ಪಜಿರಡ್ಕ ಸಂಗಮ ಕ್ಷೇತ್ರ ಬೆಸೆಯಲಿದೆ ನವಸೇತು
Team Udayavani, Feb 4, 2022, 3:00 AM IST
ಬೆಳ್ತಂಗಡಿ: ಕಲ್ಮಂಜ ಗ್ರಾಮದ ಸಂಗಮಕ್ಷೇತ್ರವೆಂದೆ ಪ್ರಸಿದ್ಧಿ ಪಡೆದಿರುವ ಪಜಿರಡ್ಕ ಎಂಬಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ 4.5 ಕೋಟಿ ರೂ. ಅನುದಾನದ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿ ವೇಗ ಪಡೆಯುತ್ತಿದ್ದು ದ್ವೀಪವಾಗಿದ್ದ ಊರುಗಳಿಗೆ ಸಂಪರ್ಕ ಸೇತುವೆಯ ಜತೆಗೆ, ಧರ್ಮಸ್ಥಳ ಗ್ರಾಮಕ್ಕೂ ನೀರಿನ ಆಸರೆಯಾಗಲಿದೆ.
ಪಜಿರಡ್ಕ ಎಂಬಲ್ಲಿ ಮೃತ್ಯುಂಜಯ- ನೇತ್ರಾವತಿ ನದಿಗಳು ಸಂಗಮಗೊಂಡು ಇಲ್ಲಿಂದ ನೇತ್ರಾವತಿ ನದಿಯು ಮುಂದುವರಿಯುತ್ತದೆ. ಸಂಗಮ ಸ್ಥಳದಿಂದ 100ಮೀ. ಕೆಳಭಾಗದಲ್ಲಿ ಇದೀಗ ಈ ಕಾಮಗಾರಿ ನಡೆಯುತ್ತಿದೆ. ಇದರಿಂದಾಗಿ ನದಿಯ ಇನ್ನೊಂದು ಬದಿಯಲ್ಲಿರುವ ಇದೇ ಗ್ರಾಮದ ಆನಂಗಳ್ಳಿ, ಪರಾರಿ, ಸಿದ್ದಬೈಲು, ಕರಿಯನೆಲ, ಪರಿಸರ ಸಹಿತ ಉಜಿರೆ, ಧರ್ಮಸ್ಥಳಕ್ಕೆ ಸಂಪರ್ಕ ಹತ್ತಿರವಾಗಲಿದೆ.
12 ಕಿ.ಮೀ. ಹೆಚ್ಚುವರಿ ಸಂಚಾರಕ್ಕೆ ಮುಕ್ತಿ:
ಪ್ರಸ್ತುತ ನದಿಯ ಮತ್ತೂಂದು ಭಾಗದ ಮಂದಿ ಪಜಿರಡ್ಕಕ್ಕೆ ಮಳೆಗಾಲದಲ್ಲಿ ಬರಬೇಕಾದರೆ 12 ಕಿ.ಮೀ. ದೂರವನ್ನು ಕ್ರಮಿಸಬೇಕಿತ್ತು. ಈ ಕಾಮಗಾರಿ ಮುಗಿದಾಗ ಒಂದು ಕಿ.ಮೀ. ಕ್ರಮಿಸಿದರೆ ಸಾಕು.
ದೇವರ ಮೀನುಗಳಿಗೆ ಆಧಾರ :
ಕಿಂಡಿ ಅಣೆಕಟ್ಟು ನಿರ್ಮಾಣಗೊಳ್ಳುವ ಪ್ರದೇಶದ ಸಮೀಪ ಸಂಗಮ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನವಿದ್ದು, ಇಲ್ಲಿನ ನದಿಯಲ್ಲಿ ದೇವರ ಮೀನುಗಳಿವೆ. ಕಿಂಡಿ ಅಣೆಕಟ್ಟಲ್ಲಿ ಸಂಗ್ರಹಗೊಳ್ಳುವ ನೀರು ಈ ಮೀನುಗಳಿಗೆ ಅನುಕೂಲವಾಗಲಿದೆ.
ಯೋಜನೆಯ ವಿವರ :
4.5 ಕೋಟಿ ರೂ. ವೆಚ್ಚದಲ್ಲಿ 76.3 ಉದ್ದದ ಸೇತುವೆ ಹಾಗೂ ಅಣೆಕಟ್ಟು, 2.5 ಮಿ ಎತ್ತರ ನೀರು ಸಂಗ್ರಹಣ ಸಾಮರ್ಥ್ಯ ದೊಂದಿಗೆ ಸುಮಾರು 30 ಕಿಂಡಿಗಳು ಇರಲಿವೆ. 8 ಪಿಲ್ಲರ್‌ಗಳುಳ್ಳ 5 ಮೀ. ಎತ್ತರದ 2.5 ಮೀ. ಅಗಲದ ಸಂಪರ್ಕ ಸೇತುವೆ ಕಿಂಡಿ ಅಣೆಕಟ್ಟಿನ ಮೇಲ್ಭಾಗದಲ್ಲಿ ರಚನೆಯಾಗಲಿದೆ.
ಅನುಮೋದನೆ :
ಎರಡು ವರ್ಷಗಳ ಹಿಂದೆ ಬೇಸ ಗೆಯಲ್ಲಿ ಧರ್ಮಸ್ಥಳ ಗ್ರಾಮಕ್ಕೆ ನೀರಿನ ಅಭಾವ ಉಂಟಾಗಿತ್ತು. ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಿಸುವ ಉದ್ದೇಶದಿಂದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರು ಬದಲಿ ವ್ಯವಸ್ಥೆ ಕಲ್ಪಿಸುವ ಕುರಿತು ಗಮನ ಸೆಳೆದಿದ್ದರು. ಯಾತ್ರಾರ್ಥಿಗಳ ಅನುಕೂಲತೆಯನ್ನು ಮನಗಂಡು ಶಾಸಕ ಹರೀಶ್ ಪೂಂಜ ಅವರ ಬೇಡಿಕೆ ಮೇರೆಗೆ ಸಣ್ಣನೀರಾವರಿ ಇಲಾಖೆಯಡಿ ಸ್ಥಳ ಪರಿಶೀಲಿಸಿ ನೇತ್ರಾ ವತಿ ಸ್ನಾನ ಘಟ್ಟದಿಂದ ಮೇಲ್ಭಾ ಗದಲ್ಲಿ ಕಿಂಡಿ ಅಣೆಕಟ್ಟು ಸ್ಥಾಪ ನೆಗೆ ಸರಕಾರದಿಂದ ರೂಪುರೇಷೆ ಸಿದ್ಧ ಪಡಿಸಲು ಅನುಮೋದನೆ ದೊರೆ ತಿತ್ತು. ಅದರಂತೆ ಪಜಿರಡ್ಕ ಸಹಿತ ಮುಳಿಕ್ಕಾರು ಪ್ರದೇಶದಲ್ಲಿ ಕಿಂಡಿ ಅಣೆ ಕಟ್ಟು ನಿರ್ಮಾಣಕ್ಕೆ ಹಸುರು ನಿಶಾನೆ ದೊರೆ ತಿತ್ತು. ಮುಳಿಕ್ಕಾರು ಕಿಂಡಿ ಅಣೆ ಕಟ್ಟು ಕಾಮಗಾರಿ ಬಹುತೇಕ ಮುಗಿದಿದೆ.
ತಾಲೂಕಿನಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಕಿಂಡಿ ಅಣೆಕಟ್ಟುಗಳ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. -ಗೋಕುಲ್ ದಾಸ್, ಎಇಇ, ಸಣ್ಣನೀರಾವರಿ ಇಲಾಖೆ ಮಂಗಳೂರು ವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.