![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Feb 3, 2022, 5:01 PM IST
ಶಿರಸಿ: ಯಕ್ಷಗಾನ ಪರಿಶ್ರಮದ ಕಲೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪ್ರಸಿದ್ದ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಬಣ್ಣಿಸಿದರು.ಅವರು ನಿಸರ್ಗಮನೆಯ ವೇದ ಆರೋಗ್ಯ ಕೇಂದ್ರದಲ್ಲಿ ಸಾಧಕರಿಗೆ ಹಮ್ಮಿಕೊಂಡ ಯಕ್ಷನೃತ್ಯ ರೂಪಕ ಪಂಚಪಾವನಕಥಾ ವೀಕ್ಷಿಸಿ ಮಾತನಾಡಿದರು.
ಎಷ್ಟೋ ಕಾರ್ಯಕ್ರಮಗಳಲ್ಲಿ ನಮ್ಮ ಹಾಸ್ಯ ಆದ ಬಳಿಕ ಯಕ್ಷಗಾನ, ಯಕ್ಷಗಾನ ಆದ ಬಳಿಕ ಹಾಸ್ಯದ ಕಾರ್ಯಕ್ರಮ ಇರುತ್ತವೆ. ಅಲ್ಲಿ ಯಕ್ಷಗಾನದ ಕಲಾವಿದರ ಸಂಕಷ್ಟ ನೋಡುತ್ತೇವೆ. ಬಣ್ಣದ ವೇಷಕ್ಕಾಗಿ ಎರಡು ತಾಸುಗಳ ಕಾಲ ಪರಿಶ್ರಮ ಮಾಡುವದನ್ನೂ ಹಾಗೂ ರಂಗಸ್ಥಳದಲ್ಲಿ ರಂಜಿಸುವದನ್ನೂ, ಪೌರಾಣಿಕ, ಈಚೆಗೆ ಸಾಮಾಜಿಕ ಪ್ರಸಂಗ ಪ್ರದರ್ಶಿಸುವದನ್ನೂ ನೋಡುತ್ತೇವೆ ಎಂದರು.
ಗಂಡಸರೇ ಹೆಣ್ಣಿನ ವೇಷ ಹಾಕೋದು, ಹೆಣ್ಮಕ್ಕಳು ಅಲ್ಲ ಎಂದು ಹೇಳಲೇ ಸಾಧ್ಯ ಇಲ್ಲ. ಅಷ್ಟು ಚೆಂದ ವೇಷ ಮಾಡಿ ಕೊಳ್ಳುತ್ತಾರೆ. ಯಕ್ಷಗಾನದ ಹಾಸ್ಯದ ಪ್ರಸಂಗಗಳೂ ಪ್ರೇಕ್ಷಕರನ್ನು ಮನ ಸೆಳೆಯುತ್ತವೆ. ನಮ್ಮ ಕಡೆ ದೊಡ್ಡಾಟ, ಬಯಲಾಟ ಇದ್ದಂತೆ ಯಕ್ಷಗಾನ ಶ್ರೇಷ್ಠ ಕಲೆ. ಒಟ್ಟಾರೆ ಸಮಗ್ರ ಕಲೆ ಯಕ್ಷಗಾನ ಎಂದರು.
ಸಂಡೂರಿನ ಶಾಸಕ, ಮಾಜಿ ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಮ, ಆರೋಗ್ಯ ಸಂಬಂಧಿಸಿ ನಿಸರ್ಗ ಮನೆಯ ಕೊಡುಗೆ ಅನನ್ಯವಾದದ್ದು ಎಂದರು.
ಸಮಾಜ ಸೇವಕಿ ಅನ್ನಪೂರ್ಣ ತುಕಾರಾಮ, ಸಂಗೀತಾ ವಿ.ಹೆಗಡೆ, ಡಾ. ವೆಂಕಟೇಶ ನಾಯ್ಕ, ಕಲಾವಿದ ವೆಂಕಟೇಶ ಬೊಗ್ರಿಮಕ್ಕಿ ಇತರರು ಇದ್ದರು. ನಿಸರ್ಗ ಮನೆಯ ಮುಖ್ಯಸ್ಥ ಡಾ. ವೆಂಕಟ್ರಮಣ ಸ್ವಾಗತಿಸಿದರು.
ಕು. ತುಳಸಿ ಹೆಗಡೆ ಅವಳಿಂದ ಪಂಚಪಾವನಕಥಾ ಯಕ್ಷನೃತ್ಯ ರೂಪಕ ಗಮನ ಸೆಳೆಯಿತು.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
You seem to have an Ad Blocker on.
To continue reading, please turn it off or whitelist Udayavani.