ಕೆಳದಿ ಗ್ರಾಮ ಪಂಚಾಯತ್ ನ ಪುರಾತನ ಕಟ್ಟಡದಲ್ಲಿ ಆಧುನಿಕ ಗ್ರಂಥಾಲಯ!

Team Udayavani, Feb 3, 2022, 4:10 PM IST

ಕೆಳದಿ ಗ್ರಾಮ ಪಂಚಾಯತ್ ನ ಪುರಾತನ ಕಟ್ಟಡದಲ್ಲಿ ಆಧುನಿಕ ಗ್ರಂಥಾಲಯ!

ಸಾಗರ: ತಾಲೂಕಿನ ಕೆಳದಿ ಗ್ರಾಮ ಪಂಚಾಯ್ತಿಯಲ್ಲಿ 80 ವರ್ಷಕ್ಕೂ ಹೆಚ್ಚಿನ ವಯೋಮಾನದ ಕಟ್ಟಡದಲ್ಲಿ ಅತ್ಯಾಧುನಿಕವಾದ ಡಿಜಿಟಲ್ ಲೈಬ್ರರಿಯೊಂದು ಆರಂಭಗೊಳ್ಳಲು ಅಣಿಯಾಗುತ್ತಿದ್ದು, ಹಳೆಯದು, ಹೊಸದರ ಸಮ್ಮಿಲನ ನವನವೀನ ಭರವಸೆಗಳನ್ನು ಮೂಡಿಸಿದೆ.

1940ರಲ್ಲಿ ಉದ್ಘಾಟನೆಯಾದ ಐತಿಹಾಸಿಕ ಕಟ್ಟಡವನ್ನು ರಾಜ್ಯ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಡಿಜಿಟಲ್ ಲೈಬ್ರರಿ ಕ್ರಾಂತಿಯ ಭಾಗವಾಗಿ ಅಣಿಗೊಳಿಸಲಾಗುತ್ತಿದೆ. ಕಳೆದ ಕೆಲವು ವರ್ಷಗಳವರೆಗೆ ಈ ಕಟ್ಟಡವನ್ನು ಗ್ರಾಪಂ ಕಚೇರಿಯಾಗಿ ಬಳಕೆ ಮಾಡಲಾಗುತ್ತಿತ್ತು. ಹಳೆಯ ಕಟ್ಟಡಕ್ಕೆ ಅಗತ್ಯ ದುರಸ್ತಿ ಕಾರ‍್ಯ ಮಾಡಲಾಗುತ್ತಿದೆ. ಶೀಘ್ರವಾಗಿ ಐತಿಹಾಸಿಕ ಕಟ್ಟಡ ಡಿಜಿಟಲ್ ಲೈಬ್ರರಿಯಾಗಿ ಓದಿನ ಹವ್ಯಾಸ ಬೆಳೆಸುವ ಜ್ಞಾನ ದೇಗುಲವಾಗಿ ಬಳಕೆಯಾಗಲಿದೆ.

ರಾಜ್ಯ ಸರಕಾರ 1,885 ಡಿಜಿಟಲ್ ಗ್ರಂಥಾಲಯಗಳ ಸ್ಥಾಪನೆ ಮೂಲಕ ಗ್ರಾಮ ಮಟ್ಟದಲ್ಲಿ ಓದಿನ ಪ್ರೋತ್ಸಾಹ ನೀಡಲು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮಹಾತ್ವಾಕಾಂಕ್ಷಿ ಯೋಜನೆ ರೂಪಿಸಿದೆ. ಈಗಾಗಲೇ ಬೆಂಗಳೂರಿನ ರಾಜನಕುಂಟೆ ಮತ್ತು ಬೆಳಗಾವಿಯ ಬೀಡ್ ಗ್ರಾಮದ ಡಿಜಿಟಲ್ ಮತ್ತು ಪುಸ್ತಕ ಗ್ರಂಥಾಲಯ ರಾಜ್ಯದ ಗಮನ ಸೆಳೆದಿದೆ.

ಅಂದಿನ ಮೈಸೂರು ಆಳ್ವಿಕೆಯ ಕಂದಾಯ ಕಮಿಷನರ್ ಅಬ್ದುಲ್ ವಾಜಿದ್ ಈ ಕಟ್ಟಡವನ್ನು 1940ರ ನ. 1ರಂದು ಲೋಕಾರ್ಪಣೆ ಮಾಡಿದ್ದಾರೆ. ಬೆಲೆಬಾಳುವ ಸಾಗವಾನಿ ತೊಲೆಗಳಿರುವ ಕಟ್ಟಡದಲ್ಲಿ ಅಗತ್ಯ ದುರಸ್ತಿ ಕಾರ‍್ಯವನ್ನು ಗ್ರಾಪಂ ಆರಂಭಿಸಿದೆ. ಗೋಡೆ ಬರಹಗಳಿಂದ ಸಜ್ಜುಗೊಳಿಸಿದೆ. ಪೀಟೋಪಕರಣ ಅಳವಡಿಕೆ, ಪುಸ್ತಕ ಜೋಳಿಗೆ ಅಭಿಯಾನದ ಮೂಲಕ ಸ್ಥಳೀಯವಾಗಿ ದಾನಿಗಳ ನೆರವನ್ನು ಗ್ರಾಪಂ ಅಪೇಕ್ಷಿಸಿದೆ. 2 ಕಂಪ್ಯೂಟರ್ ಒದಗಿಸಲಾಗಿದೆ. 2 ಕೋಣೆಗಳನ್ನು ರೀಡಿಂಗ್ ರೂಂ ಆಗಿ ಅಣಿಗೊಳಿಸಲಾಗುತ್ತಿದೆ. ಪುಸ್ತಕ ಜೋಳಿಗೆ ಅಭಿಯಾನಕ್ಕೆ ದಾನಿಗಳು ಸ್ಪಂದಿಸುತ್ತಿದ್ದಾರೆ. ತಾಂತ್ರಿಕ ಹಾಗೂ ಆಡಳಿತಾತ್ಮಕ ವ್ಯವಸ್ಥೆಗಳನ್ನು ಶೀಘ್ರ ಕಲ್ಪಿಸಲು ಭರದಿಂತ ಕೆಲಸ ನಡೆಯುತ್ತಿದೆ. ಚೆನ್ನಮ್ಮಾಜಿ ಜಯಂತಿ ಅಥವಾ ಕೆಳದಿ ಉತ್ಸವದ ಸಂಭ್ರಮಾಚರಣೆ ಸಂದರ್ಭ ಡಿಜಿಟಲ್ ಗ್ರಂಥಾಲಯದ ಲೋಕಾರ್ಪಣೆಗೆ ಗ್ರಾಪಂ ಸಿದ್ಧತೆ ನಡೆಸುತ್ತಿದೆ.

ಇದನ್ನೂ ಓದಿ : ಶೈಕ್ಷಣಿಕ ಅಭಿವೃದ್ದಿಯಿಂದ ಸ್ವಾಭಿಮಾನದ ಬದುಕು : ಫಲ್ಗುಣಿ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಡಿಜಿಟಲ್ ಲೈಬ್ರರಿ ಕ್ರಾಂತಿಯ ಭಾಗವಾದ ಯೋಜನೆಯಲ್ಲಿ ರಾಷ್ಟ್ರೀಯ ಡಿಜಿಟಲ್ ಲೈಬ್ರರಿಯ ಜತೆಗೆ ಲಿಂಕ್ ಸೌಲಭ್ಯದಿಂದಾಗಿ 8 ಕೋಟಿ ಪುಸ್ತಕಗಳು ಗ್ರಾಮ ಮಟ್ಟದಲ್ಲಿ ಆಸಕ್ತರಿಗೆ ದೊರಕಲಿವೆ. ರಾಜ್ಯ ಪಠ್ಯ ಪುಸ್ತಕ ಸೊಸೈಟಿ ಪ್ರಕಟಿಸುವ ಎಲ್ಲಾ ತರಗತಿಯ ಪಠ್ಯಪುಸ್ತಕಗಳನ್ನು ಸಹ ಮಲೆನಾಡಿನ ಹಳ್ಳಿಯಲ್ಲಿ ಕುಳಿತು ಅವಲೋಕಿಸಬಹುದಾಗಿದೆ.

ಡಿಜಿಟಲ್ ಲೈಬ್ರರಿಯನ್ನು ಕೆಳದಿ ಗ್ರಾಪಂನ ಹಳೆಯ ಕಟ್ಟಡದಲ್ಲಿ ಸ್ಥಾಪಿಸುವ ಸಂಬಂಧ ಸಣ್ಣಪುಟ್ಟ ದುರಸ್ತಿ ಕಾರ‍್ಯ ನಡೆಸಲಾಗುತ್ತಿದೆ. ಮಥನ ಇಂಡಸ್ಟ್ರೀಸ್ ಮಾಲಿಕರಾದ ಬಿ.ಆರ್.ಉಮೇಶ್ ಬಂದಗದ್ದೆ ಪೀಟೋಪಕರಣಗಳನ್ನು ಕೊಡುತ್ತಿದ್ದಾರೆ. ಪುಸ್ತಕ ಜೋಳಿಗೆ ಅಭಿಯಾನ ಆರಂಭಿಸಲಾಗಿದ್ದು, ದಾನಿಗಳು ಪುಸ್ತಕ ನೀಡಲು ಕೋರಲಾಗಿದೆ. ಸಾಕಷ್ಟು ಉತ್ಮ ಸ್ಪಂದನೆ ದೊರಕುತ್ತಿದೆ.
– ಅಷ್ಪಾಕ್ ಅಹಮ್ಮದ್, ಪಿಡಿಓ, ಕೆಳದಿ ಗ್ರಾಪಂ, ಕೆಳದಿ

ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ ನೀಡುವ ಮೂಲಕ ಓದಿನ ಹವ್ಯಾಸ ಪೋಷಿಸಲು ಸಹಕಾರ ನೀಡಬೇಕು. ಚೆನ್ನಮ್ಮಾಜಿ ಜಯಂತಿ ಅಥವಾ ಕೆಳದಿ ಉತ್ಸವದ ಸಂದರ್ಭ ಶಾಸಕರಿಂದ ಲೋಕಾರ್ಪಣೆ ಮಾಡಲಾಗುವುದು.
– ಎಚ್.ಎಸ್.ರಮೇಶ್ ಹಾರೇಕೊಪ್ಪ, ಕೆಳದಿ ಗ್ರಾಪಂ ಮಾಜಿ ಅಧ್ಯಕ್ಷ

ಟಾಪ್ ನ್ಯೂಸ್

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Congress-Symbol

Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ

Yatindra

Congress; ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಯತೀಂದ್ರ ಸಿದ್ದರಾಮಯ್ಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.