ಅಮರಣಾಂತ ಉಪವಾಸ ; ಶ್ರೀಕಾಂತ ನಾಯ್ಕ್ ಅಸ್ವಸ್ಥ
Team Udayavani, Feb 3, 2022, 8:25 PM IST
ಸಾಗರ: ಇಲ್ಲಿನ ತಾಲೂಕು ಪಂಚಾಯ್ತಿ ಎದುರು ಖಂಡಿಕಾ ಗ್ರಾ.ಪಂ ವ್ಯಾಪ್ತಿಯ ಕುಗ್ವೆ ಗ್ರಾಮದ ಸರ್ವೇ ನಂ. 136/1ರಲ್ಲಿ 6.17 ಎಕರೆ ಜಮೀನಿನಲ್ಲಿ ನಿವೇಶನ ಪರಿವರ್ತನೆ ಸಂಬಂಧ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ದೇಸಿ ಫೌಂಡೇಶನ್ ಮಾಲೀಕ ಶಶಿಧರ ಮೂರ್ತಿ ನೇತೃತ್ವದಲ್ಲಿ ಜಮೀನು ಮಾಲೀಕ ಶ್ರೀಕಾಂತ್ ನಾಯ್ಕ್ ನಡೆಸುತ್ತಿರುವ ಅರ್ನಿಷ್ಟಾವಧಿ ಧರಣಿ ಉಪವಾಸ ಸತ್ಯಾಗ್ರಹ ನಾಲ್ಕನೆಯ ದಿನವಾದ ಗುರುವಾರ ಮುಂದುವರಿದಿದ್ದು, ಸಾಯಂಕಾಲದ ವೇಳೆ ಶ್ರೀಕಾಂತ್ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀಕಾಂತ್ ನಾಯ್ಕ್ ಕುಟುಂಬಸ್ಥರು ಹಾಜರಿದ್ದರು.
ಈ ನಡುವೆ ತಾಪಂ ಇಓ ಅವರು ಗುರುವಾರ ಖಂಡಿಕಾ ಗ್ರಾಪಂ ಅಧಿಕಾರಿಗೆ ಆದೇಶ ನೀಡಿದ್ದಾರೆ. ನ್ಯಾಯಾಲಯದಲ್ಲಿ ವಿಚಾರಣಾ ಹಂತದ ಪ್ರಕರಣಗಳ ಅಂತಿಮ ಆದೇಶಕ್ಕೆ ಬದ್ಧರಾಗಿರಬೇಕು ಎಂಬ ಷರತ್ತಿಗೆ ಒಳಪಟ್ಟು ಶ್ರೀಕಾಂತ್ ಅವರ ಸ್ವತ್ತಿಗೆ ಸಂಬಂಧಪಟ್ಟಂತೆ ಶೇ. 60ರಷ್ಟು ನಿವೇಶನ ಬಿಡುಗಡೆ ಮಾಡಲು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮವಹಿಸಲು ತಾ.ಪ ಇಓ ಅವರು ಸೂಚನೆ ನೀಡಿದ್ದಾರೆ. ಆದರೆ ಈ ಆದೇಶ ಸಮರ್ಪಕವಾಗಿಲ್ಲ ಎಂದು ಧರಣಿ ನಿರತರು ಆಕ್ಷೇಪಿಸಿದ್ದಾರೆ.
ಇದನ್ನೂ ಓದಿ : ಬೇಟಿ ಬಚಾವೋ,ಬೇಟಿ ಪಡಾವೋ ಪೊಳ್ಳು ಘೋಷಣೆ: ಹಿಜಾಬ್ ವಿವಾದಕ್ಕೆ ಮುಫ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.