ಕಾಗಿ ಇಡೀ ಚಿತ್ರತಂಡ ಬಿಡುವಿಲ್ಲದೆ ಕೆಲಸ ಮಾಡುತ್ತಿದೆ. ಫೆ. ಮೂರನೇ ವಾರ ಚಿತ್ರದ ಟೀಸರ್, ಆನಂತರ ಲಿರಿಕಲ್ ವಿಡಿಯೋ, ಅದಾದ ಬಳಿಕ ಟ್ರೇಲರ್ ರಿಲಿಸ್ ಮಾಡಲು ಯೋಚಿಸಿದ್ದೇವೆ’ ಎಂದಿದ್ದಾರೆ ಚೇತನ್.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.